Banana and Beer: ಮದ್ಯಪಾನ ಮಾಡಿದ ನಂತರ ಬಾಳೆಹಣ್ಣು ತಿಂದ್ರೆ ವಿಷವಾಗುತ್ತಾ? ಅಥವಾ ಒಳ್ಳೆಯದಾ? ಉತ್ತರ ಇಲ್ಲಿದೆ

Alcohol: ಕೆಲವರು ಆಲ್ಕೋಹಾಲ್ ಸೇವನೆ ಬಳಿಕ ಬಾಳೆಹಣ್ಣು ಸೇವನೆ ಮಾಡುವುದು ವಿಷ ಸೇವಿಸಿದಂತೆ ಇದರಿಂದ ಹಲವಾರು ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ ಎಂದೆಲ್ಲಾ ಹೇಳುತ್ತಾರೆ. ಆದ್ರೆ ವಾಸ್ತವದಲ್ಲಿ ಆಲ್ಕೋಹಾಲ್ ನಿಂದ ಉಂಟಾಗಿರುವ ಹ್ಯಾಂಗೊವರ್ ಕಡಿಮೆ ಮಾಡಲು ಬಾಳೆಹಣ್ಣಿಗಿಂತ ಉತ್ತಮ ಮನೆಮದ್ದು ಮತ್ತೊಂದಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮದ್ಯಪಾನ(Dinking) ಆರೋಗ್ಯಕ್ಕೆ(Health) ಒಳ್ಳೆಯದಲ್ಲ. ಆದ್ರೆ ಇತ್ತೀಚಿನ ಹೈ ಫೈ ಜೀವನದಲ್ಲಿ(Life) ಊಟದ(Food) ಜೊತೆಗೆ ಮದ್ಯಪಾನ(Alcoholism) ಕೂಡ ಇದ್ದೆ ಇರುತ್ತದೆ. ಹೀಗಾಗಿ ನಮ್ಮ ಅಗತ್ಯತೆಗೆ ಮೀರಿ ನಾವು ತೆಗೆದುಕೊಳ್ಳುವ ಆಹಾರ ನಮ್ಮ ಆರೋಗ್ಯಕ್ಕೆ(Health) ಅನಾರೋಗ್ಯಕರವಾಗಿ ಪರಿಣಾಮ ಬೀರಿ ನಮಗೆ ಆಲಸ್ಯ(Laziness) ಅಥವಾ ಜಡತ್ವವನ್ನು ಉಂಟು ಮಾಡುತ್ತದೆ. ಅದರಲ್ಲೂ ಕುಡಿದರೆ ಬೆಳಗ್ಗೆ(Morning) ಎದ್ದಾಗ ಅದರ ನಿಶೆ ಇನ್ನೂ ಇದ್ದರೆ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಮತ್ತು ತಲೆ ನೋವು(Headache) ಕಾಣಿಸಿಕೊಳ್ಳುವುದು. ಇದಕ್ಕೆಲ್ಲಾ ಕಾರಣ ನಮ್ಮ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಕೂಡ ಗಣನೀಯವಾಗಿ ಕಡಿಮೆಯಾಗುತ್ತಾ ಬರುತ್ತದೆ ಮತ್ತು ನಮ್ಮ ದೇಹದ ಈ ಜಡತ್ವ ದೂರವಾಗುವವರೆಗೂ ನಮಗೆ ಯಾವುದೇ ಕೆಲಸವನ್ನು ಮಾಡಲು ಮನಸ್ಸು ಬರುವುದಿಲ್ಲ.

  ಅಲ್ಲದೆ ಆಲ್ಕೋಹಾಲ್ ಡೈಯುರೆಟಿಕ್. ಅಂದರೆ ಇದು ನೀವು ಅಗತ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಪರಿಣಾಮ ದೇಹದಲ್ಲಿನ ನೀರಿನಾಂಶದ ಜೊತೆಗೆ ಪ್ರಮುಖ ಮಿನರಲ್ಸ್ ಹಾಗೂ ವಿಟಮಿನ್‍ಗಳು ಹೊರಹೋಗುತ್ತವೆ. ಇದರಿಂದ ಡಿಹೈಡ್ರೇಷನ್ ಉಂಟಾಗಿ ಬಾಯಾರಿಕೆ ಹೆಚ್ಚುತ್ತದೆ. ಜೊತೆಗೆ ಸಹಿಸಲು ಸಾಧ್ಯವಾಗದ ತಲೆನೋವು ಕೂಡ ಬರುತ್ತದೆ ಹೀಗಾಗಿ ಕೆಲವರು ಮಾತ್ರೆ ತೆಗೆದುಕೊಂಡ್ರೆ ಇನ್ನು ಕೆಲವುರು ಮನೆಯಲ್ಲಿಯೇ ಇರೋ ಮದ್ದು ಅಂದ್ರೆ ಮಜ್ಜಿಗೆ ಕೂಡಿದು ಹ್ಯಾಂಗ್ ವೋವರ್ ನಿಂದ ಹೊರಗೆ ಬರಲು ಪ್ರಯತ್ನ ಪಡ್ತಾರೆ. ಆದ್ರೆ ರಾತ್ರಿ ಕುಡಿದ ನಶೆ ನಮ್ಮನ್ನ ಬೆಳಗ್ಗೆಯೂ ಕಾಡ್ತಾ ಇದೆ ಅಂದ್ರೆ ನಾವು ಮನೆಯಲ್ಲಿಯೇ ಸಿಗೋ ಇನ್ನೋಂದು ಆಹಾರದಿಂದ ಸುಲುಭವಾಗಿ ನಶೆ ಇಳಿಸಿಕೊಳ್ಳಬಹುದು..

  ಇದನ್ನೂ ಓದಿ: ಕೆಂಪು ಬಣ್ಣದ ಬಾಳೆಹಣ್ಣು ಸೇವಿಸಿದ್ರೆ ದೇಹತೂಕ ಬಹಳ ಬೇಗ ಕಡಿಮೆಯಾಗುತ್ತಂತೆ ನೋಡಿ

  ಒಂದೇ ಒಂದು ಹಣ್ಣಿನಿಂದ ಇಳಿಯಲಿದೆ ಹ್ಯಾಂಗೊವರ್..

  ವಿಟಮಿನ್ಸ್, ಮಿನರಲ್ಸ್, ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ಯಥೇಚ್ಛವಾಗಿ ಸೇವಿಸಿದ್ರೆ ರಾತ್ರಿಯ ಮದ್ಯಪಾನದ ನಶೆ ಇಳಿಯಲಿದೆ. ಅಲ್ಲದೆ ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಹೊಟ್ಟೆಯನ್ನು ಖಾಲಿ ಬಿಡಬೇಡಿ. ಯಾಕಂದ್ರೆ ಆಲ್ಕೋಹಾಲ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ ಸಕ್ಕರೆ ಪ್ರಮಾಣ ಹೆಚ್ಚಲು ಆಹಾರ ಸೇವಿಸುವುದು ಅತ್ಯಗತ್ಯ.ಹೀಗಾಗಿ ನೀವು ನಶೆಯಿಂದ ಹೊರಬರಲು ಮನೆಯಲ್ಲಿಯೇ ಸಿಗುವ ಬಾಳೆಹಣ್ಣು ಸೇವನೆ ಮಾಡುವುದು ಸೂಕ್ತ

  ಬಾಳೆ ಹಣ್ಣಿನಿಂದ ಕಡಿಮೆಯಾಗುತ್ತಾ ಹ್ಯಾಂಗೊವರ್ ..?

  ಕೆಲವರು ಆಲ್ಕೋಹಾಲ್ ಸೇವನೆ ಬಳಿಕ ಬಾಳೆಹಣ್ಣು ಸೇವನೆ ಮಾಡುವುದು ವಿಷ ಸೇವಿಸಿದಂತೆ ಇದರಿಂದ ಹಲವಾರು ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ ಎಂದೆಲ್ಲಾ ಹೇಳುತ್ತಾರೆ. ಆದ್ರೆ ವಾಸ್ತವದಲ್ಲಿ ಆಲ್ಕೋಹಾಲ್ ನಿಂದ ಉಂಟಾಗಿರುವ ಹ್ಯಾಂಗೊವರ್ ಕಡಿಮೆ ಮಾಡಲು ಬಾಳೆಹಣ್ಣಿಗಿಂತ ಉತ್ತಮ ಮನೆಮದ್ದು ಮತ್ತೊಂದಿಲ್ಲ. ಯಾಕಂದ್ರೆ ರಾತ್ರಿ ಅತಿಯಾಗಿ ಮದ್ಯ ಸೇವನೆ ಮಾಡಿದ ಬಳಿಕ ನಮ್ಮ ದೇಹದಲ್ಲಿ ಪೂಟ್ಯಾಶಿಯಂ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿಯೇ ಕೆಲವರಿಗೆ ವಾಂತಿ, ತಲೆನೋವು ಕಾಣಿಸಿಕೊಳ್ಳುವುದು ಸಹಜ.. ಆದ್ರೆ ನಮಗೆಲ್ಲ ತಿಳಿದಿರುವಂತೆ ಬಾಳೆಹಣ್ಣು ಪೂಟ್ಯಾಶಿಯಂಗಳ ಆಗರ.ಬಾಳೆಹಣ್ಣಿನಲ್ಲಿ ಸೋಡಿಯಂ ಕಡಿಮೆಯಿದ್ದು ಪೊಟ್ಯಾಶಿಯಂ ಹೆಚ್ಚಾಗಿರುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯಾಘಾತ ಸಮಸ್ಯೆಗಳನ್ನು ದೂರವಿಡುತ್ತದೆ. ಜೊತೆಗೆ ಆಲ್ಕೋಹಾಲ್ ಸೇವನೆಯಿಂದ ದೇಹದಲ್ಲಿ ಕಡಿಮೆಯಾಗಿರುವ ನೀರಿನ ಪ್ರಮಾಣವನ್ನು ಸರಿದೂಗುವಂತೆ ಬಾಳೆಹಣ್ಣು ಮಾಡುತ್ತದೆ. ಇದರಿಂದ ಒತ್ತಡವು ಕಾಣಿಸುವುದಿಲ್ಲ. ಮತ್ತು ಬೆಳಗ್ಗೆ ಎದ್ದಾಗ ಆಲ್ಕೋಹಾಲ್ ನ ಹ್ಯಾಂಗೋವರ್ ಆದಷ್ಟು ಬೇಗ ತಗ್ಗಲಿದೆ.

  ದೇಹದ ಉಷ್ಣತೆ ಕಡಿಮೆ ಮಾಡಲು ಕೂಡ ಸಹಕಾರಿ

  ಇನ್ನೂ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಕೆಲವರ ದೇಹದಲ್ಲಿ ಅಧಿಕ ಉಷ್ಣತೆ ಕಾಣಿಸಿಕೊಂಡಿರುತ್ತದೆ. ಹೀಗಾಗಿ ಆಲ್ಕೋಹಾಲ್ ಸೇವನೆ ಮಾಡಿದ ಬಳಿಕ, ಬಾಳೆ ಹಣ್ಣನ್ನು ತಿಂದರೆ ದೇಹದಲ್ಲಿ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿರಿಸುತ್ತದೆ. ಬಾಳೆಹಣ್ಣಿನಲ್ಲಿರುವ ಆಮ್ಲ ವಿರೋಧಿ ಆಸಿಡ್ ದಾಳಿಯನ್ನು ರಕ್ಷಿಸುತ್ತದೆ. ಕೇವಲ 1 ಬಾಳೆಹಣ್ಣನ್ನು ತಿಂದರೆ ತಕ್ಷಣವೇ ಒಳ್ಳೆಯ ಫಲಿತಾಂಶವನ್ನು ಕೊಟ್ಟು ಎದೆಯುರಿಯನ್ನು ಕಡಿಮೆ ಮಾಡುತ್ತದೆ.

  ಇದನ್ನೂ ಓದಿ: ಬಾಳೆಹಣ್ಣು ಕೆಡದಂತೆ ಕಾಪಾಡಲು ಇಲ್ಲಿದೆ ಟಿಪ್ಸ್

  ಬಾಳೆಹಣ್ಣಿನಲ್ಲಿ ಇರುವಂತಹ ವಿಟಮಿನ್ ಬಿ6, ಬಿ12, ಪೊಟ್ಯಾಶಿಯಂ, ಮೆಗ್ನೀಶಿಯಂ ಇರುವುದರಿಂದ ನಿಕೊಟೆಕ್ಸ್ ಸೆಳೆತದಿಂದ ಹೊರಬರುವಾಗ ದೇಹದ ಮೇಲೆ ಆಗುವ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಧೂಮಪಾನ ಮತ್ತು ಮದ್ಯಪಾನದಿಂದ ಹೊರ ಬರುವವರಿಗೆ ಬಾಳೆಹಣ್ಣು ಒಂದು ಒಳ್ಳೆಯ ಉತ್ತಮ ಹಣ್ಣು ಎಂದು ಹೇಳಬಹುದು.
  Published by:ranjumbkgowda1 ranjumbkgowda1
  First published: