ಪಂಚೇಂದ್ರಿಯಗಳಲ್ಲಿ ಕಿವಿ (Ear) ಕೂಡ ಮುಖ್ಯವಾದ ಇಂದ್ರಿಯವಾಗಿದೆ. ಕಣ್ಣುಗಳಷ್ಟೇ ಕಿವಿಗಳ ಆರೈಕೆ (Ear Care) ಕೂಡ ತುಂಬಾ ಮುಖ್ಯ. ಯಾಕಂದ್ರೆ ಕಿವಿ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ಅಂಗವಾಗಿದೆ (Main Part). ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಸಹ ತುಂಬಾ ಜನರು (People) ಕಿವಿಯ ಆರೋಗ್ಯದ (Ear Health) ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಿವಿ ಸಮಸ್ಯೆಯಾದ್ರೆ ಹೊರಗಿನ ಶಬ್ಧವು ಬೇಗ ಕೇಳಿಸುವುದಿಲ್ಲ. ಜನರು ಮಾತನಾಡಿದ್ದು ಸಹ ಕೇಳಿಸುವುದಿಲ್ಲ. ಕಿವಿ ಕೇಳಿಸದಿರುವುದು, ಮಂದವಾಗುವುದು, ನೋವು ಸೇರಿದಂತೆ ಹಲವು ಸಮಸ್ಯೆ ನಿಮ್ಮನ್ನು ಕಾಡಬಹುದು. ಹಾಗಾಗಿ ಕಿವಿಯ ಆರೈಕೆ ಮತ್ತು ಕಾಳಜಿ ಮಾಡುವುದು ತುಂಬಾ ಮುಖ್ಯ.
ಕಿವಿಯ ಸಮಸ್ಯೆ ಮತ್ತು ಆರೈಕೆ
ಕಿವಿ ಸಮಸ್ಯೆ ಇದ್ದಾಗ ಬಾಹ್ಯ ಶಬ್ದ ಕೇಳಲು ಸಾಧ್ಯವಾಗದೇ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚು. ಹೆಚ್ಚಿನ ಗಮನವು ಆರೋಗ್ಯದ ಕಡೆ ತರುವುದು ತುಂಬಾ ಮುಖ್ಯ. ಮೆದುಳು, ಮೂಗು, ಬಾಯಿ, ಕಣ್ಣು ಸೇರಿದಂತೆ ಇತರೆ ಪ್ರಮುಖ ಭಾಗಗಳಿಗೆ ಆಂತರಿಕವಾಗಿ ಕಿವಿಯು ಸಂಪರ್ಕ ಹೊಂದಿದೆ.
ಕಿವಿ ನೋವು, ಇತರೆ ಅಂಗಗಳ ನೋವಿಗೂ ಕಾರಣವಾಗುವ ಸಾಧ್ಯತೆಯಿದೆ. ಆಯುರ್ವೇದ ತಜ್ಞ ಡಾ. ಡಿಂಪಲ್ ಜಂಗ್ಡಾ ಪ್ರಕಾರ, ಕಿವಿ ನೋವು, ಊತ, ಅಡಚಣೆ ಗುಣಪಡಿಸಲು ಮನೆಮದ್ದು ಇದೆ ಎಂದಿದ್ದಾರೆ.
ಚಳಿಗಾಲದಲ್ಲಿ ಕಿವಿ ನೋವು, ಬ್ಯಾಕ್ಟೀರಿಯಾ, ವೈರಸ್ ಹಾಗೂ ಶಿಲೀಂಧ್ರ ಒಳ, ಮಧ್ಯ ಅಥವಾ ಹೊರ ಕಿವಿಯಲ್ಲಿ ಸಿಲುಕಿದಾಗ ಕಿವಿಯ ಸೋಂಕು ಉಂಟಾಗುತ್ತದೆ. ಅದರಿಂದ ಪರಿಹಾರ ಪಡೆಯುವುದು ಮುಖ್ಯ.
ಕಿವಿ ನೋವಿಗೆ ತುಳಸಿ ಪರಿಹಾರ ನೀಡುತ್ತದೆ
ತುಳಸಿ ಉರಿಯೂತ, ಉತ್ಕರ್ಷಣ ನಿರೋಧಕ, ಆಂಟಿಮೈಕ್ರೊಬಿಯಲ್ ಮತ್ತು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣ ಹೊಂದಿದೆ. ಇದು ಕಿವಿ ನೋವು ಮತ್ತು ಸೋಂಕು ನಿವಾರಿಸುತ್ತದೆ.
ಕಿವಿ ನೋವಿನಿಂದ ಪರಿಹಾರ ಪಡೆಯಲು, ತುಳಸಿ ಎಲೆಗಳನ್ನು ಪುಡಿಮಾಡಿ. ಈಗ ಅದರ ರಸ ಶೋಧಿಸಿ ಒಂದರಿಂದ ಎರಡು ಹನಿ ಕಿವಿಗೆ ಹಾಕಿ.
ಕಿವಿ ನೋವು ತಡೆಯಲು ಲವಂಗ ಎಣ್ಣೆ
ಕಿವಿ ನೋವು ನಿವಾರಕವಾಗಿದೆ ಲವಂಗ ಎಣ್ಣೆ. ಉರಿಯೂತದ ಗುಣಲಕ್ಷಣ ಹೊಂದಿದೆ. ಕಿವಿ ನೋವಿಗೆ ಚಿಕಿತ್ಸೆ ನೀಡಲು ಲವಂಗ ಎಣ್ಣೆ ಪರಿಣಾಮಕಾರಿ. ಒಂದು ಚಮಚ ಎಳ್ಳಿನ ಎಣ್ಣೆಯಲ್ಲಿ ಒಂದು ಲವಂಗ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ಎಣ್ಣೆಯನ್ನು ಫಿಲ್ಟರ್ ಮಾಡಿ, ಪೀಡಿತ ಕಿವಿಗೆ 2 ಹನಿ ಬೆಚ್ಚಗಿನ ಎಣ್ಣೆ ಹಾಕಿ.
ಕಿವಿ ನೋವಿಗೆ ಆಲಿವ್ ಎಣ್ಣೆ ಮದ್ದು
ಸೌಮ್ಯ ಹಾಗೂ ಮಧ್ಯಮ ಕಿವಿ ನೋವಿಗೆ ಆಲಿವ್ ಎಣ್ಣೆ ಮನೆಮದ್ದಾಗಿದೆ. ಒಂದು ಟೀಚಮಚ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಮತ್ತು ತಣ್ಣಗಾಗಲು ಬಿಡಿ. ಬಾಧಿತ ಕಿವಿಗೆ 2 ಹನಿ ಹಾಕಿ.
ಕಿವಿ ನೋವು ಗುಣಪಡಿಸಲು ಟೀ ಟ್ರೀ ಆಯಿಲ್
ಟೀ ಟ್ರೀ ಆಯಿಲ್ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ನಂಜು ನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಕಿವಿ ನೋವು ತಡೆಯುತ್ತದೆ.
ಒಂದು ಚಮಚ ಆಲಿವ್ ಎಣ್ಣೆ, ಎಳ್ಳಿನ ಎಣ್ಣೆ ಅಥವಾ ತೆಂಗಿನ ಎಣ್ಣೆಗೆ ಎರಡು ಹನಿ ಟೀ ಟ್ರೀ ಎಣ್ಣೆ ಮಿಶ್ರಣ ಮಾಡಿ ಕಿವಿಗೆ ಹಾಕಿ.
ಕಿವಿಯ ಊತ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ
ಕಿವಿಯ ಸುತ್ತಲಿನ ಪ್ರದೇಶದ ಉರಿಯೂತ ತಡೆಯಲು ಬೆಳ್ಳುಳ್ಳಿ ಮತ್ತು ಶುಂಠಿ ಉರಿಯೂತದ ಗುಣಲಕ್ಷಣ ಹೊಂದಿರುವ ಪದಾರ್ಥ ಪ್ರಯೋಜನಕಾರಿ. ಊತವನ್ನು ಕಡಿಮೆ ಆಗುತ್ತದೆ. ಕಿವಿ ನೋವನ್ನು ಕಡಿಮೆ ಮಾಡುತ್ತದೆ.
ಮೂರು ಎಸಳು ಬೆಳ್ಳುಳ್ಳಿ ಬಿಸಿ ಮಾಡಿ, ಚಿಟಿಕೆ ಉಪ್ಪು ಬೆರೆಸಿ ಬಟ್ಟೆಯಲ್ಲಿ ಹಾಕಿ ನೋವಿರುವ ಕಿವಿಯ ಮೇಲೆ ಒತ್ತಿರಿ. ತಾಜಾ ಶುಂಠಿಯ ತುಂಡಿನ ರಸವನ್ನ ಪೀಡಿತ ಕಿವಿಯ ಬಳಿ ಚರ್ಮದ ಮೇಲೆ ಅನ್ವಯಿಸಿ.
ಇದನ್ನೂ ಓದಿ: ಸ್ನಾನದ ಸಮಯದಲ್ಲಿ ಈ ಸಣ್ಣ ಮಿಸ್ಟೇಕ್ ಮಾಡಿದ್ರೆ ಹೃದಯಾಘಾತವಾಗುತ್ತಂತೆ!
ಜಲನೇತಿ
ಜಲನೇತಿ ಆಯುರ್ವೇದ ಚಿಕಿತ್ಸೆ. ಮೂಗಿನ ಒಂದು ರಂಧ್ರದಿಂದ ನೀರನ್ನು ಸುರಿದು, ಇನ್ನೊಂದು ರಂಧ್ರದಿಂದ ಹೊರ ತೆಗೆಯಲಾಗುತ್ತದೆ. ಇದರಿಂದ ಮೂಗು ಮತ್ತು ಕಿವಿಯ ನಡುವಿನ ದಾರಿಯಲ್ಲಿ ತುಂಬಿರುವ ಕಫ ನಿವಾರಣೆಯಾಗುತ್ತದೆ. ಕೆಲವು ಹನಿ ನೀಲಗಿರಿ ಎಣ್ಣೆ ಉಗಿ ತೆಗೆದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ