ಬೇಸಿಗೆ (Summer) ಬಂತೆಂದರೆ ಸಾಕು ತಣ್ಣನೆಯ ನೀರು (Water), ತಾಜಾ ಹಣ್ಣಿನ ರಸ, ತಂಪು ಪಾನೀಯ (Cold Drinks) ಇತ್ಯಾದಿಗಳು ನಮಗೆ ಎಂದಿಗಿಂತಲೂ ಹೆಚ್ಚು ಇಷ್ಟವಾಗ ತೊಡಗುತ್ತವೆ. ಅವೆಲ್ಲವುಗಳ ಸಾಲಿಗೆ ಸೇರುವ ಇನ್ನೊಂದು ಪೇಯವೆಂದರೆ ಲಸ್ಸಿ. ಈ ಆರೋಗ್ಯಕರ ಪೇಯವನ್ನು ಇಷ್ಟಪಡದಿರುವವರು ತುಂಬಾ ವಿರಳ. ಇದು ಒಂಥರಾ ದೇಸಿ ಕೂಲರ್ (Desi Cooler) ಕೂಡ ಹೌದು. ಮೊಸರಿನಿಂದ ತಯಾರಿಸುವ ಈ ಪಾನೀಯ ಆರಾಮ ನೀಡುತ್ತದೆ ಮತ್ತು ನಿಮ್ಮ ಹೊಟ್ಟೆಗೆ ಸೂಪರ್ ಕೂಲಿಂಗ್ ಆಗಿದೆ. ಅಷ್ಟೇ ಅಲ್ಲ, ಇದು ನಿಮ್ಮ ದೇಹವನ್ನು ಹೈಡ್ರೇಟ್ (Hydrate the body) ಆಗಿಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು (Immunity) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದೇಹಕ್ಕೆ ಆಂತರಿಕ ಪೋಷಣೆ ನೀಡುತ್ತದೆ ಲಸ್ಸಿ
ಲಸ್ಸಿಯನ್ನು ಹಾಗೇ ಕುಡಿಯಿರಿ ಅಥವಾ ಭರ್ಜರಿ ಊಟದ ಬಳಿಕ ಕುಡಿಯಿರಿ, ಹೇಗೆ ಕುಡಿದರೂ ಖುಷಿ ಆಗುವುದಂತೂ ಖಚಿತ. ಲಸ್ಸಿಯ ರುಚಿಯೇ ಅಂತದ್ದು. ಲಸ್ಸಿಯಲ್ಲಿ ಅತ್ಯುತ್ತಮ ಪ್ರಮಾಣದ ಪ್ರೋಬಯಾಟಿಕ್ಗಳು, ಮಿನರಲ್ಗಳು ಮತ್ತು ವಿಟಮಿನ್ಗಳು ಇರುತ್ತವೆ. ಅವು ನಮ್ಮ ದೇಹಕ್ಕೆ ಆಂತರಿಕ ಪೋಷಣೆ ನೀಡುತ್ತವೆ ಮತ್ತು ನಮ್ಮನ್ನು ಹಲವಾರು ಋತುಕಾಲಿಕ ಕಾಯಿಲೆಗಳಿಂದ ದೂರ ಇಡುತ್ತವೆ. ಇದಷ್ಟೇ ಅಲ್ಲ, ಮೊಸರು, ಹೊಗಿನ ತೀವ್ರ ಉಷ್ಣತೆಯ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಈ ಎಲ್ಲಾ ಕಾರಣಗಳಿಂದ ಮತ್ತು ತನ್ನ ಅದ್ಭುತ ರುಚಿಯಿಂದಾಗಿ ಲಸ್ಸಿ ಭಾರತದಾದ್ಯಂತ ಜನಪ್ರಿಯ ಪೇಯವಾಗಿದೆ.
ವಿವಿಧ ಫ್ಲೇವರುಗಳಗಳ ಲಸ್ಸಿ
ಇದು ದೇಶದ ಮೂಲೆ ಮೂಲೆಗಳಲ್ಲಿ ನೀವು ಲಸ್ಸಿ ಕಾರ್ನರ್ ಕಾಣಬಹುದು. ಲಸ್ಸಿ ಕಾರ್ನರ್ ಗಳಲ್ಲಿ ಕೇವಲ ಸಾಂಪ್ರದಾಯಿಕ ಲಸ್ಸಿ ಮಾತ್ರವಲ್ಲ, ವಿವಿಧ ಫ್ಲೇವರುಗಳಗಳ ಲಸ್ಸಿಗಳು ಲಭ್ಯ. ಲಸ್ಸಿ ಹಲವು ರೀತಿಯ ಫ್ಲೇವರುಗಳ ಪ್ರಯೋಗಗಳಿಗೆ ಒಳಗಾಗಿದೆ- ಮ್ಯಾಂಗೋ ಲಸ್ಸಿ, ಅಂಜೀರ್ ಲಸ್ಸಿ, ರಬ್ಡಿ ಲಸ್ಸಿ, ರೋಸ್ ಲಸ್ಸಿ ಇನ್ನು ಅನೇಕ ಬಗೆಯ ಲಸ್ಸಿಗಳನ್ನು ಸವಿಯಬಹುದು. ಇವೆಲ್ಲಾ ಲಸ್ಸಿಗಳ ರುಚಿ ಎಷ್ಟೇ ಅದ್ಭುತವಾಗಿದ್ದರೂ, ನಮ್ಮ ಹೃದಯಲ್ಲಿ ಸಾಂಪ್ರದಾಯಿಕ /ಕ್ಲಾಸಿಕ್ ಪಂಜಾಬಿ ಲಸ್ಸಿಗೆ ವಿಶೇಷ ಸ್ಥಾನವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇದನ್ನೂ ಓದಿ: Dental Facts: ನಿಮ್ಮ ಹಲ್ಲುಗಳ ಆರೈಕೆ ನಿಮ್ಮ ಕೈಯಲ್ಲಿದೆ, ದಂತ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ
ಕ್ಲಾಸಿಕ್ ಪಂಜಾಬಿ ಲಸ್ಸಿ ದಪ್ಪವಾಗಿರುತ್ತದೆ ಮತ್ತು ಪ್ರತೀ ಗುಟುಕಿಲ್ಲೂ ಹಿತವಾದ ರುಚಿಯನ್ನು ನೀಡುತ್ತದೆ. ಹಾಗಂತ, ಸಾಂಪ್ರದಾಯಿಕ ಪಂಜಾಬಿ ಲಸ್ಸಿಗಳನ್ನು ಕುಡಿಯಲು ಪಂಜಾಬ್ಗೆ ಹೋಗಬೇಕೆಂದಿಲ್ಲ, ಇಲ್ಲಿಯೂ ಅವು ಲಭ್ಯ. ಹೈವೇಗಳ ಡಾಭಾಗಳಲ್ಲಿ ದೊಡ್ಡ ಲೋಟಗಳಲ್ಲಿ ಹಾಕಿಕೊಡುವ ಸಾಂಪ್ರದಾಯಿಕ ಲಸ್ಸಿಯನ್ನು ಒಮ್ಮೆ ಕುಡಿದು ನೋಡಿ, ನೀವು ಅದರ ರುಚಿಗೆ ಮಾರು ಹೋಗುವುದು ಖಂಡಿತಾ.
ಅಯ್ಯೋ ಈ ಸುಡು ಬಿಸಿಲಿನಲ್ಲಿ ಹೊರಗೆ ಹೋಗುವುದೇ ಕಷ್ಟ, ಇನ್ನು ಲಸ್ಸಿ ಕುಡಿಯುವ ಮಾತೆಲ್ಲಿ ಅನ್ನುತ್ತೀರಾ? ತಲೆ ಕೆಡಿಸಿಕೊಳ್ಳಬೇಡಿ, ಮನೆಯಲ್ಲೇ ಲಸ್ಸಿ ಮಾಡಿ ಕುಡಿಯಿರಿ. ಅದಕ್ಕೆ ಬಹಳಷ್ಟು ಸಾಮಾಗ್ರಿಗಳ ಅಗತ್ಯವೇನೂ ಇರುವುದಿಲ್ಲ. ಲಸ್ಸಿಯನ್ನು ದಿಢೀರ್ ಆಗಿ ಮತ್ತು ಸುಲಭವಾಗಿ ತಯಾರಿಸಬಹುದು.
ಪಂಜಾಬಿ ಲಸ್ಸಿ ಮಾಡುವ ವಿಧಾನ – 3 ಸಾಮಾಗ್ರಿಗಳ ಲಸ್ಸಿ ರೆಸಿಪಿ
ಪಂಜಾಬಿ ಕ್ಲಾಸಿಕ್ ಲಸ್ಸಿಯನ್ನು ಮಾಡಲು, ಬೇಕಾಗಿರುವ ಸಾಮಾಗ್ರಿಗಳು : ಮೊಸರು, ಸಕ್ಕರೆ ಮತ್ತು ಐಸ್ ತುಂಡುಗಳು. ಈ ಲಸ್ಸಿ ಕೇವಲ 10 ನಿಮಿಷದಲ್ಲಿ ಸಿದ್ಧವಾಗುತ್ತದೆ.
ಇದನ್ನೂ ಓದಿ:Papaya Benefits: ದಿನಕ್ಕೆ ಒಂದು ಕಪ್ ಪಪ್ಪಾಯ ಹಣ್ಣು ತಿಂದ್ರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ
ಮೊದಲು ಬ್ಲೆಂಡರ್ನಲ್ಲಿ ಐಸ್ ತುಂಡುಗಳನ್ನು ಪುಡಿ ಮಾಡಿಕೊಳ್ಳಿ. ಬಳಿಕ ಅದಕ್ಕೆ ಸಕ್ಕರೆ ಮತ್ತು ಮೊಸರು ಸೇರಿಸಿ, ಇನ್ನೂ ಸ್ಪಲ್ಪ ಸಮಯದ ವರಗೆ ಭ್ಲೆಂಡ್ ಮಾಡುತ್ತಿರಿ. ಬೇಕಿದ್ದರೆ ನೀವು ಒಂದು ಚಿಟಿಕೆ ಬ್ಲಾಕ್ ಸಾಲ್ಟ್ ಕೂಡ ಸೇರಿಸಬಹುದು. ಒಂದು ನಿಮಿಷದ ವರೆಗೆ ಬ್ಲೆಂಡ್ ಮಾಡಿದ ಬಳಿಕ, ಅದನ್ನು ಒಂದು ದೊಡ್ಡ ಲೋಟಕ್ಕೆ ಹಾಕಿ ಮತ್ತು ತಣ್ಣಗಿರುವಾಗಲೇ ಕುಡಿಯಲು ಕೊಡಿ. ನಿಮಗೆ ಮಸಾಲಾ ಲಸ್ಸಿ ಕುಡಿಯಲು ಇಷ್ಟವಿದ್ದರೆ, ಅದಕ್ಕೆ ಹುರಿದ ಜೀರಿಗೆ ಮತ್ತು ಚಾಟ್ ಮಸಾಲಾ ಸೇರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ