Home Remedies For Cracked Heels: ಒಣಗಿದ ಹಿಮ್ಮಡಿ ಮುಜುಗರ ಉಂಟುಮಾಡುತ್ತಿದೆಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ..

Cracked Heels: ಒರಟಾದ ಬಿರುಕುಗಳನ್ನು ಉಂಟುಮಾಡುವ ಕೆಲವು ಸಾಮಾನ್ಯ ಅಂಶಗಳೆಂದರೆ ಹೆಚ್ಚಿನ ತೂಕ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳು,  ಹೆಚ್ಚು ಸಮಯ ನಿಲ್ಲುವುದು, ಒಣ ಚರ್ಮ ಮತ್ತು ಸರಿಯಾದ ಕಾಳಜಿ ಮತ್ತು ನೈರ್ಮಲ್ಯದ ಕೊರತೆ ಎನ್ನಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಮ್ಮಡಿ ಒಡೆದ (Cracked Heel) ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಶೂಗಳನ್ನು ತೆಗೆಯಲು ಮುಜುಗರವಾಗುತ್ತಿದೆಯೇ? ನಮ್ಮಲ್ಲಿ ಹೆಚ್ಚಿನವರು ನಮ್ಮ ಮುಖದ ಅಂದ ಹೆಚ್ಚಿಸಲು  ಸಾಕಷ್ಟು ಸಮಯವನ್ನು ಕಳೆಯುತ್ತಾರೆ, ಆದರೆ ಕನಿಷ್ಠ ಸಮಯವನ್ನು ಕೂಡ ತಮ್ಮ ಪಾದಗಳ ರಕ್ಷಣೆಗೆ ನೀಡುವುದಿಲ್ಲ. ಇದನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ಪಾದಗಳಲ್ಲಿ ಬಿರುಕು ಮೂಡುವುದು ಸಾಮಾನ್ಯ, ಆದರೆ ಅದಕ್ಕೆ ರಾಸಾಯನಿಕಯುಕ್ತ ಔಷಧಗಳನ್ನು ಹಚ್ಚುವ ಬದಲು ಮನೆಯಲ್ಲಿರುವ ವಸ್ತುಗಳನ್ನು(Home Remedies) ಬಳಸಿ, ಹಿಮ್ಮಡಿ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.  

ಒರಟಾದ ಬಿರುಕುಗಳನ್ನು ಉಂಟುಮಾಡುವ ಕೆಲವು ಸಾಮಾನ್ಯ ಅಂಶಗಳೆಂದರೆ ಹೆಚ್ಚಿನ ತೂಕ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳು,  ಹೆಚ್ಚು ಸಮಯ ನಿಲ್ಲುವುದು, ಒಣ ಚರ್ಮ ಮತ್ತು ಸರಿಯಾದ ಕಾಳಜಿ ಮತ್ತು ನೈರ್ಮಲ್ಯದ ಕೊರತೆ ಎನ್ನಬಹುದು.  ನಮ್ಮ ಅಡುಗೆಮನೆಯು ಔಷಧೀಯ ಮೌಲ್ಯಗಳನ್ನು ಹೊಂದಿರುವ ಅದ್ಭುತ ಪದಾರ್ಥಗಳ ಭಂಡಾರವಾಗಿದ್ದು, ಬಿರುಕು ಬಿಟ್ಟ ಹಿಮ್ಮಡಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಹೇರಳವಾಗಿ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಎ, ಬಿ 6 ಮತ್ತು ಸಿ ಇವೆಲ್ಲವೂ ಚರ್ಮದವನ್ನು ಕಾಪಾಡುತ್ತದೆ ಮತ್ತು ಚರ್ಮವನ್ನು ಚೆನ್ನಾಗಿ ಹೈಡ್ರೇಟ್  ಮಾಡುತ್ತದೆ. ಬಾಳೆಹಣ್ಣು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಅದು ಪಾದಗಳನ್ನು ತೇವಗೊಳಿಸುತ್ತದೆ ಮತ್ತು ಚರ್ಮ ಒಣಗುವುದನ್ನು ತಡೆಯುತ್ತದೆ. ಹಾಗಾಗಿ 2 ಮಾಗಿದ ಬಾಳೆಹಣ್ಣನ್ನು ನಯವಾದ ಪೇಸ್ಟ್ ಮಾಡಿಕೊಳ್ಳಿ. ಬಲಿಯದ ಬಾಳೆಹಣ್ಣನ್ನು ಸೇವಿಸಬೇಡಿ ಏಕೆಂದರೆ ಅದು ಚರ್ಮಕ್ಕೆ ಒಳ್ಳೆಯದಲ್ಲ ಕಾಲ್ಬೆರಳಿನ ಉಗುರುಗಳು ಮತ್ತು ಬದಿಗಳನ್ನು ಒಳಗೊಂಡಂತೆ ಎಲ್ಲಾ ಪಾದಗಳ ಮೇಲೆ ಪೇಸ್ಟ್  ಹಚ್ಚಿ. ಇದು 20 ನಿಮಿಷಗಳ ಕಾಲ ಇರಲಿ ಮತ್ತು ನಂತರ ನಿಮ್ಮ ಪಾದಗಳನ್ನು ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ಮಲಗುವ ಮುನ್ನ ಕನಿಷ್ಠ 2 ವಾರಗಳವರೆಗೆ ಇದನ್ನು ನಿಯಮಿತವಾಗಿ ಮಾಡುವುದರಿಂದ ಹಿಮ್ಮಡಿ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಜೇನು

ಇದನ್ನೂ ಓದಿ: ಕಣ್ಣಿನ ಆರೋಗ್ಯದಿಂದ ಜೀರ್ಣಶಕ್ತಿ ವೃದ್ಧಿಯವರೆಗೆ ಬಟಾಣಿ ಕಾಳಿನ ಆರೋಗ್ಯ ಪ್ರಯೋಜನಗಳು

ಜೇನುತುಪ್ಪವನ್ನು ನೈಸರ್ಗಿಕ ನಂಜುನಿರೋಧಕ ಎಂದು ಪರಿಗಣಿಸಲಾಗುತ್ತದೆ ಅದು ಬಿರುಕುಗೊಂಡ ಪಾದಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ತೇವಗೊಳಿಸುವ ಮತ್ತು ಚರ್ಮ ಒಣಗುವುದನ್ನು ತಡೆಯುವ ಉತ್ತಮ ಹ್ಯೂಮೆಕ್ಟಂಟ್ ಕೂಡ ಆಗಿದೆ. ಇದರ ಜೊತೆಯಲ್ಲಿ, ಜೇನುತುಪ್ಪದ ಹಿತವಾದ ಗುಣಗಳು ಸಹ ಚರ್ಮವನ್ನು  ಹೊಳೆಯಲು ಸಹಾಯ ಮಾಡುತ್ತದೆ.

1 ಕಪ್ ಜೇನು

ಬೆಚ್ಚಗಿನ ನೀರು

ಮಾಡುವ ವಿಧಾನ

1 ಕಪ್ ಜೇನುತುಪ್ಪವನ್ನು ಒಂದು ಟಬ್ ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ಪಾದಗಳನ್ನು  ಹಾಕಿ 20 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ನಿಮ್ಮ ಪಾದಗಳನ್ನು ಒಣಗಿಸಿ ಮತ್ತು ಮಾಯಿಶ್ಚರೈಸರ್ ಹಚ್ಚಿ.ಕೆಲವು ವಾರಗಳವರೆಗೆ ಮಲಗುವ ಮುನ್ನ ಇದನ್ನು ನಿಯಮಿತವಾಗಿ ಮಾಡಿ.

ಸಸ್ಯದ ಎಣ್ಣೆ

ಅಡುಗೆ ಎಣ್ಣೆಗಳನ್ನು ಚರ್ಮ ಸುಲಭವಾಗಿ ಹೀರುತ್ತದೆ. ಸಸ್ಯಜನ್ಯ ಎಣ್ಣೆಗಳು ವಿಟಮಿನ್ ಎ, ಡಿ, ಮತ್ತು ಇ ಅನ್ನು ಒಳಗೊಂಡಿರುವ ಪೋಷಕಾಂಶಗಳಿಂದ ಕೂಡಿದ್ದು ಇವೆಲ್ಲವೂ ಚರ್ಮವನ್ನು ನವೀಕರಿಸುತ್ತವೆ ಮತ್ತು ಹೊಸ ಕೋಶಗಳನ್ನು ಸೃಷ್ಟಿಸುವ ಮೂಲಕ ಬಿರುಕು ಬಿಟ್ಟ ಹಿಮ್ಮಡಿಯನ್ನು ಗುಣಪಡಿಸುತ್ತವೆ.

ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒಣಗಿಸಿಕೊಳ್ಳಿ. ಉಗುರುಗಳಿಗೆ ಮತ್ತು ಪಾದಗಳಿಗೆ ಎಣ್ಣೆಯನ್ನು ಹಚ್ಚಿ ಸ್ವಚ್ಛವಾದ ಆರಾಮದಾಯಕ ಸಾಕ್ಸ್ ಧರಿಸಿ ಮತ್ತು ರಾತ್ರಿಯಿಡೀ ಬಿಡಿ. ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸಲು ಮಲಗುವ ಮುನ್ನ ಇದನ್ನು ಪ್ರತಿದಿನ ಪುನರಾವರ್ತಿಸಿ.

ಇದನ್ನೂ ಓದಿ: ತ್ವಚೆಯ ಆರೈಕೆಯಿಂದ ಹೃದಯದ ಆರೋಗ್ಯದವರೆಗೆ ರೆಡ್ ವೈನ್ ಪ್ರಯೋಜನಗಳು ಒಂದೆರೆಡಲ್ಲ..

ವ್ಯಾಸಲೀನ್ ಮತ್ತು ನಿಂಬೆ ರಸ ನಿಂಬೆಯ ಆಮ್ಲೀಯ ಗುಣಗಳು, ವ್ಯಾಸಲೀನ್‌ನ ಜೊತೆ  ಸೇರಿಕೊಂಡರೆ, ಒಣ ಚರ್ಮ ಮತ್ತು ಬಿರುಕುಗೊಂಡ ಪಾದಗಳನ್ನು ನಿವಾರಿಸಲು ಸುಲಭವಾಗುತ್ತದೆ.

1 ಟೀಸ್ಪೂನ್ ವ್ಯಾಸಲೀನ್

4-5 ಹನಿ ನಿಂಬೆ ರಸ

ಬೆಚ್ಚಗಿನ ನೀರು

ನಿಮ್ಮ ಪಾದಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸುಮಾರು 15 ನಿಮಿಷಗಳ ಕಾಲ ಇಡಿ. ತೊಳೆದು ಒಣಗಿಸಿಕೊಳ್ಳಿ. 1 ಟೀಸ್ಪೂನ್ ವ್ಯಾಸಲೀನ್ ಮತ್ತು ಕೆಲವು ಹನಿ ನಿಂಬೆ ರಸವನ್ನು ಮಿಶ್ರಣವನ್ನು ಮಾಡಿ. . ಈ ಮಿಶ್ರಣವನ್ನು ನಿಮ್ಮ ಹಿಮ್ಮಡಿ ಮತ್ತು ಪಾದಗಳ ಇತರ ಭಾಗಗಳ ಮೇಲೆ ಚೆನ್ನಾಗಿ ಹಚ್ಚಿ ರಾತ್ರಿಯಿಡೀ ಒಂದು ಸಾಕ್ಸ್ ಧರಿಸಿ, ನಂತರ ಬೆಳಿಗ್ಗೆ ತೊಳೆಯಿರಿ. ನಿಯಮಿತವಾಗಿ ಮಲಗುವ ಮುನ್ನ ಈ ಸರಳ ವಿಧಾನವನ್ನು ಮಾಡಿ.
Published by:Sandhya M
First published: