Symptoms of PCOS: ದೇಹದಲ್ಲಾಗೋ ಈ ಬದಲಾವಣೆಯನ್ನ ಕಡೆಗಣಿಸ್ಬೇಡಿ, ಪಿಸಿಓಎಸ್​ ಸಮಸ್ಯೆಯ ಆರಂಭಿಕ ಲಕ್ಷಣವಿದು!

Signs And Symptoms of PCOS: ಈ ಸಮಸ್ಯೆ ಕೇವಲ ಮಹಿಳೆಯರಲ್ಲಿ ಮಾತ್ರ ಅಲ್ಲ, ಹದಿಹರೆಯದ ವಯಸ್ಸಿನ ಹುಡುಗಿಯರಲ್ಲೂ ಕಾಣಿಸುತ್ತದೆ. ಕೆಲ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಸೂಕ್ತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನ (Women) ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಎಂದರೆ ಪಿಸಿಓಎಸ್ (PCOS)​. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (Polycystic Ovary Syndrome ) ಅಥವಾ ಪಿಸಿಓಎಸ್​ ಸದ್ಯ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ ಇದನ್ನು ಅನುಭವಿಸುವ ಮಹಿಳೆಗೆ ಮಾತ್ರ ಅದರ ಕಷ್ಟ ಗೊತ್ತಿರುತ್ತದೆ. ಈ ಒಂದು ತೊಂದರೆ ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ  ಕಾರಣವಾಗುತ್ತದೆ. ಪಿಸಿಓಎಸ್​ ಅನುಭವಿಸುತ್ತಿರುವವರಿಗೆ ಬಂಜೆತನ ಕಾಡುವ ಅಪಾಯ ಹೆಚ್ಚಿರುತ್ತದೆ, ಅಲ್ಲದೇ, ಪಿರಿಯಡ್ಸ್​ ಸೈಕಲ್​ (Periods Cycle) ಸಹ ವ್ಯತ್ಯಾವಾಗುತ್ತದೆ. ಹಾಗಾದ್ರೆ ಈ ಪಿಸಿಓಎಸ್​ನ ಲಕ್ಷಣಗಳೇನು ಎಂಬುದನ್ನ ರಾಧಾಕೃಷ್ಣ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ ವಿದ್ಯಾ ಭಟ್​ ಮಾಹಿತಿ ನೀಡಿದ್ದಾರೆ.   

ಈ ಸಮಸ್ಯೆ ಕೇವಲ ಮಹಿಳೆಯರಲ್ಲಿ ಮಾತ್ರ ಅಲ್ಲ, ಹದಿಹರೆಯದ ವಯಸ್ಸಿನ ಹುಡುಗಿಯರಲ್ಲೂ ಕಾಣಿಸುತ್ತದೆ. ಕೆಲ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಸೂಕ್ತ ಎನ್ನುತ್ತಾರೆ ಡಾಕ್ಟರ್​. ಅಲ್ಲದೇ, ಹದಿಹರೆಯದ ಮಕ್ಕಳಲ್ಲಿ ಪಿಸಿಓಎಸ್​ ಇದೆ ಎಂದು ಈ ಲಕ್ಷಣಗಳ ಮೂಲಕ ತಿಳಿಯಬಹುದು.

ಅನಿಯಮಿತ ಋತುಸ್ರಾವ

ಈ ಸಮಸ್ಯೆಯ ಮುಖ್ಯ ಲಕ್ಷಣ ಎಂದರೆ ಪಿರಿಯಡ್ಸ್​ ಸೈಕಲ್​ನಲ್ಲಿ ವ್ಯತ್ಯಾಸವಾಗುವುದು ಮತ್ತು ಪಿರಿಯಡ್ಸ್​ ಸಮಯದಲ್ಲಿ ಹೆಚ್ಚು ಋತುಸ್ರಾವ ಆಗುವುದು. ನಿಸ್ಸಂದೇಹವಾಗಿ ಅನಿಯಮಿತ ಪಿರಿಯಡ್ಸ್​ PCOS ನ ಮೊದಲ ಲಕ್ಷಣ. ಅನಿಯಮಿತ ಋತುಚಕ್ರ ಎಂದರೆ 21 ದಿನಗಳಿಗಿಂತ ಮುಂಚಿತವಾಗಿ ಮತ್ತು ವಯಸ್ಕರಲ್ಲಿ 35 ದಿನಗಳ ನಂತರ ಮತ್ತು ಹದಿಹರೆಯದವರಲ್ಲಿ 45 ದಿನಗಳ ನಂತರ ಪಿರಿಯಡ್ಸ್​ ಆಗುವುದು.

ಚರ್ಮದ ಸಮಸ್ಯೆ ಮತ್ತು ಮೊಡವೆ

ನೀವು ಇದ್ದಕ್ಕಿದ್ದಂತೆ ಎಣ್ಣೆಯುಕ್ತ ಚರ್ಮವಾಗಿ ಬದಲಾದರೆ ಅಥವಾ ಮೊಡವೆಗಳು ಹೆಚ್ಚಾದರೆ ಇದನ್ನು ನಿರ್ಲಕ್ಷ್ಯ ಮಾಡಬಾರದು. ಮುಖ, ಎದೆ, ಹೊಟ್ಟೆ ಮತ್ತು ದೇಹದ ಇತರ ಭಾಗಗಳಲ್ಲಿ ಹೆಚ್ಚಿನ ಕೂದಲು ಬೆಳೆಯಲು ಆರಂಭಿಸುವುದು ಸಹ ಇದರ ಒಂದು ಲಕ್ಷಣವಾಗಿದೆ. ಕುತ್ತಿಗೆ, ಕಂಕುಳ ಕೆಳಗೆ ಅಥವಾ ಸ್ತನಗಳ ಹಿಂಭಾಗದಲ್ಲಿ ಚರ್ಮ ಕಪ್ಪು ಮತ್ತು ದಪ್ಪವಾಗುತ್ತದೆ.

ಇದನ್ನೂ ಓದಿ: ಭುಜದ ನೋವು ಬೆಂಬಿಡದೇ ಕಾಡ್ತಿದ್ರೆ ಇಲ್ಲಿದೆ ನೋಡಿ ಮನೆಮದ್ದು

 ತೂಕ ಹೆಚ್ಚಾಗುವುದು

ಈ ಲಕ್ಷಣದ ಬಗ್ಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಪಿಸಿಓಎಸ್​ ಇರುವವರ ತೂಕ ಹೆಚ್ಚಾಗುವುದು ಸಾಮಾನ್ಯ. ಯಾವುದೇ ಕಾರಣವಿಲ್ಲದೇ, ನಿಮ್ಮ ಮಗಳಲ್ಲಿ ತೂಕ ಹೆಚ್ಚಾಗುತ್ತಿದ್ದರೆ, ಪೋಷಕರು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅದರ ಜೊತೆ ಪಿರಿಯಡ್ಸ್ ಸೈಕಲ್ ವ್ಯತ್ಯಾಸವಿದ್ದಾಗ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು.


ಪಿಸಿಓಎಸ್​ ಸಮಸ್ಯೆ ಪರಿಹಾರ ಎಂಬುದಿಲ್ಲ, ಆದರೆ ಜೀವನಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವುದು ಸಹಾಯ ಮಾಡುತ್ತದೆ. ಆದರೆ ಹದಿಹರೆಯದ ಮಕ್ಕಳಿಗೆ ಜಂಕ್ ಆಹಾರಗಳನ್ನು ತಿನ್ನಬೇಡಿ ಎಂದರೆ ಅದು ಆಗುವುದಿಲ್ಲ. ಮಕ್ಕಳಿಗೆ ಕಷ್ಟವಾಗುತ್ತದೆ. ಆದರೆ 15 ದಿನಕ್ಕೆ ಒಮ್ಮೆ ಮಾತ್ರ ಜಂಕ್ ತಿನ್ನಲು ಬಿಡಿ, ಉಳಿದ ಸಮಯದಲ್ಲಿ ಕಟ್ಟು ನಿಟ್ಟಿನ ಆಹಾರ ಪಾಲನೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ಇದನ್ನೂ ಓದಿ: ಇಷ್ಟು ವಿಚಾರ ಫಾಲೋ ಮಾಡಿದ್ರೆ ಸಾಕಂತೆ, ಪಿಸಿಓಎಸ್ ನಿಮ್ಮ ಹತ್ರಕ್ಕೂ ಬರಲ್ಲ ಅಂತಾರೆ ವೈದ್ಯರು

ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡುವುದು ಬಹಳ ಉತ್ತಮ. ಹಣ್ಣು, ತರಕಾರಿಯನ್ನು ಚೆನ್ನಾಗಿ ತಿನ್ನಬೇಕು. ಅಲ್ಲದೇ, ತೂಕ ಇಳಿಸಲು ವ್ಯಾಯಾಮ, ವಾಕಿಂಗ್ ಸಹ ಮಾಡಬೇಕು. ಈ ಸಮಸ್ಯೆಯನ್ನು ಮೊದಲೇ ಗುರುತಿಸಿ, ಅದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳಬೇಕು, ಇಲ್ಲದಿದ್ದಲ್ಲಿ ಅದು ಮಧುಮೇಹ ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆ. ಹಾಗಾಗಿ ಈ ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
Published by:Sandhya M
First published: