Bones Health: ನಿಮ್ಮ ಮೂಳೆಗಳು ಗಟ್ಟಿ ಮತ್ತು ಹಾನಿಯಾಗದಂತೆ ತಡೆಯಲು ಈ ಆಹಾರ ಸೇವಿಸಿ

ಮೂಳೆಗಳು ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ವಯಸ್ಸು 60 ದಾಟುತ್ತಿದ್ದಂತೆ ಮನುಷ್ಯನ ಮೂಳೆ ದ್ರವ್ಯರಾಶಿಯು ಸ್ವಯಂಚಾಲಿತವಾಗಿ ಕಡಿಮೆ ಆಗಲು ಆರಂಭವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನುಷ್ಯನ (Human) ದೇಹ (Body) ಮೂಳೆಗಳಿಂದ ಮಾಡಲ್ಪಟ್ಟಿದೆ. ಆರೋಗ್ಯಕರ ದೇಹಕ್ಕೆ (Healthy Body) ಆರೋಗ್ಯಕರ ಮೂಳೆಗಳು (Healthy Bones) ಇರುವುದು ತುಂಬಾ ಮುಖ್ಯ. ನಮ್ಮ ಮೂಳೆಗಳು ಜೀವಂತ ಅಂಗಾಂಶಗಳು ಆಗಿವೆ. ಅವುಗಳು ನಿರಂತರವಾಗಿ ತಮ್ಮನ್ನು ತಾವು ನವೀಕರಣ ಮಾಡಿಕೊಳ್ಳುತ್ತವೆ ಎಂಬುದನ್ನು ಮೊದಲು ತಿಳಿಯಿರಿ. ಮೂಳೆಗಳು ಯಾವಾಗಲೂ ಬದಲಾವಣೆ (Changes) ಆಗುತ್ತಿರುತ್ತವೆ. ಆದ್ದರಿಂದ ಕಾಲಾನಂತರದಲ್ಲಿ ಅವುಗಳಲ್ಲಿನ ಬದಲಾವಣೆಗಳ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಬೇಕು. ಮೂಳೆಗಳು ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ವಯಸ್ಸು 60 ದಾಟುತ್ತಿದ್ದಂತೆ ಮನುಷ್ಯನ ಮೂಳೆ ದ್ರವ್ಯರಾಶಿಯು ಸ್ವಯಂಚಾಲಿತವಾಗಿ ಕಡಿಮೆ ಆಗಲು ಆರಂಭವಾಗುತ್ತದೆ. ಮತ್ತು ಕಾಲಾನಂತರದಲ್ಲಿ ಅದು ಮತ್ತಷ್ಟು ಕ್ಷೀಣಿಸುತ್ತಾ ಹೋಗಲು ಆರಂಭಿಸುತ್ತದೆ.

    ಮೂಳೆಗಳಿಗೆ ಪೋಷಕಾಂಶ ತಲುಪಿಸುವ ಮಾರ್ಗ ಆಹಾರ ಕ್ರಮ

    ಆದಾಗ್ಯೂ ವಯಸ್ಸಾಗುತ್ತಾ ಹೋದಂತೆ ಮೂಳೆಗಳಲ್ಲಿ ಆಗುವ ಬದಲಾವಣೆಗಳನ್ನು ನಿಲ್ಲಿಸಲು  ಸಾಧ್ಯವಿಲ್ಲ. ಆದರೆ ನಿಮ್ಮ ಮೂಳೆಗಳಿಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶಗಳನ್ನು ನೀಡುವುದು ಅವಶ್ಯವಾಗಿದೆ. ನಿಮ್ಮ ಮೂಳೆಗಳಿಗೆ ಬೇಕಾಗುವ ಪೋಷಕ ತತ್ವವನ್ನು ಖಂಡಿತವಾಗಿಯೂ ನೀಡಬೇಕಾಗುತ್ತದೆ. ಮೂಳೆಗಳಿಗೆ ಪೋಷಕಾಂಶ ತಲುಪಿಸುವ ಒಂದು ಮಾರ್ಗವೆಂದರೆ ಆಹಾರ ಕ್ರಮ.

    ಸದೃಢ ಮೂಳೆಗಳು ಬೇಕೆಂದರೆ ಸೂಕ್ತ ಒಳ್ಳೆಯ ಆಹಾರ ಸೇವನೆ ಕೂಡ ತುಂಬಾ ಮುಖ್ಯ. ನೀವು ಅಂತಹ ವಸ್ತುಗಳನ್ನು ಆಹಾರದಲ್ಲಿ ಸೇರಿಸಬೇಕು. ಇದರಿಂದ ನಿಮ್ಮ ಮೂಳೆಗಳು ವಯಸ್ಸಾಗದಂತೆ ರಕ್ಷಣೆ ಮಾಡಬಹುದು.

    ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಸೂಪರ್ ಫುಡ್ ಗಳ ಉಪಾಹಾರ ಸೇವಿಸಿ, ಪ್ರಯೋಜನ ಪಡೆಯಿರಿ

    ಅಂತಹ ಕೆಲವು ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ನಿಮಗೆ ಹೇಳಲಾಗಿದೆ. ಅವುಗಳನ್ನು ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳಿ. ಇದರಿಂದ ನಿಮ್ಮ ಮೂಳೆಗಳು ದುರ್ಬಲವಾಗದೇ ಗಟ್ಟಿಯಾಗಿ ಉಳಿಯುವಂತೆ ಮಾಡಬಹುದು. ಹೇಗೆ ಮತ್ತು ಯಾವ ಆಹಾರ ಎಂಬುದನ್ನು ಇಲ್ಲಿ ತಿಳಿಯಿರಿ.

    ಗ್ರೀಕ್ ಮೊಸರು ಸೇವನೆ ಮಾಡಿ

    ವಯಸ್ಸಾಗುವಿಕೆಯಿಂದ ಮತ್ತು ಮೂಳೆಗಳು ದುರ್ಬಲವಾಗುವುದನ್ನು ತಡೆಯಲು ನೀವು ಬೆಳಗಿನ ಉಪಾಹಾರದಲ್ಲಿ ಗ್ರೀಕ್ ಮೊಸರನ್ನು ಸೇವಿಸಬಹುದು. ಓಟ್ಸ್, ವಾಲ್‌ನಟ್‌ಗಳನ್ನು ಗ್ರೀಕ್ ಮೊಸರಿನೊಂದಿಗೆ ಬೆರೆಸುವುದರಿಂದ ನಿಮ್ಮ ದೇಹವು ಕ್ಯಾಲ್ಸಿಯಂ, ಅಮೈನೋ ಆಮ್ಲಗಳು ಮತ್ತು ಮೆಗ್ನೀಸಿಯಮ್ ಅನ್ನು ಹೇರಳವಾಗಿ ಪಡೆಯುತ್ತದೆ.

    ಬೆಳಗಿನ ಉಪಾಹಾರದಲ್ಲಿ ಇದನ್ನು ತಿನ್ನುವುದರಿಂದ, ನಿಮ್ಮ ಹೊಟ್ಟೆಯು ದೀರ್ಘ ಕಾಲದವರೆಗೆ ತುಂಬಿರುತ್ತದೆ, ಇದರಿಂದ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇಂತಹ ಇನ್ನೂ ಹಲವು ಪದಾರ್ಥಗಳು ಇವೆ. ಇವುಗಳು ನೀವು ಮೂಳೆ ನಷ್ಟ ಅಥವಾ ಮೂಳೆ ವಯಸ್ಸಾಗುವ ಸಮಸ್ಯೆ ತಪ್ಪಿಸಬಹುದು.

    ಡೈರಿ ಉತ್ಪನ್ನಗಳ ಸೇವನೆ

    ಮೂಳೆಗಳ ಆರೋಗ್ಯಕ್ಕೆ ಮತ್ತು ವಯಸ್ಸಾಗುವಿಕೆ ತಡೆಗೆ ನೀವು ಆಹಾರದಲ್ಲಿ ಕ್ಯಾಲ್ಸಿಯಂ ಸೇರಿಸುವುದು ಮುಖ್ಯ. ಕ್ಯಾಲ್ಸಿಯಂ ಡೈರಿ ಉತ್ಪನ್ನಗಳಲ್ಲಿ ಹೆಚ್ಚೆಚ್ಚು ಕಂಡು ಬರುತ್ತದೆ. ಇದಲ್ಲದೆ ಹಸಿರು ಎಲೆ ತರಕಾರಿ, ಬಾದಾಮಿ ಮತ್ತು ಸೋಯಾ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚು ಕಂಡು ಬರುತ್ತದೆ.

    ಮೂಳೆಗಳು ಅನೇಕ ಖನಿಜಗಳಿಂದ ಮಾಡಲ್ಪಟ್ಟಿದೆ. ಆದ್ದರಿಂದ ಕ್ಯಾಲ್ಸಿಯಂ ಅನ್ನು ಮೂಳೆಗಳಿಗೆ ಪ್ರಮುಖ ಆಹಾರವೆಂದು ಪರಿಗಣಿಸಲಾಗಿದೆ. ಮೂಳೆಗಳು ಕ್ಯಾಲ್ಸಿಯಂ ಅನ್ನು ಸಂಗ್ರಹಿಸುತ್ತವೆ. ಆದ್ದರಿಂದ ದೇಹದಲ್ಲಿ ಈ ಖನಿಜದ ಕೊರತೆಯಿದ್ದರೆ ಕ್ಯಾಲ್ಸಿಯಂ ಮೂಳೆಗಳಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದ ಮೂಳೆಗಳು ಸುಲಭವಾಗಿ ಹಾನಿ ಮತ್ತು ನೋವಿಗೆ ಕಾರಣವಾಗಬಹುದು.

    ಕಡಿಮೆ ಸಿಹಿ ಮೊಸರು ಸೇವನೆ ಮಾಡಿ

    ಗ್ರೀಕ್ ಮೊಸರಿನಂತೆ ಬೆಳಿಗ್ಗೆ ಕಡಿಮೆ ಸಿಹಿ ಮೊಸರು ಸೇವನೆ ಮಾಡುವ ಮೂಲಕ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಸಹ ಪೂರೈಸಬಹುದು. ಇದಲ್ಲದೆ ಸಾಕಷ್ಟು ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಅನ್ನು ಸೇವಿಸುವ ಮೂಲಕ ಮೂಳೆಗಳ ಹಾನಿ, ನೋವು ತಡೆಯಬಹುದು.

    ಇದನ್ನೂ ಓದಿ: Ramadan ಹಬ್ಬದ ನಂತರ ನೀವು ನಿಮ್ಮ ಸಾಮಾನ್ಯ ಆಹಾರ ಕ್ರಮಕ್ಕೆ ಮರಳುವುದು ಹೇಗೆ..?

    ಪ್ರೋಟೀನ್ ಮತ್ತು ಧಾನ್ಯಗಳ ಸೇವನೆ

    ಮೂಳೆಗಳ ಹಾನಿ ಮತ್ತು ನೋವು ತಡೆಯಲು ನಿಮ್ಮ ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಮತ್ತು ಧಾನ್ಯಗಳ ಸೇರಿಸಿ ಸೇವನೆ ಮಾಡಿ. ಇದು ಉತ್ತಮ ಆಯ್ಕೆಯಾಗಿದೆ. ಮೂಳೆಗಳಿಗೆ ಅಗತ್ಯವಾದ ಅಮೈನೋ ಆಮ್ಲ ಕೊರತೆ ಪ್ರೋಟೀನ್ ಪೂರೈಸುತ್ತದೆ. ಧಾನ್ಯಗಳು ಮೆಗ್ನೀಸಿಯಮ್ ಕೊರತೆಯನ್ನು ಪೂರೈಸುತ್ತದೆ.
    Published by:renukadariyannavar
    First published: