Sleep Tips: ಸಿಕ್ಕಾಪಟ್ಟೆ ಗೊರಕೆ ಹೊಡಿತೀರಾ? ಅದ್ರಿಂದ ತಪ್ಪಿಸಿಕೊಳ್ಳೋಕೆ ಹೀಗೆ ಮಾಡಿ

ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮತ್ತು ಈ ಸಲಹೆಗಳನ್ನು ಪಾಲಿಸುವುದರಿಂದ ಗೊರಕೆ ಸಮಸ್ಯೆ ಪರಿಹಾರ ಆಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಗೊರಕೆ (Snoring) ಹೊಡೆಯುವ ಸಮಸ್ಯೆಯಿಂದ ಮುಜುಗರಕ್ಕೆ ಒಳಗಾಗಿರುವ ಅಥವಾ ಸಮಸ್ಯೆಗಳನ್ನು ಎದುರಿಸಿರುವ ವ್ಯಕ್ತಿಗಳಲ್ಲಿ ನೀವೂ ಒಬ್ಬರಾಗಿರಬಹುದು, ಅಥವಾ ಅಂತವರು ನಿಮ್ಮ ಪರಿಚಿತರಲ್ಲೂ ಇರಬಹುದು. ಸಾಮಾನ್ಯವಾಗಿ ಗೊರಕೆಗೆ ಸಂಬಂಧಿಸಿದ ಜೋಕ್‍ಗಳಿಗೆ ನಾವೆಲ್ಲರೂ ನಗುತ್ತೇವೆ, ಹಾಗಂತ ಇದು ನಿರ್ಲಕ್ಷ್ಯ ಮಾಡುವ ಸಂಗತಿಯಂತೂ ಖಂಡಿತಾ ಅಲ್ಲ. “ಗೊರಕೆ ದಾಂಪತ್ಯದಲ್ಲಿ ನಿಜವಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ” ಎನ್ನುತ್ತಾರೆ ಟೆಕ್ಸಾಸ್‍ನ ಆಸ್ಟಿನ್‍ನಲ್ಲಿರುವ ಕ್ಯಾಪಿಟಲ್ ಒಟೋಲರಂಗೋಲಾಜಿಯಲ್ಲಿನ ಒಟೋಲರಂಗೋಲಾಜಿಸ್ಟ್ ಮತ್ತು ಗೊರಕೆ ತಜ್ಞ ಡೇನಿಯಲ್ ಪಿ ಸ್ಲೋಟರ್.


ವೈದ್ಯರ ಸಲಹೆ ಪಡೆಯದೆ, ಗೊರಕೆ ತಡೆಯಲು ಸ್ಪ್ರೇ ಮತ್ತು ಮಾತ್ರೆಗಳನ್ನು ಸೇವಿಸಬೇಡಿ ಎಂದು ಎಚ್ಚರಿಕೆ ನೀಡುತ್ತಾರೆ ನ್ಯೂ ಜೆರ್ಸಿಯ ಎಡಿಸನ್‍ನ ಜೆಎಫ್‍ಕೆ ಮೆಡಿಕಲ್ ಸೆಂಟರ್‍ನ ಕ್ಲಿನಿಕಲ್ ನ್ಯೂರೋ ಸೈಕಾಲಜಿ ಮತ್ತು ಸ್ಲೀಪ್ ಮೆಡಿಸಿನ್‍ನ ಪ್ರೋಗ್ರಾಮ್ ಡೈರೆಕ್ಟರ್ ಆಗಿರುವ ಸುದಾಂಶು ಚಕ್ರವರ್ತಿ. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮತ್ತು ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸುವುದರಿಂದ ಗೊರಕೆ ಸಮಸ್ಯೆ ಪರಿಹಾರ ಆಗಬಹುದು.


1. ಮಲಗುವ ಶೈಲಿಯನ್ನು ಬದಲಾಯಿಸಿ
ನೀವು ಬೆನ್ನಿನ ಮೇಲೆ ಮಲಗುವುದರಿಂದ, ನಿಮ್ಮ ನಾಲಗೆಯ ಬುಡ ಮತ್ತು ಮೃದು ಭಾಗ , ಗಂಟಲಿನ ಹಿಂಭಾಗದ ಗೋಡೆಯೆಡೆ ಬಾಗಿರುತ್ತದೆ, ಇದರಿಂದ ನಿದ್ರೆಯ ಸಮಯದಲ್ಲಿ ಕಂಪನದ ಶಬ್ಧ ಉಂಟು ಮಾಡುತ್ತದೆ. ಬದಿಗೆ ತಿರುಗಿ ಮಲಗಿದರೆ ಅದನ್ನು ತಡೆಯಲು ಸಹಾಯ ಆಗಬಹುದು. ನಿಮ್ಮ ಪಾಯಿಜಾಮದ ಹಿಂದೆ ಟೆನ್ನಿಸ್ ಬಾಲ್ ಅಂಟಿಸುವುದರಿಂದ, ಬೆನ್ನಿನ ಮೇಲೆ ಮಲಗದಂತೆ ಮಾಡಬಹುದು ಎನ್ನುತ್ತಾರೆ ಚಕ್ರವರ್ತಿ. ನಿದ್ರೆಯ ಶೈಲಿಯನ್ನು ಬದಲಾಯಿಸಿದರೂ ಗೊರಕೆ ಮುಂದುವರೆದರೆ ,ಅದಕ್ಕೆ ಅಬ್‍ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಒಂದು ಕಾರಣ ಆಗಿರಬಹುದು, ಅಂತಹ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡಿ ಎನ್ನುತ್ತಾರೆ ಅವರು.


ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಸಖತ್ ಸುದ್ದಿ…ಬಂದಿದೆ Alcohol Ice Cream! ತಿಂದ್ರೆ ಕಿಕ್ ಹೊಡೆಯೋದು ಗ್ಯಾರಂಟಿ


2. ತೂಕ ಇಳಿಸಿ
ತೂಕ ಇಳಿಸುವುದರಿಂದ ಕೆಲವು ಮಂದಿಗೆ ಗೊರಕೆಯಿಂದ ಮುಕ್ತಿ ಸಿಗಬಹುದು , ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. “ಸೊಣಕಲ ವ್ಯಕ್ತಿಗಳು ಕೂಡ ಗೊರಕೆ ಗೊಡೆಯುತ್ತಾರೆ” ಎನ್ನುತ್ತಾರೆ ಸ್ಲೋಟರ್.
ನಿಮ್ಮ ತೂಕದಲ್ಲಿ ಏರಿಕೆಯಾದ ಬಳಿಕ ಗೊರಕೆ ಹೊಡೆಯುವುದು ಆರಂಭವಾಗಿದ್ದರೆ, ತೂಕ ಇಳಿಸುವುದರಿಂದ ಅದು ನಿಲ್ಲಬಹುದು,
3. ಮದ್ಯಪಾನ ನಿಲ್ಲಿಸಿ
ಆಲ್ಕೋಹಾಲ್ ಮತ್ತು ಸೆಡಕ್ಟಿವ್‍ಗಳು ಗಂಟಲಿನ ಹಿಂಭಾಗದಲ್ಲಿರುವ ಸ್ನಾಯುಗಳ ವಿಶ್ರಾಂತಿ ಟೋನ್ ಅನ್ನು ಕಡಿಮೆ ಮಾಡುತ್ತವೆ.ಅದರಿಂದಾಗಿ ಗೊರಕೆ ಹೊಡೆಯುವ ಸಾಧ್ಯತೆ ಇದೆ. “ಮಲಗುವ 4 ರಿಂದ 5 ಗಂಟೆಗೆ ಮುಂಚೆ ಮದ್ಯಪಾನ ಮಾಡುವುದರಿಂದ ಗೊರಕೆ ಇನ್ನಷ್ಟು ಹೆಚ್ಚುತ್ತದೆ” ಎನ್ನುತ್ತಾರೆ ಚಕ್ರವರ್ತಿ. ಅವರು ಹೇಳುವ ಪ್ರಕಾರ” ಸಾಮಾನ್ಯವಾಗಿ ಗೊರಕೆ ಹೊಡೆಯದ ಜನರು ಕೂಡ ಮಧ್ಯಪಾನ ಮಾಡಿದ ಬಳಿಕ ಗೊರಕೆ ಹೊಡೆಯುತ್ತಾರೆ” .
4. ಉತ್ತಮ ನಿದ್ರೆಯ ಅಭ್ಯಾಸ
ಸರಿಯಾಗಿ ನಿದ್ರೆ ಮಾಡದೇ ಇರುವ ಅಭ್ಯಾಸ ಕೂಡ , ಮದ್ಯಪಾನ ಸೇವನೆಯಂತದ್ದೇ ಪರಿಣಾಮ ಹೊಂದಿರುತ್ತದೆ ಎನ್ನುತ್ತಾರೆ ಸ್ಲೋಟರ್. ಉದಾಹರಣೆಗೆ , ಸರಿಯಾಗಿ ನಿದ್ರಿಸದೆ ಅಧಿಕ ಗಂಟೆಗಳ ಕಾಲ ಕೆಲಸ ಮಾಡುವುದು. “ ನೀವು ಕಷ್ಟಪಟ್ಟು ಗಾಢವಾಗಿ ನಿದ್ರಿಸುತ್ತೀರಿ ಮತ್ತು ಸ್ನಾಯುಗಳು ಸಡಿಲವಾಗಿ, ಗೊರಕೆ ಉಂಟಾಗಲು ಕಾರಣವಾಗುತ್ತವೆ” ಎನ್ನುತ್ತಾರೆ ಸ್ಲೋಟರ್.
5. ಮೂಗಿನ ಮಾರ್ಗಗಳನ್ನು ತೆರೆಯಿರಿ
ಗೊರಕೆ ಮೂಗಿನಿಂದ ಆರಂಭವಾಗುತ್ತಿದ್ದರೆ, ಮೂಗಿನ ಪ್ಯಾಸೆಜ್‍ಗಳನ್ನು ತೆರೆಯುವುದು ಸಹಾಯ ಮಾಡಬಲ್ಲದು. ಇದು ಗಾಳಿ ನಿಧಾನವಾಗಿ ಚಲಿಸಲು ಅವಕಾಶ ಮಾಡಿಕೊಡುತ್ತದೆ ಎನ್ನುತ್ತಾರೆ ಸ್ಲೋಟರ್. ಶೀತದಿಂದಾಗಿ ನಿಮ್ಮ ಮೂಗು ಮುಚ್ಚಿ ಹೋಗಿದ್ದರೆ ಅಥವಾ ಕಿರಿದಾಗಿದ್ದರೆ, ವೇಗವಾಗಿ ಚಲಿಸುವ ಗಾಳಿ ಗೊರಕೆಗೆ ಕಾರಣವಾಗುತ್ತದೆ. ಮಲಗುವ ಮುನ್ನ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಮೂಗಿನ ಮಾರ್ಗಗಳನ್ನು ತೆರೆಯಲು ಸಹಾಯ ಆಗಬಹುದು ಎನ್ನುತ್ತಾರೆ ಸ್ಲೋಟರ್. ಉಪ್ಪು ನೀರಿನಿಂದ ಮೂಗಿನ ಹೊಳ್ಳೆಗಳನ್ನು ಸ್ವಚ್ಛಗೊಳಿಸಲು ನೆಟಿ ಪಾಟ್ ಬಳಸುವುದು ಮತ್ತು ಸೇಸಲ್ ಸ್ಟ್ರಿಪ್ಸ್ ಬಳಕೆ ಕೂಡ ಗೊರಕೆ ತಡೆಯಲು ಸಹಾಯ ಮಾಡಬಹುದು.
6. ದಿಂಬುಗಳನ್ನು ಬದಲಾಯಿಸಿ
ನಿಮ್ಮ ಮಲಗುವ ಕೋಣೆ ಮತ್ತು ದಿಂಬುಗಳಲ್ಲಿ ಇರುವ ಅಲರ್ಜಿಗಳು ಗೊರಕೆಗೆ ಕಾರಣ ಆಗಬಹುದು. ನಿಮ್ಮ ಮಲಗುವ ಕೋಣೆಯ ಫ್ಯಾನ್‍ಗಳನ್ನು ಸ್ವಚ್ಛಗೊಳಿಸಿ ಮತ್ತು ದಿಂಬುಗಳನ್ನು ಬದಲಾಯಿಸಿ(ಕನಿಷ್ಟ ಆರು ತಿಂಗಳಿಗೊಮ್ಮೆ).
ದಿಂಬುಗಳಲ್ಲಿ ಸಂಗ್ರಹ ಆಗುವ ಧೂಳಿನ ಕಣಗಳು ಅಲರ್ಜಿಗೆ ಕಾರಣವಾಗಿ ಗೊರಕೆ ಉಂಟಾಗಬಹುದು. ಸಾಕು ಪ್ರಾಣಿಗಳನ್ನು ನಿಮ್ಮ ಹಾಸಿಗೆಯ ಮೇಲೆ ಮಲಗಲು ಬಿಡುವುದು ಮತ್ತೊಂದು ಕಾರಣ.
7. ಚೆನ್ನಾಗಿ ನೀರು ಕುಡಿಯಿರಿ
ಚೆನ್ನಾಗಿ ದ್ರವ ಆಹಾರ ಸೇವಿಸಿ. “ದೇಹದಲ್ಲಿ ನಿರ್ಜಲೀಕರಣ ಆದಾಗ ಮೂಗು ಮತ್ತು ಅದರೊಳಗಿನ ಮೃದು ಭಾಗಕ್ಕೆ ಸೃವಿಸುವಿಕೆಯು ಅಂಟಿಕೊಳ್ಳುತ್ತದೆ” ಎನ್ನುತ್ತಾರೆ ಸ್ಲೋಟರ್. ಅವರ ಪ್ರಕಾರ ಅದರಿಂದ ಗೊರಕೆ ಹೆಚ್ಚಾಗುತ್ತದೆ. ಇನ್‍ಸ್ಟಿಟ್ಯೂಟ್ ಆಫ್ ಮೆಡಿಸಿನ್ ಪ್ರಕಾರ, ಆರೋಗ್ಯವಂತ ಮಹಿಳೆ ದಿನಕ್ಕೆ 11 ಲೋಟ ನೀರು ಮತ್ತು ಪುರುಷ 16 ಲೋಟ ನೀರು ಕುಡಿಯಬೇಕು.

Published by:Soumya KN
First published: