Breakfast Recipe: ನೀವು ತುಂಬಾ ಬ್ಯುಸಿನಾ? ಐದೇ ನಿಮಿಷಗಳಲ್ಲಿ ರೆಡಿ ಮಾಡಿ ಈ ಟೇಸ್ಟಿ ಫುಡ್

ನಾವಿಲ್ಲಿ ನಿಮಗೆ ಅನುಕೂಲವಾಗುವಂತಹ ಕೆಲ ಉಪಹಾರಗಳ ಬಗ್ಗೆ ತಿಳಿಸುತ್ತಿದ್ದೇವೆ. ಇವುಗಳ ವಿಶೇಷತೆ ಎಂದರೆ ಕೇವಲ ಐದೇ ನಿಮಿಷಗಳಲ್ಲಿ ತುರ್ತಾಗಿ ಈ ಉಪಹಾರಗಳನ್ನು ತಯಾರಿಸಬಹುದು. ಇದರಿಂದ ನಿಮಗೆ ಸಮಯವೂ ಸ್ವಲ್ಪ ತಗುಲುತ್ತದೆ ಹಾಗೂ ಉಪವಾಸ ಮಾಡುವ ಯಾವುದೇ ಅಗತ್ಯ ಇರುವುದಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ದಿನಮಾನಗಳಲ್ಲಿ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಗಂಡ-ಹೆಂಡತಿ (Husband and wife) ಸಾಮಾನ್ಯವಾಗಿ ಇಬ್ಬರೂ ದುಡಿಯುವವರಾಗಿರುತ್ತಾರೆ (Working). ನಿತ್ಯ ಬೇಗನೆ ಎದ್ದು ಕೆಲಸಗಳಿಗೆ ತೆರಳುವುದು ಒಂದು ದೊಡ್ಡ ಸವಾಲಾಗಿರುತ್ತದೆ ಹಾಗೂ ಇಂತಹ ಸಂದರ್ಭದಲ್ಲಿ ಬಹಳಷ್ಟು ಜನರಿಗೆ ಬೆಳೆಗ್ಗೆಯ ಉಪಹಾರ (Breakfast) ತಯಾರಿಸಲೂ ಸಹ ಸಾಕಷ್ಟು ಸಮಯ ಸಿಗುವುದಿಲ್ಲ. ಹಾಗಾಗಿ ಅವರು ಒಮ್ಮೊಮ್ಮೆ ಉಪವಾಸವನ್ನೂ (Fasting) ಸಹ ಮಾಡಬೇಕಾಗುತ್ತದೆ. ಆದರೆ, ನಾವಿಲ್ಲಿ ನಿಮಗೆ ಅನುಕೂಲವಾಗುವಂತಹ ಕೆಲ ಉಪಹಾರಗಳ ಬಗ್ಗೆ ತಿಳಿಸುತ್ತಿದ್ದೇವೆ. ಇವುಗಳ ವಿಶೇಷತೆ ಎಂದರೆ ಕೇವಲ ಐದೇ ನಿಮಿಷಗಳಲ್ಲಿ ತುರ್ತಾಗಿ ಈ ಉಪಹಾರಗಳನ್ನು ತಯಾರಿಸಬಹುದು (Ready). ಇದರಿಂದ ನಿಮಗೆ ಸಮಯವೂ ಸ್ವಲ್ಪ ತಗುಲುತ್ತದೆ ಹಾಗೂ ಉಪವಾಸ ಮಾಡುವ ಯಾವುದೇ ಅಗತ್ಯ ಇರುವುದಿಲ್ಲ.

ಮಲಾಯಿ ಮ್ಯೂಸ್ಲಿ ಟೋಸ್ಟ್
ಮ್ಯೂಸ್ಲಿ ಎಂಬುದು ಓಟ್ಸ್ ಆಧಾರಿತ ಡ್ರೈಫ್ರುಟ್ಸ್, ನಟ್ಸ್ ಮಿಶ್ರಣ ಹೊಂದಿರುವ ಒಂದು ಪೋಷಕಾಂಶ ಖಾದ್ಯವಾಗಿದೆ. ಈ ಸ್ನ್ಯಾಕ್ ತಯಾರಿಸಲು ನಿಮಗಿಷ್ಟವಾದ ಬ್ರೆಡ್ ತೆಗೆದುಕೊಂಡು ಅದನ್ನು ಲೈಟಾಗಿ ಟೋಸ್ಟ್ ಮಾಡಿ ಹಾಗೂ ಅದರ ಮೇಲೆ ಕ್ರೀಮ್ ಅನ್ನು ಹರಡಿ. ಇದರ ಮೇಲೆ ಮ್ಯೂಸ್ಲಿ ಹಾಗೂ ಬಾಳೆ ಹಣ್ಣುಗಳನ್ನು ಕಟ್ ಮಾಡಿ ಇಟ್ಟು ಸವಿಯಿರಿ. ಬಾಯಿಗೂ ರುಚಿ ಆರೋಗ್ಯಕ್ಕೂ ಉತ್ತಮ.

ಪರ್ಫೈಟ್
ಇದನ್ನು ಮಾಡಲು ನಿಮಗೆ ಮೊದಲು ಸ್ಟ್ರಾಬೆರಿ ಫ್ಲೆವರಿನ ಯೋಗರ್ಟ್ ಅವಶ್ಯಕತೆ ಇರುತ್ತದೆ. ಒಂದು ಸರ್ವಿಂಗ್ ಬೌಲ್ ನಲ್ಲಿ ಯೋಗರ್ಟ್ ಹಾಕಿಕೊಳ್ಳಿ. ಅದರ ಮೇಲೆ ನಿಮಗಿಷ್ಟವಾಗುವಷ್ಟು ಪ್ರಮಾಣದಲ್ಲಿ ಮ್ಯೂಸ್ಲಿ ಬೆರೆಸಿ ಹಾಗೂ ರೌಂಡಾಗಿ ಕತ್ತರಿಸಿದ ಬಾಳೆ ಹಣ್ಣುಗಳನ್ನು ಬೆರೆಸಿ. ಈಗ ಆ ಮಿಶ್ರಣಕ್ಕೆ ಸ್ವಲ್ಪ್ ಬ್ರೌನ್ ಸಕ್ಕರೆ ಸೇರಿಸಿ. ನಿಮ್ಮ ಎರಡು ನಿಮಿಷದ ಆರೋಗ್ಯಕರ ಬ್ರೆಕ್ ಫಾಸ್ಟ್ ರೆಡಿ.

ಇದನ್ನೂ ಓದಿ:   Chicken Lababdar: ಚಿಕನ್ ಲಬಬ್ದರ್ ತಿಂದಿದ್ದೀರಾ? ಮನೆಯಲ್ಲಿ ಟ್ರೈ ಮಾಡಿ ನೋಡಿ

ಬನಾನಾ ಹಾಟ್ ಡಾಗ್
ಇದು ಅತಿ ಸರಳ ಹಾಗೂ ನಿಮಿಷದಲ್ಲೇ ಸಿದ್ಧವಾಗುವ ಸ್ನ್ಯಾಕ್. ಹಾಟ್ ಡಾಗ್ ಬನ್ನನ್ನು ತೆಗೆದುಕೊಂಡು ರೋಸ್ಟ್ ಮಾಡಿ, ಅದಕ್ಕೆ ಪೀನಟ್ ಬೆಣ್ಣೆಯನ್ನು ಸವರಿ. ಈಗ ಅದರಲ್ಲಿ ಒಂದು ಇಡೀಯಾದ ಬಾಳೆ ಹಣ್ಣನ್ನು ಇಟ್ಟು ಸುತ್ತಲೂ ತುಂಡಾಗಿ ಕತ್ತರಿಸಿದ ಸ್ಟ್ರಾಬೆರಿಗಳನ್ನು ಹರಡಿ. ನಿಮ್ಮ ಉಪಹಾರ ಸಿದ್ಧ. ಎಂಜಾಯ್ ಮಾಡಿ.

ಪೀನಟ್ ಬಟರ್ ಟೋಸ್ಟ್
ಇದು ಇನ್ನೂ ಸರಳ. ಹೆಸರೇ ಸೂಚಿಸುವಂತೆ ನಿಮಿಷ್ಟದ ಬ್ರೆಡ್ ತೆಗೆದುಕೊಂಡು ರೋಸ್ಟ್ ಮಾಡಿ ಹಾಗೂ ಅದರ ಮೇಲೆ ಸಮವಾಗಿ ಪೀನಟ್ ಬೆಣ್ಣೆಯನ್ನು ಎಲ್ಲೆಡೆ ಸವರಿ. ನಿಮ್ಮ ಬ್ರೆಕ್ ಫಾಸ್ಟ್ ತಿನ್ನಲು ಸಿದ್ಧ.

ಮ್ಯೂಸ್ಲಿ ಬೌಲ್
ಈಗಾಗಲೇ ನಿಮಗ್ ಮ್ಯೂಸ್ಲಿ ಬಗ್ಗೆ ತಿಳಿದಿರಬಹುದು. ಈ ಅದ್ಭುತ ಪೋಷಕ ತತ್ವಗಳ ಸಾರವನ್ನು ಹಾಲಿನೊಡನೆಯೂ ಅದ್ಭುತವಾಗಿ ಬಳಸಬಹುದು. ಒಂದು ಬೌಲ್ ನಲ್ಲಿ ತಂಪಾಗಿರುವ ಹಾಲನ್ನು ತೆಗೆದುಕೊಳ್ಳಿ ಅದಕ್ಕೆ ನಿಮಗೆ ಬೇಕಾಗುವಷ್ಟು ಮ್ಯೂಸ್ಲಿ ಬೆರೆಸಿ. ಇದರಲ್ಲಿ ಡ್ರೈಫ್ರುಟ್ಸ್, ನಟ್ಸ್, ಹನಿ ಎಲ್ಲವೂ ಇರುವುದರಿಂದ ಮತ್ತಿನ್ಯಾವುದೇ ಪದಾರ್ಥಗಳ ಅವಶ್ಯಕತೆ ಬೀಳುವುದಿಲ್ಲ. ಆದಾಗ್ಯೂ ನಿಮಗೆ ಬೇಕಿದ್ದರೆ ವಿವಿಧ ಹಣ್ಣುಗಳ ತುಂಡುಗಳನ್ನು ಇದರಲ್ಲಿ ಬೆರೆಸಿ. ಮ್ಯೂಸ್ಲಿ ಬೌಲ್ ತಿನ್ನಲು ಸಿದ್ಧ.

ಸನ್ನಿ ಸೈಡಪ್
ಇದು ಸರಳವಾಗಿ ಹೇಳಬೇಕೆಂದರೆ ಅರ್ಧ ಫ್ರೈ ಮಾಡಲಾದ ಮೊಟ್ಟೆ. ಮೊದಲಿಗೆ ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದು ಬಿಸಿಯಾಗುವವರೆಗೂ ಕಾಯಿರಿ. ತದನಂತರ ಮೊಟ್ಟೆಯನ್ನು ಒಡೆದು ತವೆಯ ಮೇಲೆ ಹಾಕಿ ಒಂದೆ ಬದಿಯಲ್ಲಿ ಕೆಲ ಕ್ಷಣಗಳ ಕಾಲ ಬೇಯಿಸಿ. ಈ ಸಂದರ್ಭದಲ್ಲಿ ಬ್ರೆಡ್ ಒಂದನ್ನು ತೆಗೆದುಕೊಂಡು ಅದರ ಮೇಲೆ ಪೀನಟ್ ಬಟರ್ ಅನ್ನು ಹರಡಿ. ಈಗ ಒಂದೇ ಬದಿಯಲ್ಲಿ ಬೆಂದಿರುವ ಮೊಟ್ಟೆಯನ್ನು ಅದರ ಹಳದಿ ಬಣ್ಣದ ಯಾಕ್ ಕಾಣುವಂತೆ ಬ್ರೆಡ್ ಮೇಲೆ ಹಾಕಿಕೊಳ್ಳಿ. ನಿಮ್ಮ ಸನ್ನಿ ಸೈಡಪ್ ತಿನ್ನಲು ರೆಡಿ.

ಇದನ್ನೂ ಓದಿ:Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದಿ ಬೀಟ್​ರೂಟ್​ ಬಾತ್ ಮಾಡಿ 

ಚೀಸೀ ಸ್ಕ್ರ್ಯಾಂಬಲ್ಡ್ ಎಗ್ಸ್
ಒಂದು ಮಗ್ಗಿನಲ್ಲಿ ಎರಡು ಮೊಟ್ಟೆ ಒಡೆದು ಹಾಕಿ ಅದರಲ್ಲಿ ಎರಡು ಚಮಚ ಹಾಲು ಬೆರೆಸಿ ಚೆನ್ನಾಗಿ ಬೀಟ್ ಮಾಡಿ. ಈಗ ಆ ಮಿಶ್ರಣವನ್ನು 45 ಸೆಕೆಂಡುಗಳ ಕಾಲ ಓವನ್ ನಲ್ಲಿ ಇರಿಸಿ ಹೊರತೆಗೆದು ಮತ್ತೆ ಸ್ವಲ್ಪ ಬೀಟ್ ಮಾಡಿ ತದನಂತರ ಮತ್ತೆ ಓವನ್ ನಲ್ಲಿ 40 ಸೆಕೆಂಡುಗಳ ಕಾಲ ಇರಿಸಿ ಹೊರತೆಗೆಯಿರಿ. ಇದರ ಮೇಲೆ ಮೋಜರೆಲಾ ಚೀಸ್ ಉದುರಿಸಿ, ರುಚಿಗೆ ತಕ್ಕಷ್ಟು ಸ್ವಲ್ಪ ಉಪ್ಪು ಉದುರಿಸಿ ಹಾಗೂ ಬೇಕಿದ್ದರೆ ಪೆಪ್ಪರ್ ಪೌಡರ್ ಅನ್ನು ಸಹ ಉದುರಿಸಿ ಚೀಸ್ ಕರಗುವ ತನಕ ಸ್ವಲ್ಪ್ ಬಿಸಿ ಮಾಡುತ್ತ ಸ್ಕ್ರ್ಯಾಂಬಲ್ ಮಾಡಿ.
Published by:Ashwini Prabhu
First published: