Hypertension: ಹೈ ಬಿಪಿಯಲ್ಲಿ ನಿಯಂತ್ರಿಸಲು ಈ ಅತ್ಯಂತ ಸರಳ ವಿಧಾನಗಳನ್ನು ಪಾಲಿಸಿ ಸಾಕು..

ನಿಮ್ಮ ಗೆಳೆಯರ ಬಳಗವನ್ನು ಬಲಪಡಿಸಿ. ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಒಡನಾಡಿಗಳು ನಿಮ್ಮ ಜೀವನದಲ್ಲಿ ಇರಲಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯಲ್ಲಿ ಒತ್ತಡ ನಮ್ಮನ್ನು ಕಾಡಬಹುದು. ಉದ್ಯೋಗ ಇಲ್ಲದಿರುವುದು, ಉದ್ಯೋಗದಲ್ಲಿನ ಕಿರಿಕಿರಿ, ಮನೆಯ ಸಮಸ್ಯೆಗಳು, ಆರೋಗ್ಯ ಹೀಗೆ ನಾವು ಒತ್ತಡಕ್ಕೆ ಒಳಗಾಗಲು ಹಲವಾರು ಕಾರಣಗಳಿವೆ. ಹೆಚ್ಚಿನ ಒತ್ತಡವು ರಕ್ತದೊತ್ತಡ ಸಮಸ್ಯೆಯನ್ನು ತಂದೊಡ್ಡಬಹುದು. ನಿಮ್ಮ ಒತ್ತಡವನ್ನು ನಿಯಂತ್ರಿಸುವುದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಮಯೋ ಕ್ಲಿನಿಕ್ ವರದಿ ಮಾಡಿದೆ. ಯುಎಸ್ ನ್ಯಾಶನಲ್ ಲೈಬ್ರರಿ ಮೆಡಿಸಿನ ಬಿಡುಗಡೆ ಮಾಡಿರುವ ಆರ್ಟಿಕಲ್ ಅನ್ವಯ ಒತ್ತಡವು ನೇರವಾಗಿ ಹೈಪರ್‌ ಟೆನ್ಶನ್ ಅನ್ನು ಉಂಟುಮಾಡುವುದಿಲ್ಲ. ಇದು ಪುನರಾವರ್ತಿತ ರಕ್ತದೊತ್ತಡಕ್ಕೆ ಕಾರಣವಾಗಬಹುದು ಕೊನೆಗೆ ಹೈಪರ್ ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡವಾಗಿ ಇದು ಮಾರ್ಪಡಬಹುದು ಎಂದಿದೆ.

    ಒತ್ತಡವು ಯಾವುದೇ ವ್ಯಕ್ತಿಯ ಪರಿಸ್ಥಿತಿಯನ್ನು ಹದಗೆಡಿಸಬಹುದು ಅದರಲ್ಲೂ ಹೈಪರ್ ಟೆನ್ಶನ್‌ನಿಂದ ಆ ವ್ಯಕ್ತಿ ಬಳಲುತ್ತಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಒತ್ತಡವು ತೀರಾ ಅನಾರೋಗ್ಯ ಕಾಯಿಲೆಗಳನ್ನು ಉಂಟುಮಾಡುವುದು ಮಾತ್ರವಲ್ಲದೆ ಆಹಾರ ಸೇವನೆಯಲ್ಲೂ ಅನೇಕ ಸಮಸ್ಯೆಗಳನ್ನು ತಂದೊಡ್ಡಬಹುದು. ನೀವು ಏನು ಸೇವಿಸುತ್ತಿದ್ದೀರಿ ಎಂಬುದನ್ನು ನೋಟ್‌ಡೌನ್ ಮಾಡಿಕೊಳ್ಳಿ ನಂತರ ಸೇವಿಸುತ್ತಿರುವ ಆಹಾರದತ್ತ ಗಮನಹರಿಸಿ ಆರೋಗ್ಯಕರ ಮತ್ತು ಅನಾರೋಗ್ಯ ಆಹಾರವನ್ನು ಪ್ರತ್ಯೇಕಿಸಿ. ನೀವು ಒತ್ತಡದ ಕಾರಣದಿಂದ ಹೆಚ್ಚಾಗಿ ಅನಾರೋಗ್ಯವನ್ನುಂಟು ಮಾಡುವ ಆಹಾರವನ್ನೇ ಹೆಚ್ಚು ಸೇವಿಸುತ್ತಿರುವುದನ್ನು ಕಾಣಬಹುದು.

    ರಕ್ತದೊತ್ತಡದಲ್ಲಿ ಸೋಡಿಯಂ ನ ಪರಿಣಾಮವನ್ನು ಕುಗ್ಗಿಸಲು ಪೊಟಾಶಿಯಂ ಪರಿಣಾಮಕಾರಿಯಾಗಿದೆ. ಹೆಚ್ಚಿನ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುವ ಹಣ್ಣು ಮತ್ತು ತರಕಾರಿಗಳ ಮಾಹಿತಿಯನ್ನು ನಿಮ್ಮ ವೈದ್ಯರಲ್ಲಿ ಕೇಳಿ. ರಕ್ತದೊತ್ತಡ ಸಮಸ್ಯೆಯು ತೀವ್ರವಾದಲ್ಲಿ ನೀವು ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಇರುತ್ತದೆ.

    ಹಾಗಿದ್ದರೆ ರಕ್ತದೊತ್ತಡವನ್ನು ನಿಯಂತ್ರಿಸಲು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳೇನು:

    ನಿಮ್ಮ ವೇಳಾಪಟ್ಟಿಯನ್ನು ಸರಳಗೊಳಿಸಿ:

    ರಕ್ತದೊತ್ತಡವನ್ನು ನಿಯಂತ್ರಿಸುವುದು ಅಥವಾ ಕಡಿಮೆ ಮಾಡಲು ಪಾಲಿಸಬೇಕಾದ ವಿಧಾನವೆಂದರೆ ನಿಮ್ಮ ವೇಳಾಪಟ್ಟಿಯನ್ನು ಸರಳವಾಗಿ ಹೊಂದಿಸುವುದಾಗಿದೆ. ನಿಮಗೆ ಹೆಚ್ಚು ಮುಖ್ಯವಲ್ಲದ ಚಟುವಟಿಕೆಗಳನ್ನು ನಿಮ್ಮ ವೇಳಾಪಟ್ಟಿಯಿಂದ ತೆಗೆದುಹಾಕಿ

    ಸಾಕಷ್ಟು ನಿದ್ರೆ ಮಾಡಿ

    ಒಮ್ಮೊಮ್ಮೆ ಸಾಕಷ್ಟು ನಿದ್ರೆ ಮಾಡದಿರುವುದು ಕೂಡ ನಿಮ್ಮ ರಕ್ತದೊತ್ತಡ ಸಮಸ್ಯೆಯನ್ನು ಹದಗೆಡಿಸಬಹುದು. ಹಾಗಾಗಿ ಚೆನ್ನಾಗಿ ನಿದ್ದೆ ಮಾಡುವುದು ನಿಮ್ಮ ಸಂಪೂರ್ಣ ಆರೋಗ್ಯವನ್ನು ಉತ್ತಮಗೊಳಿಸಬಹುದು

    ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ

    ನಿಮ್ಮ ದೇಹಕ್ಕೆ ವಿಶ್ರಾಂತಿಯ ಅಗತ್ಯವಿರುವುದರಿಂದ ಸರಳವಾದ ಯೋಗವನ್ನು ಅಭ್ಯಾಸ ಮಾಡಿ. ಧ್ಯಾನದಿಂದ ಮನಸ್ಸನ್ನು ಪ್ರಶಾಂತವಾಗಿರಿಸಿ. ದೀರ್ಘ ಉಸಿರಾಟ ಕ್ರಮಗಳನ್ನು ಅನುಸರಿಸಿ

    ನಿಮ್ಮ ಸಾಮಾಜಿಕ ನೆಟ್‌ವರ್ಕ್ ಬಲಪಡಿಸಿ

    ನಿಮ್ಮ ಗೆಳೆಯರ ಬಳಗವನ್ನು ಬಲಪಡಿಸಿ. ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಒಡನಾಡಿಗಳು ನಿಮ್ಮ ಜೀವನದಲ್ಲಿ ಇರಲಿ. ತರಗತಿಗಳನ್ನು ನಡೆಸುವುದು, ಸಂಸ್ಥೆಗೆ ಸೇರುವುದು ಅಥವಾ ಸಪೋರ್ಟ್ ಗ್ರೂಪ್‌ಗಳಲ್ಲಿ ತೊಡಗಿಸಿಕೊಳ್ಳುವುದು ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಮಾಡುತ್ತಿರಿ.

    ದೈಹಿಕ ಚಟುವಟಿಕೆ ಅಭ್ಯಸಿಸಿ

    ವ್ಯಾಯಾಮ ಅಥವಾ ಕ್ರೀಡೆ ನೈಸರ್ಗಿಕ ಒತ್ತಡ ನಿವಾರಕವಾಗಿವೆ. ಹೊಸ ವ್ಯಾಯಾಮವನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಭೇಟಿ ಮಾಡಿ.

    ಒತ್ತಡವನ್ನು ನಿಮ್ಮಷ್ಟಕ್ಕೆ ಪರಿಹರಿಸಿಕೊಳ್ಳಿ

    ಯಾವುದೇ ಸಮಸ್ಯೆ ಅತಿರೇಕಕ್ಕೆ ಹೋಗುವವರೆಗೆ ಅದನ್ನು ಕೊಂಡೊಯ್ಯದಿರಿ. ಕೆಲವೊಂದು ಸಮಸ್ಯೆಗಳನ್ನು ನಿಮ್ಮಷ್ಟಕ್ಕೆ ನಿವಾರಿಸಲು ಕಲಿಯಿರಿ. ನಿಮ್ಮ ದೇಹ ಮತ್ತು ಮನಸ್ಸನ್ನು ಪ್ರಫುಲ್ಲಗೊಳಿಸಿ.

    ನಿಮ್ಮ ಆಹಾರ ಕ್ರಮವನ್ನು ನಿರ್ವಹಿಸಿ

    ನಿಮ್ಮ ಆಹಾರದಲ್ಲಿ ತರಕಾರಿ, ಹಣ್ಣುಗಳು, ಸಂಪೂರ್ಣ ಧಾನ್ಯಗಳು, ಪ್ರೊಟೀನ್ ಮತ್ತು ಆರೋಗ್ಕರ ಕೊಬ್ಬು ಇರುವಂತೆ ನೋಡಿಕೊಳ್ಳಿ.
    First published: