ಧೂಮಪಾನಿಗಳೇ ಎಚ್ಚರ: ಇ-ಸಿಗರೇಟ್​ ಕೂಡ ಹಾನಿಕಾರಕ

zahir | news18
Updated:October 13, 2018, 11:45 AM IST
ಧೂಮಪಾನಿಗಳೇ ಎಚ್ಚರ: ಇ-ಸಿಗರೇಟ್​ ಕೂಡ ಹಾನಿಕಾರಕ
  • Advertorial
  • Last Updated: October 13, 2018, 11:45 AM IST
  • Share this:
-ನ್ಯೂಸ್ ​18 ಕನ್ನಡ

ತಂಬಾಕು ವ್ಯವಸನ ಹಾನಿಕಾರಕ ಎಂದು ಹೆಚ್ಚಿನವರು ಇ-ಸಿಗರೇಟ್​ನ ಮೊರೆ ಹೋಗುತ್ತಾರೆ.  ಆದರೆ ಇದು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೊಸ ಸಂಶೋಧನೆಯಿಂದ ದೃಢಪಟ್ಟಿದೆ. ಇ-ಸಿಗರೇಟ್​ನಲ್ಲಿ ಬಳಸುವ ಫ್ಲೇವರ್ ಮತ್ತು ಮಿಶ್ರಣಾ ಪದಾರ್ಥಗಳು ಉರಿಯೂತ ಹೆಚ್ಚಿಸುತ್ತದೆ. ಹಾಗೆಯೇ ಇದರಿಂದ ಶ್ವಾಸಕೋಶದ ಮೇಲೆ ಹೆಚ್ಚಿನ ಹಾನಿಯುಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸಾಮಾನ್ಯ ಸಿಗರೇಟ್​ಗಳ ಸೇವೆನೆಯಿಂದ ಮುಕ್ತಿ ಹೊಂದಲು ಇ-ಸಿಗರೇಟ್ ಸೇದುವವರ  ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ.  ಈ ಧೂಮಪಾನ ಸಾಧನ ಬ್ಯಾಟರಿ ಚಾಲಿತವಾಗಿದ್ದು, ಇದರಲ್ಲಿನ ರಿಫೈಲೆಬಲ್ ಕಾರ್ಟ್ರಿಡ್ಜ್​ನಲ್ಲಿ ರಾಸಾಯನಿಕಗಳನ್ನು ಬಳಸುವ ಮೂಲಕ ಆವಿಯನ್ನು ಹೊಗೆಯ ರೂಪದಲ್ಲಿ ಹೊರ ಬಿಡಲಾಗುತ್ತದೆ.

ಈ ಅಧ್ಯಯನ ನಡೆಸಿದ ಅಥೆನ್ಸ್​ ವಿಶ್ವ ವಿದ್ಯಾಲಯದ ಸಂಶೋಧಕರ ಪ್ರಕಾರ, ಇ- ಸಿಗರೇಟ್​ಗಳು ಸಾಮಾನ್ಯ ಸಿಗರೇಟ್​ಗಳಂತೆ ಹೆಚ್ಚು ಅಪಾಯಕಾರಿಯಾಗಿದ್ದು, ಇದು ಶ್ವಾಸಕೋಶದ ಉರಿಯೂತವನ್ನು ಉಂಟು ಮಾಡುತ್ತದೆ. ಅದೇ ರೀತಿ ಶ್ವಾಸಕೋಶದ ಮೇಲೆ ಹೆಚ್ಚಿನ ಹಾನಿಗೆ ಕಾರಣವಾಗುತ್ತದೆ ಎಂದಿದ್ದಾರೆ.

ಈ ಅಧ್ಯಯನಕ್ಕಾಗಿ ಪ್ರತಿ ದಿನ ನಾಲ್ಕು ಬಾರಿ ಇ-ಸಿಗರೇಟ್​ನಲ್ಲಿ ಬಳಸಲಾಗುವ ರಾಸಾಯನಿಕ ಸಂಯೋಜನೆಗಳನ್ನು ಹಲವಾರು ಇಲಿಗಳ ಮೇಲೆ ಪ್ರಯೋಗಿಸಲಾಗಿತ್ತು. ಈ ವೇಳೆ ಇಲಿ ಆರೋಗ್ಯ ಹದಗೆಟ್ಟಿದ್ದಲ್ಲದೇ, ಶ್ವಾಸಕೋಶದ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದು ಕಂಡು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಪ್ರಯೋಗಾತ್ಮಕ ಸಂಶೋಧನೆಯಲ್ಲಿ ಇ-ಸಿಗರೇಟ್​ನಿಂದ ಉತ್ಪಾದನೆಯಾಗುವ ಹೊಗೆಯು ಉರಿಯೂತದ ಗುರುತುಗಳನ್ನು ಮತ್ತು ಪ್ರೋಪೈಲೀನ್​ನಲ್ಲಿನ ಶ್ವಾಸಕೋಶದ ಕಾರ್ಯದಲ್ಲಿ ಬದಲಾವಣೆ ಉಂಟು ಮಾಡಿದೆ. ಈ ಪರೀಕ್ಷೆಯನ್ನು ಮೂರು ದಿನಗಳ ಕಾಲ ಮುಂದುವರೆಸಿದಾಗ ಶ್ವಾಸಕೋಶದ ಮೇಲೆ ಹಾನಿಯಾಗುತ್ತಿರುವುದು ಪತ್ತೆಯಾಗಿದೆ. ಅಲ್ಲದೆ ಇದರಲ್ಲಿ ಬಳಸಲಾಗುವ ಕೆಲವೊಂದು ಫ್ಲೇವರ್​ಗಳಿಗೆ ಅನುಗುಣವಾಗಿ ಹೆಚ್ಚಿ ಪರಿಣಾಮ ಬೀರುತ್ತಿದೆ. ಹಾಗೆಯೇ ಅಲ್ಪಾವಧಿಯವರೆಗಿನ ಇ-ಸಿಗರೇಟ್​ ಬಳಕೆ ಕೂಡ ಸುರಕ್ಷಿತವಲ್ಲ ಎಂದು ಈ ಅಧ್ಯಯನ ಸೂಚಿಸಿದೆ.

ಇದನ್ನು ಓದಿ: ವಿಟಮಿನ್ ಮಾತ್ರೆಗಳನ್ನು ಸೇವಿಸುವ ಮುನ್ನ ಎಚ್ಚರ
Loading...

ಇ-ಸಿಗರೇಟ್​ ಸೇದುವವರ ಆಕ್ಸಿಡೇಟಿವ್ ಒತ್ತಡದ ಮಟ್ಟ-ಸೆಲ್ಯುಲಾರ್ ಒತ್ತಡ ಮಟ್ಟ ಎಲ್ಲ ರೀತಿಯ ಫ್ಲೇವರ್​ ಬಳಕೆದಾರರಲ್ಲೂ ಒಂದೇ ರೀತಿಯಾಗಿರುತ್ತದೆ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿರುತ್ತದೆ. ಇದಕ್ಕೆ ಚಿಕಿತ್ಸೆಯ ಮೂಲಕ ಪರಿಹಾರ ಕಾಣಬಹುದು ಎಂದು ಅಧ್ಯಯನ ತಂಡ ತಿಳಿಸಿದೆ.

ಅಲ್ಲದೆ, ಈ ಅಧ್ಯಯನವು ವಿಶ್ವಾದಾದ್ಯಂತ ಜನರ ಆಕರ್ಷಿತಕ್ಕೆ ಒಳಗಾಗುತ್ತಿರುವ ಇ-ಸಿಗರೇಟ್​ನ ಸುರಕ್ಷತೆ ಮತ್ತು ಪರಿಣಾಮವನ್ನು ಮತ್ತೊಮ್ಮೆ ತನಿಖೆ ಮಾಡುವ ಅಗತ್ಯತೆಯನ್ನು ತೋರಿಸುತ್ತದೆ ಎಂದು ಸಂಶೋಧಕರು ಇ-ಸಿಗರೇಟ್​ ಬಳಕೆದಾರರನ್ನು ಎಚ್ಚರಿಸಿದ್ದಾರೆ.
First published:October 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...