Dandruff Problem: ತಲೆ‌ ಹೊಟ್ಟಿನ ಸಮಸ್ಯೆ ‌ಇದ್ರೆ ಚಿಂತೆ‌ ಬಿಡಿ - ಇಲ್ಲಿದೆ ನೋಡಿ ಸರಳ ಪರಿಹಾರ

ತಲೆಹೊಟ್ಟಿನ ಕಾರಣ ಕೆಲವೊಮ್ಮೆ ಮುಜುಗರಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಣ ನೆತ್ತಿ, ಡ್ರೈ ಹೇರ್ ಸಮಸ್ಯೆಗಳನ್ನು ನಿವಾರಿಸಲು ಕೂದಲಿಗೆ ಎಣ್ಣೆ ಹಚ್ಚುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದಿನ ಆಧುನಿಕ ಜೀವನ ಶೈಲಿ( Modern lifestyle) ಯಿಂದ ಬಹುತೇಕ ಜನರು ತಲೆಹೊಟ್ಟಿನ ಸಮಸ್ಯೆಯನ್ನ (Dandruff Problem) ಎದುರಿಸುತ್ತಿರುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ (Hormone) ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ (Bad Food Habit) ಇದಕ್ಕೆ ಬಹು ಮುಖ್ಯ ಕಾರಣವಾಗುತ್ತದೆ. ತಲೆಹೊಟ್ಟಿನ ಕಾರಣ ಕೆಲವೊಮ್ಮೆ ಮುಜುಗರಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಣ ನೆತ್ತಿ, ಡ್ರೈ ಹೇರ್ ಸಮಸ್ಯೆಗಳನ್ನು ನಿವಾರಿಸಲು ಕೂದಲಿಗೆ ಎಣ್ಣೆ ಹಚ್ಚುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ತಲೆಹೊಟ್ಟು ನಿವಾರಣೆಗೆ ಕೂದಲಿಗೆ ಎಣ್ಣೆ ಹಚ್ಚುವುದು ಸರಿಯಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. 

    ತಲೆಹೊಟ್ಟಿಗೆ ಜೇನುತುಪ್ಪದ ಚಿಕಿತ್ಸೆ


    ತಲೆಹೊಟ್ಟು ಹೋಗಲಾಡಿಸಲು ಜೇನುತುಪ್ಪವನ್ನು ಬಳಸುವುದು ಬಹಳ ಸುಲಭವಾದ ಮಾರ್ಗವಾಗಿದೆ. ಇದು ನೆತ್ತಿಯನ್ನು ಪೋಷಿಸಲು ಮತ್ತು ಆರ್ಧ್ರಕಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು 1 ಟೀಚಮಚ ರೋಸ್ ವಾಟರ್ ಅನ್ನು 1 ಟೀಚಮಚ ಜೇನುತುಪ್ಪದೊಳಗೆ ಬೆರೆಸಿ ನಂತರ ತಲೆಯ ಬುಡಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ.ಸ್ವಲ್ಪ ಜೇನುತುಪ್ಪ ಮತ್ತು ರೋಸ್ ವಾಟರ್ ಮಿಶ್ರಣವನ್ನು ಕೂದಲಿಗೆ ಹಚ್ಚಿ. 20 ನಿಮಿಷಗಳ ನಂತರ ಶಾಂಪೂ ಮಾಡಿ.

    ಇದನ್ನೂ ಓದಿ: Tea Benefits: ಟೀ ಬರೀ ರಿಫ್ರೆಶ್​​​ಮೆಂಟ್​ಗಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ

    ಬೇಕಿಂಗ್ ಸೋಡಾ

    ಒದ್ದೆಯಾದ ಕೂದಲಿಗೆ ನೇರವಾಗಿ ಅಡಿಗೆ ಸೋಡಾವನ್ನು ಹಾಕಿ ಅದನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಒಂದು ನಿಮಿಷ ಅಥವಾ ಎರಡು ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ. ಅಡಿಗೆ ಸೋಡಾ ತಲೆಹೊಟ್ಟಿಗೆ ಒಂದು ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ನಿಧಾನವಾಗಿ ತಲೆಹೊಟ್ಟನ್ನು ಹೊರಹಾಕುತ್ತದೆ.

    ತಲೆಹೊಟ್ಟು ಚಿಕಿತ್ಸೆಗಾಗಿ ಬೆಳ್ಳುಳ್ಳಿ

    ತಲೆಹೊಟ್ಟು ಚಿಕಿತ್ಸೆಗಾಗಿ ನೀವು ಬೆಳ್ಳುಳ್ಳಿಯನ್ನು ಸಹ ಬಳಸಬಹುದು. ಮೊದಲಿಗೆ, ಒಂದು ಅಥವಾ ಎರಡು ಬೆಳ್ಳುಳ್ಳಿಗಳನ್ನು ಪುಡಿಮಾಡಿ ನಂತರ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಕೆಲ ಹೊತ್ತಿನ ಬಳಿಕ ತಲೆ ಸ್ನಾನ ಮಾಡಿ.

    ಹರಳೆಣ್ಣೆ ಉತ್ತಮ ಔಷಧ

    ತಲೆಹೊಟ್ಟಿನ ನಿವಾರಣೆಗೆ ಹರಳೆಣ್ಣೆ ಉತ್ತಮ ಔಷಧ. ವಿಟಮಿನ್​-ಇ ಅಂಶವಿರುವ ಹರಳೆಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಕೂದಲಿನ ಬುಡಕ್ಕೆ ಹಚ್ಚಿದರೆ ತಲೆಹೊಟ್ಟು ಸಮಸ್ಯೆಯಿಂದ ಪಾರಾಗಬಹುದು.

    ಇದನ್ನೂ ಓದಿ: Foot Care: ಬೇಸಿಗೆಯಲ್ಲಿ ಪಾದಗಳಲ್ಲಿ ಉಂಟಾಗುವ ಕಪ್ಪು ಮತ್ತು ಗಟ್ಟಿಯಾದ ಕಲೆ ತೆಗೆಯಲು ಈ ವಿಧಾನ ಅನುಸರಿಸಿ

    ಒಳ್ಳೆಯ ಮೊಸರಿನಲ್ಲಿ ತಲೆ ಹೊಟ್ಟು ನಿವಾರಿಸುವ ಶಕ್ತಿ

    ಸ್ವಲ್ಪ ಹುಳಿ ಬಂದಿರುವ ಮೊಸರನ್ನು ಕೂದಲಿನ ಬುಡಕ್ಕೆ ಹಚ್ಚಿ ಒಂದು ಗಂಟೆಯ ಕಾಲ ನೆನೆಯಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ 3 ಬಾರಿ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

    ತಲೆಹೊಟ್ಟಿನಿಂದ ಮುಕ್ತಿ ಪಡೆಯಲು ಮೆಂತ್ಯ 

    ತಲೆಹೊಟ್ಟಿನಿಂದ ಮುಕ್ತಿ ಪಡೆಯಲು ಎರಡು ಚಮಚ ಮೆಂತ್ಯೆ ಕಾಳನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಎದ್ದ ನಂತ್ರ ಇದನ್ನು ಮಿಕ್ಸಿ ಮಾಡಿ ಮಿಶ್ರಣವನ್ನು ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿದ್ರೆ ತಲೆಹೊಟ್ಟು ಕಡಿಮೆಯಾಗಲಿದೆ. ವಾರಕ್ಕೆ 2-3 ಬಾರಿ ಈ ಕೆಲಸ ಮಾಡಬೇಕಾಗುತ್ತದೆ.

    ಬೇಯಿಸಿದ ಬೀಟರೋಟ್ ಸಿಪ್ಪೆ

    ಬೀಟರೋಟ್ ಸಿಪ್ಪೆ ತೆಗೆದು ಸಣ್ಣದಾಗಿ ಕಟ್ ಮಾಡಿ ಬಿಸಿನೀರಿನಲ್ಲಿ ಬೇಯಿಸಿ. ನಂತರ ಆ ನೀರಿನಿಂದ ತಲೆಯ ಬುಡವನ್ನು ಮಸಾಜ್ ಮಾಡಿ. ರಾತ್ರಿ ತಲೆಗೆ ಮಸಾಜ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಿ. ಪದೇ ಪದೇ ಇದನ್ನು ಬಳಸಿದರೆ ಬೇಗ ತಲೆಹೊಟ್ಟು ಕಡಿಮೆಯಾಗಲಿದೆ.
    Published by:Swathi Nayak
    First published: