Sleeping Disorder: ನಿದ್ರಾಹೀನತೆ ಸಮಸ್ಯೆಗೆ ಬಾಳೆಹಣ್ಣು ಪರಿಹಾರವೇ? ಆದರೆ ರಾತ್ರಿ ವೇಳೆ ಸೇವಿಸಬಹುದಾ?

ಉತ್ತಮ ನಿದ್ರೆಗಾಗಿ ನೀವು ಬಾಳೆಹಣ್ಣು ಸೇವನೆ ಮಾಡಬಹುದು. ಪ್ರಪಂಚದಾದ್ಯಂತ ನಡೆದ ಅನೇಕ ಸಂಶೋಧನೆಗಳು ಬಾಳೆಹಣ್ಣಿನಲ್ಲಿ ಇರುವ ವಿಶೇಷ ಪೋಷಕಾಂಶಗಳ ಬಗ್ಗೆ ಹೇಳುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದಿನ ದಿನಗಳಲ್ಲಿ (Now a Days) ನಿದ್ರಾಹೀನತೆ (Sleeping Disorder) ಒಂದು ದೊಡ್ಡ ಸಮಸ್ಯೆ (Big Problem) ಆಗಿ ಯುವ (Young) ಜನಾಂಗವನ್ನು (Generation) ಕಾಡುತ್ತಿದೆ. ನಿದ್ರಾಹೀನತೆಯಿಂದ ಒತ್ತಡ, ಆತಂಕ ಮತ್ತು ಆಯಾಸ ಕಾಡುತ್ತದೆ. ನಿದ್ರಾಹೀನತೆ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿ ಸಮಸ್ಯೆಗೆ ಕಾರಣ ಆಗುತ್ತದೆ. ನಿದ್ದೆ ಮಾಡದೇ ಹೋದರೆ ನೀವು ದಿನವಿಡೀ ಆಲಸ್ಯ ಮತ್ತು ಆಯಾಸ ಪಡಬೇಕಾಗುತ್ತದೆ. ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಡುತ್ತದೆ. ನಿದ್ರೆಯ ಕೊರತೆ ನಿಮ್ಮ ಚಯಾಪಚಯವನ್ನು ಕೆಡಿಸುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಾಕಷ್ಟು ನಿದ್ರೆ ಮಾಡದ ಕಾರಣ ನಿಮ್ಮ ರಕ್ತದೊತ್ತಡ ಅನಿಯಂತ್ರಿತ ಆಗಿರುತ್ತದೆ.

    ಉತ್ತಮ ನಿದ್ದೆಗಾಗಿ ಬಾಳೆ ಹಣ್ಣು ಸೇವನೆ ಮಾಡಿ

    ನೀವು ಮಾನಸಿಕ ಸಮಸ್ಯೆ ಹೊಂದಿದ್ದರೆ ನಿದ್ರಾಹೀನತೆ ಉಂಟಾಗುತ್ತದೆ. ಅಂತಹ ಸ್ಥಿತಿಯಲ್ಲಿ ಉತ್ತಮ ನಿದ್ರೆಗಾಗಿ ನೀವು ಬಾಳೆಹಣ್ಣು ಸೇವನೆ ಮಾಡಬಹುದು. ಪ್ರಪಂಚದಾದ್ಯಂತ ನಡೆದ ಅನೇಕ ಸಂಶೋಧನೆಗಳು ಬಾಳೆಹಣ್ಣಿನಲ್ಲಿ ಇರುವ ವಿಶೇಷ ಪೋಷಕಾಂಶಗಳ ಬಗ್ಗೆ ಹೇಳುತ್ತವೆ. ಬಾಳೆ ಹಣ್ಣು ನಿಮಗೆ ಉತ್ತಮ ನಿದ್ರೆ ಹೊಂದಲು ಸಹಾಯ ಮಾಡುತ್ತದೆ.

    ರಾತ್ರಿ ಬಾಳೆಹಣ್ಣು ತಿನ್ನಬಹುದೇ?

    ರಾತ್ರಿ ಬಾಳೆಹಣ್ಣು ತಿಂದರೆ ಅದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಇದು ಬೊಜ್ಜಿಗೆ ಕಾರಣವಾಗುತ್ತದೆ. ಇದರೊಂದಿಗೆ, ಬಾಳೆಹಣ್ಣಿನ ಪರಿಣಾಮವು ಶೀತ. ಇದು ನಿಮಗೆ ಶೀತ ಮತ್ತು ಜ್ವರದ ಸಮಸ್ಯೆ ಉಂಟು ಮಾಡುತ್ತದೆ. ಆದ್ದರಿಂದ, ಸಂಜೆಗೂ ಮೊದಲು ಬಾಳೆ ಹಣ್ಣು ಸೇವಿಸುವುದು ಉತ್ತಮ.

    ರಾತ್ರಿಯಲ್ಲಿ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ನೆನಪಿನಲ್ಲಿಡಿ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ನೀವು ಸಂಜೆ ಮೊದಲು ಬಾಳೆ ಹಣ್ಣು ಸೇವನೆ ಮಾಡಿ.

    ಬಾಳೆ ಹಣ್ಣಿನಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ

    ಬಾಳೆಹಣ್ಣು ಸೇವನೆ ನಿದ್ರೆಗೆ ಪ್ರಯೋಜನಕಾರಿ ಆಗಿದೆ. ಇದು ನಿಮ್ಮ ನಿದ್ರೆಯನ್ನು ಉತ್ತೇಜಿಸುವ ಮೆಗ್ನೀಸಿಯಮ್ ಅನ್ನು ಹೊಂದಿದೆ.. 126 ಗ್ರಾಂ ಬಾಳೆಹಣ್ಣಿನಲ್ಲಿ 34 ಮಿಗ್ರಾಂ ಮೆಗ್ನೀಸಿಯಮ್ ಇರುತ್ತದೆ. ಇದನ್ನು ಸೇವನೆ ಮಾಡಿದರೆ ದೇಹದಲ್ಲಿ ಮೆಲಟೋನಿನ್ ಉತ್ಪಾದನೆ ಹೆಚ್ಚುತ್ತದೆ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಅಸ್ತಮಾ ರೋಗಿಗಳು ಏನು ತಿನ್ನಬೇಕು; ಏನು ತಿನ್ನಬಾರದು ಗೊತ್ತಾ?

    ಬಾಳೆ ಹಣ್ಣಿನಲ್ಲಿ ಟ್ರಿಪ್ಟೊಫಾನ್ ಇದೆ

    ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಬಾಳೆಹಣ್ಣುಗಳಲ್ಲಿ ಟ್ರಿಪ್ಟೊಫಾನ್ ಕಂಡು ಬರುತ್ತದೆ. ಇದು ಅತ್ಯಗತ್ಯ ಅಮೈನೋ ಆಮ್ಲವಾಗಿದೆ. ಇದು ನಿಮ್ಮ ನಿದ್ರೆಯನ್ನು ಸುಧಾರಿಸುವಲ್ಲಿ ಬಹಳ ಪರಿಣಾಮಕಾರಿ ಆಗಿದೆ. ಈ ಆಮ್ಲವು ನಿಮ್ಮ ಮೆದುಳಿಗೆ ನೇರವಾಗಿ ಪ್ರವೇಶಿಸಿ, ಹಾರ್ಮೋನ್ ಸಿರೊಟೋನಿನ್ ಆಗಿ ಪರಿವರ್ತನೆ ಆಗುತ್ತದೆ. ಈ ಹಾರ್ಮೋನ್ ಮೆಲಟೋನಿನ್ ಮಟ್ಟ ಹೆಚ್ಚಳ ಮಾಡುತ್ತದೆ. ಚೆನ್ನಾಗಿ ನಿದ್ರೆ ಮಾಡಲು ಸಹಕಾರಿ ಆಗಿದೆ.

    ಬಾಳೆ ಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಿದ್ರೆ ಮಾಡಲು ಪ್ರಯೋಜನಕಾರಿ

    ನಿಮ್ಮ ಉತ್ತಮ ನಿದ್ರೆಗೆ ಬಾಳೆಹಣ್ಣು ತುಂಬಾ ಪ್ರಯೋಜನಕಾರಿ. ಬಾಳೆ ಹಣ್ಣುಗಳು ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಹೆಚ್ಚಿನ ಕಾರ್ಬ್ ಆಹಾರ ಸೇವನೆಯಿಂದ ನಿಮ್ಮ ಮೆದುಳು ಸಿರೊಟೋನಿನ್ ಮತ್ತು ಮೆಲಟೋನಿನ್ ಅನ್ನು ವೇಗವಾಗಿ ಉತ್ಪಾದಿಸುತ್ತದೆ. ಇದು ನಿಮಗೆ ನಿದ್ರಿಸಲು ಸಹಕಾರಿ. ಬಾಳೆಹಣ್ಣು ನಿಮ್ಮ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ.

    ಉತ್ತಮ ನಿದ್ರೆಗಾಗಿ ಇತರ ಸಲಹೆಗಳು

    - ಉತ್ತಮ ನಿದ್ರೆಗಾಗಿ ನಿಮ್ಮ ಮಲಗುವ ಸಮಯ ಹೊಂದಿಸಿ.

    - ಒತ್ತಡದಿಂದ ದೂರವಿರಿ ಮತ್ತು ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ.

    - ಒತ್ತಡದಿಂದ ದೂರವಿರಲು ಯೋಗ ಮತ್ತು ವ್ಯಾಯಾಮ ಮಾಡಿ. ಇದು ನಿಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಸಮೃದ್ಧ ಆಹಾರ ತೆಗೆದುಕೊಳ್ಳಿ.

    ಇದನ್ನೂ ಓದಿ: ಯಾವ ಪದಾರ್ಥದ ಜೊತೆಗೆ ಜೇನುತುಪ್ಪ ತಿನ್ನಬಾರದು?

    - ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರ ಸೇರಿಸಿ.

    - ಮದ್ಯಪಾನ ಅಥವಾ ಧೂಮಪಾನದಿಂದ ದೂರವಿರಿ.

    - ಹಾಸಿಗೆ ಸ್ವಚ್ಛವಾಗಿಡಿ ಮತ್ತು ದಿಂಬಿನ ಬಳಿ ಕೆಲವು ಹನಿ ಪುದೀನಾ ಎಣ್ಣೆ ಹಾಕಿ.

    - ಉತ್ತಮ ನಿದ್ರೆಗಾಗಿ ಬೆಚ್ಚಗಿನ ನೀರಿನ ಸ್ನಾನ ಮಾಡಿ. ಇದರಿಂದ ದೇಹದ ಆಯಾಸ ದೂರವಾಗುತ್ತದೆ ಮತ್ತು ಪರಿಹಾರ ಸಿಗುತ್ತದೆ.
    Published by:renukadariyannavar
    First published: