HOME » NEWS » Lifestyle » E INSURANCE THE IMPORTANCE OF HAVING AN E INSURANCE ACCOUNT IN YOUR FINANCIAL PORTFOLIO SCT STG

E-Insurance: ನಿಮ್ಮ ಫೈನಾನ್ಷಿಯಲ್ ಪ್ರೊಫೈಲ್​ನಲ್ಲಿ ತಪ್ಪದೆ ಇರಲಿ ಇ-ಇನ್ಶೂರೆನ್ಸ್!

E-Insurance | ಇ-ವಿಮಾ ಖಾತೆಯು ಪಾಲಿಸಿದಾರರಿಗೆ ತಮ್ಮ ಜೀವ ವಿಮೆ ಮತ್ತು ಸಾಮಾನ್ಯ ವಿಮಾ ಪಾಲಿಸಿಗಳು ಸೇರಿದಂತೆ ಹಲವಾರು ವಿಮೆಗಳನ್ನು ಎಲೆಕ್ಟ್ರಾನಿಕ್​ ವಿಧಾನದಲ್ಲಿ ಕಾಪಾಡಿಕೊಳ್ಳಲು ನೆರವಾಗುತ್ತದೆ.

news18-kannada
Updated:April 11, 2021, 3:54 PM IST
E-Insurance: ನಿಮ್ಮ ಫೈನಾನ್ಷಿಯಲ್ ಪ್ರೊಫೈಲ್​ನಲ್ಲಿ ತಪ್ಪದೆ ಇರಲಿ ಇ-ಇನ್ಶೂರೆನ್ಸ್!
ಸಾಂದರ್ಭಿಕ ಚಿತ್ರ
  • Share this:
ಇ- ವಿಮಾ ಖಾತೆಯು ನಿಮ್ಮ ಆರೋಗ್ಯ, ಜೀವನ, ವಾಹನ, ಮನೆ ಮತ್ತು ಇನ್ನಿತರ ಪಾಲಿಸಿಗಳನ್ನು ಎಲೆಕ್ಟ್ರಾನಿಕ್​ ಫಾರ್ಮ್​ನಲ್ಲಿ ಸೇಫ್ ಆಗಿ ಇರಿಸುತ್ತದೆ. ಇದು ಈ ಯುಗದ ಅದ್ಭುತ ಆರ್ಥಿಕ ಶಿಸ್ತಿನಲ್ಲಿ ಒಂದಾಗಿದೆ. ಸುನೀತಾ ತಮ್ಮ ಆರೋಗ್ಯ ವಿಮಾ ಪಾಲಿಸಿಯ ಬಗ್ಗೆ ಸಹಾಯವನ್ನು ಕೇಳಿಕೊಂಡು ನಮ್ಮ ತಂಡವನ್ನು ಭೇಟಿ ಮಾಡಿದರು. ಕಳೆದ 15 ವರ್ಷಗಳಲ್ಲಿ ಅವರು 25 ಪಾಲಿಸಿಗಳನ್ನು ಕೊಂಡುಕೊಂಡಿದ್ದರು. ಎಲ್ಲ ಮಹಿಳೆಯರಂತೆ ಮೊದಲು ಚಿನ್ನ ಮತ್ತು ಹೂಡಿಕೆ ಆಧಾರಿತ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರು. ಅದರಲ್ಲೂ ಲೈಫ್ ಇನ್ಶೂರೆನ್ಸ್ ಪಾಲಿಸಿ ಮತ್ತು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಸಹ ಹೊಂದಿದ್ದರು. ಅವರ ಪತಿಯ ಹೆಸರಿನಲ್ಲಿ ಸಾಮಾನ್ಯ ಇನ್ಶೂರೆನ್ಸ್ ಪಾಲಿಸಿಯೂ ಇತ್ತು. ಅಲ್ಲದೇ ಆ ಪಾಲಿಸಿಗಳ ಕಾರ್ಯ ನಿರ್ವಹಣೆ ಕುರಿತು ತಿಳಿದುಕೊಳ್ಳಲು ಅವರು ನಮ್ಮನ್ನು ಭೇಟಿಯಾಗಿದ್ದರು.

ಪಾಲಿಸಿಗಳನ್ನು ಬೇರೆ ಬೇರೆ ಸಮಯದಲ್ಲಿ ತೆಗೆದುಕೊಂಡಿದ್ದರು. ಪ್ರೀಮಿಯಂ ಪಾವತಿಗಳಿಗಾಗಿ ವಿಮಾ ಕಂಪನಿಯ ರಿಮೈಂಡರ್​ಗಳನ್ನು ಅವಲಂಬಿಸಿದ್ದರು. ಕೆಲವು ಪಾಲಿಸಿಗಳು ಮಕ್ಕಳ ಹೆಸರಿನಲ್ಲಿದ್ದವು, ಇನ್ನೂ ಕೆಲವು ಪಾಲಿಸಿಗಳ ದಾಖಲೆಗಳು ಇರಲಿಲ್ಲ. ಇದೆಲ್ಲವನ್ನೂ ಒಟ್ಟುಗೂಡಿಸಲು ಅವರು ಸಾಕಷ್ಟು ಸಮಯ ತೆಗೆದುಕೊಂಡರು. ಅಲ್ಲದೇ 25 ಪಾಲಿಸಿಗಳನ್ನು ಒಟ್ಟಾಗಿ ಇಟ್ಟಿದ್ದರಿಂದ ಸಂಪೂರ್ಣ ಗೊಂದಲಮಯವಾಗಿತ್ತು. ಅಲ್ಲದೇ ಅವರ ಬೋನಸ್ ಮತ್ತು ಮನಿಬ್ಯಾಕ್​​ಗಳನ್ನು ಪಡೆದಿರುವುದರ ಬಗ್ಗೆಯೂ ಮಾಹಿತಿ ಇರಲಿಲ್ಲ.

ಸಾಮಾನ್ಯವಾಗಿ, ಪಾಲಿಸಿದಾರರು ಪ್ರತಿ ಬಾರಿ ಪಾಲಿಸಿಯನ್ನು ಖರೀದಿಸಿದಾಗ ಅಥವಾ ಅವರು ಮನೆ ಸ್ಥಳಾಂತರಗೊಂಡರೆ ವಿಳಾಸವನ್ನು ಸೇರಿಸಲು ಬೇರೆ ಬೇರೆ ಬ್ಯಾಂಕ್ ಖಾತೆ ವಿವರಗಳನ್ನು ನೀಡುತ್ತಾರೆ ಎನ್ನುವ ಅಂಶ ನನ್ನ ಗಮನಕ್ಕೆ ಬಂದಿದೆ. ನನಗೆ ತಿಳಿದಂತೆ ಪ್ರತಿಯೊಬ್ಬರು ವಿಭಿನ್ನ ಬ್ಯಾಂಕ್​ ಖಾತೆಯ ಮೂಲಕ ಪಾಲಿಸಿಗಳನ್ನು ಖರೀದಿಸಿರುತ್ತಾರೆ. ಅಲ್ಲದೇ ಮನೆ ಬದಲಿಸಿದಾಗ ಅದರ ವಿಳಾಸವನ್ನು ಸೇರಿಸಲು ಮರೆತಿರುತ್ತಾರೆ.
ಸುನೀತಾ ಅವರ ರೀತಿ ನೀವು ಇದೇ ಸಮಸ್ಯೆ ಎದುರಿಸುತ್ತಿದ್ದರೇ, ನಿಮಗೆ ಇ- ಇನ್ಶೂರೆನ್ಸ್​ ಅಕೌಂಟ್ ಸರಿಯಾದ ಆಯ್ಕೆಯಾಗಿರುತ್ತದೆ.

ಏನಿದು ಇ- ಇನ್ಶೂರೆನ್ಸ್ (e-insurance )?
ಇ-ವಿಮಾ ಖಾತೆಯು ಪಾಲಿಸಿದಾರರಿಗೆ ತಮ್ಮ ಜೀವ ವಿಮೆ ಮತ್ತು ಸಾಮಾನ್ಯ ವಿಮಾ ಪಾಲಿಸಿಗಳು ಸೇರಿದಂತೆ ಹಲವಾರು ವಿಮೆಗಳನ್ನು ಎಲೆಕ್ಟ್ರಾನಿಕ್​ ವಿಧಾನದಲ್ಲಿ ಕಾಪಾಡಿಕೊಳ್ಳಲು ನೆರವಾಗುತ್ತದೆ. ಯಾವುದೇ ಪಾಲಿಸಿ ಪೇಪರ್​ಗಳನ್ನು ಹೊಂದಿಸಿಕೊಂಡು ಕೂರುವಂತಿಲ್ಲ. ಈ ಎಲೆಕ್ಟ್ರಾನಿಕ್ ವಿಮಾ ಖಾತೆಯಲ್ಲಿ ಪಾಲಿಸಿಯ ದಾಖಲೆಗಳನ್ನು , ಜೊತೆಗೆ ವ್ಯಕ್ತಿಯ ಷೇರಿನ ವಿವರವನ್ನು ಸಂಗ್ರಹಿಸಿಟ್ಟುಕೊಂಡಿರುತ್ತದೆ. ಷೇರುಗಳನ್ನು ಮತ್ತು ಮ್ಯೂಚುವಲ್ ಫಂಡ್​ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಬಳಸುವುದರಿಂದ ಇ- ಇನ್ಶೂರೆನ್ಸ್​ ಪಾಲಿಸಿದಾರರಿಗೆ ಮತ್ತು ಹೂಡಿಕೆದಾರರಿಗೆ ಬಹಳಷ್ಟು ಪ್ರಯೋಜನಗಳಿವೆ. ಎಲ್ಲಾ ವಿಮಾ ಪಾಲಿಸಿಗಳು ಒಂದೇ ಕಡೆ ಇರುತ್ತವೆ ಅಲ್ಲದೇ ಕಳೆದು ಹೋಗುವ ಭಯವಿಲ್ಲ.

ವಿಳಾಸ ಬದಲಾವಣೆ, ಬ್ಯಾಂಕ್​ ಖಾತೆ ವಿವರಗಳಂತಹ ವಹಿವಾಟುಗಳನ್ನು ಆನ್​ಲೈನ್​ನಲ್ಲಿ ನಿಭಾಯಿಸಬಹುದು. ಮನಿಬ್ಯಾಕ್​ ಅಥವಾ ಮೆಚ್ಯೂರಿಟಿ ಪ್ರಯೋಜನಗಳು ಪಾಲಿಸಿದಾರರ ಬ್ಯಾಂಕ್​ಗೆ ನೇರವಾಗಿ ಜಮೆಯಾಗುತ್ತದೆ. ಪ್ರೀಮಿಯಂ ಪಾವತಿ ರಿಮೈಂಡರ್ಸ್​ ಮತ್ತು ಪಾಲಿಸಿ ಮೆಚ್ಯೂರಿಟಿಯ ನೋಟಿಫಿಕೇಷನ್​ಗಳು ಪಾಲಿಸಿದಾರರಿಗೆ ತಮ್ಮ ವಿಮೆ ಯಾವ ಸ್ಥಿತಿಯಲ್ಲಿದೆ ಎನ್ನುವುದರ ಅರಿವು ಮೂಡಿಸುತ್ತದೆ. ಅಲ್ಲದೇ ಒಂದೇ ಅಕೌಂಟಿನಲ್ಲಿ ಉಚಿತವಾಗಿ ಕುಟುಂಬದ ಎಲ್ಲಾ ಸದಸ್ಯರ ಪಾಲಿಸಿಯನ್ನು ಸೇರಿಸಬಹುದು. ಅಲ್ಲದೇ ಡಿಜಿ ಲಾಕರ್​ ಸೌಲಭ್ಯವೂ ಇದೆ. ಆದರೆ ಇದರಲ್ಲಿ ವಹಿವಾಟು ನಡೆಸುವುದು ಕಷ್ಟ.ವಿಮಾ ಪಾಲಿಸಿಗಳನ್ನು ಡಿಜಿ ಲಾಕರ್‌ನಲ್ಲೂ ಇಡಬಹುದು. ಆದರೆ ಇ-ವಿಮಾ ಖಾತೆಯಿಂದ ಹಲವಾರು ಪ್ರಯೋಜನಗಳಿವೆ. ಪಾಲಿಸಿ ಡಾಕ್ಯುಮೆಂಟ್​ ನೋಡಬಹುದು, ಆದರೆ ಅದರಿಂದ ವ್ಯವಹರಿಸಲು ಸಾಧ್ಯವಿಲ್ಲ. ಕ್ಲೈಮ್‌ಗಳು, ಪ್ರೀಮಿಯಂ ಪಾವತಿ, ನಾಮಿನಿಯ ಬದಲಾವಣೆ ಅಥವಾ ವಿಳಾಸ ಬದಲಾವಣೆಗಳು ಇಲ್ಲಿ ಸಾಧ್ಯವಿಲ್ಲ.

ಹೂಡಿಕೆಗೆ ಅದ್ಭುತವಾದ ಜಾಗ
ಇ-ವಿಮಾ ಖಾತೆಯಲ್ಲಿ ಅನೇಕ ಪ್ರಯೋಜನಗಳಿದ್ದರೂ ಕೆಲವು ಸಮಸ್ಯೆ ಬಗೆಹರಿಸಬೇಕಿದೆ. ಮೊದಲನೆಯದಾಗಿ ಕೆವೈಸಿ ಮಾಡಬೇಕು, ಮ್ಯೂಚಲ್​ ಫಂಡ್​ನ ಕೆವೈಸಿ ಇದ್ದರೂ ಇಲ್ಲಿ ನೆರವಿಗೆ ಬರುವುದಿಲ್ಲ. ಡಾಕ್ಯುಮೆಂಟ್​ಗಳನ್ನು ಪದೇ ಪದೇ ಅಪ್​​ಲೋಡ್​ ಮಾಡಬೇಕಿರುವ ಕಾರಣ ಪಾಲಿಸಿದಾರರು ಪೇಪರ್​ಗಳನ್ನು ಮಾತ್ರ ಇಷ್ಟಪಡುತ್ತಾರೆ.

ಎರಡನೆಯದಾಗಿ, ಇನ್ಶೂರೆನ್ಸ್ ವೆಬ್​ಸೈಟ್​ ಮೂಲಕ ಪ್ರೀಮಿಯಂ ಕಟ್ಟಬೇಕು. ಇದನ್ನು ಪಾಲಿಸಿದಾರರೇ ಮಾಡಬೇಕು. 5 ವಿಮಾ ಖಾತೆಗಳಲ್ಲಿ ಒಂದಾದ CAMSRep ಪಾಲಿಸಿದಾರರ ಬ್ಯಾಂಕ್​ ಖಾತೆಯಿಂದ ನೇರವಾಗಿ ತಡೆರಹಿತ ಹಣ ವರ್ಗಾವಣೆಗೆ ಅಗತ್ಯ ಲಿಂಕ್​ಗಳನ್ನು ನೀಡುತ್ತದೆ.

ಅರಿವಿನ ಕೊರತೆಯಿಂದಾಗಿ ಇ-ವಿಮೆಯನ್ನು ಹೊಂದುವುದು ಬಹಳ ಕಡಿಮೆ. ಪಾಲಿಸಿ ಹೊಂದಿರುವವರಿಗೆ ಪ್ರಯೋಜನಕಾರಿಯಾದ ವಿಮಾ ಕಂಪನಿಗಳು ಇ- ವಿಮೆ ಪದ್ಧತಿಯನ್ನು ಅನುಸರಿಸಬೇಕು. ಹಣಕಾಸು ವಿಷಯದಲ್ಲಿ ತಂತ್ರಜ್ಞಾನವು ಎಲ್ಲರಿಗೂ ಸರಳ ಮಾರ್ಗವಾಗಿದೆ. ಇದನ್ನು ಏಜೆಂಟರು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು.

2021ನೇ ವರ್ಷ ಹಣಕಾಸಿನ ವಿಷಯದ ಮೂಲ ಅಂಶಗಳ ಕಡೆ ಗಮನ ಹರಿಸಿದರೆ, 2022 ನೇ ವರ್ಷ ಸುಲಭವಾದ ಆರ್ಥಿಕ ಶಿಸ್ತು ರೂಢಿಸಿಕೊಳ್ಳುವಲ್ಲಿ ಇ- ವಿಮಾ ಖಾತೆ ಒಂದು ಭರವಸೆಯ ಹೆಜ್ಜೆಯಾಗಿದೆ.
Published by: Sushma Chakre
First published: April 11, 2021, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories