• Home
  • »
  • News
  • »
  • lifestyle
  • »
  • Liver Health: ದೇಹವು ಆರೋಗ್ಯವಾಗಿರಲು ಮತ್ತು ಯಕೃತ್ತಿನ ಆರೋಗ್ಯಕ್ಕೆ ಈ ಆಹಾರ ಸೇವಿಸಿ!

Liver Health: ದೇಹವು ಆರೋಗ್ಯವಾಗಿರಲು ಮತ್ತು ಯಕೃತ್ತಿನ ಆರೋಗ್ಯಕ್ಕೆ ಈ ಆಹಾರ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವು ತಿನ್ನುವ ಮತ್ತು ಕುಡಿಯುವ ವಿಷಯಕ್ಕೆ ಬಂದಾಗ ಆರೋಗ್ಯಕರ ಹೊಟ್ಟೆ ಹೊಂದಿರುವುದು ಬಹಳ ಮುಖ್ಯ. ಜೀರ್ಣಕ್ರಿಯೆ ಚೆನ್ನಾಗಿದೆ. ಹೊಟ್ಟೆ ನೋವು ಇಲ್ಲ ಎಂದಾಗ ಹೆಚ್ಚಿನ ಜನರು ಯಕೃತ್ತಿನ ಆರೋಗ್ಯ ನಿರ್ಲಕ್ಷ್ಯ ಮಾಡ್ತಾರೆ.

  • Share this:

    ನಾವು ಏನೇ ತಿಂದರೂ (Eating) ಮತ್ತು ಏನೇ ಕುಡಿದರೂ (Drink) ಅದು ಹೊಟ್ಟೆಯ ಅಸ್ವಸ್ಥತೆಗೆ (Stomach Sickness) ಕಾರಣ ಆಗುತ್ತದೆ. ಹೊಟ್ಟೆಯ ಅಸ್ವಸ್ಥತೆ ಇಡೀ ಆರೋಗ್ಯದ (Health) ಮೇಲೆ ಕೆಟ್ಟ ಪರಿಣಾಮ (Bad Effects) ಬೀರುತ್ತದೆ. ಯಕೃತ್ತು, ಕರುಳು, ಪಿತ್ತಕೋಶ, ಕಿಡ್ನಿ ಹೀಗೆ ಎಲ್ಲಾ ಅಂಗಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ನಾವು ತಿನ್ನುವ ಮತ್ತು ಕುಡಿಯುವ ವಿಷಯಕ್ಕೆ ಬಂದಾಗ ಆರೋಗ್ಯಕರ ಹೊಟ್ಟೆ ಹೊಂದಿರುವುದು ಬಹಳ ಮುಖ್ಯ. ಜೀರ್ಣಕ್ರಿಯೆ ಚೆನ್ನಾಗಿದೆ. ಹೊಟ್ಟೆ ನೋವಿಲ್ಲ, ಹೊಟ್ಟೆ ನೋವು ಇಲ್ಲ ಎಂದಾಗ ಹೆಚ್ಚಿನ ಜನರು ಯಕೃತ್ತಿನ ಆರೋಗ್ಯ ನಿರ್ಲಕ್ಷ್ಯ ಮಾಡ್ತಾರೆ. ಅಥವಾ ಮರೆತು ಬಿಡ್ತಾರೆ.


    ದೇಹವು ಆರೋಗ್ಯವಾಗಿರಲು ಯಕೃತ್ತಿನ ಆರೋಗ್ಯ ಮುಖ್ಯ


    ಇದು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಪ್ರಮುಖ ಭಾಗ ಆಗಿದೆ. ನಿಮ್ಮ ದೇಹವು ಆರೋಗ್ಯವಾಗಿರಲು ಅಗತ್ಯ ಅನೇಕ ಕಾರ್ಯಗಳನ್ನು ಯಕೃತ್ತು ದಿನವಿಡೀ ನಿರ್ವಹಿಸುತ್ತದೆ. ಹಾಗಾಗಿ ಹೊಟ್ಟೆ, ಶ್ವಾಸಕೋಶ, ಕರುಳಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.


    ಹಾಗೆಯೇ ಲಿವರ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೆಲವು ವ್ಯಾಯಾಮಗಳು ಮತ್ತು ಆಹಾರದಲ್ಲಿ ಕೆಲವು ಬದಲಾವಣೆ ಅಥವಾ ಕೆಲವು ಹೊಸ ಸೇರ್ಪಡೆ ಜೊತೆಗೆ ನೀವು ನಿಮ್ಮ ಯಕೃತ್ತನ್ನು ಬಹಳ ಸುಲಭವಾಗಿ ಆರೋಗ್ಯ ಆಗಿಸಬಹುದು.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ಯಕೃತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಮುಖ್ಯ


    ಈ ನಿಟ್ಟಿನಲ್ಲಿ ಪೌಷ್ಟಿಕ ತಜ್ಞೆ ಲವ್ನೀತ್ ಬಾತ್ರಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ತಜ್ಞರ ಪ್ರಕಾರ, ಯಕೃತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಶಕ್ತಿಯ ಮನೆಯಾಗಿ ಕೆಲಸ ಮಾಡುತ್ತದೆ. ರಕ್ತದಿಂದ ವಿಷ ತೆಗೆದು ಹಾಕುವುದು, ಜೀರ್ಣಕ್ರಿಯೆ ಬಲಪಡಿಸಲು ಯಕೃತ್ತು ದೊಡ್ಡ ಪಾತ್ರ ವಹಿಸುತ್ತದೆ.


    ಜೊತೆಗೆ ಇದು ಜೀವಸತ್ವ ಸಂಗ್ರಹ ಮಾಡುವ ಕೆಲಸ ಮಾಡುತ್ತದೆ. ಆರೋಗ್ಯಕರ ಜೀವನಕ್ಕೆ ಯಕೃತ್ತಿನ ಸರಿಯಾದ ಕೆಲಸ ಮಾಡುವುದು ಅತ್ಯಗತ್ಯ. ಹಾಗಾಗಿ ಲವ್ನೀತ್ ಬಾತ್ರಾ ಅವರು ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸಲು ಸಲಹೆ ನೀಡಿದ್ದಾರೆ.


    ಗೋಧಿ ಹುಲ್ಲು ರಸ


    ವೀಟ್ ಗ್ರಾಸ್ ಉತ್ತಮ ಪ್ರಮಾಣದ ಕ್ಲೋರೊಫಿಲ್ ನ್ನು ಹೊಂದಿದೆ. ಇದು ದೇಹದಲ್ಲಿ ಸಂಗ್ರಹವಾಗುವ ವಿಷ ಹೊರ ಹಾಕಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ಕೆಲಸ ಸುಲಭ ಮಾಡುತ್ತದೆ. ಯಕೃತ್ತಿನ ಭಾರ ಕಡಿಮೆ ಮಾಡುವ ಮೂಲಕ, ವೀಟ್ ಗ್ರಾಸ್ ಯಕೃತ್ತನ್ನು ಆರೋಗ್ಯವಾಗಿಸುತ್ತದೆ.


    ಬೀಟ್ರೂಟ್ ರಸ


    ಬೀಟ್ರೂಟ್ನಲ್ಲಿ ನೈಟ್ರೇಟ್ಗಳು ಉತ್ತಮ ಪ್ರಮಾಣದಲ್ಲಿ ಇವೆ. ಬೀಟ್‌ರೂಟ್‌ನಲ್ಲಿ ಬೀಟಾಲೈನ್ಸ್ ಎಂಬ ಉತ್ಕರ್ಷಣ ನಿರೋಧಕ ಇದೆ. ಇದು ಯಕೃತ್ತನ್ನು ಉರಿಯೂತ ಮತ್ತು ಹಾನಿಯಿಂದ ರಕ್ಷಿಸುತ್ತದೆ. ಬೀಟ್ರೂಟ್ನಿಂದ ದೇಹ ನಿರ್ವಿಷಗೊಳಿಸುವ ಕಿಣ್ವಗಳು ಹೆಚ್ಚಾಗುತ್ತವೆ.


    ದ್ರಾಕ್ಷಿಗಳು


    ಕೆಂಪು ಅಥವಾ ಕಪ್ಪು ದ್ರಾಕ್ಷಿಗಳು ಆಂಟಿಆಕ್ಸಿಡೆಂಟ್‌ಗಳ ಮಟ್ಟ ಹೆಚ್ಚಿಸಲು ಕೆಲಸ ಮಾಡುವ ರೆಸ್ವೆರಾಟ್ರೊಲ್‌ ಅಂಶ ಹೊಂದಿದೆ. ಇದು ದ್ರಾಕ್ಷಿ ಹಣ್ಣಿನ ರಸವು ಯಕೃತ್ತನ್ನು ಉರಿಯೂತದಿಂದ ರಕ್ಷಿಸುತ್ತದೆ.


    ಹಸಿರು ಎಲೆಗಳ ತರಕಾರಿಗಳು


    ಹಸಿರು ಮತ್ತು ಸೊಪ್ಪುಗಳ ಸೇವನೆ ಲಿವರ್ ಸದೃಢ ಮಾಡುತ್ತದೆ ಎಂದು ತಜ್ಞರು ಹೇಳ್ತಾರೆ. ಅಂತಹ ವೇಳೆ ಪಾಲಕ್, ಮೆಂತ್ಯ ಮುಂತಾದ ತರಕಾರಿ, ಎಲೆಕೋಸು ಮತ್ತು ಕೋಸುಗಡ್ಡೆ ತರಕಾರಿಗಳು ಯಕೃತ್ತಿಗೆ ಪ್ರಯೋಜನಕಾರಿ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಅಡಿಕೆ


    ವಾಲ್ನಟ್ಸ್ ಆಂಟಿಆಕ್ಸಿಡೆಂಟ್ಗಳು ಮತ್ತು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧ ಆಗಿದೆ. ವಾಲ್ನಟ್ಸ್ ಒಮೆಗಾ 6 ಮತ್ತು ಒಮೆಗಾ 3 ಕೊಬ್ಬಿನಾಮ್ಲ ಹೊಂದಿದೆ. ಅಲ್ಲದೆ ಪಾಲಿಫಿನಾಲ್ ಆಂಟಿಆಕ್ಸಿಡೆಂಟ್‌ಗಳು ವಾಲ್ನಟ್ಸ್‌ ನಲ್ಲಿ ಉತ್ತಮ ಪ್ರಮಾಣದಲ್ಲಿದೆ. ವಾಲ್ನಟ್ ಅಂತಹ ಒಣ ಹಣ್ಣಾಗಿದ್ದು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.

    Published by:renukadariyannavar
    First published: