ಶ್ವಾಸಕೋಶವನ್ನು ಆರೋಗ್ಯವಾಗಿಡಲು ಈ ಆಹಾರಗಳ ಸೇವನೆ ಕಡಿಮೆ ಮಾಡಿ

ಮಾಂಸವನ್ನು ಸಂಸ್ಕರಿಸಲು ಮತ್ತು ಸಂರಕ್ಷಿಸಲು ಬಳಸುವ ನೈಟ್ರೈಟ್‌ಗಳು ಶ್ವಾಸಕೋಶದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು. ಹಾಗಾಗಿ ಸಂಸ್ಕರಿಸಿದ ಮಾಂಸವು ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಮ್ಮ ಶ್ವಾಸಕೋಶಗಳು ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಕೊರೋನಾ ಸಾಂಕ್ರಾಮಿಕ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಶ್ವಾಸಕೋಶಗಳು ದುರ್ಬಲಗೊಳ್ಳುತ್ತಿವೆ. ಇದೇ ಕಾರಣದಿಂದ ಉಸಿರಾಟ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಶ್ವಾಸಕೋಶವನ್ನು ಆರೋಗ್ಯವಾಗಿಡಲು ಆರೋಗ್ಯಕರ ಆಹಾರ ಕೂಡ ಅಗತ್ಯ. ಹಾಗೆಯೇ ಕೆಲವು ವಸ್ತುಗಳಿಂದ ದೂರವಿರುವುದು ಕೂಡ ಅಷ್ಟೇ ಅವಶ್ಯಕ. ಅಂತಹ ಕೆಲ ಆಹಾರ ಮತ್ತು ವಸ್ತುಗಳನ್ನು ಇಲ್ಲಿ ತಿಳಿಸಲಾಗಿದೆ.

  ಆಲ್ಕೊಹಾಲ್: ಆಲ್ಕೊಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ. ಇದಾಗ್ಯೂ ಅನೇಕರು ಆಲ್ಕೊಹಾಲ್ ಮೊರೆ ಹೋಗುತ್ತಾರೆ. ಆದರೆ ಹೆಚ್ಚು ಆಲ್ಕೊಹಾಲ್ ಕುಡಿಯುವುದರಿಂದ ಶ್ವಾಸಕೋಶವು ಹದಗೆಡುತ್ತದೆ. ಆಲ್ಕೊಹಾಲ್​ನಲ್ಲಿರುವ ಸಲ್ಫೇಟ್​ಗಳು ಅಸ್ತಮಾಕ್ಕೆ ಕಾರಣವಾಗಬಹುದು. ಹಾಗೆಯೇ ಇದರಲ್ಲಿರುವ ಎಥೆನಾಲ್ ನಿಮ್ಮ ಶ್ವಾಸಕೋಶದ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಆಲ್ಕೊಹಾಲ್ ಕುಡಿಯುವುದರಿಂದ ನ್ಯುಮೋನಿಯಾ ಮತ್ತು ಇತರ ಶ್ವಾಸಕೋಶದ ತೊಂದರೆಗಳು ಉಂಟಾಗಬಹುದು.

  ಉಪ್ಪು: ಉಪ್ಪನ್ನು ಆರೋಗ್ಯಕ್ಕೆ ಅವಶ್ಯಕವೆಂದು ಪರಿಗಣಿಸಲಾಗುತ್ತದೆ. ಆದರೆ ಅದು ಸೀಮಿತ ಪ್ರಮಾಣದಲ್ಲಿದ್ದರೆ ಮಾತ್ರ. ಅಧಿಕ ಪ್ರಮಾಣದ ಉಪ್ಪನ್ನು ಸೇವಿಸುವುದರಿಂದ ಶ್ವಾಸಕೋಶದ ತೊಂದರೆಗಳು ಉಲ್ಬಣಗೊಳ್ಳುತ್ತವೆ. ಆದ್ದರಿಂದ, ಶ್ವಾಸಕೋಶವನ್ನು ಆರೋಗ್ಯವಾಗಿಡಲು, ಕಡಿಮೆ ಉಪ್ಪು ಸೇವಿಸಿ.

  ತಂಪು ಪಾನೀಯಗಳು: ಪ್ರತಿಯೊಬ್ಬರೂ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಆದರೆ ಪ್ರತಿನಿತ್ಯ ತಂಪು ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಮತ್ತು ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ. ಸಿಹಿ ತಂಪು ಪಾನೀಯಗಳನ್ನು ಸೇವಿಸುವವರಿಗೆ ಶ್ವಾಸಕೋಶದ ತೊಂದರೆ ಬರುವ ಸಾಧ್ಯತೆ ಹೆಚ್ಚು.

  ಸಂಸ್ಕರಿಸಿದ ಮಾಂಸ: ಮಾಂಸವನ್ನು ಸಂಸ್ಕರಿಸಲು ಮತ್ತು ಸಂರಕ್ಷಿಸಲು ಬಳಸುವ ನೈಟ್ರೈಟ್‌ಗಳು ಶ್ವಾಸಕೋಶದಲ್ಲಿ ಉರಿಯೂತ ಮತ್ತು ಉದ್ವೇಗಕ್ಕೆ ಕಾರಣವಾಗಬಹುದು. ಹಾಗಾಗಿ ಸಂಸ್ಕರಿಸಿದ ಮಾಂಸವು ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ.

  ಹುರಿದ ಆಹಾರ: ನೀವು ಹುರಿದ ಅಥವಾ ಡೀಪ್ ಫ್ರೈಡ್ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಿದ್ದರೆ, ಅದು ಕೂಡ ನಿಮ್ಮ ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಫ್ರೈಡ್ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.
  Published by:zahir
  First published: