ಮನೆಯ ವಾಸ್ತು ದೋಷ ಪರಿಹಾರಕ್ಕೆ ಈ ವಿಧಾನಗಳನ್ನು ಅನುಸರಿಸಿ ಅದೃಷ್ಟ, ಶಾಂತಿ ನೆಲೆಸಲಿದೆ

ಮನೆಯ ವಾಸ್ತು ದೋಷ ನಿವಾರಣೆಗೆ ಕರ್ಪೂರದ ಹರಳುಗಳನ್ನು ಬಳಸಿ. ಎರಡು ಕರ್ಪೂರದ ಹರಳುಗಳನ್ನು ಮನೆಯಲ್ಲಿ ಇಡಿ, ಅವು ಕುಗ್ಗಿದಾಗ ಬದಲಾಯಿಸಿ. ನಿಮ್ಮ ಪರಿಸ್ಥಿತಿಯಲ್ಲಿ ಕೂಡಲೇ ಬದಲಾವಣೆ ಗಮನಿಸುತ್ತೀರಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  ನೀವು ಹೊಸ ಮನೆಗೆ ಸ್ಥಳಾಂತರಗೊಂಡಿದ್ದೀರಾ? ಅಥವಾ ತುಂಬಾ ಸಮಯದಿಂದ ಒಂದು ಕಡೆ ವಾಸವಾಗಿದ್ದು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಸಾಮಾನ್ಯವಾಗಿ ವಾಸ್ತು ತಜ್ಞರನ್ನು ಭೇಟಿಯಾದರೆ, ಅವು ಈ ಸಮಸ್ಯೆಗಳ ನಿವಾರಣೆಗೆ ಮನೆಯ ಕಟ್ಟಡ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಸೂಚಿಸಬಹುದು. ಆದರೆ ಕೆಲವು ಪದಾರ್ಥಗಳನ್ನು ನಿರ್ದಿಷ್ಟ ಜಾಗದಲ್ಲಿ ಇಡುವ ಮೂಲಕ ಕೂಡ, ವಾಸ್ತು ದೋಷವನ್ನು ನಿವಾರಿಸಬಹುದು. ಅವುಗಳಲ್ಲಿ 10 ಸರಳ ವಾಸ್ತು ಪರಿಹಾರಗಳು ಇಲ್ಲಿವೆ.


  1. ಸಮುದ್ರದ ಉಪ್ಪು
  ಮನೆಯ ವಾಸ್ತುವಿಗೆ ಸಮುದ್ರದ ಉಪ್ಪು ತುಂಬಾ ಪರಿಣಾಮಕಾರಿ. ಸ್ವಲ್ಪ ಪ್ರಮಾಣದ ಕಲ್ಲುಪ್ಪನ್ನು ಇಡುವುದು ವಾಸ್ತುದೋಷಕ್ಕೆ ತಕ್ಷಣದ ಪರಿಹಾರವಾಗುತ್ತದೆ. ನೀವು ಬೌಲ್‍ನಲ್ಲಿ ಇಟ್ಟ ಉಪ್ಪನ್ನು ದಿನ ಬಿಟ್ಟು ದಿನ ಬದಲಾಯಿಸುವುದನ್ನು ಮರೆಯಬೇಡಿ. ಬದಲಿಗೆ, ನೆಲ ಒರೆಸುವ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ, ನೆಲ ಒರೆಸುವುದು ಒಳ್ಳೆಯದು.


  2. ಕನ್ನಡಿಗಳು
  ಅನಾದಿ ಕಾಲದಿಂದಲೂ ಕನ್ನಡಿಗಳು ವಾಸ್ತುಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಕನ್ನಡಿಗಳನ್ನು ಸರಿಯಾದ ಜಾಗದಲ್ಲಿ ಇಡುವುದು ಮನೆಯ ವಾಸ್ತು ಸಕರಾತ್ಮಕವಾಗಿ ಇರುವುದಕ್ಕೆ ಅತ್ಯಗತ್ಯ. ಕನ್ನಡಿಯ ವಿಷಯದಲ್ಲಿ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಗಳು: ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಕನ್ನಡಿ ಇಡಬೇಡಿ. ಮಲಗುವ ಕೋಣೆಯಲ್ಲಿರುವ ಕನ್ನಡಿಯಲ್ಲಿ ಮಂಚದ ಪ್ರತಿಬಿಂಬ ಕಾಣದಂತೆ ನೋಡಿಕೊಳ್ಳಿ.


  3. ಕರ್ಪೂರದ ಹರಳುಗಳು


  ಕರ್ಪೂರದ ಹರಳುಗಳು ವಾಸ್ತುದೋಷ ನಿವಾರಣೆಗೆ ಜನಪ್ರಿಯ. ನಿಮ್ಮಷ್ಟದಂತೆ ಕೆಲಸಗಳು ನಡೆಯುತ್ತಿಲ್ಲವಾದರೆ ಅಥವಾ ಕೆಲಸಗಳು ನಿಂತು ಹೋಗಿದ್ದರೆ. ಮನೆಯ ವಾಸ್ತು ದೋಷ ನಿವಾರಣೆಗೆ ಕರ್ಪೂರದ ಹರಳುಗಳನ್ನು ಬಳಸಿ. ಎರಡು ಕರ್ಪೂರದ ಹರಳುಗಳನ್ನು ಮನೆಯಲ್ಲಿ ಇಡಿ, ಅವು ಕುಗ್ಗಿದಾಗ ಬದಲಾಯಿಸಿ. ನಿಮ್ಮ ಪರಿಸ್ಥಿತಿಯಲ್ಲಿ ಕೂಡಲೇ ಬದಲಾವಣೆ ಗಮನಿಸುತ್ತೀರಿ.


  4. ಪಿರಮಿಡ್‍ಗಳು
  ಪಿರಮಿಡ್ ಯಂತ್ರಗಳು ವಾಸ್ತು ಪರಿಹಾರದ ರೂಪದಲ್ಲಿ ಜನಪ್ರಿಯವಾಗಿವೆ. ಕಲ್ಲು, ಲೋಹ, ಗಾಜು ಅಥವಾ ರಟ್ಟಿನಿಂದ ಮಾಡಿದ ಚಿಕ್ಕ ಪಿರಮಿಡ್‍ಗಳನ್ನು ಬಳಸಬಹುದು. ನಿಮ್ಮ ಮನೆಯನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಿಸಲು ಪಿರಮಿಡ್‍ ಯಂತ್ರವನ್ನು ನಿಮ್ಮ ಮನೆಯ ಪ್ರವೇಶ ದ್ವಾರದಲ್ಲಿ ಇಡಿ.


  5. ವಿಂಡ್‍ಚೈಮ್
  ವಿಂಡ್ ಚೈಮ್‍ಗಳನ್ನು ಮನೆಯ ಅಲಂಕಾರಿಕ ವಸ್ತುಗಳು ಮಾತ್ರ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ನೀವು ವಾಸ್ತು ದೋಷದಿಂದ ತೊಂದರೆಗೆ ಒಳಗಾಗಿದ್ದರೆ, ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು 6 ಅಥವಾ 8 ಟೊಳ್ಳು ಕಂಬಿಗಳಿರುವ ವಿಂಡ್ ಚೈಮನ್ನು ಬಳಸಿ. ಯಾವ ಲೋಹದ ಮತ್ತು ಎಷ್ಟು ಕಂಬಿಗಳಿರುವ ವಿಂಡ್‍ಚೈಮನ್ನು ಬಳಸಬೇಕು ಎಂಬುದರ ಮಾಹಿತಿಯನ್ನು ಸರಿಯಾಗಿ ಪಡೆದು, ಉಪಯೋಗಿಸಿ.


  6. ಸ್ಫಟಿಕದ ಚೆಂಡುಗಳು
  ಪಿರಮಿಡ್‍ಗಳು ಸುಂದರವಾಗಿಲ್ಲ ಎಂದೆನಿಸಿದರೆ, ಅವುಗಳ ಬದಲಿಗೆ ಸ್ಫಟಿಕದ ಚೆಂಡುಗಳನ್ನು ಬಳಸಬಹುದು. ಅವುಗಳನ್ನು ಸ್ಪಷ್ಟವಾದ ಸ್ಫಟಿಕದ ಶಿಲೆಗಳಿಂದ ತಯಾರಿಸಲಾಗಿರುತ್ತದೆ ಹಾಗೂ ಮನೆ ಮತ್ತು ಕಚೇರಿಯಲ್ಲಿ ಇಟ್ಟರೆ ಸುಂದರವಾಗಿ ಕಾಣುತ್ತದೆ. ಅವು ಶಕ್ತಿಯನ್ನು ಹೀರಿಕೊಳ್ಳುವುದರಿಂದ, ಅವುಗಳನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಕೆಂಪು ಸ್ಫಟಿಕ ಅದೃಷ್ಟಕ್ಕಾಗಿ, ಗುಲಾಬಿ ಸಂಬಂಧಕ್ಕಾಗಿ, ಕಿತ್ತಳೆ ಹಣಕ್ಕಾಗಿ. . . ಹೀಗೆ ಒಂದೊಂದು ಬಣ್ಣದ ಸ್ಫಟಿಕವು ಒಂದೊಂದು ಉದ್ದೇಶಕ್ಕೆ ಬಳಸಲ್ಪಡುತ್ತದೆ.


  7. ಕುದುರೆ ಲಾಳ
  ವಾಸ್ತು ಶಾಸ್ತ್ರದ ಪ್ರಕಾರ, ಕುದುರೆ ಲಾಳ ಮನೆಗೆ ಅದೃಷ್ಟ ಮತ್ತು ಐಶ್ವರ್ಯವನ್ನು ತರುತ್ತದೆ. ತುದಿಗಳನ್ನು ಮೇಲ್ಮುಖವಾಗಿ ಇರುವಂತೆ ನೇತು ಹಾಕಿದರೆ, ಅದು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಅದನ್ನು ನೇತು ಹಾಕಲು ಸೂಕ್ತ ಜಾಗ ಮನೆಯ ಪ್ರವೇಶ ದ್ವಾರ. ಕುದುರೆ ಲಾಳದ ತುದಿಯನ್ನು ಕೆಳಮುಖವಾಗಿ ನೇತು ಹಾಕುವುದು ದುರದೃಷ್ಟಕರ.


  8. ಬಣ್ಣಗಳು
  ವಾಸ್ತುಶಾಸ್ತ್ರದ ಪ್ರಕಾರ, ಕೆಲವು ಬಣ್ಣಗಳು ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಗುಲಾಬಿ, ನೀಲಿ ಮತ್ತು ಹಸಿರು ಲಿವಿಂಗ್ ಕೋಣೆ ಮತ್ತು ಮಾಸ್ಟರ್ ಬೆಡ್‍ ರೂಂಗೆ ಸೂಕ್ತ, ಹಳದಿ ಮತ್ತು ಕಿತ್ತಳೆ ಮಕ್ಕಳ ಕೋಣೆಗೆ ಸೂಕ್ತ. ವಾಸ್ತುದೋಷದಿಂದ ಬಳಲುತ್ತಿದ್ದರೆ, ಮನೆಯ ಗೋಡೆಗಳ ಬಣ್ಣವನ್ನು ಬದಲಾಯಿಸಿ.


  9. ಕುಟುಂಬದ ಭಾವಚಿತ್ರಗಳು
  ಕುಟುಂಬ ಸದಸ್ಯರು ವಾಸವಿದ್ದರೆ ಮಾತ್ರ ಮನೆ ಗೃಹವೆಂದು ಕರೆಸಿಕೊಳ್ಳುವುದು. ವಾಸ್ತು ಶಾಸ್ತ್ರದ ಪ್ರಕಾರ, ಲಿವಿಂಗ್ ಕೋಣೆಯಲ್ಲಿ ಕುಟುಂಬದ ಭಾವಚಿತ್ರವನ್ನು ತೂಗು ಹಾಕಿವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ.


  10. ಪ್ರಕಾಶಮಾನ ಮುಖ್ಯ ಬಾಗಿಲು
  ವಾಸ್ತು ಶಾಸ್ತ್ರದ ಪ್ರಕಾರ ಕತ್ತಲಿನ ಮೂಲೆಗಳು ಇರಬಾರದು. ಮನೆಯ ಪ್ರತಿ ಭಾಗವು ಪ್ರಕಾಶಮಾನವಾಗಿಬೇಕು. ಹಾಗಾಗಿ ಮನೆಯ ಮುಖ್ಯದ್ವಾರಕ್ಕೆ ಹೆಚ್ಚು ಗಮನ ನೀಡಬೇಕು. ಏಕೆಂದರೆ ನಿಮ್ಮ ಮನೆಯೊಳಗೆ ಸಕಾರಾತ್ಮಕ ಶಕ್ತಿಗಳ ಪ್ರವೇಶ ಆಗುವುದು ಅಲ್ಲಿಂದಲೆ. ಮನೆಯ ದ್ವಾರದಲ್ಲಿ ಚೆನ್ನಾಗಿ ಬೆಳಕಿರುವಂತೆ ನೋಡಿಕೊಳ್ಳಿ.


  11. ಅಕ್ವೇರಿಯಂ
  ವಾಸ್ತು ಪ್ರಕಾರ, ಮೀನು ಮತ್ತು ಅಕ್ವೇರಿಯಂ ಶುಭದಾಯಕ. ಅವುಗಳಿದ್ದರೆ ಮನೆಯ ವಾಸ್ತು ದೋಷ ನಿವಾರಣೆ ಆಗಬಹುದು. ಅಕ್ವೇರಿಯಂ ಅನ್ನು ನಿಮ್ಮ ಲಿವಿಂಗ್‍ ರೂಂನ ಈಶಾನ್ಯ ಭಾಗದಲ್ಲಿ ಇಡಿ.

  Published by:Kavya V
  First published: