Acidity Remedy: ಆ್ಯಸಿಡಿಟಿ ನಿವಾರಣೆಗೆ 7 ಸುಲಭ ಮನೆಮದ್ದುಗಳು ಇಲ್ಲಿವೆ ನೋಡಿ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Easy Home Remedy for Gas, Acidity, Constipation: ಗ್ಯಾಸ್, ಉಸಿರಾಟದ ತೊಂದರೆ, ಹೊಟ್ಟೆ ನೋವು ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಸಾಮಾನ್ಯವಾಗಿ ಹೆಚ್ಚಿನವರಿಗೆ ಕಾಣಿಸಿಕೊಳ್ಳುವ ಸಮಸ್ಯೆ. ಗ್ಯಾಸ್ ಸಮಸ್ಯೆಯನ್ನು ತಡೆಗಟ್ಟಲು 7 ಮನೆ ಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Share this:

    Home remedy for acidity: ನಮ್ಮ ನೆಚ್ಚಿನ ಊಟ ಕಣ್ಣ ಮುಂದೆ ಇದ್ದಾಗ ಅದನ್ನು ತಿನ್ನದೇ ಇರುವುದು ಸಾಧ್ಯವಿಲ್ಲ. ಮತ್ತು ನಾವು ಅದನ್ನು ಅತಿಯಾಗಿ ತಿಂದರೆ ಗ್ಯಾಸ್ ಸಮಸ್ಯೆ ಆಗುವುದು ಖಂಡಿತಾ. ಹೊಟ್ಟೆಯ ಗ್ಯಾಸ್ಟ್ರಿಕ್ (Gastritis)  ಗ್ರಂಥಿಗಳು ಹಲವಾರು ಆಮ್ಲಗಳನ್ನು (Acidic Foods) ಸ್ರವಿಸಿದಾಗ, ಅದರಿಂದಾಗಿ ಗ್ಯಾಸ್ , ಉಸಿರಾಟದ ತೊಂದರೆ, ಹೊಟ್ಟೆ ನೋವು ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಸಾಮಾನ್ಯವಾಗಿ ಹೆಚ್ಚಿನವರಿಗೆ ಕಾಣಿಸಿಕೊಳ್ಳುವ ಸಮಸ್ಯೆ. ಗ್ಯಾಸ್ ಸಮಸ್ಯೆಯನ್ನು ತಡೆಗಟ್ಟಲು 7 ಮನೆ ಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ.


    1. ಮಜ್ಜಿಗೆ (Buttermilk): ಆಯುರ್ವೇದದಲ್ಲಿ (Ayurveda) ಮಜ್ಜಿಗೆಯನ್ನು ಸಾತ್ವಿಕ ಆಹಾರ ಎಂದು ಪರಿಗಣಿಸಲಾಗಿದೆ. ನಿಮಗೆ ಆ್ಯಸಿಡಿಟಿಯ ಅನುಭವ ಆದಾಗ ಮಜ್ಜಿಗೆ ಕುಡಿಯಿರಿ. ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಇದೆ, ಅದು ಗ್ಯಾಸ್ಟ್ರಿಕ್ ಆ್ಯಸಿಡಿಟಿಯ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಸ್ವಲ್ಪ ಕುಟ್ಟಿದ ಕರಿ ಮೆಣಸಿನ ಪುಡಿ ಅಥವಾ ಕೊತ್ತಂಬರಿ ಸೊಪ್ಪು ಹಾಕಿ ಸೇವಿಸಿದರೆ ಫಲಿತಾಂಶ ಇನ್ನೂ ಉತ್ತಮವಾಗಿರುತ್ತದೆ.


    2. ಲವಂಗ (Clove): ಲವಂಗಗಳು ಕಾರ್ಮೆಟಿವ್ ಪರಿಣಾಮವನ್ನು ಹೊಂದಿವೆ. ಅವು ಜೀರ್ಣಾಂಗವ್ಯೂಹದಲ್ಲಿ ಗ್ಯಾಸ್‍ನ ಬೆಳವಣಿಗೆಯನ್ನು ತಡೆಯುತ್ತದೆ. ಕಿಡ್ನಿ ಬೀನ್ಸ್ ಅಥವಾ ಉದ್ದಿನ ಬೇಳೆಯ ಅಡುಗೆಗಳನ್ನು ತಯಾರಿಸುವಾಗ ಅದಕ್ಕೆ ಲವಂಗಗಳನ್ನು ಸೇರಿಸಲು ಮರೆಯದಿರಿ.


    3. ಜೀರಿಗೆ (Cumin): ಜೀರಿಗೆಯು ಜೀರ್ಣ ಕ್ರಿಯೆಗೆ ಮತ್ತು ನೋವು ನಿವಾರಣೆಗೆ ಅತ್ಯುತ್ತಮ. ಪ್ರತೀ ಬಾರಿ ಊಟ ಮಾಡಿದ ಬಳಿಕ, ಕೊಂಚ ಪುಡಿ ಮಾಡಿದ ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ ಅಥವಾ ಒಂದು ಲೋಟ ನೀರಿಗೆ , ಒಂದು ಚಮಚ ಜೀರಿಗೆಯನ್ನು ಹಾಕಿ ಕುದಿಸಿ, ಕುಡಿಯಿರಿ.


    4. ಆ್ಯಪಲ್ ಸೈಡರ್ ವಿನೇಗರ್ (Apple Cider Vinegar): ಆ್ಯಸಿಡ್ ರಿಫ್ಲಕ್ಸ್ ಆಗಲು ಮುಖ್ಯ ಕಾರಣ ಹೊಟ್ಟೆಯ ಆಮ್ಲ ಕಡಿಮೆ ಪ್ರಮಾಣದಲ್ಲಿರುವುದು. ಅದಕ್ಕೆ ಪರಿಹಾರ ಆ್ಯಪಲ್ ಸೈಡರ್ ವಿನೇಗರ್. ಆ್ಯಸಿಡಿಟಿ ನಿವಾರಣೆಗೆ, ಒಂದು ಲೋಟ ನೀರಿಗೆ ಎರಡು ಚಮಚ ಫಿಲ್ಟರ್ ಮಾಡದ ಆ್ಯಪಲ್ ಸೈಡರ್ ವಿನೇಗರ್ ಹಾಕಿ, ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಿರಿ.


    5. ಬಾಳೆಹಣ್ಣು (Banana): ಬಾಳೆಹಣ್ಣಿನಲ್ಲಿ ನೈಸರ್ಗಿಕ ಅಂಟಾಸಿಡ್‍ಗಳು ಹೇರಳವಾಗಿದೆ. ಆ್ಯಸಿಡ್ ರಿಫ್ಲಕ್ಸನ್ನು ತಡೆಯಲು ಸಹಾಯ ಮಾಡುತ್ತದೆ. ಆಮ್ಲೀಯತೆಯನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿವಾರಿಸಲು ನಿತ್ಯವೂ ಒಂದು ಬಾಳೆ ಹಣ್ಣು ತಿನ್ನಿರಿ.


    6. ದಾಲ್ಚಿನ್ನಿ (Cinnamon): ಇದು ನೈಸರ್ಗಿಕ ಅಂಟಾಸಿಡ್‍ನಂತೆ ಕಾರ್ಯ ನಿರ್ವಹಿಸಿ, ಜೀರ್ಣಕ್ರೀಯೆ ಮತ್ತು ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಿ , ಹೊಟ್ಟೆಗೆ ಆರಾಮ ನೀಡುತ್ತದೆ. ಜೀರ್ಣಾಂಗ ವ್ಯೂಹದ ಸೋಂಕನ್ನು ಸರಿ ಮಾಡಲು ದಾಲ್ಚಿನ್ನಿ ಚಹಾವನ್ನು ಸೇವಿಸಿ. ದಾಲ್ಚಿನ್ನಿ ಪೌಷ್ಟಿಕತೆಯ ಶಕ್ತಿ ಕೇಂದ್ರದಂತಿದ್ದು, ಅತ್ಯಂತ ಆರೋಗ್ಯದಾಯಕ.


    ಇದನ್ನೂ ಓದಿ: Rice Tea: ಬ್ರೌನ್ ರೈಸ್ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ


    7. ತುಳಸಿ ಎಲೆಗಳು (Basil): ತುಳಸಿ ಎಲೆಗಳಲ್ಲಿ ಇರುವ ಶಾಂತಗೊಳಿಸುವ ಮತ್ತು ಕಾರ್ಮಿನೇಟಿವ್ ಗುಣಗಳು ಆ್ಯಸಿಡಿಟಿಯಿಂದ ತಕ್ಷಣದ ಪರಿಹಾರವನ್ನು ನೀಡಬಲ್ಲದು. ಆ್ಯಸಿಡಿಟಿಯ ಸುಳಿವು ಸಿಕ್ಕ ಕೂಡಲೇ ಕೆಲವು ತುಳಸಿ ಎಲೆಗಳನ್ನು ತಿನ್ನಿರಿ. ಅಥವಾ 3-4 ತುಳಸಿ ಎಲೆಗಳನ್ನು ಒಂದು ಲೋಟ ನೀರು ಹಾಕಿ, ಕೆಲವು ನಿಮಿಷ ಕುದಿಸಿ, ಬಳಿಕ ಸೇವಿಸಿ. ಅದನ್ನು ನಿತ್ಯವೂ ಕುಡಿಯಬಹುದು.


    ಇದನ್ನೂ ಓದಿ: Benefits Of Okra: ಚರ್ಮದ ಹೊಳಪನ್ನು ಹೆಚ್ಚಿಸಲು ಬೆಂಡೆಕಾಯಿ ಪೇಸ್ಟ್ ಟ್ರೈ ಮಾಡಿ


    ಈ ಮೇಲಿನ ಏಳು ಮುಖ್ಯ ವಸ್ತುಗಳು ಪ್ರತೀ ಮನೆಯಲ್ಲೂ ಸದಾಕಾಲ ಇರುವಂತವು. ಎದೆ ಉರಿ, ಅಜೀರ್ಣ, ಗ್ಯಾಸ್​ ಸಮಸ್ಯೆ ಕಾಣಿಸಿಕೊಂಡಾಗ ಮನೆಯಲ್ಲಿಯೇ ತಕ್ಷಣ ಮಾಡಿಕೊಂಡು ಸೇವಿಸಬಹುದು. ಮತ್ತು ಸಮಸ್ಯೆಗೆ ಶೀಘ್ರ ಉಪಶಮನವನ್ನು ಪಡೆಯಬಹುದು. ಗ್ಯಾಸ್ಟಿಕ್​ ಮತ್ತು ಎದೆಯುರಿ ಸಮಸ್ಯೆಗೆ ಹಲವು ಇಂಗ್ಲೀಷ್​ ಮೆಡಿಸಿನ್​ಗಳು ಇದ್ದರೂ ಕೂಡ, ಆಯುರ್ವೇದ ಔಷಧಿಯೇ ಸುಲಭ ಮತ್ತು ಉತ್ತಮ ಮದ್ದು ಎಂಬುದರಲ್ಲಿ ಎರಡು ಮಾತಿಲ್ಲ.

    Published by:Sharath Sharma Kalagaru
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು