• Home
  • »
  • News
  • »
  • lifestyle
  • »
  • Food Recipe: ನಿನ್ನೆಯ ಅನ್ನ ಮಿಕ್ಕಿದ್ಯಾ? ಹಾಗಿದ್ರೆ ಈ ಅನ್ನದ ಆರು ಟೇಸ್ಟಿ ರೆಸಿಪಿ ಟ್ರೈ ಮಾಡಿ

Food Recipe: ನಿನ್ನೆಯ ಅನ್ನ ಮಿಕ್ಕಿದ್ಯಾ? ಹಾಗಿದ್ರೆ ಈ ಅನ್ನದ ಆರು ಟೇಸ್ಟಿ ರೆಸಿಪಿ ಟ್ರೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮನೆಯಲ್ಲಿ ಅನ್ನ ಉಳಿದಿದ್ದರೆ, ಅದರಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಅಂತಹ ಕೆಲವು ಖಾದ್ಯಗಳ ರೆಸಿಪಿಗಳನ್ನು ಫುಡ್ ವ್ಲಾಗರ್ ಪಾರುಲ್ ಅವರು ತಮ್ಮ ‘ಕುಕ್ ವಿತ್ ಪಾರುಲ್’ ಯೂಟ್ಯೂಬ್ ಚಾನೆಲ್‍ನಲ್ಲಿ ಹಂಚಿಕೊಂಡಿದ್ದೇವೆ.

  • Share this:

ಬೆಳಗೆದ್ದು (Morning) ಕಚೇರಿಗೆ (Office) ಮತ್ತು ಶಾಲೆಗೆ (School) ಡಬ್ಬಿಯನ್ನು (Box) ಸಿದ್ಧ ಪಡಿಸುವುದು ಅಂದು ಕೊಂಡಷ್ಟು ಸುಲಭದ ಕೆಲಸವಲ್ಲ. ನಿತ್ಯವೂ ಒಂದೇ ರೀತಿಯ ತಿನಿಸನ್ನು ಡಬ್ಬಿಗೆ ಕೊಂಡೊಯ್ಯುವುದು ಬೇಸರ ತರಿಸುತ್ತದೆ, ವಿಭಿನ್ನ ಬಗೆ ತಿನಿಸುಗಳಿಗೆ ಡಬ್ಬಿಯೊಳಗೆ ಜಾಗ ಸಿಕ್ಕರೆ, ಊಟದ (Lunch) ವೇಳೆ ಉತ್ಸಾಹ ಮತ್ತು ಆನಂದ ಇರುತ್ತದೆ ಅಲ್ಲವೇ? ಆದರೆ, ಬೆಳಗ್ಗೆ ಸಿಗುವ ಕಡಿಮೆ ಅವಧಿಯಲ್ಲಿ ನಿತ್ಯವೂ ತರಾವರಿ ತಿನಿಸುಗಳನ್ನು ತಯಾರಿಸುವ ಸಾಹಸ ಮಾಡುವುದು ಕಷ್ಟ ಎನ್ನುತ್ತೀರಾ? ಮನೆಯಲ್ಲಿ (Home) ಅನ್ನ (Rice) ಉಳಿದಿದ್ದರೆ, ಅದರಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. 


1. ಬಟಾಣಿ ಪನೀರ್ ಫ್ರೈಡ್ ರೈಸ್
ಈ ಖಾದ್ಯವನ್ನು ತಯಾರಿಸಲು ನಮಗೆ ಬೇಕಾಗಿರುವ ಸಾಮಾಗ್ರಿಗಳು - ಬೇಯಿಸಿದ ಅನ್ನ, ತುಪ್ಪ, ಪನೀರ್, ಹಸಿರು ಬಟಾಣಿ, ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪಲಾವ್ ಎಲೆ, ಕರಿ ಮೆಣಸಿನಕಾಯಿ, ಲವಂಗ, ಏಲಕ್ಕಿ, ಜೀರಿಗೆ ಎಲೆ, ಕೆಂಪು ಮೆಣಸಿನಕಾಯಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು.


ಈ ಖಾದ್ಯವನ್ನು ತಯಾರಿಸಲು ಹೆಚ್ಚಿನ ಶ್ರಮ ಬೇಕಿಲ್ಲ. ಎಲ್ಲಾ ಮಸಾಲೆಗಳನ್ನು ಮೊದಲು ತುಪ್ಪದಲ್ಲಿ ಹದವಾಗಿ ಬಾಡಿಸಿ, ಬಳಿಕ ಅದಕ್ಕೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಹೆಚ್ಚಿನ ಈರುಳ್ಳಿಯನ್ನು ಹಾಕಿ ಹುರಿಯಿರಿ. ನಂತರ ಅದಕ್ಕೆ ಪನೀರ್ ಮತ್ತು ಬಟಾಣಿಯನ್ನು ಹಾಕಿ ಚೆನ್ನಾಗಿ ಬಾಡಿಸಿ. ಗರಂ ಮಸಾಲಾ, ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ.


2. ಈರುಳ್ಳಿ ಅನ್ನ
ಬೇಯಿಸಿದ ಅನ್ನ, ತುಪ್ಪ, ಜೀರಿಗೆ, ಶುಂಠಿ, ಹಸಿರು ಮೆಣಸಿನಕಾಯಿ, ಕರಿ ಬೇವಿನ ಎಲೆ, ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಅಚ್ಚ ಖಾರದ ಪುಡಿ, ಅರಶಿನ, ಕರಿ ಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಇವಿಷ್ಟು ಸಾಮಾಗ್ರಿಗಳಿದ್ದರೆ ಈರುಳ್ಳಿ ಅನ್ನವನ್ನು ತಯಾರಿಸಬಹುದು.


ಇದನ್ನೂ ಓದಿ:  Breakfast Recipe: ಅಕ್ಕಿ, ಉದ್ದಿನ ಬೇಳೆಯನ್ನು ರುಬ್ಬದೇ ಕೂಡ ಮೃದುವಾದ ಇಡ್ಲಿ ತಯಾರಿಸಬಹುದು: ಹೇಗೆ ಅಂತೀರಾ, ಇಲ್ಲಿದೆ ನೋಡಿ


ಈರುಳ್ಳಿ ಅನ್ನವನ್ನು ತಯಾರಿಸಲು ಮೊದಲಿಗೆ, ತುಪ್ಪವನ್ನು ಬಿಸಿ ಮಾಡಿಕೊಂಡು, ಮಸಾಲೆಗಳನ್ನು ಅದಕ್ಕೆ ಹಾಕಿ ಹದವಾಗಿ ಬಾಡಿಸಿ. ಬಳಿಕ ಶುಂಠಿ, ಕತ್ತರಿಸಿದ ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆ, ಹೆಚ್ಚಿದ ಈರುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಅಚ್ಚ ಖಾರದ ಪುಡಿ, ಅರಶಿನ ಮತ್ತು ಕರಿ ಮೆಣಸಿನ ಪುಡಿ ಸೇರಿಸಿ ಕಲಸಿ. ಕೊನೆಯದಾಗಿ ಅನ್ನವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನುಣ್ಣಗೆ ಹೆಚ್ಚಿದ ತಾಜಾ ಕೊತ್ತಂಬರಿ ಸೊಪ್ಪಿನ ಎಲೆಗಳಿಂದ ಅಲಂಕರಿಸಿ.


3. ಶೆಜ್ವಾನ್ ಫ್ರೈಡ್ ರೈಸ್
ಇದಕ್ಕಾಗಿ ನಮಗೆ ಬೇಕಾಗಿರುವ ಸಾಮಾಗ್ರಿಗಳು – ಬೇಯಿಸಿದ ಅನ್ನ, ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹಸಿರು ಮೆಣಸಿನಕಾಯಿ, ಫ್ರೆಂಚ್ ಬೀನ್ಸ್ , ಕ್ಯಾಪ್ಸಿಕಪ್, ಕ್ಯಾಬೆಜ್, ಕ್ಯಾರೆಟ್, ರುಚಿಗೆ ತಕ್ಕಷ್ಟು ಉಪ್ಪು, ಕರಿ ಮೆಣಸಿನ ಪುಡಿ ಮತ್ತು ಶೆಜ್ವಾನ್ ಸಾಸ್.


ಮೊದಲಿಗೆ ಎಣ್ಣೆಯನ್ನು ಬಿಸಿ ಮಾಡಿಕೊಂಡು, ಕತ್ತರಿಸಿದ ತರಕಾರಿಗಳನ್ನು ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು, ಕರಿ ಮೆಣಸಿನ ಪುಡಿ ಮತ್ತು ಶೇಜ್ವಾನ್ ಸಾಸ್ ಸೇರಿಸಿ ಚೆನ್ನಾಗಿ ಕಲಸಿ. ನಂತರ ಅನ್ನವನ್ನು ಸೇರಿಸಿ ಕಲಸಿ. ಬಳಿಕ ಕತ್ತರಿಸಿದ ಸ್ಪ್ರಿಂಗ್ ಆನಿಯನ್‍ನಿಂದ ಅಲಂಕರಿಸಿ.


4. ತರಕಾರಿ ಪಲಾವ್
ಈ ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು - ಬೇಯಿಸಿದ ಅನ್ನ, ತುಪ್ಪ, ಪಲಾವ್ ಎಲೆ, ಏಲಕ್ಕಿ, ಕರಿ ಮೆಣಸಿನ ಪುಡಿ, ದಾಲ್ಚಿನಿ, ಜೀರಿಗೆ , ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ, ಹೂಕೋಸು, ಕ್ಯಾರೆಟ್, ಕ್ಯಾಪ್ಸಿಕಮ್, ಫ್ರೆಂಚ್ ಬೀನ್ಸ್, ಹಸಿರು ಬಟಾಣಿ, ಉಪ್ಪು, ಗರಂ ಮಸಾಲ ಮತ್ತು ಕೊತ್ತಂಬರಿ ಸೊಪ್ಪು.


ತುಪ್ಪವನ್ನು ಬಿಸಿ ಮಾಡಿ ಮತ್ತು ಮಸಾಲೆಗಳನ್ನು ಅದರಲ್ಲಿ ಹದವಾಗಿ ಬಾಡಿಸಿ. ಬಳಿಕ ಕತ್ತರಿಸಿದ ತರಕಾರಿಗಳು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಬೇಯಿಸಿ. ಗರಂ ಮಸಾಲ ಮತ್ತು ತುಪ್ಪ ಸೇರಿಸಿ. ನಂತರ ಅನ್ನವನ್ನು ಸೇರಿಸಿ ಚೆನ್ನಾಗಿ ಕಲಸಿ. ವೆಜ್ ಪುಲಾವ್ ಸಿದ್ಧವಾಗುತ್ತದೆ.


5. ಮೊಸರನ್ನ
ಇದನ್ನು ತಯಾರಿಸಲು ಅನ್ನ, ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವಿನ ಎಲೆ, ಹಿಂಗು, ಶುಂಠಿ, ಗೋಡಂಬಿ, ಹಸಿರು ಮೆಣಸಿನಕಾಯಿ, ಈರುಳ್ಳಿ, ಕೆಂಪು ಮೆಣಸಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪು. ಮೊಸರು ಮತ್ತು ಅನ್ನವನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಕೊಳ್ಳಿ. ಉಳಿದ ಸಾಮಾಗ್ರಿಗಳನ್ನು ಹಾಕಿ ಒಗ್ಗರಣೆ ಕೊಡಿ. ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.


ಇದನ್ನೂ ಓದಿ: Egg Drop Curry: ಮೊಟ್ಟೆ ಒಡೆದು ಸಾರು ಮಾಡಿ ನೋಡಿ! ಆಮೇಲೆ ಟೇಸ್ಟ್ ಹೇಗಿದೆ ಎಂದು ಹೇಳಿ


6. ಕಡಲೇಬೇಳೆ ಪಲಾವ್
ಇದನ್ನು ತಯಾರಿಸಲು ಅನ್ನ, ತುಪ್ಪ, ಸಾಸಿವೆ, ಜೀರಿಗೆ, ಹಿಂಗ್, ಪಲಾವ್ ಎಲೆ, ಲವಂಗ, ಕರಿ ಮೆಣಸಿನ ಪುಡಿ, ಏಲಕ್ಕಿ, ದಾಲ್ಚಿನ್ನಿ, ಈರುಳ್ಳಿ, ಅಚ್ಚ ಖಾರದ ಪುಡಿ, ಹಸಿರು ಮೆಣಸಿನ ಕಾಯಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಆಲೂಗಡ್ಡೆ, ಕಡಲೇ ಬೇಳೆ, ಅರಶಿನ, ಜೀರಿಗೆ ಪುಡಿ, ಕೊತ್ತಂಬರಿ ಬೀಜದ ಪುಡಿ, ಗರಂ ಮಸಾಲಾ, ಉಪ್ಪು, ಹುಣಸೆ ಹಣ್ಣಿನ ರಸ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು. ಎಲ್ಲಾ ಸಾಮಾಗ್ರಿಗಳನ್ನು ಕುಕ್ಕರಿನಲ್ಲಿ ಬಾಡಿಸಿ, ಅನ್ನ ಮತ್ತು ನೀರು ಸೇರಿಸಿ ಕುಕ್ಕರಿನಲ್ಲಿ ಮಂದ ಉರಿಯಲ್ಲಿ ಒಂದು ಸೀಟಿ ಬರುವವರೆಗೆ ಬೇಯಿಸಿ.

Published by:Ashwini Prabhu
First published: