Kitchen Hacks: ಚಟ್ನಿ ಬೇಗನೆ ಹಾಳಾಗಬಾರದು ಅಂದ್ರೆ ಇಷ್ಟು ಮಾಡಿ ಸಾಕು..!

ಚಟ್ನಿಯನ್ನು ಬಹಳ ದಿನಗಳವರೆಗೆ ರುಚಿ, ವಾಸನೆ ಕುಂದದಂತೆ ಸಂಗ್ರಹಿಸಿಡುವುದೇ ದೊಡ್ಡ ಸವಾಲು. ಹಾಗಾದ್ರೆ ಇವುಗಳು ಹಾಳಾಗದಂತೆ ಶೇಖರಿಸುವುದು ಹೇಗೆ..?

ವಿವಿಧ ಬಗೆಯ ಚಟ್ನಿಗಳು

ವಿವಿಧ ಬಗೆಯ ಚಟ್ನಿಗಳು

  • Share this:
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಒಂದಲ್ಲಾ ಒಂದು ರೀತಿಯ ಚಟ್ನಿ(Chutney)ಗಳನ್ನು ತಯಾರಿಸುತ್ತಲೇ ಇರುತ್ತಾರೆ. ಖಾರದ ಚಟ್ನಿಗಳು, ಸಿಹಿ ಚಟ್ನಿಗಳು, ತೆಂಗಿನಕಾಯಿ(Coconut) ಬಳಸದೆ ಕೇವಲ ಕಾಳುಗಳನ್ನು ಬಳಸಿ ಮಾಡುವ ಚಟ್ನಿ(Chutney)ಗಳು ಹೀಗೆ ಹಲವು ಬಗೆಗಳಿವೆ. ವಿಭಿನ್ನ ರುಚಿ ನೀಡುವ ಇವು ಅಡುಗೆ ಮನೆ(Kitchen)ಯಲ್ಲೇ ಅಗ್ರಸ್ಥಾನ ಪಡೆದಿರುತ್ತವೆ ಎಂದೇ ಹೇಳಬಹುದು. ಆದರೆ ಇದನ್ನು ಬಹಳ ದಿನಗಳವರೆಗೆ ರುಚಿ, ವಾಸನೆ ಕುಂದದಂತೆ ಸಂಗ್ರಹಿಸಿಡುವುದೇ ದೊಡ್ಡ ಸವಾಲು. ಹಾಗಾದ್ರೆ ಇವುಗಳು ಹಾಳಾಗದಂತೆ ಶೇಖರಿಸುವುದು ಹೇಗೆ..?

1. ನೈಸರ್ಗಿಕ ಸೇರ್ಪಡೆಗಳು

ರುಚಿಕರವಾದ ಚಟ್ನಿಗಳಿಲ್ಲದೆ ಭಾರತೀಯ ಆಹಾರ ಕಲ್ಪಿಸಿಕೊಳ್ಳುವುದು ಅಸಾಧ್ಯ. ಸಾಂಪ್ರದಾಯಿಕ ಥಾಲಿಗಳಿಗೆ ರುಚಿ ನೀಡುವುದರಿಂದ ಹಿಡಿದು ತಿಂಡಿಗಳಿಗೆ ಮಸಾಲೆ ಹಾಕುವವರೆಗೆ, ಚಟ್ನಿಗಳು ಇದ್ದೇ ಇರುತ್ತದೆ. ಸಾಂಪ್ರದಾಯಿಕವಾಗಿ, ರುಚಿ ಹೆಚ್ಚಿಸಲು ಮತ್ತು ಚಟ್ನಿಗಳನ್ನು ಕೆಲವು ದಿನಗಳವರೆಗೆ ಸಂರಕ್ಷಿಸಲು ಎಣ್ಣೆ ಮತ್ತು ಉಪ್ಪು, ಸಾಸಿವೆ ಎಣ್ಣೆ ಅಥವಾ ಮೆಣಸುಗಳಂತಹ ಮಸಾಲೆಗಳು ಪ್ರಮುಖ ಪಾತ್ರ ವಹಿಸಲಾಗುತ್ತದೆ. ಇವುಗಳು ಚಟ್ನಿಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಬಳಸುವ ಕೆಲವು ನೈಸರ್ಗಿಕ ಪದಾರ್ಥಗಳಾಗಿವೆ.

ಇದನ್ನೂ ಓದಿ:Onion Cheese Bhajis: ಚಳಿಗಾಲಕ್ಕೆ ಸಖತ್ Crispy ಆಗಿರುತ್ತೆ ಚೀಸ್ ಈರುಳ್ಳಿ ಬಜ್ಜಿ, ರೆಸಿಪಿ ಇಲ್ಲಿದೆ, ಟ್ರೈ ಮಾಡಿ

2. ಚಟ್ನಿ ಸಂಗ್ರಹಿಸುವುದು

ಮೊದಲು ಮಧ್ಯಮ ಜ್ವಾಲೆಯ ಮೇಲೆ ಸ್ಟೀಲ್ ಪ್ಯಾನ್ ಅಥವಾ ಆಳವಾದ ಪಾತ್ರೆ ಇರಿಸಿ ಅರ್ಧ ನೀರನ್ನು ತುಂಬಿ 4-6 ನಿಮಿಷಗಳ ಕಾಲ ಬಿಸಿಮಾಡಿ. ನೀರು ಕುದಿಯಲು ಪ್ರಾರಂಭಿಸಿದ ನಂತರ, ಜ್ವಾಲೆ ಕಡಿಮೆ ಮಾಡಿ ಮತ್ತು ನೀವು ಚಟ್ನಿಯನ್ನು ಸಂಗ್ರಹಿಸಲು ಬಯಸುವ ಶುದ್ಧ ಗಾಜಿನ ಜಾರ್ ಅನ್ನು ಬಿಸಿನೀರಿನ ಪಾತ್ರೆಗಳನ್ನು ಇರಿಸುವುದರಿಂದ ಜಾರ್ ಅನ್ನು ಕ್ರಿಮಿನಾಶಕಗೊಳಿಸಬಹುದು. ಕನಿಷ್ಠ 5 ನಿಮಿಷಗಳ ನಂತರ ಒಂದು ಜೋಡಿ ಇಕ್ಕುಳಗಳನ್ನು (ಚಿಮ್ತಾ) ಬಳಸಿ ಜಾರ್‌ನಿಂದ ಹೊರತೆಗೆದು ಕೋಣೆಯಲ್ಲಿರಿಸಿ. ಹೊಸದಾಗಿ ತಯಾರಿಸಿದ ಚಟ್ನಿಯನ್ನು ಹಾಕಿ. ಬೆಚ್ಚಗಿನ ಮುಚ್ಚಳವನ್ನು ಕಾಗದದ ಟವಲ್‍ನಿಂದ ಸ್ವಚ್ಛಗೊಳಿಸಿ ಮುಚ್ಚಿಡಿ. ಮುಂದೆ, ದೊಡ್ಡ ಕ್ಯಾನಿಂಗ್ ಮಡಕೆ ತೆಗೆದುಕೊಂಡು ಅದರಲ್ಲಿ ಕುದಿಸಿದ ನೀರನ್ನು ತುಂಬಿಸಿ, ನಂತರ ಸಣ್ಣ ಚಟ್ನಿ ಜಾಡಿಗಳನ್ನು ಇರಿಸಿ 10 ನಿಮಿಷಗಳ ಕಾಲ ಕುದಿಸಿ. ಅವುಗಳನ್ನು ಹೊರತೆಗೆದು ಒಂದು ದಿನ ತಣ್ಣಗಾಗಲು ಅವುಗಳನ್ನು ಪಕ್ಕಕ್ಕೆ ಇರಿಸಿ. ನಂತರ ಅವುಗಳನ್ನು ತಂಪಾದ, ಶುಷ್ಕ ಸ್ಥಳದಲ್ಲಿ ಸಂಗ್ರಹಿಸಿ.

3. ಚಟ್ನಿ ಕ್ಯೂಬ್ಸ್

ನಿಮ್ಮ ಮೆಚ್ಚಿನ ಚಟ್ನಿಗಳನ್ನು ಸಂಗ್ರಹಿಸಲು ಇದು ಅತ್ಯಂತ ಅನುಕೂಲಕರ ಮಾರ್ಗವಾಗಿದೆ. ಐಸ್ ಕ್ಯೂಬ್ ಹೋಲ್ಡರ್ ಅನ್ನು ಬೆಣ್ಣೆ ಅಥವಾ ಸ್ವಲ್ಪ ಎಣ್ಣೆ ಹಚ್ಚಿ ತಾಜಾ ಚಟ್ನಿಯನ್ನು ಸುರಿಯಿರಿ ಮತ್ತು ಅದನ್ನು ಫ್ರೀಜ್ ಮಾಡಿ. ಬಡಿಸುವ ಒಂದು ಗಂಟೆ ಮೊದಲು ಅದನ್ನು ಬೌಲ್‍ನಲ್ಲಿ ತೆಗೆದುಕೊಂಡು ತಿನ್ನಬಹುದು.

4. ಸಿಹಿ ಚಟ್ನಿಗಳು

ನೀವು ಸಿಹಿ ಚಟ್ನಿ ತಯಾರಿಸುತ್ತಿದ್ದರೆ ಅದಕ್ಕೆ ಸ್ವಲ್ಪ ಬೆಲ್ಲದ ಪಾಕ ಅಥವಾ ಸಕ್ಕರೆ ಪಾಕ ಸೇರಿಸಬಹುದು. ಏಕೆಂದರೆ ಇದು ದೀರ್ಘಕಾಲದವರೆಗೆ ತಾಜಾತನ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Back Pain: ನಿಮ್ಮ ಬೆನ್ನು ನೋವಿಗೆ ಅಡುಗೆ ಮನೆಯಲ್ಲೇ ಇದೆ ಪರಿಹಾರ, ಒಮ್ಮೆ ಟ್ರೈ ಮಾಡಿ...!

5. ಬಿಸಿ ಸಾಸಿವೆ ಎಣ್ಣೆ

ನಿಮ್ಮ ಚಟ್ನಿ ದೀರ್ಘಕಾಲದವರೆಗೆ ಉಳಿಯುವಂತೆ ಮಾಡಲು, ನೀವು ಚಟ್ನಿಯ ಮೇಲೆ ಬಿಸಿ ಸಾಸಿವೆ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬಹುದು. ಇದು ತಾಜಾತನ ಉಳಿಸುತ್ತದೆ.
Published by:Latha CG
First published: