Sweet Recipe: ಸಖತ್ ರುಚಿಕರ ಗೋಧಿ ಹಲ್ವಾ, 3 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ

ವಿಶೇಷ ಹಬ್ಬಕ್ಕೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸಬೇಕು ಎಂದಿದ್ದರೆ ಗೋಧಿ ಹಿಟ್ಟಿನ ಹಲ್ವಾ ಮಾಡುವುದು ಅತ್ಯುತ್ತಮ ಆಯ್ಕೆ, ಇದನ್ನು ಮಾಡೋದು ಸಹ ಸುಲಭವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯರು (Indians) ಸಿಹಿ ಖಾದ್ಯ (Sweet Dish) ಪ್ರಿಯರು. ನಮ್ಮಲ್ಲಿ ಯಾವುದೇ ಭೋಜನ ಕೂಟಗಳು (Dinner Party) ಸಿಹಿ ತಿನಿಸುಗಳಿಲ್ಲದೆ ಸಂಪೂರ್ಣವೆನಿಸುವುದೇ ಇಲ್ಲ. ಸಿಹಿ ತಿನಿಸುಗಳ ಪಟ್ಟಿಯಲ್ಲಿ (List), ಹೆಚ್ಚಿನವರ ಅಚ್ಚುಮೆಚ್ಚಿನ ಸಿಹಿ ತಿನಿಸು ಯಾವುದು ಎಂದು ಪ್ರಶ್ನಿಸಿದರೆ, ಹಲ್ವಾ ಎಂಬ ಉತ್ತರ ಸಿಕ್ಕರೆ ಅಚ್ಚರಿ ಪಡಬೇಕಿಲ್ಲ. ಬಾಯಲ್ಲಿಟ್ಟರೆ ತನ್ನ ರುಚಿಯಿಂದ (Test) ಮೋಡಿ ಮಾಡುವ ಹಲ್ವಾವನ್ನು ತಯಾರಿಸುವುದು ಕೂಡ ಬಹಳ ಸುಲಭ. ಕ್ಯಾರೆಟ್ ಹಲ್ವಾ, ರವೆ ಹಲ್ವಾ, ಕುಂಬಳಕಾಯಿ ಹಲ್ವಾ, ಹಾಲಿನ ಹಲ್ವಾ, ಖೋವಾ ಹಲ್ವಾ. . ಹೀಗೆ ಭಾರತೀಯ ಪಾಕ ವೈವಿಧ್ಯದ ಪಟ್ಟಿಯಲ್ಲಿರುವ ವಿವಿಧ ಬಗೆಯ ಹಲ್ವಾಗಳ ಹೆಸರನ್ನು ಹೇಳುತ್ತಲೇ ಹೋಗಬಹುದು.

ನಿಮಗೆ ಯಾವುದಾದರೂ ಸಿಹಿ ತಿನ್ನಬೇಕು ಎಂಬ ಆಸೆಯಾದಾಗ, ಮನೆಯಲ್ಲಿ ಸಮಾರಂಭ ಇದ್ದಾಗ ಅಥವಾ ವಿಶೇಷ ಹಬ್ಬಕ್ಕೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸಬೇಕು ಎಂದಿದ್ದರೆ ಗೋಧಿ ಹಿಟ್ಟಿನ ಹಲ್ವಾ ಮಾಡುವುದು ಅತ್ಯುತ್ತಮ ಆಯ್ಕೆ. ಗೋಧಿ ಹಿಟ್ಟಿನ ಹಲ್ವಾ ಮಾಡಲು ಹೆಚ್ಚಿನ ಸಾಮಾಗ್ರಿಗಳ ಅಗತ್ಯ ಇಲ್ಲ. ಸಕ್ಕರೆ, ಗೋಧಿ ಹಿಟ್ಟು, ತುಪ್ಪ, ನೀರು , ಒಂದಿಷ್ಟು ಒಣ ಹಣ್ಣುಗಳಿದ್ದರೆ (ನಿಮಗೆ ಬೇಕೆನಿಸಿದರೆ) ಸಾಕು. ಹಾಗಾದರೆ ಅದನ್ನು ತಯಾರಿಸುವ ವಿಧಾನ ಹೇಗಂತೀರಾ..? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಕ್ಕರೆ ಮಿಶ್ರಣ ತಯಾರಿಸುವ ವಿಧಾನ
• ಒಂದು ಪ್ಯಾನ್‍ಗೆ ಎರಡು ಕಪ್‍ನಷ್ಟು ಸಕ್ಕರೆ ಹಾಕಿ.
• ಈಗ ಅದಕ್ಕೆ ಒಂದು ನೀರು ಹಾಕಿ.
• ಚೆನ್ನಾಗಿ ಕಲಸಿ ಮತ್ತು ಬಿಸಿ ಮಾಡಿ.
• ನೀವು ಅದನ್ನು ಒಂದು ಅಥವಾ ಎರಡು ಎಳೆಯ ಪಾಕ ಮಾಡುವ ಅಗತ್ಯ ಇಲ್ಲ.
• ನೀರಿನಲ್ಲಿ ಸಕ್ಕರೆ ಚೆನ್ನಾಗಿ ಕರಗಬೇಕು ಎಂಬುವುದು ಮಾತ್ರ ಗಮನದಲ್ಲಿ ಇರಲಿ.
• ಸಕ್ಕರೆ ನೀರಿನಲ್ಲಿ ಚೆನ್ನಾಗಿ ಕರಗಿದ ಬಳಿಕ ಒಲೆಯನ್ನು ಆರಿಸಿ, ಸಕ್ಕರೆ ಮಿಶ್ರಣವನ್ನು ಪಕ್ಕಕ್ಕೆ ತೆಗೆದಿಡಿ.

ಇದನ್ನೂ ಓದಿ: Recipe: ಬರೀ ಮೊಸರು ತಿಂದು ಬೋರ್ ಆಗಿದ್ಯಾ? ದಹಿ ಬಳಸಿ ಮಾಡೋ ಈ 5 ಬಗೆಯ ಗ್ರೇವಿಗಳನ್ನ ಟ್ರೈ ಮಾಡಿ

ಹಿಟ್ಟು ಹುರಿಯುವುದು
• ಒಂದು ಬಾಣಲೆಗೆ 1 ಕಪ್ ತುಪ್ಪ ಹಾಕಿರಿ ಮತ್ತು ಅದು ಕರಗಲು ಬಿಡಿ.
• ತುಪ್ಪ ತಕ್ಕ ಮಟ್ಟಿಗೆ ಬಿಸಿಯಾದ ಬಳಿಕ, ಅದಕ್ಕೆ ಒಂದು ಕಪ್ ಗೋಧಿ ಹಿಟ್ಟು ಸೇರಿಸಿ.
• ಗೋಧಿ ಹಿಟ್ಟು ತುಪ್ಪದ ಜೊತೆ ಚೆನ್ನಾಗಿ ಬೆರೆಯಲು, ಅದನ್ನು ಕಲಸುತ್ತಲೇ ಇರಿ.
• ಈ ಮಿಶ್ರಣದಲ್ಲಿ ಯಾವುದೇ ಉಂಡೆಗಳು ಇರಬಾರದು.
• ಗೋಧಿ ಹಿಟ್ಟು ರೋಸ್ಟ್ ಆಗುವವರೆಗೆ ಮತ್ತು ಸ್ಲರಿ ಕಂದು ಹೊಂಬಣ್ಣಕ್ಕೆ ಬರುವವರೆಗೆ ತಿರುವುತ್ತಲೇ ಇರಿ.
• ತಿರುವುದನ್ನು ನಿಲ್ಲಿಸಬೇಡಿ, ಇಲ್ಲವಾದಲ್ಲಿ ಹಿಟ್ಟು ಸೀದು ಹೋದೀತು.
• ಹಿಟ್ಟು ಚೆನ್ನಾಗಿ ರೋಸ್ಟ್ ಆದ ಬಳಿಕ, ಮಿಶ್ರಣ ಕಂದು ಬಣ್ಣಕ್ಕೆ ತಿರುಗುತ್ತದೆ.

ಅಂತಿಮ ಮಿಶ್ರಣ
• ಈಗ ಬಾಣಲೆಗೆ ಸಕ್ಕರೆ ನೀರಿನ ಮಿಶ್ರಣವನ್ನು ಸುರಿಯಿರಿ ಮತ್ತು ಚೆನ್ನಾಗಿ ಕಲಸಿ.
• ಸಕ್ಕರೆ ನೀರನ್ನು ಸುರಿಯುವಾಗ ಜಾಗರೂಕರಾಗಿರಿ, ಅದು ಸಿಡಿಯುವ ಸಾಧ್ಯತೆ ಇರುತ್ತದೆ.
• ಎಲ್ಲವೂ ಚೆನ್ನಾಗಿ ಮಿಶ್ರವಾಗುವವರೆಗೆ ನಿರಂತರವಾಗಿ ತಿರುವುತ್ತಿರಿ.
• 6-8 ನಿಮಿಷಗಳ ಕಾಲ ಹಲ್ವಾವನ್ನು ಬೇಯಿಸಿ. ಮಧ್ಯೆ ಮಧ್ಯೆ ಆಗಾಗ ತಿರುವುತ್ತಿರಿ.
• ಹಲ್ವಾ ತಳ ಬಿಡಲು ಆರಂಭಿಸಿದಾಗ, ಅದು ಸಿದ್ಧವಾಗಿದೆ ಎಂದು ಅರ್ಥ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಗೋಧಿ ನುಚ್ಚಿನ ಕಿಚಡಿ

ಸೇವಿಸಲು ಸಿದ್ಧ
• ಹಲ್ವಾವನ್ನು ಒಂದು ಬಟ್ಟಲಿಗೆ ಹಾಕಿ, ಸೇವಿಸಲು ಕೊಡಿ.
• ನಿಮಗೆ ಬೇಕಿದ್ದರೆ, ಪಿಸ್ತಾ, ಬಾದಾಮಿ, ಗೋಡಂಬಿ , ವಾಲ್‍ನಟ್ ಇನ್ನಿತರ ಒಣ ಬೀಜಗಳಿಂದ ಮತ್ತು ಒಣ ದ್ರಾಕ್ಷಿಯಿಂದ ಈ ಹಲ್ವಾವನ್ನು ಅಲಂಕರಿಸಬಹುದು.
• ಏಲಕ್ಕಿಯ ಘಮವನ್ನು ಇಷ್ಟ ಪಡುವವರು ನೀವಾಗಿದ್ದಲ್ಲಿ, ಸಕ್ಕರೆ ಮತ್ತು ನೀರಿನ ಮಿಶ್ರಣ ತಯಾರಿಸುವಾಗ, 1-2 ಏಲಕ್ಕಿಗಳನ್ನು ಚಚ್ಚಿ ಹಾಕಿ.
• ಹಲ್ವಾಗೆ ಹಳದಿ ಹೊಂಬಣ್ಣವನ್ನು ಕೊಡುವ ಮನಸ್ಸು ನಿಮಗಿದ್ದಲ್ಲಿ, 2-4 ಎಸಳು ಕೇಸರಿ ದಳಗಳನ್ನು ಕೂಡ ಸೇರಿಸಬಹುದು.
• ಹಲ್ವಾವನ್ನು ಬಿಸಿಯಿದ್ದಾಗಲೇ ತಿನ್ನಲು ಬಡಿಸಿದರೆ, ಅಧಿಕ ರುಚಿಕರವಾಗಿರುತ್ತದೆ.
Published by:Pavana HS
First published: