ಈ ಸಕ್ಕರೆ ಕಾಯಿಲೆ (Diabetes) ಇರುವವರಿಗೆ ಸದಾ ಕಾಡುವ ಒಂದು ಆತಂಕ ಎಂದರೆ, ಎಲ್ಲಿ ಅವರ ರಕ್ತದಲ್ಲಿನ (Blood) ಸಕ್ಕರೆ ಮಟ್ಟವು ಪ್ರತಿ ಊಟದ ನಂತರ ಹೆಚ್ಚಾಗುವುದು ಎಂದು. ಈ ಚಿಂತೆ ನಿಮ್ಮಿಂದ ದೂರವಾಗಬೇಕೆಂದರೆ ನೀವು ಸದಾ ಆರೋಗ್ಯಕರ ಆಹಾರಗಳನ್ನೇ (Food) ಸೇವಿಸಬೇಕಾಗುತ್ತದೆ. ಇನ್ನು ಮುಂದೆ ಇದರ ಬಗ್ಗೆ ನೀವು ಚಿಂತಿಸಬೇಡಿ, ಏಕೆಂದರೆ ಉಪಾಹಾರಕ್ಕೆ ಸೂಕ್ತವಾದ ಕೆಲವು ರುಚಿಕರವಾದ, ಹೊಟ್ಟೆ (Stomach) ತುಂಬುವ, ಪೌಷ್ಟಿಕ ಮತ್ತು ಮಧುಮೇಹ ಸ್ನೇಹಿ ಪಾಕವಿಧಾನಗಳು ಇಲ್ಲಿವೆ ನೋಡಿ. ಈ ಪಾಕವಿಧಾನಗಳನ್ನು ತಯಾರಿಸುವುದು ತುಂಬಾನೇ ಸುಲಭ, ಇದು ಬಿಡುವಿಲ್ಲದ ಬೆಳಿಗ್ಗೆಗಳಿಗೆ (Morning) ಸಹ ಪರಿಪೂರ್ಣವಾಗಿದೆ. ಚೀಲಾ ಮತ್ತು ಇಡ್ಲಿಗಳಿಂದ ಹಿಡಿದು ಗಂಜಿ ಮತ್ತು ದೋಸೆಯವರೆಗೆ, ಈ ವೈವಿಧ್ಯಮಯ ಪಾಕವಿಧಾನಗಳನ್ನು ನೀವು ಮಾಡಿಕೊಂಡು ಸೇವಿಸಬಹುದು.
ಈ ಎಲ್ಲಾ ಪಾಕವಿಧಾನಗಳನ್ನು ನಿರ್ದಿಷ್ಟವಾಗಿ ಮಧುಮೇಹದೊಂದಿಗೆ ವ್ಯವಹರಿಸುವವರಿಗಾಗಿಯೇ ಕ್ಯುರೇಟ್ ಮಾಡಲಾಗಿದೆ, ಪ್ರತಿ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಹೆಚ್ಚಿಗೆಯಾಗುವುದನ್ನು ತಡೆಗಟ್ಟುತ್ತದೆ ಮತ್ತು ಇವುಗಳನ್ನು ಅವರು ಸೇವಿಸಲು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
1. ಜವಾರ್ ಚೀಲಾ
ಜವಾರ್ ಚೀಲಾ ಅನ್ನು ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ. ಮೊದಲಿಗೆ 1 ಈರುಳ್ಳಿ, 1 ಟೊಮೆಟೊ, 1 ಕ್ಯಾಪ್ಸಿಕಂ, 1 ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿಕೊಳ್ಳಿ. ಅವುಗಳನ್ನು ಒಂದು ಬೌಲ್ ಗೆ ಸೇರಿಸಿ. ಈಗ ಬಟ್ಟಲಿಗೆ 1 ಕಪ್ ಜೋಳದ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, 1/4 ಟೀ ಸ್ಪೂನ್ ಕರಿಮೆಣಸಿನ ಪುಡಿ, 1/4 ಟೀ ಸ್ಪೂನ್ ಅರಿಶಿನ ಪುಡಿ, 1/4 ಟೀ ಸ್ಪೂನ್ ಕೊತ್ತಂಬರಿ ಪುಡಿ ಮತ್ತು ಸ್ವಲ್ಪ ಗರಂ ಮಸಾಲಾ ಸೇರಿಸಿ.
ಸುಮಾರು 1 ಕಪ್ ನೀರನ್ನು ಸೇರಿಸಿ ಮತ್ತು ಉತ್ತಮ ಮಿಶ್ರಣವನ್ನು ನೀಡಿ. ಹಿಟ್ಟು ಸ್ವಲ್ಪ ದಪ್ಪವಾಗಿದ್ದರೆ, 1/4 ಕಪ್ ನೀರನ್ನು ಹೆಚ್ಚು ಸೇರಿಸಿ. ನಿಮ್ಮ ಹಿಟ್ಟು ತುಂಬಾ ದಪ್ಪವಾಗಿರಬಾರದು ಅಥವಾ ತುಂಬಾ ತೆಳುವಾಗಿರಬಾರದು. ಈಗ ನಾನ್-ಸ್ಟಿಕ್ ತವಾ ಮೇಲೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ಮತ್ತು ಅದರ ಮೇಲೆ ಹಿಟ್ಟನ್ನು ಸುರಿಯಿರಿ. ಚೀಲಾವನ್ನು ತಯಾರಿಸಲು ವೃತ್ತಾಕಾರದ ಆಕಾರದಲ್ಲಿ ಹರಡಿ.
ಇದನ್ನೂ ಓದಿ: Exercises For Weight Loss: ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡ್ತಿದ್ದೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
ಎರಡೂ ಬದಿಗಳಿಂದ ಹೊಂಬಣ್ಣದ ಕಂದು ಬಣ್ಣದವರೆಗೆ ಬೇಯಿಸಿ ಮತ್ತು ಸ್ವಲ್ಪ ಹಸಿರು ಪುದೀನಾ ಚಟ್ನಿಯೊಂದಿಗೆ ಸೇವಿಸಿರಿ.
2. ಸಮಾ ಅಕ್ಕಿ ಇಡ್ಲಿ
ಸಮಾ ಅಕ್ಕಿ ಇಡ್ಲಿ ಮಾಡಿಕೊಳ್ಳಲು 1 ಕಪ್ ಸಮಾ ಅಕ್ಕಿ ಅನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ, ಅದನ್ನು 2 ರಿಂದ 3 ಬಾರಿ ತೊಳೆಯಿರಿ ಮತ್ತು ಅವುಗಳನ್ನು ಬ್ಲೆಂಡರ್ ಜಾರ್ ಗೆ ಸೇರಿಸಿ. ನಂತರ 2 ಸೌತೆಕಾಯಿಗಳ ಸಿಪ್ಪೆ ಸುಲಿದು ಚೆನ್ನಾಗಿ ತುರಿದುಕೊಳ್ಳಿ. ಎಲ್ಲಾ ರಸವನ್ನು ಹಿಂಡಿ ಮತ್ತು ಈ ರಸವನ್ನು ಬ್ಲೆಂಡರ್ ಜಾರ್ ಗೆ ಸೇರಿಸಿ. ನಂತರದ ಬಳಕೆಗಾಗಿ ತುರಿದ ಸೌತೆಕಾಯಿ ತಿರುಳನ್ನು ಇರಿಸಿ.
ಈಗ ಬ್ಲೆಂಡರ್ ಗೆ 1 ಇಂಚು ಶುಂಠಿ, 1 ಹಸಿಮೆಣಸಿನಕಾಯಿ, 1/2 ಟೀ ಸ್ಪೂನ್ ಜೀರಿಗೆ, 2 ಟೇಬಲ್ ಸ್ಪೂನ್ ತೆಂಗಿನ ತುರಿ ಮತ್ತು 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ದಪ್ಪನೆಯ ಪೇಸ್ಟ್ ಅನ್ನು ರೂಪಿಸಲು ಚೆನ್ನಾಗಿ ಮಿಶ್ರಣ ಮಾಡಿ. ಒಂದು ಬೌಲ್ ನಲ್ಲಿ ಹಿಟ್ಟನ್ನು ಹೊರತೆಗೆಯಿರಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ತುರಿದ ಸೌತೆಕಾಯಿಯನ್ನು ಸೇರಿಸಿ.
ಇದನ್ನೂ ಓದಿ: Bride Weight Loss: ಮದುವೆ ಡೇಟ್ ಹತ್ತಿರ ಇದ್ಯಾ? ಮದುಮಗಳು ತೂಕ ಇಳಿಸಲು ಕೆಲವು ಸಲಹೆ
ಈಗ ಈ ಹಿಟ್ಟನ್ನು ಗ್ರೀಸ್ ಮಾಡಿದ ಇಡ್ಲಿ ಅಚ್ಚುಗಳಲ್ಲಿ ಸುರಿಯಿರಿ ಮತ್ತು ಅವುಗಳನ್ನು ಸುಮಾರು 12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ಒಮ್ಮೆ ಬೇಯಿಸಿದ ನಂತರ, ನಿಮ್ಮ ಇಡ್ಲಿಗಳನ್ನು ಬಡಿಸಲು ಸಿದ್ಧವಾಗಿರುತ್ತದೆ.
3. ಬಾಳೆಹಣ್ಣಿನ ಸ್ಮೂಥಿ
ಬಾಳೆಹಣ್ಣಿನ ಸ್ಮೂಥಿ ಮಾಡಿಕೊಳ್ಳಲು ಬ್ಲೆಂಡರ್ ಜಾರ್ ನಲ್ಲಿ, 1/2 ಬಾಳೆಹಣ್ಣು, 1/2 ಕಪ್ ಅನಾನಸ್ ತುಂಡುಗಳು ಮತ್ತು 1/2 ಕಪ್ ಮೊಸರನ್ನು ಸೇರಿಸಿ. ನಂತರ 1/4 ಕಪ್ ನೀರನ್ನು ಸೇರಿಸಿ ಮತ್ತು ಸ್ಮೂಥಿಯನ್ನು ರೂಪಿಸಲು ಚೆನ್ನಾಗಿ ಮಿಶ್ರಣ ಮಾಡಿ.
ಅದನ್ನು ಸಿಹಿಗೊಳಿಸಲು ನೀವು ಸಕ್ಕರೆ ಮುಕ್ತ ಸ್ವೀಟ್ನರ್ ಅಥವಾ ಸ್ಟೀವಿಯಾವನ್ನು ಸೇರಿಸಬಹುದು. 1 ಚಮಚ ನೆನೆಸಿದ ಚಿಯಾ ಬೀಜಗಳನ್ನು ಅದಕ್ಕೆ ಸೇರಿಸಿಕೊಳ್ಳಬಹುದು.
4. ಓಟ್ಸ್ ಗಂಜಿ
ಓಟ್ಸ್ ಗಂಜಿ ಮಾಡಿಕೊಳ್ಳುವುದು ಹೇಗೆಂದರೆ 1 ಕಪ್ ಸ್ಟೀಲ್ ಕಟ್ ಓಟ್ಸ್ ಅನ್ನು ತೊಳೆದು ಕುಕ್ಕರ್ ಗೆ ಸೇರಿಸಿ. ಸುಮಾರು 2 ಕಪ್ ನೀರನ್ನು ಸೇರಿಸಿ ಮತ್ತು 3 ರಿಂದ 4 ಸೀಟಿಗಳವರೆಗೆ ಅಥವಾ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ. ಯಾವುದೇ ನೀರು ಉಳಿದರೆ, ಅವುಗಳನ್ನು ಕೆಲವು ನಿಮಿಷಗಳ ಕಾಲ ಹೆಚ್ಚಿನ ಶಾಖದಲ್ಲಿ ಬೇಯಿಸಿ.
ಈಗ ಒಂದು ಬಾಣಲೆಯಲ್ಲಿ 1 ಟೇಬಲ್ ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ. ಒಂದು ಚಿಟಿಕೆ ಇಂಗು, 1/2 ಟೀ ಸ್ಪೂನ್ ಜೀರಿಗೆ ಬೀಜಗಳು, 1/2 ಟೀ ಸ್ಪೂನ್ ಸಾಸಿವೆ, 1 ಒಣ ಕೆಂಪು ಮೆಣಸಿನಕಾಯಿ ಮತ್ತು 1 ಕಾಂಡ ಕರಿಬೇವಿನ ಎಲೆಗಳನ್ನು ಸೇರಿಸಿ. ನಂತರ 1 ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು ಹೊಂಬಣ್ಣ ಬರುವವರೆಗೆ ಹುರಿಯಿರಿ. 1 ಕತ್ತರಿಸಿದ ಕ್ಯಾರೆಟ್, 1/4 ಕಪ್ ಬಟಾಣಿ ಮತ್ತು 1 ಕತ್ತರಿಸಿದ ಕ್ಯಾಪ್ಸಿಕಂ ಅನ್ನು ಸೇರಿಸಿ. 1/2 ಟೀಸ್ಪೂನ್ ಕೊತ್ತಂಬರಿ ಪುಡಿ, 1/4 ಟೀಸ್ಪೂನ್ ಕರಿಮೆಣಸಿನ ಪುಡಿ ಮತ್ತು 1/4 ಟೀಸ್ಪೂನ್ ಗರಂ ಮಸಾಲಾ ಪುಡಿಯೊಂದಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಚಿಮುಕಿಸಿ.
ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಸಖತ್ ಟೇಸ್ಟಿ ಬ್ರೆಡ್ ಟೋಸ್ಟ್
ತರಕಾರಿಗಳನ್ನು ಸುಮಾರು 5 ನಿಮಿಷಗಳ ಕಾಲ ಬೇಯಿಸಿ. ಈಗ ಬಾಣಲೆಗೆ ಬೇಯಿಸಿದ ಓಟ್ಸ್ ಅನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯ ಎರಡು ನಿಮಿಷಗಳ ಕಾಲ ಬೇಯಿಸಿ ಮತ್ತು ಜ್ವಾಲೆಯನ್ನು ಆಫ್ ಮಾಡಿ. ನಿಮ್ಮ ಮಧುಮೇಹ ಸ್ನೇಹಿ ಓಟ್ಸ್ ಸರ್ವ್ ಮಾಡಲು ಸಿದ್ಧವಾಗಿದೆ.
5. ಹೆಸರುಬೇಳೆ ದೋಸೆ
ಮೊದಲಿಗೆ ಈ ದೋಸೆಯನ್ನು ಮಾಡಲು 1 ಕಪ್ ಸಂಪೂರ್ಣ ಹಸಿರು ಹೆಸರುಬೇಳೆಯನ್ನು ರಾತ್ರಿಯಿಡೀ ನೆನೆಸಿಡಿ. ನೀರನ್ನು ಬಸಿದು ಬ್ಲೆಂಡರ್ ಗೆ ಹೆಸರು ಬೇಳೆಯನ್ನು ಸೇರಿಸಿ. 1 ಇಂಚು ಶುಂಠಿ, 1 ಹಸಿಮೆಣಸಿನಕಾಯಿ, 1/2 ಟೀ ಸ್ಪೂನ್ ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
ಇದನ್ನೂ ಓದಿ:Fennel Seed Benefits: ಘಮ ಘಮಿಸೋ ಸೋಂಪು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಆಯ್ಕೆ, ಮಿಸ್ ಮಾಡಬೇಡಿ
ಆಗಾಗ್ಗೆ ಸ್ವಲ್ಪ ಸ್ವಲ್ಪ ನೀರನ್ನು ಅದಕ್ಕೆ ಸೇರಿಸಿ ಮತ್ತು ಮಧ್ಯಮ ಸ್ಥಿರತೆಯ ಹಿಟ್ಟನ್ನು ರೂಪಿಸಲು ಮಿಶ್ರಣ ಮಾಡಿ. ಈಗ ನಾನ್-ಸ್ಟಿಕ್ ತವಾವನ್ನು ಎಣ್ಣೆಯೊಂದಿಗೆ ಗ್ರೀಸ್ ಮಾಡಿ, ಅದರ ಮೇಲೆ 2 ಲಡ್ಡು ಹಿಟ್ಟನ್ನು ಸುರಿಯಿರಿ ಮತ್ತು ವೃತ್ತಾಕಾರದ ಚಲನೆಗಳಲ್ಲಿ ಹರಡಿ. ಎರಡೂ ಬದಿಗಳಿಂದ ಹೊಂಬಣ್ಣದ ಕಂದು ಬಣ್ಣದವರೆಗೆ ಬೇಯಿಸಿ ಮತ್ತು ಸರ್ವ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ