Yoga: ಟಿವಿ ನೋಡುತ್ತಲೇ ಮನರಂಜನೆ ಜೊತೆ ಆರೋಗ್ಯ ಪ್ರಯೋಜನ ಸಿಗುವ ಯೋಗಾಸನಗಳಿವು! ನೀವೂ ಟ್ರೈ ಮಾಡಿ

ಯೋಗಾಸನಗಳು ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ" ಎಂಬ ಶೀರ್ಷಿಕೆ ನೀಡಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಸೋಫಾ ಮೇಲೆ ಕುಳಿತಲ್ಲೇ ಕುಳಿತುಕೊಂಡು, ಮನರಂಜನೆ ಜೊತೆ ವ್ಯಾಯಾಮದ ಪ್ರಯೋಜನ ಸಿಗುವ ಆಸನಗಳನ್ನು ನಾವಿಲ್ಲಿ ನೋಡೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವರಿಗೆ ಟಿವಿ ಹುಚ್ಚು ಜಾಸ್ತಿ. ಸಿನಿಮಾ, ಧಾರವಾಹಿ ಅಂತಾ ಟಿವಿ ಮುಂದೆ ಕಾಲಕಳೆಯಲು ಬಯಸುತ್ತಾರೆ. ಜೊತೆಗೆ ಒಂದೇ ಕಡೇ ಕೂತು ಕೂತು ದೇಹಕ್ಕೆ  ವ್ಯಾಯಾಮವೇ(Exercise) ಇಲ್ಲದಂತಾಗಿರುತ್ತದೆ. ಇನ್ನೂ ಕೆಲವರಿಗೆ ಬಿಡುವಿಲ್ಲದ ಜೀವನದಲ್ಲಿ ವ್ಯಾಯಾಮಗಳಿಗೆ ಮತ್ತು ಮನರಂಜನೆಗೆ ಸಮಯವೇ ಇರುವುದಿಲ್ಲ. ಈಗಂತೂ ಒಟಿಟಿ ವೇದಿಕೆ ಬಂದಮೇಲೆ ಸಿನಿಮಾ, ವೆಬ್ ಸೀರಿಸ್ ಅಂತಾ ಹಲವಾರು ಮನರಂಜನಾ ಕಾರ್ಯಕ್ರಮಗಳು ಇದ್ದು, ಮನರಂಜನೆ (Entertainment) ಮತ್ತು ಕಾಲಹರಣಕ್ಕೇನು ತೊಂದರೆ ಇಲ್ಲ. ಅತಿ ಹೆಚ್ಚು ಹೊತ್ತು ಟಿವಿ ಮುಂದೆ ಕುಳಿತುಕೊಳ್ಳುವುದರಿಂದ ಸಹ ದೇಹ ಜಡಗಟ್ಟಬಹುದು. ಚಟುವಟಿಕೆ ಇಲ್ಲದ ದೇಹ ಹಲವಾರು ಅನಾರೋಗ್ಯಗಳಿಗೂ (Illness) ತುತ್ತಾಗಬಹುದು.

ಮನರಂಜನೆ ಜೊತೆಗೆ ವ್ಯಾಯಾಮ
ಹೀಗಾಗಿ ಟಿವಿ ನೋಡಲು ಹೆಚ್ಚು ಇಷ್ಟ ಪಡುವವರಿಗೆ ಮತ್ತು ಮನರಂಜನೆ ಜೊತೆಗೆ ವ್ಯಾಯಾಮವೂ ಬೇಕು ಎನ್ನುವವರಿಗೆ ಕೆಲವು ಯೋಗದ ಆಸನಗಳು ದೇಹವನ್ನು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ. ಮನರಂಜನೆ ಮತ್ತು ವ್ಯಾಯಾಮಗಳನ್ನು ಒಟ್ಟೊಟ್ಟಿಗೆ ಅನುಭವಿಸಲು ಸೆಲೆಬ್ರಿಟಿ ಯೋಗ ತಜ್ಞ, ಅನ್ಷುಕಾ ಕೆಲವು ಆಸಕ್ತಿದಾಯಕ ಆಸನಗಳನ್ನು ಹಂಚಿಕೊಂಡಿದ್ದಾರೆ. ಈ ಯೋಗಾಭ್ಯಾಸಗಳನ್ನು ಮಾಡುತ್ತಾ ಟಿವಿ ನೋಡುವುದರಿಂದ ಮನರಂಜನೆಯೂ ಸಿಗುತ್ತದೆ, ದೇಹವು ಸಹ ಸಕ್ರಿಯವಾಗಿರುತ್ತದೆ.

ಅನ್ಷುಕಾ ಅವರು ಟಿವಿ ನೋಡುವಾಗ ಮಾಡಬಹುದಾದ ಕೆಲವು ಸರಳವಾದ ಆಸನಗಳನ್ನು ಪ್ರದರ್ಶಿಸುವ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. "ಮುಂದಿನ ಬಾರಿ ನೀವು ಟಿವಿ ನೋಡುವಾಗ ಪಾಪ್ ಕಾರ್ನ್ ಗಳನ್ನು ಪಕ್ಕಕ್ಕೆ ಇರಿಸಿ ಮತ್ತು ಈ ಆಸನಗಳನ್ನು ಅಭ್ಯಾಸ ಮಾಡಿ. ಈ ಯೋಗಾಸನಗಳು ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ" ಎಂಬ ಶೀರ್ಷಿಕೆ ನೀಡಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಸೋಫಾ ಮೇಲೆ ಕುಳಿತಲ್ಲೇ ಕುಳಿತುಕೊಂಡು, ಮನರಂಜನೆ ಜೊತೆ ವ್ಯಾಯಾಮದ ಪ್ರಯೋಜನ ಸಿಗುವ ಆಸನಗಳನ್ನು ನಾವಿಲ್ಲಿ ನೋಡೋಣ.

1) ಮಲಸಾನ
ಈ ಸುಲಭವಾಗಿ ಕುಳಿತುಕೊಳ್ಳುವ ಭಂಗಿಯು ನಿಮ್ಮ ಸೊಂಟವನ್ನು ಹಿಗ್ಗಿಸಲು ಹೆಚ್ಚು ಉಪಯುಕ್ತವಾಗಿದೆ ಮತ್ತು ಇದು ಕೆಳ ಬೆನ್ನು, ಗ್ಲುಟ್ಸ್ ಮತ್ತು ಮಂಡಿರಜ್ಜುಗಳಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೊಟ್ಟೆ ಮತ್ತು ತೊಡೆಯ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ.

ಇದನ್ನೂ ಓದಿ:  Yoga for Pregnant: ಗರ್ಭಿಣಿಯರಿಗೆ ಯೋಗ ಎಷ್ಟು ಮುಖ್ಯ? ಯೋಗಾಭ್ಯಾಸದಿಂದ ಏನೆಲ್ಲಾ ಪ್ರಯೋಜನವಿದೆ?

2) ಅರ್ಧ ಮತ್ಸ್ಯೇಂದ್ರ
ಅನ್ಷುಕಾ ಮುಂದೆ ಸೂಚಿಸಿರುವ ತಿರುಚುವ ಆಸನವು ನಿಮ್ಮ ಬೆನ್ನುಮೂಳೆಗೆ ಉತ್ತಮವಾಗಿದೆ. ಇದು ಬೆನ್ನುಮೂಳೆಯನ್ನು ಉದ್ದವಾಗಿಸುತ್ತದೆ ಮತ್ತು ದೇಹದ ಭಂಗಿಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ಬೆನ್ನಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.

3) ಭದ್ರಾಸನ
ಈ ಕುಳಿತುಕೊಳ್ಳುವ ಧ್ಯಾನ ಭಂಗಿಯು ನಿಮ್ಮ ಮನಸ್ಸಿನಿಂದ ಧನಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇದು ಕಾಲುಗಳನ್ನು ಹಿಗ್ಗಿಸುತ್ತದೆ ಮತ್ತು ತೊಡೆಗಳು, ಸೊಂಟ ಮತ್ತು ಪೃಷ್ಠವನ್ನು ಬಲಪಡಿಸುತ್ತದೆ.

4) ಗೋಮುಖಾಸನ
ಗೋಮುಖಾಸನವು ನಿಮ್ಮ ದೇಹವನ್ನು ಪೂರ್ತಿಯಾಗಿ ಸ್ಟ್ರೆಚ್ ಮಾಡಲು ಸಹಾಯ ಮಾಡುತ್ತದೆ. ಈ ಆಸನದ ಸಮಯದಲ್ಲಿ, ಬಹುತೇಕ ಎಲ್ಲಾ ದೇಹದ ಕೀಲುಗಳು ಕಾರ್ಯನಿರ್ವಹಿಸುತ್ತವೆ. ಇದು ದೇಹದಲ್ಲಿ ಸರಿಯಾದ ರಕ್ತ ಪರಿಚಲನೆಗೆ ಕಾರಣವಾಗುತ್ತದೆ. ಸುಧಾರಿತ ರಕ್ತ ಪರಿಚಲನೆಯು ಶಕ್ತಿ ಮತ್ತು ಪೋಷಣೆಯನ್ನು ಪಡೆಯಲು ಸಹಾಯ ಮಾಡುತ್ತದೆ.

5) ಅರ್ಧ ಚಂದ್ರಾಸನ
ಅರ್ಧ ಚಂದ್ರನ ಭಂಗಿ ಎಂದು ಕರೆಯಲ್ಪಡುವ ಈ ಆಸನವು ಬೆನ್ನು ನೋವಿನಿಂದ ಬಳಲುತ್ತಿರುವವರಿಗೆ ಉತ್ತಮವಾಗಿದೆ. ಇದು ನೋವನ್ನು ನಿವಾರಿಸುವುದು ಮಾತ್ರವಲ್ಲದೆ ಎದೆ ಮತ್ತು ಭುಜಗಳನ್ನು ಹಿಗ್ಗಿಸುತ್ತದೆ.

ಇದನ್ನೂ ಓದಿ:  International Yoga Day 2022: ಯೋಗದ ಮೊದಲು ಮತ್ತು ನಂತರ ಯಾವ ಆಹಾರಗಳನ್ನು ತಿನ್ನಬೇಕು ಅಥವಾ ತಿನ್ನಬಾರದು? ಇಲ್ಲಿದೆ ಮಾಹಿತಿ

ಹಾಗಾದರೆ ಇನ್ನು ಮುಂದೆ ಅಕ್ಕಪಕ್ಕ ಸ್ನ್ಯಾಕ್ಸ್, ಕೂಲ್ ಡ್ರಿಂಕ್ಸ್ ಇಟ್ಟುಕೊಂಡು ಟಿವಿ ನೋಡುವ ಬದಲು ಕೂತಲ್ಲೇ ಚಿಕ್ಕ-ಪುಟ್ಟ ವ್ಯಾಯಾಮ ಮಾಡಿಕೊಂಡು ಟಿವಿ ನೋಡೋ ಅಭ್ಯಾಸ ಮಾಡಿ.
Published by:Ashwini Prabhu
First published: