ಸುಂದರವಾಗಿ (Beautiful) ಕಾಣಿಸಿಕೊಳ್ಳಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ, ಅದರಲ್ಲೂ ಮುಖ್ಯವಾಗಿ ಮುಖದ ತ್ವಚೆ (Skin) ಚೆನ್ನಾಗಿರಬೇಕು, ಹೊಳೆಯುವಂತಿರಬೇಕು,ಚರ್ಮ ಸುಕ್ಕುಗಟ್ಟದೇ ಜೀವಂತಿಕೆಯಿಂದ ಕೂಡಿರಬೇಕು ಅಂತ ಎಲ್ಲರೂ ಬಯಸ್ತಾರೆ. ಆದ್ರೆ ಹಾಗೆ ಬಯಸೋದು ಮಾತ್ರವಲ್ಲ, ಅದಕ್ಕಾಗಿ ಸ್ವಲ್ಪ ಸಮಯ ತೆಗೆದಿಟ್ಟು ಆರೈಕೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಈಗ ಬಹುತೇಕರು ಕ್ರಿಸ್ ಮಸ್ ಹಾಗೂ ಹೊಸ ವರ್ಷದ ರಜೆಯನ್ನು ಎಂಜಾಯ್ ಮಾಡುತ್ತಿರುತ್ತಾರೆ. ಫಂಕ್ಷನ್ಸ್, ಸೆಲೆಬ್ರೇಷನ್, ಪಾರ್ಟಿ (Party) ಹೀಗೆ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುತ್ತಿರುತ್ತಾರೆ. ಆದ್ರೆ ಇದು ಚಳಿಗಾಲ. ಇಂಥ ಸಮಯದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ ಬೇಕಾಗುತ್ತದೆ. ಇನ್ನು ರಜೆಗಳಿರೋದ್ರಿಂದ ತ್ವಚೆಯ ಆರೈಕೆಗೆ ಹೆಚ್ಚಿನ ಸಮಯ ಕೂಡ ಸಿಗುತ್ತದೆ. ಆದ್ರೆ ನೀವು ಸರಿಯಾದ ತ್ವಚೆಯ ದಿನಚರಿ ಹೊಂದಿದ್ದೀರಾ ಅನ್ನೋದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ನಿಮ್ಮ ಒಟ್ಟಾರೆ ಲುಕ್ ಚೆನ್ನಾಗಿದ್ದರೆ ನೀವು ಮೇಕಪ್ ಹಾಗೂ ಇತರ ಸೌಂದರ್ಯ ಪರಿಕರಗಳ ಜೊತೆಗೆ ಇನ್ನಷ್ಟು ಚೆನ್ನಾಗಿ ಕಾಣುತ್ತೀರಾ. ಆದ್ದರಿಂದ ಈ ರಜಾದಿನಗಳಲ್ಲಿ ನಮ್ಮ ಚರ್ಮವನ್ನು ಅತ್ಯುತ್ತಮವಾದ ತ್ವಚೆಯ ಮೂಲಗಳೊಂದಿಗೆ ಸಿದ್ಧಪಡಿಸುವುದು ಬಹಳ ಮುಖ್ಯ. ಏಕೆಂದರೆ ಕಾಂತಿಯುತ ಹಾಗೂ ಆರೋಗ್ಯಯುತ ತ್ವಚೆ ನಮಗೆ ಒಳ್ಳೆಯ ಫೀಲ್ ನೀಡುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.
ಉತ್ತಮ ತ್ವಚೆಗಾಗಿ ನೀವು ಬ್ಯೂಟಿ ಪಾರ್ಲರ್ ಗಳಲ್ಲಿ ಎಷ್ಟೋ ಸ್ಕಿನ್ ಕೇರ್ ಕೈಗೊಂಡರೂ ಮನೆಯಲ್ಲೂ ಅದರ ಆರೈಕೆ ಮಾಡುವುದು ಮುಖ್ಯ. ಅದರಲ್ಲೂ ನೀವು ಬೆಳಕಿಗೆ ಒಡ್ಡಿಕೊಳ್ಳುವ ಸಮಯ ಮತ್ತಷ್ಟು ಮುಖ್ಯವಾಗುತ್ತದೆ.
ಇದನ್ನೂ ಓದಿ: ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಒಂದು ಸೊಪ್ಪು ಅಲ್ಲ, ಮನೆಯಲ್ಲಿಯೇ ಒಂದು ಮದ್ದು ಸಿಗ್ತದೆ!
ಕ್ಲೆನ್ಸಿಂಗ್, ಟೋನಿಂಗ್ ಹಾಗೂ ಮಾಯಿಶ್ಚರೈಸಿಂಗ್
ಕ್ಲೆನ್ಸಿಂಗ್ ಅಥವಾ ಸ್ವಚ್ಛಗೊಳಿಸುವುದು, ಟೋನಿಂಗ್ ಹಾಗೂ ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದು ಸ್ಕಿನ್ ಕೇರ್ ನಲ್ಲಿ ಬಹಳ ಮುಖ್ಯ. ಇದು ಅತ್ಯಂತ ನಿರ್ಣಾಯಕ ಕೂಡ. ಮುಖವನ್ನು ಕ್ಲೆನ್ಸ್ ಮಾಡುವುದು ಅಥವಾ ತೊಳೆಯುವುದರಿಂದ ನಿಜವಾಗಿಯೂ ಮುಖದ ಮೇಲಿನ ಎಲ್ಲಾ ಕೊಳಕು, ಮಾಲಿನ್ಯ, ಮೇಕ್ಅಪ್ ಮತ್ತು ಅವಶೇಷಗಳನ್ನು ತೊಡೆದು ಹಾಕಲು ಸಹಾಯವಾಗುತ್ತದೆ. ಇದು ಚರ್ಮ ನೈಸರ್ಗಿಕವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ.
ಇನ್ನು ಮುಖದ ಚರ್ಮವನ್ನು ಬಿಗಿಗೊಳಿಸಲು ಯೋಗ್ಯವಾದ ಟೋನರನ್ನು ಬಳಸುವುದೂ ಮುಖ್ಯ. ಟೋನರ್ ಅನ್ನು ಬಳಸಿದ ನಂತರ ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಅತ್ಯುತ್ತಮವಾದ ಮಾಯಿಶ್ಚರೈಸರ್ ಅನ್ನು ಬಳಸಿ. ಇದು ನಿಮ್ಮ ಚರ್ಮವನ್ನು ತೇವವಾಗಿ ಇಡುವುದಲ್ಲದೇ ಪೋಷಣೆಯೂ ಸಿಗುತ್ತದೆ. ಆರೋಗ್ಯಕರ ಚರ್ಮಕ್ಕಾಗಿ ಅದನ್ನು ಹೈಡ್ರೀಕರಣಗೊಳಿಸುವುದು ಮುಖ್ಯ.
ಸನ್ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ
ನೀವು ಹೊರಗೆ ಇರುವಾಗ ನಿಮ್ಮ ಚರ್ಮವನ್ನು ರಕ್ಷಿಸಲು ಸನ್ಸ್ಕ್ರೀನ್ ಅನ್ನು ಹಚ್ಚುವುದು ಬಹಳ ಮುಖ್ಯ. ಹಾಗಾಗಿ ನೀವು ಶಾಪಿಂಗ್ ಮಾಡಲು ಹೋಗುವಾಗಿ ಸನ್ಸ್ಕ್ರೀನ್ ಪ್ಯಾಕ್ ಮಾಡುವುದನ್ನು ಮರೆಯಬೇಡಿ. ಇದನ್ನು ನಿರ್ಲಕ್ಷಿಸಿದರೆ ಬಿಸಿಲಿನಲ್ಲಿ ಹೋದಾಗ ನೀವು ಬಿಸಿಲಿಗೆ ಸುಡಬಹುದು. ಅಲ್ದೇ ನಿಮ್ಮ ಚರ್ಮ ಬಣ್ಣಗೆಡಬಹುದು. ಅಲ್ಲದೇ ಸುಕ್ಕು, ಟ್ಯಾನ್ ಕೂಡ ಆಗಬಹುದು.
ಮಲಗುವ ಮೊದಲು ಮೇಕಪ್ ತೆಗೆದುಹಾಕಿ
ಮಲಗುವ ಮೊದಲು ಮೇಕಪ್ ತೆಗೆದು ಹಾಕಿರೋದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೇ ಮುಖವನ್ನು ಸ್ವಚ್ಛವಾಗಿ ತೊಳೆದು ನಿಮ್ಮ ತ್ವಚೆಗೆ ಹೊಂದಿಕೆಯಾಗುವ ನೈಟ್ ಕ್ರೀಮ್ ಹಚ್ಚಿಕೊಳ್ಳಿ. ಕೆಲವೊಮ್ಮೆ ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸುವ ಹಾಗೂ ನೈಟ್ ಕ್ರೀಮ್ ಹಚ್ಚುವ ಅಭ್ಯಾಸವನ್ನು ಮರೆತುಬಿಟ್ಟಿರುತ್ತಾರೆ.
ಇದನ್ನೂ ಓದಿ: ಅತಿ ಕಡಿಮೆ ಹಣದಲ್ಲಿ ಉತ್ತಮ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿ; ಇಲ್ಲಿದೆ 20 ಪ್ರವಾಸಿ ತಾಣಗಳ ಲಿಸ್ಟ್
ಇನ್ನು ನಿಮ್ಮ ಚರ್ಮವನ್ನು ಹೆಚ್ಚು ಕಾಂತಿಯುತವಾಗಿ ಕಾಣುವಂತೆ ಮಾಡಲು, ನೀವು ಜಿಮ್ಗೆ ಹೋಗುವುದನ್ನು ಅಥವಾ ವ್ಯಾಯಾಮ ಮಾಡುವುವನ್ನು ಸಹ ಪರಿಗಣಿಸಬಹುದು. ಅಲ್ಲದೇ ಪ್ರತಿ ದಿನ ಎಂಟರಿಂದ ಹತ್ತು ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡಿ. ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ತ್ವಚೆ ಹೈಡ್ರೇಟ್ ಆಗಿರುತ್ತದೆ ಎಂಬುದನ್ನು ನೆನಪಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ