HOME » NEWS » Lifestyle » EAT RAISINS IN COLD WEATHER KNOW TODAY ITS SPECIAL BENEFITS ZP

ಚಳಿಗಾಲದಲ್ಲಿ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು

ಒಣದ್ರಾಕ್ಷಿ ಸೇವನೆಯು ನಮ್ಮ ಕರುಳಿನಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿರಿಸುತ್ತದೆ. ಒಣದ್ರಾಕ್ಷಿ ಸೇವನೆಯು ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

news18-kannada
Updated:January 7, 2021, 7:28 AM IST
ಚಳಿಗಾಲದಲ್ಲಿ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು
raisins
  • Share this:
ಒಣದ್ರಾಕ್ಷಿ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಚಳಿಗಾಲದಲ್ಲಿ ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದಾಗಿದೆ. ಶೀತ ವಾತಾವರಣದಲ್ಲಿ ಒಣದ್ರಾಕ್ಷಿ ಸೇವಿಸುವುದರಿಂದ ಮಲಬದ್ಧತೆ, ರಕ್ತಹೀನತೆ ಮತ್ತು ದೈಹಿಕ ದೌರ್ಬಲ್ಯ ಮುಂತಾದ ಗಂಭೀರ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗೆಯೇ ಇದರ ಸೇವನೆಯಿಂದ ನಿಮ್ಮ ತೂಕವೂ ಸಮತೋಲಿತವಾಗಿರುತ್ತದೆ. ಇದಲ್ಲದೆ, ಕಣ್ಣುಗಳು, ಹಲ್ಲುಗಳು ಮತ್ತು ಮೂಳೆಗಳು ಸಹ ಬಲಗೊಳ್ಳುತ್ತವೆ. ಒಣದ್ರಾಕ್ಷಿ ಸೇವನೆಯಿಂದ ಸಿಗುವ ಇನ್ನಷ್ಟು ಪ್ರಯೋಜನಗಳು ಈ ಕೆಳಗಿನಂತಿವೆ.

ಒಣದ್ರಾಕ್ಷಿ ಸೇವನೆಯು ನಮ್ಮ ಕರುಳಿನಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿರಿಸುತ್ತದೆ. ಒಣದ್ರಾಕ್ಷಿ ಸೇವನೆಯು ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಏಕೆಂದರೆ ಇದರಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಇರುವುದರಿಂದ ಅದು ನಮ್ಮ ದೇಹವನ್ನು ಬಲಪಡಿಸುತ್ತದೆ.

ಒಣದ್ರಾಕ್ಷಿಗಳಲ್ಲಿ ಇಂತಹ ಅನೇಕ ಪೋಷಕಾಂಶಗಳಿವೆ. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿಡಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿ ಚರ್ಮದಲ್ಲಿ ಇರುವ ಕೋಶಗಳನ್ನು ರಕ್ಷಿಸುತ್ತದೆ. ಇದು ನಿಮ್ಮ ಚರ್ಮವನ್ನು ಕಾಂತಿಯುಕ್ತ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಸೇವಿಸುವುದು ಹೇಗೆ?
ಒಣದ್ರಾಕ್ಷಿ ಸೇವನೆಯು ಇಡೀ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಆದರೆ ಇದನ್ನು ಸೇವಿಸಲು ಕೆಲ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಪ್ರತಿದಿನ 12 ರಿಂದ 14 ಒಣದ್ರಾಕ್ಷಿಗಳನ್ನು ಹಾಲಿನಲ್ಲಿ ಕುದಿಸಿ ಮತ್ತು ಪ್ರತಿ ರಾತ್ರಿ ಮಲಗುವ ಮುನ್ನ ಅದನ್ನು ಸೇವಿಸುವುದು ಉತ್ತಮ.
Published by: zahir
First published: January 7, 2021, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories