• Home
  • »
  • News
  • »
  • lifestyle
  • »
  • Health Tips: 30 ವರ್ಷದ ನಂತರ ಈ ಆಹಾರಗಳನ್ನು ತಿಂದ್ರೆ ಕೊಲೆಸ್ಟ್ರಾಲ್ ಹೆಚ್ಚಾಗಲ್ವಂತೆ

Health Tips: 30 ವರ್ಷದ ನಂತರ ಈ ಆಹಾರಗಳನ್ನು ತಿಂದ್ರೆ ಕೊಲೆಸ್ಟ್ರಾಲ್ ಹೆಚ್ಚಾಗಲ್ವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Care: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ ಹೆಚ್ಚಳವು ಜೆನೆಟಿಕ್ಸ್, ಧೂಮಪಾನ, ಅತಿಯಾದ ಆಲ್ಕೋಹಾಲ್ ಸೇವನೆ, ಕೆಟ್ಟ ಆಹಾರ ಪದ್ಧತಿ ಮತ್ತು ಅಧಿಕ ತೂಕ ಇತ್ಯಾದಿ ಸೇರಿದಂತೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಪಾರ್ಶ್ವವಾಯು, ಹೃದಯ ಕಾಯಿಲೆಗಳಂತಹ ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.

ಮುಂದೆ ಓದಿ ...
  • Share this:

ವಯಸ್ಸಾದಂತೆ ದೇಹದ (Body) ಭಾಗಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಉದಾಹರಣೆಗೆ, ಹೃದಯದ ವಾಲ್‌ಗಳು ದಪ್ಪವಾಗುತ್ತವೆ, ಮೂಳೆಗಳು ದುರ್ಬಲವಾಗುತ್ತವೆ ಮತ್ತು ಆರ್ಟರಿಗಳು ಅಥವಾ ರಕ್ತನಾಳಗಳು ಗಟ್ಟಿಯಾಗುತ್ತವೆ. ಇದು ಹೃದಯಕ್ಕೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅದರಲ್ಲೂ 30 ವರ್ಷದ ನಂತರ ದೇಹದಲ್ಲಿ ಇಂತಹ ಬದಲಾವಣೆಗಳು ಹೆಚ್ಚು. ವಯಸ್ಸಾದಂತೆ, ಹೃದಯ ಸಂಬಂಧಿ ಅಸ್ವಸ್ಥತೆಗಳಿಗೆ ಒಂದು ದೊಡ್ಡ ಕಾರಣವೆಂದರೆ ಕೊಲೆಸ್ಟ್ರಾಲ್ ಹೆಚ್ಚಳ.


ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ ಹೆಚ್ಚಳವು ಜೆನೆಟಿಕ್ಸ್, ಧೂಮಪಾನ, ಅತಿಯಾದ ಆಲ್ಕೋಹಾಲ್ ಸೇವನೆ, ಕೆಟ್ಟ ಆಹಾರ ಪದ್ಧತಿ ಮತ್ತು ಅಧಿಕ ತೂಕ ಇತ್ಯಾದಿ ಸೇರಿದಂತೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಪಾರ್ಶ್ವವಾಯು, ಹೃದಯ ಕಾಯಿಲೆಗಳಂತಹ ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.


ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಲಹೆಗಳಿಗಾಗಿ, ವೈದ್ಯರು ಮತ್ತು ತಜ್ಞರು ಮೂವತ್ತು ವರ್ಷಗಳ ನಂತರ ಇಂತಹ ಅಪಾಯವನ್ನು ಹೆಚ್ಚಿಸುವ ವಿಷಯಗಳನ್ನು ತ್ಯಜಿಸಲು ಮತ್ತು ಆರೋಗ್ಯಕರ ಆಹಾರ ಸೇವನೆಯನ್ನು ಹೆಚ್ಚಿಸಲು ಶಿಫಾರಸು ಮಾಡುತ್ತಾರೆ.


ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ಪ್ರವೇಶಿಸುವುದನ್ನು ತಡೆಯಲು 30ರ ನಂತರ ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಕೆಲವು ಆರೋಗ್ಯಕರ ಆಹಾರಗಳಿವೆ.


ಕೊಬ್ಬು ಕರಗಿಸುವ ಆಹಾರಗಳು
1) ಫೈಬರ್‌ಯುಕ್ತ ಆಹಾರ ಸೇವನೆ
30ರ ನಂತರ ನೀವು ಹೆಚ್ಚು ಫೈಬರ್ ಸೇವನೆಯನ್ನು ಹೆಚ್ಚಿಸಬೇಕು. ಇದು ಓಟ್ಸ್, ಸೇಬು ಮತ್ತು ಪೇರಳೆಗಳಂತಹ ಹಣ್ಣುಗಳಲ್ಲಿ ಮತ್ತು ದ್ವಿದಳ ಧಾನ್ಯಗಳಲ್ಲಿ ಕಂಡುಬರುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇದು ಉತ್ತಮ ಪೋಷಕಾಂಶವಾಗಿದೆ. ತಜ್ಞರು ಹೇಳುವ ಪ್ರಕಾರ ಇದು ಜೆಲ್ ತರಹದ ವಸ್ತುವನ್ನು ರೂಪಿಸಲು ನೀರಿನಲ್ಲಿ ಕರಗಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಪೋಷಕಾಂಶವಾಗಿದೆ ಎನ್ನುತ್ತಾರೆ.


ಇದನ್ನೂ ಓದಿ: ಬೆಂಗಳೂರಿನ ಸುತ್ತಲಿರುವ ಈ Hill Stationಗಳು ಸಂಗಾತಿ ಜೊತೆ ಹೋಗಲು ಸೂಕ್ತವಂತೆ


2) ಆರೋಗ್ಯಕರ ಫ್ಯಾಟ್ ತಿನ್ನಿರಿ


ಈ ವಯಸ್ಸಿನ ನಂತರ ನೀವು ಆಹಾರದಲ್ಲಿ ಆರೋಗ್ಯಕರ ಕೊಬ್ಬನ್ನು ತೆಗೆದುಕೊಳ್ಳಬೇಕು. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಆಹಾರದಲ್ಲಿ ಕಡಿಮೆ ಮಾಡಬೇಕು. ನೀವು ಫ್ರೈ ಮಾಡಿದ ಆಹಾರವನ್ನು ತ್ಯಜಿಸಬೇಕು. ಬದಲಿಗೆ, ಪಾಲಿಅನ್‌ಸ್ಯಾಚುರೇಟೆಡ್ ಮತ್ತು ಮಾನೋಅನ್‌ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಹೆಚ್ಚಿನ ವಸ್ತುಗಳನ್ನು ಸೇವಿಸಿ. ಇದಕ್ಕಾಗಿ, ನೀವು ಆಲಿವ್ ಎಣ್ಣೆ, ಕೆನೋಲಾ ಎಣ್ಣೆ, ಮಾಂಸ, ಬೀಜಗಳು, ಅವಕಾಡೊ ಮತ್ತು ಮೀನುಗಳಂತಹ ವಸ್ತುಗಳನ್ನು ತಿನ್ನಬಹುದು.


3) ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಿರಿ


ನೀವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬಯಸಿದರೆ, ನೀವು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಹಣ್ಣುಗಳು ಮತ್ತು ತರಕಾರಿಗಳನ್ನು ನಿರಂತರವಾಗಿ ಸೇವಿಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಪ್ಲಾಂಟ್ಸ್ ಸ್ಟಾನಾಲ್‌ಗಳು ಅಥವಾ ಸ್ಟೆರಾಲ್‌ಗಳು ಎಂದು ಕರೆಯಲಾಗುವ ಸಂಯುಕ್ತಗಳನ್ನು ಹೆಚ್ಚಿಸುತ್ತದೆ. ಇದು ಕರಗುವ ಫೈಬರ್‌ನಂತೆ ಕಾರ್ಯನಿರ್ವಹಿಸಿ ನಮ್ಮ ದೇಹದ ಕೊಬ್ಬನ್ನು ತಗ್ಗಿಸುತ್ತದೆ.


4) ಸಕ್ಕರೆ ಪಾನೀಯಗಳಿಂದ ದೂರವಿರಿ


ಹೆಚ್ಚು ಸಕ್ಕರೆ ಸೇವನೆಯು ಕಾಲಾನಂತರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚು ಸಕ್ಕರೆ ಪಾನೀಯಗಳನ್ನು ಸೇವಿಸುವವರು ಟ್ರೈಗ್ಲಿಸರೈಡ್‌ಗಳನ್ನು ಹೊಂದುವ ಸಾಧ್ಯತೆ 53% ಹೆಚ್ಚು ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಸಕ್ಕರೆ ಪ್ರಮುಖ ಕಾರಣವಾಗಿರುವುದರಿಂದ ಸಕ್ಕರೆ ಸಿಹಿ ಮತ್ತು ಪಾನೀಯಗಳಿಂದ ದೂರವಿರಿ.


ಇದನ್ನೂ ಓದಿ: ಈ ಆಹಾರಗಳನ್ನು ತಿಂದ್ರೆ ಲೈಂಗಿಕ ಆರೋಗ್ಯ ಚನ್ನಾಗಿರುತ್ತಂತೆ


5) ತಿನ್ನುವ ಕ್ರಮ ಬದಲಾವಣೆ


30 ವರ್ಷಗಳ ನಂತರ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೀವು ದಿನವಿಡೀ ಕಡಿಮೆ ಮತ್ತು ಹಲವಾರು ಬಾರಿ ಆಹಾರ ಸೇವಿಸಬೇಕು. ತಮ್ಮ ದೇಹದ ತೂಕದ 5-10%ನಷ್ಟು ಕಳೆದುಕೊಳ್ಳುವ ಜನರು ತಮ್ಮ ಒಟ್ಟು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆ ತೋರಿಸುತ್ತದೆ. ತೂಕವನ್ನು ಕಳೆದುಕೊಳ್ಳಲು, ಸ್ವಲ್ಪ ಮತ್ತು ಹೆಚ್ಚು ಬಾರಿ ಊಟವನ್ನು ತಿನ್ನಲು ಸಲಹೆ ನೀಡಲಾಗುತ್ತದೆ.

Published by:Sandhya M
First published: