ತಡರಾತ್ರಿ ಆಹಾರ ಸೇವನೆಯಿಂದ ಕ್ಯಾನ್ಸರ್ ರೋಗ..?

news18
Updated:July 19, 2018, 7:02 PM IST
ತಡರಾತ್ರಿ ಆಹಾರ ಸೇವನೆಯಿಂದ ಕ್ಯಾನ್ಸರ್ ರೋಗ..?
news18
Updated: July 19, 2018, 7:02 PM IST
-ನ್ಯೂಸ್ 18 ಕನ್ನಡ

ಕ್ಯಾನ್ಸರ್​ ರೋಗದಲ್ಲಿ ಹಲವಾರು ಪ್ರಕಾರಗಳಿವೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಧಾನವಾಗಿ ಜೀವ ಹಿಂಡುವ ಈ ಮಹಾಮಾರಿಯನ್ನು ಆಹಾರ ಕ್ರಮದಿಂದ ನಿಯಂತ್ರಿಸಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ರಾತ್ರಿಯ ಆಹಾರ 9 ಗಂಟೆಗೆ ಮುಂಚಿತವಾಗಿ ಅಥವಾ ಮಲಗುವ ಎರಡು ಗಂಟೆಗಳ ಮೊದಲು ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್​ನ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಅಧ್ಯಯನ ತಿಳಿಸಿದೆ.

ರಾತ್ರಿಯಲ್ಲಿ 10 ಗಂಟೆಯ ಬಳಿಕ ಆಹಾರ ಸೇವಿಸುವವರ ಆರೋಗ್ಯವನ್ನು ಪರಿಶೀಲಿಸಿದಾಗ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಶೇ.20ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

'ಆಹಾರ ಪದ್ದತಿ ಮತ್ತು ಆಹಾರ ಸೇವನೆಯ ಸಮಯಕ್ಕೆ ಅನುಗುಣವಾಗಿ ಕ್ಯಾನ್ಸರ್​ ರೋಗದ ಅಪಾಯವನ್ನು ನಮ್ಮ ಅಧ್ಯಯನ ತಂಡ ಸಂಶೋಧಿಸಿದೆ' ಎಂದು ಸ್ಪೇನ್​ನ ಗ್ಲೋಬಲ್ ಹೆಲ್ತ್​ನ ಲೇಖಕ ಮನೊಲಿಸ್​ ಕೊಗೆವಿನಾಸ್​ ತಿಳಿಸಿದ್ದಾರೆ.

621 ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು 1,205 ಸ್ತನ ಕ್ಯಾನ್ಸರ್ ರೋಗಿಗಳನ್ನು ಈ ಅಧ್ಯಯನಕ್ಕಾಗಿ ಪರೀಕ್ಷಿಸಲಾಗಿದೆ. ಇದರಲ್ಲಿ ಭಾಗವಹಿಸಿದ 872 ಪುರುಷರು ಮತ್ತು 1,321 ಮಹಿಳಾ ಕ್ಯಾನ್ಸರ್​ ರೋಗಿಗಳ ಹವ್ಯಾಸ, ನಿದ್ರೆಯ ಸಮಯ, ಊಟದ ಸಮಯ ಸೇರಿದಂತೆ ಹಲವು ವಿಷಯಗಳನ್ನು ಕಲೆ ಹಾಕಲಾಗಿತ್ತು. ಇವರಲ್ಲಿ ಹೆಚ್ಚಿನವರು ತಡರಾತ್ರಿಯಲ್ಲಿ ಆಹಾರ ಸೇವಿಸುವ ಅಭ್ಯಾಸ ರೂಢಿಸಿಕೊಂಡಿದ್ದರು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಅಲ್ಲದೆ ನೈಟ್ ಶಿಫ್ಟ್​ ಕೆಲಸ, ಸರ್ಕಾಡಿಯನ್‌ ಅಡೆತಡೆ ಹೊಂದಿರುವ ವ್ಯಕ್ತಿಗಳಲ್ಲಿಯೂ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಂಡು ಬರುವುದಾಗಿ ಅಧ್ಯಯನ ತಂಡ ತಿಳಿಸಿದೆ. ಒಟ್ಟಾರೆ ಸಂಶೋಧನೆಯ ಪ್ರಕಾರ ತಡ ರಾತ್ರಿಯ ಊಟದ ಅಭ್ಯಾಸ ಕೂಡ ಕ್ಯಾನ್ಸರ್ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಅಧ್ಯಯನ ತಂಡ ತಿಳಿಸಿದೆ.
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ