Sunday Special Recipe: ಈ ಸಂಡೇ ಶೆಜ್ವಾನ್ ಚಿಕನ್ ಲಾಲಿಪಾಪ್ ಟ್ರೈ ಮಾಡಿ

Shezwan Chicken Lilipop: ಶೆಜ್ವಾನ್ ಚಿಕನ್​ ಲಾಲಿಪಾಪ್ ನಾನ್ ವೆಜ್ ಪ್ರಿಯರ ಫೇವರೇಟ್ ರೆಸಿಪಿ. ಮಳೆಗಾಲದಲ್ಲಿ ಈ ಶೆಜ್ವಾನ್ ಚಿಕನ್ ಲಾಲಿಪಾಪ್ ಮಧ್ಯಾಹ್ನದ ಊಟಕ್ಕೆ ಇದ್ದರೇ, ಅದ್ಭುತವಾಗುತ್ತದೆ. ಶೆಜ್ವಾನ್ ಚಿಕನ್​ ಲಾಲಿಪಾಪ್ ಮಾಡುವ ಸುಲಭ ವಿಧಾನ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Nonveg food: ವಾರದ  ರಜಾ ದಿನ ಅಂದ ಮೆಲೆ, ನಾನ್ ವೆಜ್ ಇರಲೇ ಬೇಕು. ಮನೆಯಲ್ಲಿ ಪ್ರತಿಯೊಬ್ಬರು ತಮ್ಮ ಒತ್ತಡಗಳನ್ನು ಬಿಟ್ಟು ಚಿಕನ್, ಮಟನ್, ಫಿಶ್ ಹೀಗೆ ನಾನ್ ವೆಜ್ ಊಟ ಮಾಡಿ, ಆರಾಮವಾಗಿ ಇರಬೇಕು ಎಂದು ಬಯಸುತ್ತಾರೆ. ಏನಾದ್ರೂ ವಿಭಿನ್ನವಾಗಿ ಮಾಡುವ ಎಂದು ಹಲವಾರು ಜನರು ಯೋಚನೆ ಮಾಡುತ್ತಾರೆ. ಏನು ಮಾಡಬೇಕು ಎನ್ನುವ ಯೋಚನೆಯಲ್ಲಿ ನೀವು ಇದ್ರೆ ಇಲ್ಲಿದೆ ಶೆಜ್ವಾನ್ ಚಿಕನ್ ಲಾಲಿಪಾಪ್.  ಮನೆಯಲ್ಲಿ ಹೋಟೆಲ್ ರೀತಿ ಶೆಜ್ವಾನ್ ಚಿಕನ್ ಲಾಲಿಪಾಪ್ ಮಾಡುವುದು ಹೇಗೆ ಅನ್ನೋದನ್ನ ನಾವು ತಿಳಿಸಿಕೊಡ್ತೀವಿ.

 ಬೇಕಾಗುವ ಸಾಮಾಗ್ರಿಗಳು

  ಚಿಕನ್ ಡ್ರಮ್‌ಸ್ಟಿಕ್  -ಅರ್ಧ ಕೆಜಿ

ಮೊಟ್ಟೆ - 1

ಹಸಿ ಮೆಣಸಿನಕಾಯಿ ಪೇಸ್ಟ್-  ಸ್ವಲ್ಪ

ಈರುಳ್ಳಿ ದಂಟು- ಅರ್ಧ ಕಪ್

ಶೆಜ್ವಾನ್ ಸಾಸ್- 3 ಟೇಬಲ್ ಸ್ಪೂನ್

ರೆಡ್ ಚಿಲ್ಲಿ ಸಾಸ್- 1 ಟೀಬಲ್ ಸ್ಪೂನ್

ಲೈಟ್‌ ಸೋಯಾ ಸಾಸ್ – 2 ಟೇಬಲ್ ಸ್ಪೂನ್

ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ

ಶುಂಠಿ - ಸ್ವಲ್ಪ

ಉಪ್ಪು- ರುಚಿಕೆ ತಕ್ಕಷ್ಟು

ಮೈದಾ – ಅರ್ಧ ಕಪ್

ಅಕ್ಕಿ ಹಿಟ್ಟು- ಕಾಲು ಕಪ್

ಜೋಳದ ಹಿಟ್ಟು- 1 ಟೇಬಲ್ ಸ್ಪೂನ್

ಬೆಳ್ಳುಳ್ಳಿ – 5 ರಿಂದ 6 ಎಸಳು ಚಿಕ್ಕದಾಗಿ ಕತ್ತರಿಸಿಕೊಳ್ಳಿ

ಹಸಿಮೆಣಸಿನಕಾಯಿ – 2 ರಿಂದ 3 ಅಥವಾ ನಿಮಗೆ ಬೇಕಾದ ಖಾರದ ಅನುಗುಣವಾಗಿ

ಎಣ್ಣೆ

ಮಾಡುವ ವಿಧಾನ

ಮೊದಲು ಚಿಕನ್ ಸರಿಯಾಗಿ ಸ್ವಚ್ಛ ಮಾಡಿಕೊಳ್ಳಿ.  ನಂತರ ಒಂದು ಪಾತ್ರೆಯಲ್ಲಿ  ಚಿಕನ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಪೇಸ್ಟ್ ಹಾಕಿ ಮಿಶ್ರಣ ಮಾಡಿ. ನಂತರ ರೆಡ್ ಚಿಲ್ಲಿ ಸಾಸ್, ಸೋಯಾ ಸಾಸ್, ಕೆಂಪು ಮೆಣಸಿನ ಪುಡಿ,ಶೆಜ್ವಾನ್ ಸಾಸ್ ಸೇರಿಸಿ, ಚೆನ್ನಾಗಿ ಕಲಸಿ. ಚಿಕನ್ ಜೊತೆ ಮಸಾಲೆಗಳು ಸರಿಯಾಗಿ ಬೆರೆಯಬೇಕು. ನಂತರ ಚಿಕನ್ ಮಿಶ್ರಣವನ್ನು ಚೆನ್ನಾಗಿ ಹೀರಿಕೊಳ್ಳಲು ಸ್ವಲ್ಪ ಸಮಯ  ಹಾಗೆಯೇ ಇಟ್ಟು ಮ್ಯಾರಿನೇಟ್ ಆಗಲು ಬಿಡಿ.

ಇದನ್ನೂ ಓದಿ: ಅನ್ನ ತಿಂದರೂ ಸುಲಭವಾಗಿ ತೂಕ ಇಳಿಸಬಹುದು: ಇಲ್ಲಿದೆ ಮಾಹಿತಿ..!

ಮ್ಯಾರಿನೇಟ್ ಆಗಿರುವ ಚಿಕನ್ ಲಾಲಿಪಾಪ್‍ಗೆ ಮೊಟ್ಟೆ, ಜೋಳದ ಹಿಟ್ಟು, ಮೈದಾ ಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಮಾಡುವ ಅಗತ್ಯ ಬಿದ್ದರೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬಹುದು.  ಅಲ್ಲದೇ ಯಾವುದೇ ಕಾರಣಕ್ಕೂ ಗಟ್ಟಿ ಉಂಡೆಯಾಗದಂತೆ ಕಲಸುವುದು ಬಹಳ ಮುಖ್ಯವಾಗುತ್ತದೆ.

ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಅದನ್ನು ಕಾಯಲು ಬಿಡಿ. ಎಣ್ಣೆ ಕಾದ ನಂತರ ತಯಾರಿಸಿಕೊಂಡಿರುವ ಚಿಕನ್ ಮಿಶ್ರಣವನ್ನು2 ರಿಂದ 3  ಲಾಲಿಪಾಫ್ಒಂ ದೇ ಬಾರಿಗೆ ಹಾಕಿ ಕರಿಯಿರಿ. ಚಿಕನ್ ಲಾಲಿಪಾಪ್ ಕಂದು ಬಣ್ಣ ಬರುವ ತನಕ ಬೇಯಿಸಿ, ನಂತರ ಅದನ್ನು ತೆಗೆದು ಎಣ್ಣೆ ಹೀರಿಕೊಳ್ಳಲು ಟಿಶ್ಯೂ ಪೇಪರ್ ಹಾಕಿರುವ ತಟ್ಟೆಯಲ್ಲಿ ಹಾಕಿ.

ನಂತರ ಇನ್ನೊಂದು ಬಾಣಲೆಯನ್ನು ತೆಗೆದುಕೊಂಡು  ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಿಸಿ.  ಎಣ್ಣೆ ಕಾದ ನಂತರ ಅದಕ್ಕೆ ಸಣ್ಣದಾಗಿ ಕತ್ತರಿಸಿದ  ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಈರುಳ್ಳಿ ದಂಟನ್ನು ಸೇರಿಸಿ ಹುರಿಯಿರಿ. ಅದನ್ನು ಸರಿಯಾಗಿ ಹುರಿದ ನಂತರ  ಹಸಿರು ಮೆಣಸಿನಕಾಯಿ ಸಾಸ್,ಶೆಜ್ವಾನ್ ಸಾಸ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.  ಮಿಶ್ರಣಕ್ಕೆ ಸ್ವಲ್ಪ ನೀರನ್ನು ಸೇರಿಸಿ, ಬೇಯಲು ಬಿಡಿ. ಪದಾರ್ಥಗಳು ಸರಿಯಾಗಿ ಬೆಂದಿರುವುದನ್ನ ಖಾತ್ರಿ ಮಾಡಿಕೊಂಡು ಅದಕ್ಕೆ  ಜೋಳದ ಹಿಟ್ಟನ್ನು ಸೇರಿಸಿ ಚನ್ನಾಗಿ ಬೇಯಿಸಿ.

ಇದನ್ನು  ಕರಿದ ಚಿಕನ್‍ ಲಾಲಿಪಾಪ್​ಗೆ  ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಚಿಕನ್‍ಗೆ ಮಿಶ್ರಣವನ್ನು ಚೆನ್ನಾಗಿ ಹೀರಕೊಳ್ಳಲು ಬಿಡಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಅಲಂಕಾರಕ್ಕೆ ಹಾಕಿದರೆ ಶೆಜ್ವಾನ್ ಚಿಕನ್ ಲಾಲಿಪಾಪ್ ರೆಡಿ
Published by:Sandhya M
First published: