Snoring: ಗೊರಕೆ ಶಬ್ಧದಿಂದ ಬೇಕೇ ಮುಕ್ತಿ..? ಇಲ್ಲಿದೆ ನೋಡಿ ಸುಲಭ ಉಪಾಯ

ಗೊರಕೆ ಹೊಡೆಯುವವರು ತಲೆದಿಂಬಿನ ಸಹಾಯದಿಂದ ತಲೆಯನ್ನು ಕೊಂಚ ಎತ್ತರದಲ್ಲಿರಿಸಿ ಮಲಗಬಹುದು. ಇದರಿಂದ ನಿದ್ದೆಯಲ್ಲಿ ನಾಲಗೆ ಹಿಂಭಾಗಕ್ಕೆ ಸರಿದು, ಗಾಳಿ ಚಲನೆಯನ್ನು ಅಡ್ಡಿ ಪಡಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
   ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ. ಆದರೆ ಯಾರನ್ನು ಕ್ಯಾರೆ ಮಾಡದೇ ಗೊರೆಕೆ (Snoring)ಹೊಡೆಯುವರಂತೂ ಚೆನ್ನಾಗಿ ನಿದ್ರೆ ಮಾಡಿದರೇ, ಪಕ್ಕದಲ್ಲಿ ಮಲಗಿದವರ ಕಥೆ ಗೋವಿಂದ. ಗೊರಕೆ ಒಂದು ಸಾಮಾನ್ಯ ಸಮಸ್ಯೆ(problem). ಶೇ.45ರಷ್ಟು ಪ್ರೌಢಾವಸ್ಥೆಯ(normal adults) ಜನರಲ್ಲಿ ಗೊರಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗೊರಕೆ ಹೊಡೆಯುವವರು ಆರಾಮವಾಗಿ ಸುಖವಾಗಿ ನಿದ್ರಿಸುತ್ತಾರೆ (sweets sleeping). ಗೊರಕೆಯ ತೊಂದರೆ ಇಂದು ನಿನ್ನೆಯದಲ್ಲ, ಅನಾದಿಕಾಲದಿಂದಲೂ ಇದೆ. ಕುಂಭಕರ್ಣನ ಗೊರಕೆ ಮೈಲುಗಟ್ಟಲೆ ದೂರ ಕೇಳಿಸುತ್ತಿತ್ತು ಎಂದು ರಾಮಾಯಣದಲ್ಲಿಯೇ (ramayana)ಹೇಳಲಾಗಿದೆ. ಒಬ್ಬರ ಸುಖನಿದ್ದೆಗೆ ಕಾರಣವಾಗುವ ಗೊರಕೆ ಇನ್ನೊಬ್ಬರ ನಿದ್ದೆಯನ್ನು (sleeping problems)ಕೆಡಿಸಬಲ್ಲುದು. ಅಂತಹ ಗೊರಕೆಯನ್ನು ಇಲ್ಲಿದೆ ಸರಳ ಸಲಹೆ.

  ಸಾಮಾನ್ಯವಾಗಿ ಗಂಟಲಿನ ಸ್ನಾಯುಗಳು ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ಕಂಪಿಸುತ್ತವೆ. ಇವುಗಳು ಉಸಿರಾಟದ ವೇಳೆ ಶಬ್ಧವನ್ನುಂಟು ಮಾಡುತ್ತದೆ. ಗೊರಕೆ ಶಬ್ಧವನ್ನು ನಿಲ್ಲಿಸಲು ನಿಮ್ಮ ಕೊಠಡಿಯಲ್ಲಿ ತೇವಾಂಶ ಹೆಚ್ಚಿಸಬಹುದು. ಹ್ಯೂಮಿಡಿಫೈ ಮಾಡುವುದು ಎನ್ನಬಹುದು. ಕೊಠಡಿಯಲ್ಲಿ ತೇವಾಂಶ ಇಲ್ಲದ ಗಾಳಿ ಹೆಚ್ಚಾದಲ್ಲಿ ಮೂಗಿನ ನಾಳಗಳು ಒಣಗಿಹೋಗುತ್ತವೆ. ಇವುಗಳು ನಾಳಗಳಲ್ಲಿ ಗಾಳಿ ಸಂಚಾರವನ್ನು ತಡೆಯುತ್ತದೆ. ಅಲ್ಲದೆ ಸ್ನಾಯುಗಳನ್ನು ಕಂಪಿಸುವಂತೆ ಮಾಡುತ್ತದೆ. ಹೀಗಾಗಿ ಕೊಠಡಿಗೆ ಒಂದು ಹ್ಯೂಮಿಡಿಫೈಯರ್‌ ಅಳವಡಿಸುವುದು ಸಹಕಾರಿ ಎಂದು ಹೇಳಲಾಗುತ್ತದೆ.

  ತೂಕ ಇಳಿಸಿ
  ನೀವು ಜೋರಾಗಿ ಗೊರಕೆ ಹೊಡೆಯುತ್ತಿದ್ದರೇ ಅದಕ್ಕೆ ಅತಿಯಾದ ತೂಕ ಅಥವಾ ಸ್ಥೂಲಕಾಯವೂ ಒಂದು ಕಾರಣ ಎನ್ನಬಹುದು. ಗಂಟಲಿನಲ್ಲಿ ಹೆಚ್ಚು ಮಾಂಸವಿರುವುದರಿಂದ ಗೊರಕೆ ಸಮಸ್ಯೆ ಉಂಟಾಗುತ್ತದೆ. ಗಾಳಿ ಸಂಚಾರಕ್ಕೆ ಹೆಚ್ಚು ತಡೆ ಉಂಟಾಗುವುದರಿಂದ ಸಮಸ್ಯೆಯೂ ಹೆಚ್ಚುತ್ತದೆ. ಹೀಗಾಗಿ ತೂಕವನ್ನು ಇಳಿಸಿಕೊಳ್ಳುವುದು ಎಲ್ಲಾ ಹಿತದೃಷ್ಟಿಯಿಂದ ಒಳ್ಳೆಯದು.

  ಇದನ್ನೂ ಓದಿ: Winter Care for Lips: ಒಡೆದ ತುಟಿಗಳಿಗೆ ಮನೆಯಲ್ಲಿಯೇ ಇದೆ ಸರಳವಾದ ಮದ್ದು

  ವಯಸ್ಸಾದಂತೆ ಮಾಂಸಖಂಡಗಳು ಸಡಿಲಗೊಳ್ಳುತ್ತದೆ. ಇವುಗಳಿಂದ ಗೊರಕೆ ಸಮಸ್ಯೆ ಉಲ್ಬಣವಾಗುತ್ತದೆ. ಹೀಗಾಗಿ ಗಂಟಲು ಹಾಗೂ ನಾಲಗೆಯನ್ನು ಸ್ಟಿಫ್‌ ಆಗಿಡಲು ಸ್ವಲ್ಪ ವ್ಯಾಯಾಮ ನೀಡುವುದು ಒಳಿತು. ಕಷ್ಟಕರ ಶಬ್ಧಗಳನ್ನು ಪುನರುಚ್ಚರಿಸುವಂತಹ ವ್ಯಾಯಾಮ ಹೆಚ್ಚು ಉಪಕಾರಿ ಎಂಬುದನ್ನು ನೀವು ಮನಗೊಂಡರೆ ಗೊರಕರಯನ್ನು ಆರಾಮಾಗಿ ಹೋಗಲಾಡಿಸಬಹುದು.

  ತಲೆದಿಂಬಿನ ಸಹಾಯ
  ಧೂಮಪಾನ ಆರೋಗ್ಯಕ್ಕೆ ಮಾರಕ. ಮೂಗಿನ ನಾಳಗಳು ಬ್ಲಾಕ್‌ ಆಗುವುದರಿಂದ ಗೊರಕೆ ಸಮಸ್ಯೆ ಸಿಗರೇಟು ಸೇದುವವರಲ್ಲಿ ಹೆಚ್ಚು. ಹೀಗಾಗಿ ಈ ಕೆಟ್ಟ ಚಟಕ್ಕೆ ಕಡಿವಾಣ ಹಾಕಲೇ ಬೇಕು. ಈ ಅಭ್ಯಾಸ ನಿಮ್ಮ ಉಸಿರಾಟ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿ ಗೊರಕೆ ಹೊಡೆಯುವಂತೆ ಮಾಡಲಿದೆ. ಗೊರಕೆ ಹೊಡೆಯುವವರು ತಲೆದಿಂಬಿನ ಸಹಾಯದಿಂದ ತಲೆಯನ್ನು ಕೊಂಚ ಎತ್ತರದಲ್ಲಿರಿಸಿ ಮಲಗಬಹುದು. ಇದರಿಂದ ನಿದ್ದೆಯಲ್ಲಿ ನಾಲಗೆ ಹಿಂಭಾಗಕ್ಕೆ ಸರಿದು, ಗಾಳಿ ಚಲನೆಯನ್ನು ಅಡ್ಡಿ ಪಡಿಸುತ್ತದೆ. ತಲೆದಿಂಬು ಗೊರಕೆ ಹೊಡೆಯುವುದನ್ನು ನಿಲ್ಲಿಸಲು ಸಹಾಯ ಮಾಡಲಿದೆ.

  ಪ್ರಾಣಾಯಾಮ
  ಮಲಗುವ ಮುನ್ನ ಮದ್ಯಪಾನ ಮಾಡುವುದು ಗೊರಕೆ ಸಮಸ್ಯೆ ಹೆಚ್ಚಿಸುತ್ತದೆ. ಇವುಗಳು ಗಂಟಲಿನ ಸ್ನಾಯುಗಳನ್ನು ಸಡಿಲ ಮಾಡುತ್ತವೆ. ಹೀಗಾಗಿ ಮಲಗುವ ಮುನ್ನ
  ಮದ್ಯ ಸೇವನೆ ಬೇಡ. ಪ್ರಾಣಾಯಾಮದಲ್ಲಿ ಉಸಿರಾಟವನ್ನು ನಿಯಂತ್ರಿಸಲಾಗುವುದು. ಈ ಆಸನದಲ್ಲಿ ನಿಧಾನಕ್ಕೆ ಉಸಿರನ್ನು ಎಳೆದು, ನಿಧಾನಗತಿ ಯಲ್ಲಿಯೇ ಹೊರ ಬಿಡಲಾಗುವುದು. ಇದರಿಂದ ದೇಹಕ್ಕೆ ಸಾಕಷ್ಟು ಆಮ್ಲಜನಕದ ಪೂರೈಕೆಯಾಗುತ್ತದೆ. ಪ್ರಾಣಯಾಮ ದೇಹಕ್ಕೆ ಸಾಕಷ್ಟು ಆಮ್ಲಜನಕವನ್ನು ಪೂರೈಕೆ ಮಾಡುವುದರಿಂದ ನಿದ್ದೆಯಲ್ಲಿ ಗೊರಕೆ ಶಬ್ದ ಬರುವುದಿಲ್ಲ.

  ಏಲಕ್ಕಿ, ಅರಿಶಿನ ಹಾಲು ಸಹಕಾರಿ
  ಏಲಕ್ಕಿಯ ಪರಿಮಳವನ್ನು ಹೀರುವುದರಿಂದ ಮೂಗಿನ ಹೊಳ್ಳೆ ಕಟ್ಟಿಕೊಂಡಿರುವುದು, ಉಸಿರಾಟವನ್ನು ಸರಾಗಗೊಳಿಸುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ. ಅರಿಶಿನದಲ್ಲಿ ಪ್ರತಿಜೀವಕ ಗುಣಗಳಿದ್ದು ದೇಹಕ್ಕೆ ಇತರ ರೀತಿಯಲ್ಲಿ ಉಪಕಾರಿಯಾಗಿರುವಂತೆಯೇ ಗೊರಕೆಗೂ ಉತ್ತಮವಾಗಿದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ, ಪ್ರತಿ ದಿನ ನೀವು ಮಲಗುವ ಮುನ್ನ ಇದಕ್ಕಾಗಿ ಒಂದು ಲೋಟ ಬಿಸಿಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನ ಕದಡಿ ಕುಡಿದು ಮಲಗಿ. ನಿಧಾನವಾಗಿ ಮೂಗು ಕಟ್ಟಿಕೊಂಡಿದ್ದುದು ತೆರೆದಂತೆ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.
  Published by:vanithasanjevani vanithasanjevani
  First published: