HOME » NEWS » Lifestyle » EAT A SMALL CARDAMOM YOU WILL BE SURPRISED TO KNOW THESE BENEFITS ZP

ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಏಲಕ್ಕಿ

ತೂಕ ಮತ್ತು ಬೊಜ್ಜು ಸಮಸ್ಯೆ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಏಲಕ್ಕಿ ಸೇರಿಸಿ. ಏಲಕ್ಕಿಯಲ್ಲಿರುವ ಪದಾರ್ಥಗಳು ತ್ವರಿತ ತೂಕ ಇಳಿಕೆಗೆ ಸಹಾಯ ಮಾಡುತ್ತವೆ.

news18-kannada
Updated:February 16, 2021, 5:46 AM IST
ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಏಲಕ್ಕಿ
cardamom
  • Share this:
ಮಸಾಲೆಯಾಗಿ ಬಳಸುವ ಸಣ್ಣ ಏಲಕ್ಕಿ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಸಾಮಾನ್ಯವಾಗಿ ನಾವು ಏಲಕ್ಕಿಯನ್ನು ಆಹಾರದ ರುಚಿಗಾಗಿ ಅಥವಾ ಬಾಯಿ ಫ್ರೆಶ್ನರ್ ಆಗಿ ಬಳಸುತ್ತೇವೆ. ಆದರೆ ಇದರ ಹೊರತಾಗಿಯೂ, ಏಲಕ್ಕಿ ಸೇವನೆಯು ಅನೇಕ ಸಂದರ್ಭಗಳಲ್ಲಿ ನಮ್ಮ ಆರೋಗ್ಯಕ್ಕೂ ಉತ್ತಮ. ಅಂತಹ ಕೆಲವೊಂದು ಆರೋಗ್ಯಕಾರಿ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.

ಒತ್ತಡ ಮುಕ್ತ: ನೀವು ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದರೆ, ಏಲಕ್ಕಿ ಸೇವನೆಯು ನಿಮಗೆ ಪ್ರಯೋಜನಕಾರಿಯಾಗಬಹುದು. ನೀವು ಮಾನಸಿಕವಾಗಿ ದುರ್ಬಲರಾಗಿದ್ದರೆ ಮತ್ತು ಒತ್ತಡಕ್ಕೆ ಒಳಗಾಗುತ್ತಿದ್ದರೆ, ಪ್ರತಿದಿನ ಎರಡು ಏಲಕ್ಕಿಯನ್ನು ಬಾಯಿಗೆ ಹಾಕಿ ಅದನ್ನು ಅಗಿಯಿರಿ. ಏಲಕ್ಕಿಯನ್ನು ಅಗಿಯುವುದರಿಂದ ತಕ್ಷಣವೇ ಹಾರ್ಮೋನುಗಳು ಬದಲಾಗುತ್ತವೆ ಮತ್ತು ಒತ್ತಡದಿಂದ ಮುಕ್ತವಾಗುತ್ತವೆ.

ಬಾಯಿ ದುರ್ವಾಸನೆ ಮುಕ್ತ: ಸಣ್ಣ ಏಲಕ್ಕಿ ಬಾಯಿಯ ಫ್ರೆಶ್‌ನರ್‌ನಂತೆ ಕೆಲಸ ಮಾಡುತ್ತದೆ, ಜೊತೆಗೆ ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ನಿಮ್ಮ ಬಾಯಿ ವಾಸನೆ ಇದ್ದರೆ ಏಲಕ್ಕಿ ಬೀಜವನ್ನು ಜಗಿಯುತ್ತಿರಿ. ಇದು ದುರ್ವಾಸನೆಯಿಂದ ತಕ್ಷಣ ಪರಿಹಾರ ನೀಡುತ್ತದೆ.

ಮಲಬದ್ಧತೆಗೆ ಪರಿಹಾರ: ನಿಮಗೆ ಮಲಬದ್ಧತೆ ಇದ್ದರೆ, ಸಣ್ಣ ಏಲಕ್ಕಿ ಮೂಲಕ ಪರಿಹಾರ ಕಾಣಬಹುದು. ಪ್ರತಿದಿನ ಏಲಕ್ಕಿ ನೀರನ್ನು ಕುದಿಸಿ ಕುಡಿಯಿರಿ. ಈ ಪಾನೀಯವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ಆಮ್ಲೀಯತೆಯಿಂದ ಪರಿಹಾರ: ಏಲಕ್ಕಿಯಲ್ಲಿರುವ ಸಾರಭೂತ ತೈಲವು ಹೊಟ್ಟೆಯ ಒಳ ಪದರವನ್ನು ಬಲಪಡಿಸುತ್ತದೆ. ಆಮ್ಲೀಯತೆಯ ಸಮಸ್ಯೆಯಿದ್ದಲ್ಲಿ, ಏಲಕ್ಕಿ ತಿನ್ನುವುದರಿಂದ ಹೊಟ್ಟೆಯ ಕ್ರಮೇಣ ಆಮ್ಲೀಯತೆಯನ್ನು ತೆಗೆದುಹಾಕುತ್ತದೆ.

ತೂಕ ಇಳಿಕೆ: ತೂಕ ಮತ್ತು ಬೊಜ್ಜು ಸಮಸ್ಯೆ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಏಲಕ್ಕಿ ಸೇರಿಸಿ. ಏಲಕ್ಕಿಯಲ್ಲಿರುವ ಪದಾರ್ಥಗಳು ತ್ವರಿತ ತೂಕ ಇಳಿಕೆಗೆ ಸಹಾಯ ಮಾಡುತ್ತವೆ.
ಚಳಿಗಾಲದಲ್ಲೂ ಪರಿಣಾಮಕಾರಿ: ಚಳಿಗಾಲದಲ್ಲಿ ಒಂದೆರಡು ಬಾರಿ ಏಲಕ್ಕಿಯನ್ನು ತಿನ್ನುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಏಲಕ್ಕಿ ಅಗಿಯುವುದರಿಂದ ಶ್ವಾಸಕೋಶದ ಸಂಕೋಚನ ಮತ್ತು ಆಸ್ತಮಾದ ಸಮಸ್ಯೆಯನ್ನು ದೂರ ಮಾಡುತ್ತದೆ.
Published by: zahir
First published: February 16, 2021, 5:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories