Venezuela: ಒಂದು ಕಾಂಡೋಮ್‍ ಪ್ಯಾಕೆಟ್ ಖರೀದಿಸಲು 60 ಸಾವಿರ ಖರ್ಚು ಮಾಡುತ್ತಾರಂತೆ ಇಲ್ಲಿಯ ಜನ!

ಜಗತ್ತಿನ ಬಹಳಷ್ಟು ದೇಶಗಳಲ್ಲಿ ಗರ್ಭಪಾತ ಕಾನೂನು ಬಾಹಿರವಲ್ಲ. ಆದರೆ ಕೆಲವು ದೇಶಗಳನ್ನು ಗರ್ಭಪಾತವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ರಾಷ್ಟ್ರಗಳ ಪೈಕಿ ವೆನೆಜುವೆಲಾ ಕೂಡ ಒಂದು. ಇಲ್ಲಿ ಗರ್ಭಪಾತ ಮಾಡಿದರೆ ಅಂತವರಿಗೆ ಜೈಲೇ ಗತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜಗತ್ತಿನಲ್ಲಿ ಜನ ಸಂಖ್ಯೆ ಹೆಚ್ಚಳವನ್ನು ಬಯಸದ ದೇಶಗಳು ಒಂದೆಡೆಯಾದರೆ, ಜನಸಂಖ್ಯೆ (Population) ಕಡಿಮೆ ಇದೆ ನಮ್ಮಲ್ಲಿ ಬಂದು ನೆಲೆಸಿ ಆಹ್ವಾನಿಸುವ ಕೆಲವು ದೇಶಗಳು ಕೂಡ ಇವೆ ಎಂಬುವುದು ನಿಮಗೆ ಗೊತ್ತಿರಬಹುದು. ನಾನಾ ದೇಶಗಳ, ನಾಗರೀಕರು (Citizens) ಹೆಚ್ಚಿನ ಮಕ್ಕಳನ್ನು ಮಾಡಿಕೊಳ್ಳದೇ ಇರಲು ಅಥವಾ ಮಾಡಿಕೊಳ್ಳಲು ತಮ್ಮದೇ ಆದ ಹಲವಾರು ಕಾರಣಗಳನ್ನು ಹೊಂದಿರುತ್ತಾರೆ. ಮಕ್ಕಳ (Children) ಜವಾಬ್ದಾರಿಯ ಕಿರಿಕಿರಿ ಇಲ್ಲದ ಜೀವನ, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ (Health Problem) ಹೀಗೆ ನಾವು ಹತ್ತು ಹಲವು ಕಾರಣಗಳನ್ನು ಉದಾಹರಣೆಯಾಗಿ ನೀಡಬಹುದು. ಅಲ್ಲದೇ ಈಗಿನ ದಿನಮಾನಗಳಲ್ಲಿ ಗರ್ಭಧಾರಣೆಯನ್ನು ತಡೆಯುವುದು ಅಂತಹ ಕಷ್ಟದ ಕೆಲಸವೇನಲ್ಲ.

ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರೆದಿರುವುದರಿಂದ ಇದಕ್ಕೆ ಬೇರೆ ಬೇರೆ ರೀತಿಯ ಪರಿಹಾರವಿದೆ, ಜೊತೆಗೆ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಸೇರಿದಂತೆ ಇನ್ನೂ ಕೆಲವು ಮಾರ್ಗಗಳ ಮೂಲಕ ಗರ್ಭಧಾರಣೆಯನ್ನು ತಡೆಯಬಹುದು ಎಂಬುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ವೆನೆಜುವೆಲಾದಲ್ಲಿ ಗರ್ಭಪಾತ ಮಾಡಿದರೆ ಜೈಲು ಶಿಕ್ಷೆ
ಜನರು ಆ ಮಾರ್ಗಗಳನ್ನು ಅನುಸರಿಸಿದರೂ ಅಥವಾ ಅನುಸರಿಸದೆ ಅಪ್ಪಿತಪ್ಪಿ ಗರ್ಭಧಾರಣೆ ಆದರೆ ಏನು ಮಾಡಬೇಕು? ಅದಕ್ಕೆ ಎಲ್ಲರೂ ಕಂಡುಕೊಂಡಿರುವ ಮಾರ್ಗ ಗರ್ಭಪಾತ. ಇನ್ನೂ ನಮ್ಮ ದೇಶದ ಕಥೆಯಂತೂ ಎಲ್ಲದಕ್ಕಿಂತ ಭಿನ್ನ, ಇಲ್ಲಿ ಹೆಣ್ಣು ಮಗು ಬೇಡವೆಂದು, ಗರ್ಭಪಾತ ಮಾಡಿಸುವವರು ಇಂದಿಗೂ ಇದ್ದಾರೆ.

ಇದನ್ನೂ ಓದಿ: Ginger Benefits: ಲೈಂಗಿಕ ನಿರಾಸಕ್ತಿಗೆ ಶುಂಠಿ ರಾಮಬಾಣವಂತೆ, ಇದು ಉತ್ಸಾಹವನ್ನು ಹೆಚ್ಚಿಸುತ್ತೆ

ಜಗತ್ತಿನ ಬಹಳಷ್ಟು ದೇಶಗಳಲ್ಲಿ ಗರ್ಭಪಾತ ಕಾನೂನು ಬಾಹಿರವಲ್ಲ. ಆದರೆ ಕೆಲವು ದೇಶಗಳನ್ನು ಗರ್ಭಪಾತವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ರಾಷ್ಟ್ರಗಳ ಪೈಕಿ ವೆನೆಜುವೆಲಾ ಕೂಡ ಒಂದು. ಇಲ್ಲಿ ಗರ್ಭಪಾತ ಮಾಡಿದರೆ ಅಂತವರಿಗೆ ಜೈಲೇ ಗತಿ

ಒಂದು ಕಾಂಡೋಮ್ ಪ್ಯಾಕೆಟ್ ಕೊಳ್ಳಲು 60,000 ಖರ್ಚು ಸಿದ್ಧವಿರುವ ಜನ
ಆ ದೇಶದಲ್ಲಿ ಗರ್ಭಪಾತ ಕಾನೂನು ಬಾಹಿರವಾಗಿರುವುದರಿಂದ ಗರ್ಭ ನಿರೋಧಕಗಳ ಬೆಲೆ ಗಗನಕ್ಕೆ ಏರಿದೆಯಂತೆ. ಒಂದು ಕಾಂಡೋಮ್ ಪ್ಯಾಕೆಟ್ ಕೊಳ್ಳಲು ಸುಮಾರು 60,000 ರೂ.ಗಳ ವರೆಗೆ ಖರ್ಚು ಮಾಡಲು ಸಿದ್ಧವಿದ್ದಾರೆ ಅಲ್ಲಿನ ಜನ. ಕಾನೂನು ಶಿಕ್ಷೆಯ ಉಸಾಬರಿಯೇ ಬೇಡ ಎಂದು, ಕಾಂಡೋಮ್‍ಗಳ ಬೆಲೆ ಅಷ್ಟೊಂದು ದುಬಾರಿ ಇದ್ದರೂ, ಅಲ್ಲಿನ ಜನರು ಕಾಂಡೋಮ್‍ಗಳನ್ನು ಖರೀದಿಸಲು ಅಂಗಡಿಯ ಮುಂದೆ ಮುಗಿ ಬೀಳುತ್ತಾರಂತೆ.

ಕಾಂಡೋಮ್‍ಗಳ ಬೆಲೆ ಮಾತ್ರವಲ್ಲ, ಗರ್ಭ ನಿರೋಧಕ ಮಾತ್ರೆಗಳ ಬೆಲೆ ಕೂಡ ಸಿಕ್ಕಾಪಟ್ಟೆ ದುಬಾರಿಯಂತೆ. ಗರ್ಭಪಾತ ಮಾಡಿದರೆ ಕಠಿಣ ಶಿಕ್ಷೆ ಇರುವುದರಿಂದ, ಗರ್ಭನಿರೋಧಕಗಳ ಬೇಡಿಕೆ ಇಲ್ಲಿ ಅತ್ಯಂತ ಹೆಚ್ಚಿದೆ, ಅವು ಸಿಕ್ಕರೆ ಸಾಕು ಥಟ್ ಅಂತ ಖರೀದಿಸುತ್ತಾರೆ ವೆನೆಜುವೆಲಾದ ಜನ.

ಹಾಗಾಗಿ ನಮ್ಮ ದೇಶದಲ್ಲಿ ಇರುವಂತೆ, ಅಲ್ಲಿನ ಮಾರುಕಟ್ಟೆ ಮತ್ತು ಔಷಧಿ ಅಂಗಡಿಗಳಲ್ಲಿ, ಕಾಂಡೋಮ್‍ಗಳ ಮತ್ತು ಗರ್ಭ ನಿರೋಧಕಗಳ ದಿಢೀರ್ ಲಭ್ಯತೆ ಇರುವುದಿಲ್ಲ. ಆದ್ದರಿಂದ ಅವುಗಳ ಬೆಲೆ ಹೆಚ್ಚಾಗಿದೆ, ವೆನೆಜುವೆಲಾ ಮಾರುಕಟ್ಟೆಯಲ್ಲಿ ಸ್ಥಳೀಯ ಗರ್ಭನಿರೋಧಕ ಮಾತ್ರೆಗಳು ಕೂಡ ಸಿಗುತ್ತವೆ. ಆದರೆ ಅವುಗಳು ಸಂಪೂರ್ಣ ಸುರಕ್ಷಿತವಾಗಿಲ್ಲ. ಹಾಗಾಗಿ, ಬೆಲೆ ಎಷ್ಟೇ ದುಬಾರಿ ಇದ್ದರೂ ಕೂಡ ಅಲ್ಲಿನ ಮಂದಿ ವಿದೇಶಿ ಬ್ರಾಂಡ್ ಗರ್ಭ ನಿರೋಧಕ ಮಾತ್ರೆಗಳನ್ನಷ್ಟೇ ಕೊಳ್ಳಲು ಇಷ್ಟಡುತ್ತಾರೆ.

ಇವುಗಳಿಗೆ ಸಂಬಳದ ಅರ್ಧದಷ್ಟು ಭಾಗ ಖರ್ಚು ಮಾಡುವ ಜನ
ಸಾಮಾನ್ಯ ಮಾರುಕಟ್ಟೆಗಳ ಸಂಗತಿ ಈ ರೀತಿ ಇದ್ದರೆ, ಇನ್ನು ಕಾಳಸಂತೆಯ ಕಥೆಯೇ ಬೇರೆ. ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಬೆಲೆ, ವೆನೆಜುವೆಲಾದ ಬ್ಲಾಕ್ ಮಾರ್ಕೆಟ್‍ನಲ್ಲಿ ಇನ್ನೂ ದುಬಾರಿಯಾಗಿರುತ್ತದೆ. ಅಂದರೆ, ಅವುಗಳ ಅಸಲಿ ಬೆಲೆಗಿಂತ ಎರಡು ಪಟ್ಟು ಅಥವಾ ಮೂರು ಪಟ್ಟು ಅಧಿಕ ಇರುತ್ತದೆ. ಬೆಲೆ ಮೂರಲ್ಲ, ಹತ್ತು ಪಟ್ಟು ಹೆಚ್ಚಾದರೂ ಪರವಾಗಿಲ್ಲ, ಗರ್ಭಪಾತ ಮಾಡಿ ಜೈಲಿಗೆ ಹೋಗುವ ಬದಲು, ದುಬಾರಿ ಬೆಲೆ ತೆತ್ತು ಗರ್ಭ ನಿರೋಧಕಗಳನ್ನು ಕೊಳ್ಳುವುದು ಲೇಸು ಎನ್ನುವುದು ಅಲ್ಲಿನ ಜನರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Green Dating: ಭಾರತದಲ್ಲಿ ಹೆಚ್ಚುತ್ತಿದೆ ಗ್ರೀನ್ ಡೇಟಿಂಗ್ ಟ್ರೆಂಡ್, ಏನಿದು ಹೊಸದು?

ಕೆಲವು ವರದಿಗಳ ಪ್ರಕಾರ, ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆಗಳಂತಹ ಗರ್ಭ ನಿರೋಧಕಗಳನ್ನು ಖರೀದಿಸಲು ಕೆಲವರು ಪ್ರತೀ ತಿಂಗಳು ತಮ್ಮ ಸಂಬಳದ ಅರ್ಧದಷ್ಟು ಭಾಗವನ್ನು ಖರ್ಚು ಮಾಡುತ್ತಾರಂತೆ.
Published by:Ashwini Prabhu
First published: