ಬೀಟ್ರೂಟ್ (Beetroot) ಒಂದು ತರಕಾರಿ (Vegetable). ಇದು ಮುಖದ (Face) ಅಂದವನ್ನು ಹೆಚ್ಚಿಸಲು ಮತ್ತು ತೂಕ ಕಡಿಮೆ (Weight Loss) ಮಾಡಲು ಸಾಕಷ್ಟು ಪ್ರಯೋಜನಕಾರಿಯಾಗಿದೆ (Beneficial). ಬೀಟ್ರೂಟ್ ಅನ್ನು ಸಲಾಡ್ (Salad) ರೂಪದಲ್ಲಿ ತಿನ್ನುವುದು, ಬೀಟ್ರೂಟ್ ಜ್ಯೂಸ್ ಕುಡಿಯುವುದು ಎರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಕೆಲವರ ಮನಸ್ಸಿನಲ್ಲಿದೆ. ಆರೋಗ್ಯ ತಜ್ಞರ ಪ್ರಕಾರ ಬೀಟ್ರೂಟ್ ನ್ನು ಎರಡೂ ರೂಪದಲ್ಲಿ ಸೇವಿಸುವುದು ಕೂಡ ದೇಹಕ್ಕೆ ಪ್ರಯೋಜನಕಾರಿ ಆಗಿದೆ. ಅಂದ ಹಾಗೆ 100 ಗ್ರಾಂ ಬೀಟ್ರೂಟ್ನಲ್ಲಿ ಕ್ಯಾಲೋರಿ ಅಂಶ 43 ಮಿಗ್ರಾಂ, ಕೊಬ್ಬು 0.2 ಗ್ರಾಂ, ಸಕ್ಕರೆ 6.8 ಗ್ರಾಂ, ಪ್ರೋಟೀನ್ 1.6 ಗ್ರಾಂ, ಕ್ಯಾಲ್ಸಿಯಂ 16 ಮಿಗ್ರಾಂ, ಕಬ್ಬಿಣ 0.80 ಮಿಗ್ರಾಂ ಮತ್ತು ಇತರ ಹಲವು ಅಂಶಗಳಿವೆ.
ಬೀಟ್ರೂಟ್ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ
ಬೀಟ್ರೂಟ್ನಲ್ಲಿ ಕಂಡು ಬರುವ ಆಂಟಿ-ಆಕ್ಸಿಡೆಂಟ್ ಗಳು ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೀಟ್ರೂಟ್ನಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಮ್, ರಂಜಕದ ಅಂಶವಿದೆ. ಇದು ದೇಹದ ಆರೋಗ್ಯಕ್ಕೆ ಸಹಕಾರಿ ಆಗಿದೆ. ಬೇಸಿಗೆಯಲ್ಲಿ ಬೀಟ್ರೂಟ್ ಸಲಾಡ್ ತಿನ್ನಬೇಕು ಅಥವಾ ಬೀಟ್ರೂಟ್ ರಸವನ್ನು ಪ್ರತಿದಿನ ಕುಡಿಯಬೇಕು.
ಬೀಟ್ರೂಟ್ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಏಕೆಂದರೆ ಬೀಟ್ರೂಟ್ ನಾರುಗಳು ಹೊಟ್ಟೆ ಸ್ವಚ್ಛ ಮಾಡಲು ಸಹಕಾರಿ. ಇದು ಸಕ್ಕರೆಯ ನೈಸರ್ಗಿಕ ಮೂಲವಾಗಿದೆ.
ಬೀಟ್ರೂಟ್ ನ್ನು ನೀವು ಯಾವುದೇ ರೂಪದಲ್ಲಿ ಬೇಕಾದರೂ ಸೇವಿಸಬಹುದು. ಅಂದರೆ ಸಲಾಡ್, ತರಕಾರಿ, ಉಪ್ಪಿನಕಾಯಿ, ಚಟ್ನಿ, ಜಾಮ್, ಜ್ಯೂಸ್ ಇತ್ಯಾದಿ.
ಇದನ್ನೂ ಓದಿ: ಮದುವೆ ಸಮಾರಂಭಕ್ಕೆ ಹೋಗುವ ಮೊದಲು ಗ್ಲಾಸಿ ಮೇಕಪ್ ಮತ್ತು ಗೋಲ್ಡನ್ ಮೇಕಪ್ ಹೀಗೆ ಮಾಡಿಕೊಳ್ಳಿ
ಬೀಟ್ರೂಟ್ ನ್ನು ಸಲಾಡ್ ರೂಪದಲ್ಲಿ ಸೇವಿಸುವುದು ಉತ್ತಮ
ಆದರೆ ಬೀಟ್ರೂಟ್ ನ ಎಲ್ಲಾ ಗುಣ ಲಕ್ಷಣಗಳಿಂದ ಪ್ರಯೋಜನಕಾರಿ ವಿಷಯವೆಂದರೆ ಬೀಟ್ರೂಟ್ ಅನ್ನು ಸಲಾಡ್ ರೂಪದಲ್ಲಿ ಸೇವಿಸುವುದು. ನೀವು ಅದನ್ನು ಸಿಪ್ಪೆ ಸುಲಿದು ಕಪ್ಪು ಉಪ್ಪಿನೊಂದಿಗೆ ಬೆರೆಸಿ ಟೊಮೆಟೊ, ಸೌತೆಕಾಯಿ, ಇತ್ಯಾದಿಗಳೊಂದಿಗೆ ಬೆರೆಸಿ ತಿನ್ನಬಹುದು. ಬೀಟ್ರೂಟ್ ನ ಎಲ್ಲಾ ಗುಣ ಲಕ್ಷಣಗಳು ಫೈಬರ್ ಪೌಷ್ಟಿಕಾಂಶ ನೀಡುತ್ತದೆ.
ಹಣ್ಣುಗಳು ಮತ್ತು ತರಕಾರಿಗಳ ಜೊತೆ ಬೀಟ್ರೂಟ್ ಜ್ಯೂಸ್ ಮಾಡಿ
ಬೀಟ್ರೂಟ್ ಅನ್ನು ಸಲಾಡ್ ಆಗಿ ತಿನ್ನಲು ಎಲ್ಲರೂ ಇಷ್ಟಪಡುವುದಿಲ್ಲ. ಆಗ ಅದರ ರಸವನ್ನು ತಯಾರಿಸಬಹುದು. ಮತ್ತು ಅದರ ಗುಣ ಲಕ್ಷಣಗಳನ್ನು ಹೆಚ್ಚಿಸಲು ಇತರ ಹಣ್ಣುಗಳು ಮತ್ತು ತರಕಾರಿಗಳನ್ನು ಬೀಟ್ರೂಟ್ ಜೊತೆ ಮಿಶ್ರಣ ಮಾಡಬಹುದು.
- ಬೀಟ್ರೂಟ್ + ಶುಂಠಿ + ನಿಂಬೆ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ನೊಂದಿಗೆ ಟೊಮ್ಯಾಟೊ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ ಮತ್ತು ಕಿತ್ತಳೆ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ ಮತ್ತು ಸೌತೆಕಾಯಿ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ ಮತ್ತು ನಿಂಬೆ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ನೊಂದಿಗೆ ಸೇಬು ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ನೊಂದಿಗೆ ಪಾಲಕ್ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ + ಅನಾನಸ್ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ + ಪುದೀನ + ನಿಂಬೆ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ + ಸೆಲರಿ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ + ಪ್ಲಮ್ ಸೇರಿಸಿ ಜ್ಯೂಸ್ ಮಾಡಿ.
- ಬೀಟ್ರೂಟ್ + ಬ್ಲೂಬೆರ್ರಿ ಸೇರಿಸಿ ಜ್ಯೂಸ್ ಮಾಡಿ
- ಬೀಟ್ರೂಟ್ + ದ್ರಾಕ್ಷಿ ಸೇರಿಸಿ ಜ್ಯೂಸ್ ಮಾಡಿ
ಬೇಸಿಗೆಯಲ್ಲಿ ಇಲ್ಲಿ ಹೇಳಿರುವ 13 ವಿಧಗಳಲ್ಲಿ ನೀವು ಬೀಟ್ರೂಟ್ ಜ್ಯೂಸ್ ತಯಾರಿಸಿ ಸೇವನೆ ಮಾಡಬಹುದು.
ಇದನ್ನೂ ಓದಿ: ಚಿಕನ್, ಫಿಶ್ ತಿನ್ನಲ್ವಾ? ಹಾಗಿದ್ದರೆ ಪ್ರೋಟೀನ್ಗಾಗಿ ಈ ಕೆಲವು ಆಹಾರ ಮಿಸ್ ಮಾಡಲೇಬೇಡಿ
ಯಾರು ಬೀಟ್ರೂಟ್ ಜ್ಯೂಸ್ ಕುಡಿಯಬೇಕು?
- ದೌರ್ಬಲ್ಯವನ್ನು ಅನುಭವಿಸುವರು
- ಬೇಗನೆ ದಣಿಯುವವರು
- ಉಸಿರಾಟದ ತೊಂದರೆ ಇರುವವರು
- ಕಡಿಮೆ ಹಿಮೋಗ್ಲೋಬಿನ್ ಹೊಂದಿರುವವರು
- ದೇಹದ ಯೌವನ ಬಯಸುವವರು
- ಕೆನ್ನೆಗಳಲ್ಲಿ ನೈಸರ್ಗಿಕ ಹೊಳಪನ್ನು ಬಯಸುವವರು
- ಕಳಪೆ ಜೀರ್ಣಕ್ರಿಯೆ ಹೊಂದಿರುವವರು
- ಮಲಬದ್ಧತೆ ಸಮಸ್ಯೆ ಇರುವವರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ