ಲೈಂಗಿಕ ಕ್ರಿಯೆವೇಳೆ ಶೀಘ್ರ ಸ್ಖಲನ ಆಗುತ್ತಾ?: ಹಾಗಿದ್ರೆ ಈರೀತಿ ಮಾಡಿ ಪರಿಹಾರ ಕಂಡುಕೊಳ್ಳಿ

ಶೀಘ್ರ ವೀರ್ಯ ಸ್ಖಲನವನ್ನು ನಿವಾರಿಸುವಲ್ಲಿ ಕೆಲವೊಂದು ವ್ಯಾಯಾಮಗಳು ಸಹ ನಿಮ್ಮ ನೆರವಿಗೆ ಬರುತ್ತವೆ. ಅದರಲ್ಲೂ ಕೆಗೆಲ್ ವ್ಯಾಯಾಮವು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಶಕ್ತಿಶಾಲಿಗೊಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಿಲನಕ್ರಿಯೆಯಲ್ಲಿ ಹೆಚ್ಚಿನ ಪುರುಷರಲ್ಲಿ ಶೀಘ್ರ ಸ್ಖಲನ ಕಂಡುಬರುವ ಒಂದು ಸಾಮಾನ್ಯ ಪ್ರಕ್ರಿಯೆ. ಈ ಬಗ್ಗೆ ಎಷ್ಟು ಬರೆದರೂ ಸಾಲದು. ಹಲವು ವಿಧಗಳಲ್ಲಿ ಪುರುಷರ ಲೈಂಗಿಕ ಜೀವನವನ್ನು ಕಾಡುವ ಸಮಸ್ಯೆ ಇದು. ಯಾರಲ್ಲಿಯೂ ಹೇಳಿಕೊಳ್ಳಲಾಗದ ಈ ಸಮಸ್ಯೆಗೆ ಪುರುಷರು ಒಳಗೊಳಗೇ ದಿಗಿಲುಗೊಳ್ಳುವುದಿದೆ. ಅದಾಗ್ಯೂ ಇದು ಹೆಚ್ಚಾಗಿ ಕಾಣಿಸಿಕೊಂಡು ನಿಮ್ಮ ಲೈಂಗಿಕ ಜೀವನವನ್ನು ಕೊನೆಗೊಳಿಸುವ ಘಟ್ಟಕ್ಕೆ ಕೂಡ ಇದು ತಲುಪಬಹುದು. ಆಗ ಮಾತ್ರ ಇದನ್ನು ನಿರ್ಲಕ್ಷಿಸದೇ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಅಧ್ಯಯನಗಳು ಹೇಳುವಂತೆ ಶೀಘ್ರ ಸ್ಖಲನವು ವಯಸ್ಸಿನೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ. ಪುರುಷರಿಗೆ ವಯಸ್ಸಾದಂತೆ ಮತ್ತು ಟೆಸ್ಟೋಸ್ಟಿರಾನ್ ಮಟ್ಟಗಳು ವಯಸ್ಸಿನೊಂದಿಗೆ ಕುಂದಿ, ಶೀಘ್ರ ಸ್ಖಲನವು ಇದಕ್ಕೆ ಹೊಂದಿಕೊಳ್ಳುತ್ತದೆ.

  ಹಾಗಾದ್ರೆ ನಿಮ್ಮ ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡಲು ಏನು ಮಾಡಬೇಕು?.

  ನಿಮ್ಮ ವೀರ್ಯ ಶುದ್ದವಾಗಿದೆಯೇ ಎಂದು ತಿಳಿಯುವುದು ಹೇಗೆ?, ಇಲ್ಲಿದೆ ಮಾಹಿತಿ

  ಕ್ಯಾರೆಟ್ ಮತ್ತು ಮೊಟ್ಟೆಗಳು: ಎರಡು ಕ್ಯಾರೆಟ್‍ಗಳನ್ನು ಕತ್ತರಿಸಿ ಮತ್ತು ಅದನ್ನು ಅರೆ ಬೆಂದ ಮೊಟ್ಟೆಯ ಜೊತೆಗೆ ಬೆರೆಸಿ. ಇದಕ್ಕೆ ಒಂದು ಚಮಚದಷ್ಟು ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ದಿನವೂ ಮಾಡಿ ಮೂರು ತಿಂಗಳುಗಳ ಕಾಲ ಸೇವಿಸುತ್ತಿರಬೇಕು. ಇದರಿಂದಾಗಿ ಮೂರು ತಿಂಗಳ ನಂತರ ನೀವು ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವತ್ತ ಉತ್ತಮ ಫಲಿತಾಂಶವನ್ನು ಪಡೆಯುವಿರಿ.

  ವ್ಯಾಯಾಮ: ಶೀಘ್ರ ವೀರ್ಯ ಸ್ಖಲನವನ್ನು ನಿವಾರಿಸುವಲ್ಲಿ ಕೆಲವೊಂದು ವ್ಯಾಯಾಮಗಳು ಸಹ ನಿಮ್ಮ ನೆರವಿಗೆ ಬರುತ್ತವೆ. ಅದರಲ್ಲೂ ಕೆಗೆಲ್ ವ್ಯಾಯಾಮವು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಶಕ್ತಿಶಾಲಿಗೊಳಿಸುತ್ತದೆ. ಈ ಸ್ನಾಯುಗಳು ನಿಮ್ಮ ಜನನಾಂಗದ ನಿಮಿರುವಿಕೆ ಮತ್ತು ಸ್ಖಲನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ.

  ಹಸಿ ಬೆಳ್ಳುಳ್ಳಿ: ಹೌದು, ಹಸಿ ಬೆಳ್ಳುಳ್ಳಿಯು ಗಂಡಸರಲ್ಲಿ ಶೀಘ್ರ ವೀರ್ಯ ಸ್ಖಲನ ಹಾಗು ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ. 3-4 ಬೆಳ್ಳುಳ್ಳಿಯ ತುಣುಕುಗಳನ್ನು ಜಗಿಯುವುದರಿಂದ ಶೀಘ್ರ ವೀರ್ಯ ಸ್ಖಲನದ ಸಮಸ್ಯೆಯಲ್ಲಿ ಗಣನೀಯವಾದ ಪರಿಹಾರವನ್ನು ನೀವು ಕಾಣಬಹುದಾಗಿದೆ.

  ಶತಾವರಿ: ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವಂತಹ ಗುಣವನ್ನು ಶತಾವರಿ ಹೊಂದಿದೆ. ಪುರುಷರಲ್ಲಿ ಹಾರ್ಮೋನುಗಳ ಉತ್ಪತ್ತಿಗೆ ಕಾರಣವಾಗಿರುವ ವಿಟಮಿನ್ ಇ ಅನ್ನು ಅಧಿಕವಾಗಿ ಹೊಂದಿರುವ ಶತಾವರಿ ಹೆಚ್ಚಿನ ಮಿನರಲ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ.

  Sexual Wellness | ನನ್ನ ಗೆಳತಿ ಓರಲ್ ಸೆಕ್ಸ್ ಮಾಡುವಂತೆ ಕೇಳುತ್ತಾಳೆ, ಹೀಗೆ ಮಾಡುವುದರಿಂದ ರೋಗ ಹರಡುವ ಸಾಧ್ಯತೆ ಇದೆಯೇ?

  ಚಾಕಲೇಟ್‌ಗಳು: ಎಲ್ಲರಿಗೂ ಗೊತ್ತಿರುವಂತೆ ಚಾಕಲೇಟ್‌ಗಳೂ ಕೂಡ ಪುರುಷರಲ್ಲಿ ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಪುರುಷರ ಲೈಂಗಿಕ ಅಂಗಕ್ಕೆ ರಕ್ತದ ಹರಿವನ್ನು ಉತ್ತೇಜಿಸುವ ಎಲ್ - ಅರ್ಜಿನಿನ್ ಎಚ್‌ಸಿಎಲ್ ಮುಖ್ಯವಾದ ಅಮೈನೋ ಆಮ್ಲವನ್ನು ಗಾಢ ಚಾಕಲೇಟ್ ಒಳಗೊಂಡಿದೆ. ಇದು ದೇಹದಲ್ಲಿ ಹಾರ್ಮೋನ್ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ.

  ಅಶ್ವಗಂಧ: ಭಾರತದ ಪಶ್ಚಿಮ ಭಾಗದ ಈ ಗಿಡಮೂಲಿಕೆಯು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಬಲಪಡಿಸುವಲ್ಲಿ ಬಳಸುವಂಥದ್ದಾಗಿದೆ. ಇದು ಪುರುಷರಲ್ಲಿ ಕಂಡುಬರುವ ಶೀಘ್ರ ಸ್ಖಲನ ಸಮಸ್ಯೆಯನ್ನು ನಿವಾರಿಸಿ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ವೀರ್ಯ ಸ್ಖಲನದಂತಹ ಸಮಸ್ಯೆಯನ್ನು ದೂರಮಾಡುವಲ್ಲಿ ಕೂಡ ಅಶ್ವಗಂಧ ಪಾತ್ರ ಹಿರಿದಾದುದು.
  Published by:Vinay Bhat
  First published: