Health Tips: ಏನೇ ಮಾಡಿದ್ರೂ ಆಯಾಸ ಕಡಿಮೆ ಆಗ್ತಿಲ್ಲ ಅಂದ್ರೆ ತಪ್ಪದೇ ಈ ಆಹಾರಗಳನ್ನ ಸೇವಿಸಿ

Fatigue: ನಿಮ್ಮ ನರಮಂಡಲಕ್ಕೆ ಗ್ರೀನ್ ಟೀ ಸೇವನೆ ಅತ್ಯುತ್ತಮ ರಿಲ್ಯಾಕ್ಸ್ ನೀಡುತ್ತದೆ. ಬಳಲಿಕೆ ನೀಗಿಸಿ ಏಕಾಗ್ರತೆ ಹೆಚ್ಚಿಸುತ್ತದೆ. ಬೇರೆ ಟೀ, ಕಾಫಿಗೆ ಹೋಲಿಸಿದರೆ ಗ್ರೀನ್ ಟೀನಲ್ಲಿ ಹೆಚ್ಚು ಆಂಟಿಯಾಕ್ಸಿಡಂಟ್ ಇರುವುದರಿಂದ, ಇದರ ಸೇವನೆ ತಕ್ಷಣವೇ ಚೈತನ್ಯ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಳಗ್ಗೆ(Morning) ಎದ್ದ ತಕ್ಷಣ ಕೆಲವರು ತಪ್ಪದೆ ವ್ಯಾಯಾಮ(Exercise) ಮಾಡುತ್ತಾರೆ. ನಿಯಮಿತವಾಗಿ ಪೌಷ್ಠಿಕ ಆಹಾರ (Healthy Food) ಸೇವನೆ ಮಾಡುತ್ತಾರೆ. ಆರೋಗ್ಯದ(Health)  ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ವೈದ್ಯರು(Doctor) ಹೇಳುವ ಸಲಹೆಗಳನ್ನ ಚಾಚು ತಪ್ಪದೆ ಪಾಲನೆ ಮಾಡುತ್ತಾರೆ. ಹೀಗಿದ್ರೂ ಸಹ ಪದೇ ಪದೇ ಸುಸ್ತಾಗುವ(Tiredness) ಸಮಸ್ಯೆ ಕೆಲವರನ್ನ ಕಾಡುತ್ತೆ. ವ್ಯಾಯಾಮ ಮಾಡಲು ಹೋದರು ಅವ್ರಿಗೆ ಸುಸ್ತಾಗುತ್ತೆ. ಕೆಲಸ ಮಾಡಲು ಹೋದರು ಸುಸ್ತಾಗುತ್ತೆ.. ಯಾವುದೇ ಆಹಾರ(Food) ಸೇವಿಸಿದ್ರು , ಏನೇ ಮಾಡಿದ್ರು ಸುಸ್ತಾಗುವ ಸಮಸ್ಯೆ ಕಡಿಮೆ ಆಗುವುದಿಲ್ಲ.. ನಾವು ತಿನ್ನುವ ಆಹಾರದಲ್ಲಿ ನಮಗೆ ಪ್ರೋಟೀನ್, ನ್ಯೂಟ್ರಿಯಂಟ್ಸ್ ನಮ್ಮ ದೇಹಕ್ಕೆ ಸೇರುವುದಿಲ್ಲ. ಬೆಳಗ್ಗೆ ಎಲ್ಲ ಕೆಲಸಗಳನ್ನು ಮುಗಿಸಿ ಮನೆಗೆ ಕಚೇರಿಗೆ ಹೋಗುವುದರೊಳಗೆ ಸುಸ್ತಾಗುತ್ತದೆ.. ಹೀಗಾಗಿ ಪ್ರತಿನಿತ್ಯ ನಿಮಗೆ ಕಾಡುವ ಸುಸ್ತಿನ ಸಮಸ್ಯೆಯಿಂದ ಪರಿಹಾರ ಪಡೆಯಲು ತಪ್ಪದೆ ಪ್ರತಿನಿತ್ಯ ಈ ಆಹಾರಗಳನ್ನ ಸೇವಿಸಿ.

  1) ಮೀನು: ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಮೀನು ಮನಸ್ಸು ಮತ್ತು ದೇಹ ಎರಡಕ್ಕೂ ಆರೋಗ್ಯಕರ ಆಹಾರವಾಗಿದೆ. ಪ್ರೊಟೀನ್ ಮತ್ತು ವಿಟಮಿನ್-ಡಿ ಕೊರತೆಯನ್ನು ಕಡಿಮೆ ಮಾಡುತ್ತದೆ. ಮೀನಿನ ಸೇವನೆಯಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

  ಇದನ್ನೂ ಓದಿ: ಚಳಿಗಾಲದಲ್ಲಿ ದೇಹದ ಚರ್ಮ ಕಾಂತಿಹೀನವಾಗುತ್ತಿದೆಯೇ? ತಪ್ಪದೇ ಈ 5 ತರಕಾರಿಗಳನ್ನು ಸೇವಿಸಿ

  2) ಸಿಹಿಗೆಣಸು: ಸಿಹಿಗೆಣಸು, ಮರಗೆಣಸು ಸೀಸನಲ್ ಆದರೆ ಇದು ಎನರ್ಜಿ ನೀಡುವ ಆಹಾರ. ಕಾರ್ಬೋಹೈಡ್ರೇಟ್ಸ್. ಫೈಬರ್. ಮ್ಯಾಂಗನೀಸ್ ಹಾಗೂ ವಿಟಮಿನ್ ಕೂಡ ಇದರಲ್ಲಿದೆ.

  3) ಮೊಟ್ಟೆ: ಪ್ರತಿದಿನವೂ ತಿಂಡಿ ಜೊತೆ ಒಂದು ಮೊಟೆ ಸೇವಿಸಬೇಕು. ನಮ್ಮಲ್ಲಿ ಈ ಅಭ್ಯಾಸ ಇಲ್ಲದಿದ್ದರೂ ಇದನ್ನು ರೂಢಿಸಿಕೊಂಡರೆ ಒಳ್ಳೆಯದು. ತುಂಬಾ ಪ್ರೋಟೀನ್ ಇದರಲ್ಲಿ ಇರುವುದರಿಂದ ದಿನ ಚೆನ್ನಾಗಿ ಹೋಗುತ್ತದೆ. ವಿಟಮಿನ್ ಕೂಡ ಇದರಲ್ಲಿ ಇರುವುದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

  4) ಬ್ರೌನ್ ರೈಸ್: ಹೆಚ್ಚಿನ ಜನರು ಬಿಳಿ ಅಕ್ಕಿ ತಿನ್ನುತ್ತಾರೆ. ಇದ್ರಿಂದ ಶಕ್ತಿಯ ಮಟ್ಟ ಹೆಚ್ಚುವುದಿಲ್ಲ. ಶಕ್ತಿ ಹೆಚ್ಚಿಸಿ, ತೂಕ ಕಡಿಮೆ ಮಾಡಬೇಕಾದ್ರೆ ಕಂದು ಅನ್ನವನ್ನು ಸೇವಿಸಿ. ಬ್ರೌನ್ ರೈಸ್‌ನಲ್ಲಿ ಫೈಬರ್ ಮತ್ತು ವಿಟಮಿನ್ ಬಿ ಹೆಚ್ಚಿರುತ್ತದೆ.

  5) ಡಾರ್ಕ್ ಚಾಕೋಲೆಟ್: ಬ್ಯಾಗ್‌ನಲ್ಲಿ ಒಂದು ಡಾರ್ಕ್ ಚಾಕೋಲೆಟ್ ಇಟ್ಟುಕೊಳ್ಳಿ. ದೇಹದಲ್ಲಿ ಏನು ಇಲ್ಲ, ಸುಸ್ತಾಗುತ್ತಿದೆ ಎನಿಸುವಾಗ ಎನರ್ಜಿಗಾಗಿ ಅದನ್ನು ತಿನ್ನಿ. ಮಾಮೂಲಿ ಚಾಕೋಲೆಟ್‌ನಂತೆ ಡಾರ್ಕ್ ಚಾಕೋಲೆಟ್ ಅಲ್ಲ, ಇದು ಆರೋಗ್ಯಕ್ಕೂ ಒಳ್ಳೆಯದು. ಕೊಕೊವಾ ದಿಂದ ನಮ್ಮ ಮೂಡ್ ಚೆನ್ನಾಗಿ ಆಗುತ್ತದೆ.

  6) ಬಾದಾಮಿ: ಬೇಗನೆ ದಣಿಯುತ್ತಿದ್ದರೆ ದೇಹದಲ್ಲಿ ಶಕ್ತಿಯ ಕೊರತೆಯಿದೆ ಎಂದರ್ಥ. ಬಾದಾಮಿ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬಾದಾಮಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.

  7) ಕಾಫಿ: ಕಾಫಿ ಕುಡಿದರೆ ಕೆಲವರಿಗೆ ಬೇಗ ಎನರ್ಜಿ ಬರುತ್ತದೆ. ಎನರ್ಜಿ ಕಡಿಮೆಯಾಯ್ತು ಎನ್ನುವಾಗ ಕೆಲವರು ಕಾಫಿ ಕುಡಿಯಲು ಹೋಗುತ್ತಾರೆ. ಎಪಿನೆಫ್ರೀನ್ ಎನ್ನುವ ಹಾರ್ಮೋನ್ ಕೆಫೀನ್ ಸೇವನೆಯಿಂದ ರಿಲೀಸ್ ಆಗುತ್ತದೆ. ಇದು ಎನರ್ಜಿಗೆ ಒಳ್ಳೆಯದು.

  8) ಸೇಬು: ಕಾರ್ಬೋಹೈಡ್ರೇಟ್ಸ್ ಹಾಗೂ ಫೈಬರ್ ಇರುವ ಆಹಾರ ಸೇಬು. ಮೀಡಿಯಂ ಸೈಜ್ ಇರುವ ಸೇಬು ದಿನವೂ ಒಂದರಂತೆ ಸೇವಿಸಿದರೆ ನಮ್ಮ ಆರೋಗ್ಯದಲ್ಲಾಗುವ ಬದಲಾವಣೆ ಕಾಣುತ್ತದೆ. ಇದು ಸುಸ್ತಾಗದಂತೆ ತಡೆಗಟ್ಟುತ್ತದೆ. ಇದರಲ್ಲಿರುವ ಫೈಬರ್ ನಮ್ಮ ಚರ್ಮಕ್ಕೂ ಒಳ್ಳೆಯದು.

  9) ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿರಿ. ಶೀತ ಮತ್ತು ಕೆಮ್ಮಿನ ಸಮಯದಲ್ಲಿ ದೇಹದ ಶಕ್ತಿಯ ಮಟ್ಟ ಇಳಿಯುತ್ತದೆ. ವಿಟಮಿನ್-ಸಿ ಸಮೃದ್ಧ ಹಣ್ಣುಗಳು ದೇಹದಲ್ಲಿ ಇರುವ ಸೂಕ್ಷ್ಮಜೀವಿಗಳನ್ನು ಸಾಯಿಸುತ್ತದೆ. ಹೀಗಾಗಿ ಕಿತ್ತಳೆ, ಕಿವಿ, ನಿಂಬೆ, ಟೊಮೆಟೊ ಇತ್ಯಾದಿಗಳನ್ನು ಹೆಚ್ಚು ಸೇವಿಸಿ.

  ಇದನ್ನೂ ಓದಿ: ದಿನಕ್ಕೆ ಎಷ್ಟು ಬಾರಿ ಹಲ್ಲುಜ್ಜಬೇಕು ಗೊತ್ತೇ? ಇಲ್ಲಿದೆ ಸರಿಯಾದ ಮಾಹಿತಿ

  10) ನಿಂಬೆ ಪಾನಕ: ನಿಂಬೆ ಪಾನಕ ಕೇವಲ ಮಧ್ಯಾಹ್ನದ ಸೋಮಾರಿತನ ನೀಗಿಸಲು ಮಾತ್ರವಲ್ಲ, ಅತಿಬೇಗನೆ ಶಕ್ತಿ ಪಡೆಯುವ ಸುಲಭ ವಿಧಾನ ಕೂಡ. ಪಾನಕದಲ್ಲಿ ಕರಗಿದ ರೂಪದಲ್ಲಿರುವ ಗ್ಲೂಕೋಸ್ ಯಾವುದೇ ಜೀರ್ಣಕ್ರಿಯೆ ಅವಶ್ಯಕತೆಯಿಲ್ಲದೆ ನೇರವಾಗಿ ರಕ್ತದಲ್ಲಿ ಸೇರಿಕೊಂಡು ಶಕ್ತಿ ನೀಡುತ್ತದೆ. ಇದರ ಉಪ್ಪಿನಂಶ, ದೇಹ ಬೆವರಿನ ಮೂಲಕ ಕಳೆದುಕೊಂಡ ಮಿನರಲ್ ಒದಗಿಸುತ್ತದೆ. ವಿಟಮಿನ್ ಸಿ ದೇಹಕ್ಕೆ ಶಕ್ತಿ ನೀಡುತ್ತದೆ.

  11) ಗ್ರೀನ್ ಟೀ: ನಿಮ್ಮ ನರಮಂಡಲಕ್ಕೆ ಗ್ರೀನ್ ಟೀ ಸೇವನೆ ಅತ್ಯುತ್ತಮ ರಿಲ್ಯಾಕ್ಸ್ ನೀಡುತ್ತದೆ. ಬಳಲಿಕೆ ನೀಗಿಸಿ ಏಕಾಗ್ರತೆ ಹೆಚ್ಚಿಸುತ್ತದೆ. ಬೇರೆ ಟೀ, ಕಾಫಿಗೆ ಹೋಲಿಸಿದರೆ ಗ್ರೀನ್ ಟೀನಲ್ಲಿ ಹೆಚ್ಚು ಆಂಟಿಯಾಕ್ಸಿಡಂಟ್ ಇರುವುದರಿಂದ, ಇದರ ಸೇವನೆ ತಕ್ಷಣವೇ ಚೈತನ್ಯ ನೀಡುತ್ತದೆ.
  Published by:ranjumbkgowda1 ranjumbkgowda1
  First published: