Gooseberry Benefits: ದೃಷ್ಟಿಗೆ ನೆಲ್ಲಿಕಾಯಿ ಎಷ್ಟು ಪ್ರಯೋಜನಕಾರಿ ಗೊತ್ತೇ? ಬೆಟ್ಟದ ನೆಲ್ಲಿಯ ಸೂಪರ್ ಹೆಲ್ತ್ ಪವರ್

ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ತಿಂದರೆ ಅದು ದೇಹಕ್ಕೆ ಹಲವಾರು ಪ್ರಯೋಜನ ನೀಡುತ್ತದೆ. ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಕೂದಲು ಮತ್ತು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಈ 5 ವಿಧಾನಗಳಲ್ಲಿ ನೀವು ನಿಮ್ಮ ಆಹಾರದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಟ್ಟದ ನೆಲ್ಲಿಕಾಯಿ (Gooseberry) ಸಾಕಷ್ಟು ಪ್ರಸಿದ್ಧವಾದ (Famous) ಹಣ್ಣು (Fruit). ದೀರ್ಘಾಯುಷ್ಯ (Longevity) ಮತ್ತು ಯೌವ್ವನ ಕಾಪಾಡುತ್ತದೆ ಬೆಟ್ಟದ ನೆಲ್ಲಿಕಾಯಿ. ಆಯುರ್ವೇದ (Ayurveda) ಔಷಧಗಳಲ್ಲಿ ಹೆಚ್ಚು ಬೆಟ್ಟದ ನೆಲ್ಲಿಕಾಯಿ ಬಳಕೆ ಮಾಡುತ್ತಾರೆ. ಬೆಟ್ಟದ ನೆಲ್ಲಿಕಾಯಿ ಒಂದು ಸೂಪರ್‌ ಫುಡ್ ಆಗಿದೆ. ಹಲವು ವಿಶೇಷ ಗುಣಗಳಿಂದ ಕೂಡಿದೆ ಬೆಟ್ಟದ ನೆಲ್ಲಿಕಾಯಿ. ತೂಕ ಕಡಿಮೆ ಮಾಡುವುದರಿಂದ ಹಿಡಿದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಸ್ಕಿನ್, ಕೂದಲ ಆರೋಗ್ಯ ಕಾಪಾಡಲು ಸಹ ನೆಲ್ಲಿಕಾಯಿ ಸಹಾಯ ಮಾಡುತ್ತದೆ. ನೀವು ಹೆಚ್ಚೆಚ್ಚು ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಬೇಕು. ಇದು ನಿಮಗೆ ಸಾಕಷ್ಟು ಪ್ರಯೋಜನ ನೀಡುತ್ತದೆ.

    ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಿ

    ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ತಿಂದರೆ ಅದು ದೇಹಕ್ಕೆ ಹಲವಾರು ಪ್ರಯೋಜನ ನೀಡುತ್ತದೆ. ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಫ್ಲೇವನಾಯ್ಡ್‌ಗಳು ಮತ್ತು ಆಂಥೋಸಯಾನಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

    ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಕೂದಲು ಮತ್ತು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಈ 5 ವಿಧಾನಗಳಲ್ಲಿ ನೀವು ನಿಮ್ಮ ಆಹಾರದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಬಹುದು.

    ಇದನ್ನೂ ಓದಿ: ಕಣ್ಣುಗಳ ಕೆಳಗೆ ಕಪ್ಪಾದ ಡಾರ್ಕ್ ಸರ್ಕಲ್ ಸಮಸ್ಯೆ ಇದ್ದರೆ ನಿವಾರಣೆಗೆ ಈ ವಿಧಾನ ಅನುಸರಿಸಿ

    ಬೆಟ್ಟದ ನೆಲ್ಲಿಕಾಯಿ ಪೌಡರ್

    ನೀವು ಬೆಟ್ಟದ ನೆಲ್ಲಿಕಾಯಿ ಪುಡಿಯ ರೂಪದಲ್ಲಿ ಸೇವಿಸಬಹುದು. ನೀವು ಮಾರುಕಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಸುಲಭವಾಗಿ ಪಡೆಯಬಹುದು. ನೀವು ಮನೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಒಣಗಿಸಿ, ಪುಡಿ ಮಾಡಿಟ್ಟುಕೊಳ್ಳಬಹುದು. ನೀವು 1 ಟೀಚಮಚ ಆಮ್ಲಾ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಸೇವಿಸಬಹುದು. ಜೇನುತುಪ್ಪದೊಂದಿಗೆ ಆಮ್ಲಾ ಸೇವಿಸಬಹುದು.

    ಬೆಟ್ಟದ ನೆಲ್ಲಿಕಾಯಿ ಜ್ಯೂಸ್

    ಬೆಟ್ಟದ ನೆಲ್ಲಿಕಾಯಿ ಸೇವಿಸುವ ಇನ್ನೊಂದು ಸುಲಭ ವಿಧಾನವೆಂದರೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್. ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಆಮ್ಲಾ ಜ್ಯೂಸ್ ಲಭ್ಯವಿದೆ. ನೀರಿಗೆ ಹಾಕಿ ಸುಲಭವಾಗಿ ಕುಡಿಯಬಹುದು. ನೆಲ್ಲಿಕಾಯಿ ರಸವನ್ನು ಬೆಳಿಗ್ಗೆ ಮತ್ತು ಸಂಜೆ ಆಮ್ಲಾ ರಸ  ಕುಡಿಯಬಹುದು. ಇದರಿಂದ ನೀವು ಅನೇಕ ಪ್ರಯೋಜನ ಪಡೆಯುತ್ತೀರಿ.

    ಬೆಟ್ಟದ ನೆಲ್ಲಿಕಾಯಿ ಮುರಬ್ಬಾ

    ನೀವು ಆಮ್ಲ ಮುರಬ್ಬ ತಿನ್ನಬಹುದು. ಬೇಸಿಗೆಯಲ್ಲಿ ಆಮ್ಲ ಮುರಬ್ಬ ತಿಂದರೆ ಹೊಟ್ಟೆಗೆ ತಂಪು. ಬೇಕಿದ್ದರೆ ಮಾರುಕಟ್ಟೆಯಿಂದ ಖರೀದಿಸಿ ಮುರಬ್ಬಾ ತಿನ್ನಬಹುದು.

    ಆಮ್ಲಾ ಕ್ಯಾಂಡಿ

    ಬೆಟ್ಟದ ನೆಲ್ಲಿಕಾಯಿ ತಿನ್ನಲು ಮತ್ತೊಂದು ಉತ್ತಮ ವಿಧಾನವೆಂದರೆ ಆಮ್ಲಾ ಕ್ಯಾಂಡಿ. ನೀವು ಮಾರುಕಟ್ಟೆಯಲ್ಲಿ ಒಣಗಿದ ಆಮ್ಲಾ ಕ್ಯಾಂಡಿ ಖರೀದಿಸಿ ತಿನ್ನಬಹುದು.

    ಬೆಟ್ಟದ ನೆಲ್ಲಿಕಾಯಿ ಚಟ್ನಿ

    ತಾಜಾ ನೆಲ್ಲಿಕಾಯಿ ತಿನ್ನಲು ಚಟ್ನಿ ಬಳಸಿ. ಕೆಲವರಿಗೆ ಆಮ್ಲಾ ಚಟ್ನಿ ತುಂಬಾ ಇಷ್ಟ. ತಿಳಿ ಹುಳಿ ಚಟ್ನಿ ಆಹಾರದ ರುಚಿ ಹೆಚ್ಚಿಸುತ್ತದೆ. ನೀವು ಯಾವುದೇ ರೀತಿಯಲ್ಲಿ ಆಮ್ಲಾವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

    ಪ್ರತಿದಿನ 1 ಬೆಟ್ಟದ ನೆಲ್ಲಿಕಾಯಿ ತಿನ್ನುವ ಪ್ರಯೋಜನಗಳು

    ಸಾಮಾನ್ಯ ಶೀತದ ಸಮಸ್ಯೆ ನಿವಾರಣೆಯಾಗುತ್ತದೆ

    ಆಮ್ಲಾದಲ್ಲಿ ವಿಟಮಿನ್-ಸಿ ಇದ್ದು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ನೆಗಡಿಯಂತಹ ಸೋಂಕುಗಳನ್ನು ನಿವಾರಿಸುತ್ತದೆ. ನೆಗಡಿಗೆ ಚಿಕಿತ್ಸೆ ನೀಡಲು, 2 ಚಮಚ ಆಮ್ಲಾ ಪುಡಿಯನ್ನು 2 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಿ.

    ಇದನ್ನೂ ಓದಿ: ಗಂಟೆಗಟ್ಟಲೆ ಟಿವಿ ಮುಂದೆ ಕೂರುತ್ತೀರಾ? ಹೃದಯಾಘಾತದ ಅಪಾಯ ಹೆಚ್ಚು

    ದೃಷ್ಟಿ ನಷ್ಟ ನಿವಾರಣೆ

    ನಿಮ್ಮ ದೃಷ್ಟಿ ಮಂದವಾಗುತ್ತಿದ್ದರೆ ಪ್ರತಿದಿನ ಬೆಟ್ಟದ ನೆಲ್ಲಿಕಾಯಿ ಸೇವಿಸಿ. ಆಮ್ಲಾ ಕೆರೋಟಿನ್ ಹೊಂದಿದ್ದು ಇದು ದೃಷ್ಟಿ ಸುಧಾರಿಸಲು ಮತ್ತು ಕಣ್ಣಿನ ಪೊರೆ, ಕಣ್ಣುಗಳ ಮೇಲಿನ ಅತಿಯಾದ ಆಯಾಸ, ಕಣ್ಣುಗಳ ತುರಿಕೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
    Published by:renukadariyannavar
    First published: