Kulfi: ಬೇಸಿಗೆಯಲ್ಲಿ ತಂಪಾಗಿರಿಸಲು ಮನೆಯಲ್ಲಿಯೇ ತಯಾರಿಸಿ ಈ 5 ಕುಲ್ಫಿಗಳು! ಬರೀ ಅರ್ಧ ಗಂಟೆ ಸಾಕು

Summer: ಬೇಸಿಗೆಯಲ್ಲಿ ಈ ಸುಡುವ ಬಿಸಿಲಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮತ್ತು ಸ್ವಲ್ಪ ಮಟ್ಟಿಗೆ ನಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ನಮಗೆ ಥಟ್ಟನೆ ನೆನಪಾಗುವುದು ಈ ಕುಲ್ಫಿ. ಈ ಮೊದಲು ನಾವು ಬಿಸಿ ಹವಾಮಾನದಿಂದ ನಮಗೆ ಅಗತ್ಯವಾದ ಪರಿಹಾರವನ್ನು ಒದಗಿಸಲು ಕುಲ್ಫಿಯನ್ನು ಆಶ್ರಯಿಸುತ್ತಿದ್ದೆವು.

ಕುಲ್ಫಿ

ಕುಲ್ಫಿ

  • Share this:
ಬೇಸಿಗೆಕಾಲ (Summer) ಬಂತೆಂದರೆ ಸಾಕು, ದೇಹವನ್ನು (Body) ತಂಪಾಗಿರಿಸಿಕೊಳ್ಳಲು ನಮಗೆ ಏನು ಬೇಕೋ ಅದೆಲ್ಲವನ್ನೂ ನಾವು ಮಾಡುತ್ತೇವೆ. ಎಂದರೆ ನಮ್ಮ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುವ ಎಲ್ಲಾ ಪಾನೀಯಗಳನ್ನು (Drinks) ನಾವು ಪ್ರಯತ್ನಿಸಿರುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದು ಯಾವುದೇ ಹಣ್ಣುಗಳ ಜ್ಯೂಸ್ (Fruit Juice) ಆಗಿರಬಹುದು, ನಮ್ಮ ನೆಚ್ಚಿನ ಐಸ್‌ಕ್ರೀಮ್ (Ice Cream) ತಿನ್ನುವುದು ಆಗಿರಬಹುದು ಮತ್ತು ಮೊಸರಿನಿಂದ ತಯಾರಿಸಿದ ಲಸ್ಸಿ ಆಗಿರಬಹುದು. ಬೇಸಿಗೆಯಲ್ಲಿ ಈ ಸುಡುವ ಬಿಸಿಲಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮತ್ತು ಸ್ವಲ್ಪ ಮಟ್ಟಿಗೆ ನಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ನಮಗೆ ಥಟ್ಟನೆ ನೆನಪಾಗುವುದು ಈ ಕುಲ್ಫಿ (Kulfi). ಈ ಮೊದಲು ನಾವು ಬಿಸಿ ಹವಾಮಾನದಿಂದ ನಮಗೆ ಅಗತ್ಯವಾದ ಪರಿಹಾರವನ್ನು ಒದಗಿಸಲು ಕುಲ್ಫಿಯನ್ನು ಆಶ್ರಯಿಸುತ್ತಿದ್ದೆವು.

ಈಗ ಕುಲ್ಫಿ ಕೆಲವು ಅಂಗಡಿಗಳಲ್ಲಿ ಮಾತ್ರವೇ ಸಿಗುತ್ತಿವೆ. ಮೊದಲೆಲ್ಲಾ ಈ ಕುಲ್ಫಿ ಮಾರುವವರು ತಳ್ಳು ಗಾಡಿಯಲ್ಲಿ ಅಥವಾ ಸೈಕಲ್ ಹಿಂದೆ ದೊಡ್ಡ ಡಬ್ಬಿಯನ್ನು ಕಟ್ಟಿಕೊಂಡು ಬರುತ್ತಿದ್ದರು. ಆದರೆ ನಾವು ಬಯಸಿದಾಗಲೆಲ್ಲಾ ಈ ತಂಪಾಗಿಸುವ ದೇಸಿ ಐಸ್‌ಕ್ರೀಮ್ ಅನ್ನು ನಾವು ಹೇಗೆ ಆನಂದಿಸಬಹುದು? ನಾವು ನಿಮಗಾಗಿ ಇಲ್ಲಿ ಐದು ಸುಲಭ ಮತ್ತು ರುಚಿಕರವಾದ ಪಾಕವಿಧಾನಗಳೊಂದಿಗೆ, ಕೇವಲ 30 ನಿಮಿಷಗಳಲ್ಲಿಯೇ ನೀವು ಸುವಾಸನೆಯುಕ್ತ ಕುಲ್ಫಿಗಳನ್ನು ಮನೆಯಲ್ಲಿ ತ್ವರಿತವಾಗಿ ತಯಾರಿಸಿಕೊಳ್ಳಬಹುದಾಗಿದೆ. ಹಾಗಾದರೆ ಯಾವೆಲ್ಲ ವಿಧದ ಕುಲ್ಫಿಗಳನ್ನು ನೀವು ತಯಾರಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

5 ಕುಲ್ಫಿ ರೆಸಿಪಿಗಳು ಇಲ್ಲಿವೆ ನೋಡಿ:
1. ಖೋಯಾ ಕುಲ್ಫಿ
ಈ ಕುಲ್ಫಿಯನ್ನು ಖೋಯಾದಿಂದ ತಯಾರಿಸಲಾಗುತ್ತದೆ, ಇದು ಕುಲ್ಫಿಗೆ ಸ್ವಲ್ಪ ಧಾನ್ಯ, ಕೆನೆಭರಿತ ಮತ್ತು ಕುರುಚಲು ರಚನೆಯನ್ನು ನೀಡುತ್ತದೆ. ನೀವು ತಾಜಾ ಅಥವಾ ಹೆಪ್ಪುಗಟ್ಟಿದ ಖೋಯಾವನ್ನು ಸಹ ಖರೀದಿಸಬಹುದು. ಮುಂದೆ ಕುಲ್ಫಿಗೆ ಸುವಾಸನೆಯುಕ್ತ ಮತ್ತು ರುಚಿಕರವಾದ ರುಚಿಯನ್ನು ನೀಡಲು ನಿಮ್ಮ ಆಯ್ಕೆಗೆ ಅನುಗುಣವಾಗಿ ಏಲಕ್ಕಿ, ಪಿಸ್ತಾ ಮತ್ತು ಇತರ ಹಣ್ಣುಗಳು ಬೇಕಾಗುತ್ತವೆ.

2. ಮಸಾಲೆಯುಕ್ತ ಕಾಫಿ ಕುಲ್ಫಿ
ಮಸಾಲೆಗಳು ಮತ್ತು ಕುರುಕಲು ಕಾಯಿಗಳೊಂದಿಗೆ ಕಾಫಿ ಮತ್ತು ಕೆನೆಭರಿತ ಕುಲ್ಫಿಯ ಪದಾರ್ಥಗಳ ಪರಿಪೂರ್ಣ ಸಂಯೋಜನೆ ಇದಾಗಿದೆ. ಇದು ಮತ್ತೊಂದು ನವೀನ ಕುಲ್ಫಿ ಪಾಕವಿಧಾನವಾಗಿದ್ದು, ಇದನ್ನು ತಯಾರಿಸಲು ಪರಿಚಿತ ಪದಾರ್ಥಗಳನ್ನು ಬಳಸಬಹುದು. ಕುಲ್ಫಿಯ ರುಚಿಗೆ ಒಂದು ಗಮ್ಮತ್ತು ನೀಡಲು ಏಲಕ್ಕಿ, ದಾಲ್ಚಿನ್ನಿ ಮತ್ತು ನಕ್ಷತ್ರ ಸೋಂಪನ್ನು ಕಾಫಿಯೊಂದಿಗೆ ಪಾಕವಿಧಾನದಲ್ಲಿ ಬಳಸಬಹುದಾಗಿದೆ.

3. ಮಾವಿನ ಹಣ್ಣಿನ ಪಿಸ್ತಾ ಕುಲ್ಫಿ
ಕಾಯಿಗಳಿಂದ ಸಮೃದ್ಧವಾಗಿರುವ ಮತ್ತು ಸಂಪೂರ್ಣವಾಗಿ ಕೆನೆಭರಿತವಾಗಿರುವ ಈ ತಿರುಚಿದ ಕುಲ್ಫಿ ಖಂಡಿತವಾಗಿಯೂ ನಿಮ್ಮನ್ನು ಹೆಚ್ಚಿನದನ್ನು ಕೇಳುವಂತೆ ಮಾಡುತ್ತದೆ. ವಿಶೇಷವಾಗಿ ಇದು ಸಿಹಿ ಮಾವಿನಹಣ್ಣನ್ನು ಹೊಂದಿರುತ್ತದೆ. ನಿಮ್ಮ ಅತಿಥಿಗಳ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಲು ಊಟದ ನಂತರದ ಸಿಹಿ ತಿಂಡಿಗೆ ಪರ್ಯಾಯವಾಗಿ ಈ ಕುಲ್ಫಿ ಸೂಕ್ತವಾಗಿದೆ.

4. ಲಿಚಿ ರಾಬ್ರಿ ಕುಲ್ಫಿ
ನೀವು ಲಿಚಿ ಐಸ್‌ಕ್ರೀಮ್ ಅನ್ನು ಪ್ರಯತ್ನಿಸಿರಬಹುದು, ಆದರೆ ನೀವು ಲಿಚಿ ಕುಲ್ಫಿಯ ರುಚಿ ಎಂದಾದರೂ ನೋಡಿದ್ದೀರಾ? ಈ ಪಾಕವಿಧಾನವು ಹಾಲು, ಖೋಯಾ, ಲಿಚಿ, ಬಾದಾಮಿ, ಗೋಡಂಬಿ ಬೀಜಗಳು ಮತ್ತು ಪಿಸ್ತಾಗಳನ್ನು ಸಂಯೋಜಿಸಿ ಮಾಡಲಾಗುತ್ತದೆ. ಈ ಲಿಚಿ ಕುಲ್ಫಿ ಬೇಸಿಗೆಯಲ್ಲಿ ಹೇಳಿ ಮಾಡಿಸಿದಂತಹ ಒಂದು ಸಿಹಿ ತಿಂಡಿ ಎಂದು ಹೇಳಬಹುದು.

5. ಮಲೈ ಕುಲ್ಫಿಈ ಮಲೈ ಕುಲ್ಫಿಯನ್ನು ತಯಾರಿಸಲು ನಿಮಗೆ ಬೇಕಾಗಿರುವುದು ಕೇವಲ ಎರಡು ಪದಾರ್ಥಗಳು ಮಾತ್ರ. ಹಾಲು ಮತ್ತು ಸಕ್ಕರೆಯನ್ನು ಬಳಸಿಕೊಂಡು ನೀವು ಮನೆಯಲ್ಲಿ ಈ ತ್ವರಿತ ಮತ್ತು ಸುಲಭವಾದ ಮಲೈ ಕುಲ್ಫಿಯನ್ನು ತಯಾರಿಸಿಕೊಳ್ಳಬಹುದು. ಈ ಪಾಕವಿಧಾನದ ಬಗ್ಗೆ ಉತ್ತಮ ಭಾಗವೆಂದರೆ ನಿಮ್ಮ ಅಭಿರುಚಿಗೆ ಅನುಗುಣವಾಗಿ ಕುಲ್ಫಿಯನ್ನು ವೈಯಕ್ತೀಕರಿಸಲು ನೀವು ಯಾವುದೇ ರೀತಿಯ ಪರಿಮಳವನ್ನು ಸೇರಿಸಲು ಆಯ್ಕೆ ಮಾಡಬಹುದು.
Published by:Ashwini Prabhu
First published: