ನಾಜೂಕಿನ ಕೆಲಸವೇ ಹಾಗೆ, ಅದು ನಿಪುಣತೆ, ಏಕಾಗ್ರತೆಯನ್ನು ಕೇಳುತ್ತದೆ. ಅದಕ್ಕೆ ಶೇವಿಂಗ್ (Shaving) ಕೂಡ ಹೊರತಾಗಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಣ್ಮುಚ್ಚಿ ಬಿಡೋದ್ರೊಳಗೆ ರಕ್ತ (Blood) ಫಳ್ಳನೆ ಹರಿಯಲು ಶುರುವಾಗುತ್ತದೆ. ಇದರಿಂದ ನೋವಿನ ಜೊತೆಗೆ ಕೆಲವೊಮ್ಮೆ ಸೋಂಕು (Infection) ಕೂಡ ಉಂಟಾಗಬಹುದು. ಹಾಗಾಗಿ ಈ ಕೆಲಸ ಮಾಡೋವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ. ನೀವು ಶೇವಿಂಗ್ (Shaving Tips) ಮಾಡಿಕೊಳ್ಳುವುದು ಇದೇ ಮೊದಲ ಸಲವಾಗಿರಲಿ ಅಥವಾ ಈ ಹಿಂದೆ ಬಹಳಷ್ಟು ಸಲ ನೀವು ಈ ಕೆಲಸವನ್ನು ಮಾಡಿಕೊಂಡಿರಲಿ. ಸ್ವಲ್ಪ ಎಚ್ಚರ ತಪ್ಪಿದರೂ ಚರ್ಮ (Skin Care) ಕಟ್ ಆಗಬಹುದು. ಇದರಿಂದ ನೀವು ತೊಂದರೆಗೊಳಗಾಗಬಹುದು ಅಥವಾ ಗಾಯದಿಂದಾಗಿ (Injury) ನೋವು ಅನುಭವಿಸುವಂತಾಗಬಹುದು.
ಯಾವುದೇ ಸಂದರ್ಭದಲ್ಲಿ ಸಂಭವಿಸುವ ಶೇವಿಂಗ್ ಕಟ್ ಕೆಲವೊಮ್ಮೆ ನೋವಿನ ಅನುಭವವಾಗಬಹುದು. ಆದರೆ ನಿಯಮಿತವಾಗಿ ಕ್ಷೌರ ಮಾಡುವ ಅನೇಕ ಜನರಿಗೆ ಇದು ಸಾಮಾನ್ಯ.
ಆದ್ದರಿಂದ ಶೇವಿಂಗ್ ಕಟ್‌ಗಳನ್ನು ಎದುರಿಸಲು ಮತ್ತು ಅವುಗಳ ತೀವ್ರತೆಯನ್ನು ಕಡಿಮೆ ಮಾಡಲು ನೀವು ಕೆಲವಷ್ಟು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅಲ್ಲದೇ ಕಟ್ ಆಗದೇ ಇರಲು ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು. ಹಾಗಿದ್ದರೆ ಅಂಥ ಪರಿಣಾಮಕಾರಿ ಮಾರ್ಗಗಳ್ಯಾವವು ಅನ್ನೋದನ್ನು ತಿಳಿದುಕೊಳ್ಳೋಣ.
ಚರ್ಮರೋಗ ತಜ್ಞರ ಸಲಹೆಗಳು
ಡಿಎನ್‌ಎ ಸ್ಕಿನ್ ಕ್ಲಿನಿಕ್‌ನ ಸಂಸ್ಥಾಪಕರು ಹಾಗೂ ಮುಖ್ಯ ಚರ್ಮರೋಗ ತಜ್ಞರೂ ಆಗಿರುವ ಡಾ. ಪ್ರಿಯಾಂಕಾ ರೆಡ್ಡಿ ಅವರು ಶೇವಿಂಗ್ ಕಡಿತವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಸಲಹೆಗಳನ್ನು ನೀಡಿದ್ದಾರೆ.
ಈ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಶೇವಿಂಗ್ ಕಟ್‌ಗಳ ನೋವನ್ನು ಕಡಿಮೆ ಮಾಡಬಹುದು. ಹಾಗೆಯೇ ಮೃದುವಾದ, ಹೆಚ್ಚು ಆರಾಮದಾಯಕವಾದ ಶೇವಿಂಗ್ ಅನುಭವವನ್ನು ಹೊಂದಬಹುದು.
1)ಶವರ್ ಸಮಯದಲ್ಲಿ ಶೇವ್ ಮಾಡುವುದರಿಂದ ತೇವಾಂಶವು ಉತ್ತಮ ಶೇವಿಂಗ್‌ಗಾಗಿ ಚರ್ಮವನ್ನು ಕಂಡೀಷನಿಂಗ್ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಒಣ ಚರ್ಮದ ಮೇಲೆ ಶೇವಿಂಗ್ ಮಾಡುವುದನ್ನು ತಪ್ಪಿಸಿ.
2)ತಾಜಾ ರೇಜರ್‌ಗಳನ್ನು (Fresh Blades) ಬಳಸಿ.
3)ಒರಟಾಗಿ, ತುಂಬಾ ವೇಗವಾಗಿ ಶೇವ್ ಮಾಡಬೇಡಿ. ಇದರಿಂದ ಚರ್ಮಕ್ಕೆ ಹಾನಿಯಾಗುವ ಸಂಭವ ಹೆಚ್ಚು. ಆದ್ದರಿಂದ ಶೇವಿಂಗ್ ಯಾವಾಗಲೂ ನಿಧಾನವಾಗಿ ಮಾಡಿ.
4)ಕೂದಲಿನ ದಿಕ್ಕನ್ನು ಗಮನದಲ್ಲಿರಿಸಿ, ಅದೇ ದಿಕ್ಕಿನಲ್ಲಿ ಶೇವ್ ಮಾಡಿ.
ಶೇವಿಂಗ್ ಕಟ್ ಆದರೆ ಏನು ಮಾಡಬೇಕು?
ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಂಡರೂ ಶೇವಿಂಗ್ ಕಟ್ ಆಯಿತು ಎಂದಾದಲ್ಲಿ ಆಗ ಏನು ಮಾಡುವುದು ಅನ್ನೋದಕ್ಕೆ ಇಲ್ಲಿ ಕೆಲವಷ್ಟು ಸಲಹೆಗಳಿವೆ.
1)ತಣ್ಣೀರಿನಲ್ಲಿ ಗಾಯವಾದ ಜಾಗವನ್ನು ತೊಳೆಯಿರಿ. ನಿಧಾನವಾಗಿ ಸ್ವಚ್ಛಗೊಳಿಸಿ.
2)ರಕ್ತಸ್ರಾವವನ್ನು ನಿಯಂತ್ರಣಕ್ಕೆ ಬರುವವರೆಗೆ ಶುದ್ಧ ಬಟ್ಟೆಯಿಂದ ಗಾಯವನ್ನು ಹಿಡಿದುಕೊಳ್ಳಿ.
3)ರಕ್ತಸ್ರಾವವನ್ನು ನಿಯಂತ್ರಿಸಲು ಐಸ್ ಕ್ಯೂಬ್‌ಗಳನ್ನು ಸಹ ಬಳಸಬಹುದು
4) ಗಾಯದ ಸೋಂಕನ್ನು ತಪ್ಪಿಸಲು ಅದರ ಮೇಲೆ ಆಂಟಿಬಯೊಟಿಕ್ ಆಯಿಂಟ್‌ಮೆಂಟ್ ಅನ್ನು ಹಚ್ಚಿ.
5)ಆಲ್ಕೋಹಾಲ್ ತಪ್ಪಿಸಿ. ಏಕೆಂದರೆ ಅವು ಕಿರಿಕಿರಿ ಮತ್ತು ಶುಷ್ಕತೆಯನ್ನು ಉಂಟುಮಾಡುತ್ತವೆ.
6)ಸರಿಯಾದ ಮಾಯಿಶ್ಚರೈಸರ್ ನಿಮ್ಮ ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ ಗಾಯ ಹೆಚ್ಚು ವೇಗವಾಗಿ ಗುಣವಾಗುತ್ತದೆ.
ಇದನ್ನೂ ಓದಿ: Beauty Tips: ಬೇಸಿಗೆಯಲ್ಲಿ ಚರ್ಮ ಫಳಫಳ ಹೊಳಿಬೇಕಾ? ಈ 7 ಬ್ಯೂಟಿ ಸೀಕ್ರೆಟ್ ಫಾಲೋ ಮಾಡಿ
7)ಗಾಯ ತುಂಬಾ ಆಳವಾಗಿದ್ದರೆ, ಅದಕ್ಕೆ ಸ್ಟೆರೈಲ್ ಬ್ಯಾಂಡೇಜ್ ಬಳಸಿ.
8)ಗಾಯವು ವಾಸಿಯಾಗುವವರೆಗೆ ಆ ಭಾಗದಲ್ಲಿ ಶೇವಿಂಗ್ ಮಾಡುವುದನ್ನು ತಪ್ಪಿಸಿ.
9)ಶೇವಿಂಗ್ ಕಟ್ ತುಂಬಾ ಆಳವಾಗಿದ್ದು, ರಕ್ತಸ್ರಾವವನ್ನು ಸುಲಭವಾಗಿ ನಿಯಂತ್ರಿಸಲಾಗುವುದಿಲ್ಲ ಅಥವಾ ಗಾಯವು ಸರಿಯಾಗಿ ವಾಸಿಯಾಗಿಲ್ಲ ಎಂದಾದರೆ ವೈದ್ಯರನ್ನು ಸಂಪರ್ಕಿಸಿ.
ಒಟ್ಟಾರೆ, ಶೇವಿಂಗ್ ಮಾಡುವಾಗ ಹೆಚ್ಚು ಜಾಗರೂಕರಾಗಿರುವುದು ಒಳ್ಳೆಯದು. ಒಂದು ವೇಳೆ ಶೇವಿಂಗ್ ಕಟ್‌ಗಳಾದಲ್ಲಿ ಮೇಲೆ ಹೇಳಿದ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ