Health Tips: ಪೋಷಕಾಂಶಗಳ ಕಣಜ ಸೇಬು.. ಹಲವು ಕಾಯಿಲೆಗಳಿಗೆ ರಾಮಬಾಣ!

Apple: ಸೇಬು ಮಧುಮೇಹಿಗಳಿಗೆ ಉತ್ತಮ ಪೋಷಕಾಂಶವಿರುವ ಹಣ್ಣಾಗಿದೆ. ಇದರಲ್ಲಿರುವ ವಿಟಮಿನ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ.

ಸೇಬು

ಸೇಬು

  • Share this:
"ದಿನಕ್ಕೊಂದು ಸೇಬು(Apple) ಸೇವನೆ ವೈದ್ಯರನ್ನು(Doctor) ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ(Young Age) ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ. ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ(Body) ಬೇಕಾದ ಪ್ರಮಾಣದ ಪ್ರೋಟೀನುಗಳು(Proteins), ವಿಟಮಿನ್‌ಗಳು(Vitamin), ಆ್ಯಂಟಿ ಆ್ಯಕ್ಸಿಡೆಂಟುಗಳು ಹಾಗೂ ವಿಟಮಿನ್ ಸಿ ಲಭ್ಯವಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳವಲ್ಲಿ ಸೇಬು ಹಣ್ಣು ದೊಡ್ಡ ಪಾತ್ರವಹಿಸುತ್ತದೆ. ಸೇಬು ಹಣ್ಣನ್ನು ಮಧುಮೇಹ, ಬಿಪಿ ಇರುವವರೂ ಕೂಡ ಸೇವಿಸಬಹುದು ಎಂದು ಹೇಳಲಾಗುತ್ತದೆ. ಹಾಗಾದ್ರೆ ಬನ್ನಿ ಸೇಬು ಹಣ್ಣಿನಲ್ಲಿ ಏನೆಲ್ಲಾ ಪೋಷಕಾಂಶಗಳು ಇವೆ ತಿಳಿಯೋಣ..

ಪೋಷಕಾಂಶಗಳ ಕಣಜ ಸೇಬು ಹಣ್ಣು

*ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು - 28 ಗ್ರಾಂ

* ಫೈಬರ್ - 5 ಗ್ರಾಂ

*ವಿಟಮಿನ್ ಸಿ - ದೈನಂದಿನ ಅವಶ್ಯಕತೆಯ 10%

*ಪೊಟ್ಯಾಷಿಯಮ್ -ದೈನಂದಿನ ಅವಶ್ಯಕತೆಯ 5%

*ತಾಮ್ರ: ದೈನಂದಿನ ಅವಶ್ಯಕತೆಯ 6%

*ವಿಟಮಿನ್ ಕೆ: ದೈನಂದಿನ ಅವಶ್ಯಕತೆಯ 4%

ಮತ್ತು ಮಧುಮೇಹ, ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಸಮಸ್ಯೆಗಳಿಂದ ಉಂಟಾಗುವ ಹೃದಯ ಸಮಸ್ಯೆ ಸೇರಿ ಇನ್ನಿತರ ತೊಂದರೆಗಳನ್ನು ಪ್ರತಿದಿನ ಒಂದು ಸೇಬು ಹಣ್ಣನ್ನು ತಿನ್ನವುದರಿಂದ ದೂರ ಮಾಡಬಹುದು.

ಸೇಬು ಹಣ್ಣಿನ ಸೇವನೆಯ ಪ್ರಯೋಜನಗಳು

ಮಧುಮೇಹ ಕಾಯಿಲೆ ತಗ್ಗಿಸುವಲ್ಲಿ ಸಹಾಯಕಾರಿ: ಸೇಬು ಮಧುಮೇಹಿಗಳಿಗೆ ಉತ್ತಮ ಪೋಷಕಾಂಶವಿರುವ ಹಣ್ಣಾಗಿದೆ. ಇದರಲ್ಲಿರುವ ವಿಟಮಿನ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ. ತಿಂದ ಆಹಾರದಿಂದ ಎಷ್ಟು ಬೇಗನೇ ಪೋಷಕಾಂಶಗಳು ರಕ್ತವನ್ನು ಸೇರುತ್ತವೆ ಎಂದು ಗಮನಿಸುವ ಜಿ.ಐ. ಸೂಚ್ಯಂಕ (Glycemic index, GI) ಪ್ರಕಾರ ಸೇಬು ಕಡಿಮೆ ಜಿ.ಐ. ಹೊಂದಿದೆ. ಅಂದರೆ ತಿಂದ ಆಹಾರದಿಂದ ಪೋಷಕಾಂಶಗಳು ನಿಧಾನವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ರಕ್ತಕ್ಕೆ ಸೇರುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ಅಲ್ಲದೇ Polyphenols ಎಂಬ ಪೋಷಕಾಂಶವೂ ಗ್ಲೂಕೋಸ್ ಸಕ್ಕರೆ ಶೀಘ್ರವಾಗಿ ರಕ್ತದೊಡನೆ ಬೆರೆಯುವುದನ್ನು ತಡೆಯುವ ಮೂಲಕ ಮಧುಮೇಹ ಕಾಯಿಲೆಯಿಂದ ದೂರವಿಡುತ್ತದೆ.

ಇದನ್ನೂ ಓದಿ: ಸೀತಾಫಲ ಹಣ್ಣಿನ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳು ಇವೆ ಗೊತ್ತಾ..?

ದೇಹದ ತೂಕ ಕಳೆದುಕೊಳ್ಳಲು ಸಹಾಯ: ಪ್ರತಿದಿನ ಸೇಬು ಸೇವನೆ ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಸೇಬಿನಲ್ಲಿರುವ ಫೈಬರ್ ಮತ್ತು ನೀರಿನಾಂಶ ನಮ್ಮ ಹಸಿವನ್ನು ಕಡಿಮೆ ಮಾಡಿ ಸಹಜ ಶಕ್ತಿ ನೀಡುತ್ತದೆ. ಹೀಗಾಗಿ ಬೇಡವಾದ ಅನಗತ್ಯವಾಗಿ ತಿನ್ನುವುದನ್ನು ತಪ್ಪಿಸಿ ತೂಕ ಕಳೆದುಕೊಳ್ಳಲು ಸಹಾಯ. ಅಧ್ಯಯನಗಳ ಪ್ರಕಾರ ಸೇಬು ಹಣ್ಣಿನ ಜ್ಯೂಸ್, ಪ್ಯೂರಿಗಿಂತ ಹಾಗೆ ಸೇವಿಸುವುದು ಉತ್ತಮ ಎಂದಿವೆ.

ಅಧಿಕ ರಕ್ತದೊತ್ತಡ ನಿರ್ವಹಣೆ: ಸೇಬಿನಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟುಗಳು ರಕ್ತದಲ್ಲಿ ಸಂಚರಿಸುವ ಮೂಲಕ ನರಗಳ ಒಳಭಾಗದಲ್ಲಿ ಅಂಟಿಕೊಂಡಿರುವ ಜಿಡ್ಡನ್ನು ಸಡಿಲಗೊಳಿಸುತ್ತವೆ. ಪರಿಣಾಮವಾಗಿ ಕೆಟ್ಟ ಕೊಲೆಸ್ಟ್ರಾಲ್ ರಕ್ತದೊಡನೆ ಹರಿದು ಹೋಗಿ ಶೋಧನಾ ವ್ಯವಸ್ಥೆಯ ಮೂಲಕ ವಿಸರ್ಜಿಸಲ್ಪಡುತ್ತದೆ. ಹೃದಯದ ಒತ್ತಡ ಸಾಮಾನ್ಯಕ್ಕೆ ಹಿಂದಿರುಗಿ ಉತ್ತಮ ಆರೋಗ್ಯ ಲಭಿಸುತ್ತದೆ. ಅಧಿಕ ರಕ್ತದೊತ್ತಡ ಕಡಿಮೆಯಾಗುವುದರ ಮೂಲಕ ಹೃದಯ ಸಂಬಂಧಿ ಸಮಸ್ಯೆಯೂ ದೂರ ಆಗುತ್ತದೆ.

ಸ್ಥೂಲಕಾಯ ವಿರುದ್ಧ ಹೋರಾಡುತ್ತದೆ: ತೂಕ ಹೆಚ್ಚಿಸಲು ಮತ್ತು ಕಳೆದುಕೊಳ್ಳಲು ಸೇಬು ಸಹಕಾರಿಯಾಗಿದೆ. ಬೊಜ್ಜು ಸಮಸ್ಯೆ ದೂರ ಮಾಡಲು ಸೇಬು ಉತ್ತಮ. ಇದರಲ್ಲಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಸಕ್ಕರೆ ಅಂಶವಿರುವ ಹಣ್ಣಾಗಿದ್ದು ತೂಕ ಹೆಚ್ಚಾಗುವ ಅಪಾಯವನ್ನು ದೂರ ಮಾಡುತ್ತದೆ.

ಇದನ್ನೂ ಓದಿ: ಪೇರಲೆ ಹಣ್ಣಿನ ಎಲೆಗಳಿಂದಲೂ ಭರ್ಜರಿ ಆದಾಯಗಳಿಸುತ್ತಿರುವ ಧಾರವಾಡದ ರೈತರು

ಶರೀರದ ಬಲಿಷ್ಟತೆ ಹೆಚ್ಚಿಸುತ್ತದೆ: ಪ್ರತಿದಿನ ವ್ಯಾಯಾಮದಲ್ಲಿ ಸ್ನಾಯುಗಳು ಬಲಗೊಂಡು ದೇಹ ಬಲಿಷ್ಟವಾಗಲು Quercetin ಎಂಬ ಆ್ಯಂಟಿ ಆ್ಯಕ್ಸಿಡೆಂಟ್‌ ಅಗತ್ಯವಾಗಿದೆ. ಇದರ ಮೂಲಕ ಶ್ವಾಸಕೋಶಗಳಿಂದ ಹೆಚ್ಚಿನ ಆಮ್ಲಜನಕ ರಕ್ತಕ್ಕೆ ಲಭ್ಯವಾಗಿ ಸ್ನಾಯುಗಳು ಉತ್ತಮ ಬೆಳವಣಿಗೆ ಪಡೆಯುತ್ತವೆ. ಸೇಬುನಲ್ಲಿರುವ ಫೈಬರ್ ಅಂಶ ಜೀಣ ಕ್ರಿಯೆಗೆ ಕೂಡ ಸಹಕರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ನೀಡುತ್ತದೆ.
Published by:ranjumbkgowda1 ranjumbkgowda1
First published: