• Home
  • »
  • News
  • »
  • lifestyle
  • »
  • Weight Loss: ದೇಹದಲ್ಲಿ ಹೀಗೆಲ್ಲಾ ಆಗ್ತಿದ್ಯಾ? ಹಾಗಿದ್ರೆ ತೂಕ ಕಡಿಮೆಯಾಗ್ತಿದೆ, ಖುಷಿ ಪಡಿ!

Weight Loss: ದೇಹದಲ್ಲಿ ಹೀಗೆಲ್ಲಾ ಆಗ್ತಿದ್ಯಾ? ಹಾಗಿದ್ರೆ ತೂಕ ಕಡಿಮೆಯಾಗ್ತಿದೆ, ಖುಷಿ ಪಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವುದೇ ಆಗಲಿ ಒಮ್ಮೆ ವ್ಯಕ್ತಿ ಅದನ್ನು ಇಷ್ಟ ಪಡಲು ಶುರು ಮಾಡಿದ್ರೆ ಇದನ್ನು ಮಾಡಲೇಬೇಕು ಅಂತಾ ತೀರ್ಮಾನ ಮಾಡಿದ್ರೆ ಎಂಥಹ ಕೆಲಸ ಬೇಕಾದ್ರೂ ಮಾಡಿಯೇ ತೀರುತ್ತಾನೆ. ಅದರಲ್ಲಿ ನೀವು ಅತಿಯಾದ ಬೊಜ್ಜನ್ನು ತೊಡೆದು ಹಾಕಲು ನಿರ್ಧಾರ ಮಾಡಿದ್ರೆ ತ್ವರಿತವಾಗಿ ತೂಕ ಇಳಿಸಬಹುದು. ದಿನವೂ ನಿಯಮಿತವಾಗಿ ವ್ಯಾಯಾಮ ಮಾಡಿದ್ರೆ ವೇಗವಾಗಿ ತೂಕ ಇಳಿಕೆಯಾಗುತ್ತದೆ.

ಮುಂದೆ ಓದಿ ...
  • Share this:

    ಕೆಟ್ಟ ಆಹಾರ ಪದ್ಧತಿ (Bad Food Plan) ಮತ್ತು ಕೆಟ್ಟ ಜೀವನಶೈಲಿಯಿಂದ (Bad Lifestyle) ಹಲವು ಕಾಯಿಲೆಗಳು (Diseases) ಅಂಟಿಕೊಳ್ಳುತ್ತವೆ. ಮುಖ್ಯವಾಗಿ ದೇಹವು ಆಲಸ್ಯಕ್ಕೆ ತುತ್ತಾಗುತ್ತದೆ. ಮನಸ್ಸು ಮಂಕಾಗುತ್ತದೆ. ಜೊತೆಗೆ ತ್ವರಿತವಾಗಿ ಬೊಜ್ಜು ಹೆಚ್ಚಾಗುತ್ತದೆ. ಹೀಗೆ ಕರಿದ ಆಹಾರ ಸೇವನೆ, ದೀರ್ಘಕಾಲ ಕುಳಿತೇ ಇರುವುದು, ಅತಿಯಾದ ತೂಕ, ಬೆಳಗ್ಗೆ ವಾಕಿಂಗ್, ವ್ಯಾಯಾಮ, ಯೋಗ ಮಾಡದೇ ಇರುವುದು, ಪೋಷಕ ತತ್ವ ಹೊಂದಿರುವ ಪದಾರ್ಥ ಸೇವನೆ ಮಾಡದೇ ಇರುವುದು ಹಾಗೂ ಅತಿಯಾದ ಕ್ಯಾಲೋರಿ ಭರಿತ ಪದಾರ್ಥ ಸೇವನೆಯು ವೇಗವಾಗಿ ತೂಕ ಹೆಚ್ಚಲು (Weight Gain) ಕಾರಣವಾಗುತ್ತದೆ. ಹೀಗೆ ಏರಿಕೆಯಾದ ಬೊಜ್ಜನ್ನು ಕಡಿಮೆ (Weight Loss) ಮಾಡಲು ಪರಿಣಾಮಕಾರಿ ಮಾರ್ಗ ಅಂದ್ರೆ ವ್ಯಾಯಾಮ ಮಾಡುವುದು.


    ತೂಕ ನಷ್ಟಕ್ಕೆ ಹಾಗೂ ಆರೋಗ್ಯಕರ ಜೀವನಕ್ಕೆ ದಿನವೂ ವ್ಯಾಯಾಮ ಮಾಡಿ


    ಯಾವುದೇ ಆಗಲಿ ಒಮ್ಮೆ ವ್ಯಕ್ತಿ ಅದನ್ನು ಇಷ್ಟ ಪಡಲು ಶುರು ಮಾಡಿದ್ರೆ, ಇದನ್ನು ಮಾಡಲೇಬೇಕು ಅಂತಾ ತೀರ್ಮಾನ ಮಾಡಿದ್ರೆ ಎಂಥಹ ಕೆಲಸ ಬೇಕಾದ್ರೂ ಮಾಡಿಯೇ ತೀರುತ್ತಾನೆ. ಅದರಲ್ಲಿ ನೀವು ಅತಿಯಾದ ಬೊಜ್ಜನ್ನು ತೊಡೆದು ಹಾಕಲು ನಿರ್ಧಾರ ಮಾಡಿದ್ರೆ, ತ್ವರಿತವಾಗಿ ತೂಕ ಇಳಿಸಬಹುದು.


    ದಿನವೂ ನಿಯಮಿತವಾಗಿ ವ್ಯಾಯಾಮ ಮಾಡಿದ್ರೆ ವೇಗವಾಗಿ ತೂಕ ಇಳಿಕೆಯಾಗುತ್ತದೆ. ಅತಿಯಾದ ಬೊಜ್ಜಿನಿಂದ ದೇಹದಲ್ಲಿ ಹಲವು ಸಮಸ್ಯೆ, ಕಾಯಿಲೆಗಳು ಬಾಧಿಸುತ್ತಾ ಇರುತ್ತವೆ. ಹೇಗೆ ನಾವು ದಿನವೂ ವ್ಯಾಯಾಮ ಮಾಡುತ್ತಾ ಹೋಗುತ್ತೇವೆಯೋ ಹಾಗೇ, ದೇಹದ ಬೊಜ್ಜು ಕಡಿಮೆಯಾಗುತ್ತದೆ.




    ಆಗ ದೇಹದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆರೋಗ್ಯ ಸಮಸ್ಯೆಗಳು ನಿಧಾನವಾಗಿ ಕರಗುತ್ತಾ ಹೋಗುತ್ತವೆ. ಸ್ಲಿಮ್ ಮತ್ತು ಫಿಟ್ ಆದಂತೆ ದೇಹವು ಆರೋಗ್ಯಕರವಾಗುತ್ತಾ ಹೋಗುತ್ತದೆ.


    ಇಂದು ನಾವು ವ್ಯಾಯಾಮ ಮಾಡಿದಂತೆ ತೂಕ ನಷ್ಟದ ಜೊತೆಗೆ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಇಲ್ಲಿ ತಿಳಿಯೋಣ.


    ಕೂದಲು ಆರೋಗ್ಯಕರವಾಗುವುದು


    ನೀವು ತೂಕ ನಷ್ಟದ ವೇಳೆ ಆಹಾರದಲ್ಲಿ ಮಾಡುವ ಬದಲಾವಣೆಗಳು ನಿಮ್ಮನ್ನು ಆರೋಗ್ಯಕರವಾಗಿಸುತ್ತವೆ. ಜೊತೆಗೆ ಮೊದಲು ಇರುತ್ತಿದ್ದ ಕೂದಲು ಸೀಳುವಿಕೆ, ಕೂದಲು ಉದುರುವುದು,


    ಕೂದಲು ಬಿಳಿಯಾಗುವುದು, ಒಣ ಕೂದಲ ಸಮಸ್ಯೆ ಇದೆಲ್ಲವೂ ಕಡಿಮೆಯಾಗುತ್ತಾ ಹೋಗುತ್ತದೆ. ನಿಮ್ಮ ಕೂದಲು ರಚನೆ ಬದಲಾಗುತ್ತಾ ಹೋದರೆ ಅದು ತೂಕ ನಷ್ಟದ ಪಾಸಿಟಿವ್ ಸಂಕೇತವಾಗಿದೆ.


    ದೇಹದಲ್ಲಿ ಶಕ್ತಿಯ ಭಾವನೆ ಬರುವುದು


    ತೂಕ ನಷ್ಟದ ಸಮಯದಲ್ಲಿ ನೀವು ಮಾಡುವ ತಾಲೀಮು ಮತ್ತು ಆಹಾರ ಕ್ರಮ ಫಾಲೋ ಮಾಡುವುದು, ಪೋಷಕ ಪದಾರ್ಥಗಳ ಸೇವನೆ ಮಾಡುವುದು ನಿಮಗೆ ಶಕ್ತಿ ನೀಡುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ.


    ಇದರಿಂದ ಬೇಗನೆ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಊಟದಲ್ಲಿ ಪೌಷ್ಠಿಕಾಂಶವುಳ್ಳ ಆಹಾರ ಸೇರಿಸಿದಾಗ ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆಹಾರದಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್ ಸೇರಿಸಿ. ಮೊದಲಿಗಿಂತ ಕಡಿಮೆ ಹಸಿವು ಹಾಗೂ ಶಕ್ತಿ ಹೆಚ್ಚುತ್ತದೆ.


    ಸಾಂದರ್ಭಿಕ ಚಿತ್ರ


    ಗೊರಕೆ ಹೊಡೆಯುವದು ಕಡಿಮೆಯಾಗುವುದು


    ನಿಮ್ಮ ಜೀವನಶೈಲಿಯಲ್ಲಿ ಮಾಡುವ ಉತ್ತಮ ಬದಲಾವಣೆ ಹಾಗೂ ಆಹಾರ ಕ್ರಮದ ಪಾಲನೆ, ವರ್ಕೌಟ್ ಮಾಡುವುದು ದೇಹದ ತೂಕ ಇಳಿಕೆ ಜರ್ನಿಯನ್ನು ಸುಲಭವಾಗಿಸುತ್ತದೆ. ಸ್ವಲ್ಪ ಸ್ವಲ್ಪ ಬೊಜ್ಜು ಕರಗಿದಂತೆ ಗೊರಕೆ ಕಡಿಮೆಯಾಗುತ್ತದೆ.


    ಮೆಟಾಬಾಲಿಕ್ ಸಿಂಡ್ರೋಮ್ ಇದು ದೇಹದಲ್ಲಿ ಗೊರಕೆಗೆ ಕಾರಣ ಎಂದು ಹೇಳಲಾಗಿದೆ. ನೀವು ಮಾಡುವ ತಾಲೀಮು ಮತ್ತು ಡಯಟ್ ನಿಂದಾಗಿ ರಾತ್ರಿ ಗೊರಕೆ ಹೊಡೆಯದಿದ್ದರೆ ನಿಮ್ಮ ತೂಕ ಇಳಿಕೆಯ ಪಯಣ ಸರಿಯಾದ ಹಾದಿಯಲ್ಲಿದೆ ಎಂದರ್ಥ.


    ದೇಹದ ಆಕಾರದಲ್ಲಿ ಬದಲಾವಣೆ ಆಗುವುದು


    ತೂಕ ನಷ್ಟದ ವೇಳೆ ನಿಮ್ಮ ದೇಹದ ಆಕಾರದಲ್ಲಿ ಮೊದಲಿಗಿಂತ ವ್ಯತ್ಯಾಸ ಕಂಡರೆ, ಬಟ್ಟೆ ಸಡಿಲವಾದರೆ, ಬೊಜ್ಜು ಕರಗಿದ್ದರೆ, ಕಾಲು , ತೋಳು ಮತ್ತು ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತಿದ್ದರೆ, ನಿಮ್ಮ ತೂಕ ಇಳಿಕೆ ವೇಗಗತಿ ಪಡೆದಿದೆ. ನೀವು ಸುಲಭವಾಗಿ ಫಿಟ್ ಆಗಬಹುದು ಎಂಬುದನ್ನ ಸೂಚಿಸುತ್ತದೆ.


    ತೂಕ ನಷ್ಟಕ್ಕೆ ಕೆಲವು ತಜ್ಞರ ಸಲಹೆಗಳು ಹೀಗಿವೆ


    ಆಹಾರದಲ್ಲಿ ಫೈಬರ್, ವಿಟಮಿನ್, ಮಿನರಲ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಸಮೃದ್ಧ ಪದಾರ್ಥ ಸೇವಿಸಿ. ಬೆಳಗಿನ ಉಪಹಾರದಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧ ಪದಾರ್ಥ ಸೇರಿಸಿ.


    ಇದನ್ನೂ ಓದಿ: ಚಳಿಗಾಲದಲ್ಲಿ ಈ ಪಾನೀಯಗಳನ್ನು ಕುಡಿದ್ರೆ ಬೊಜ್ಜು ಕರಗುತ್ತೆ


    ಪನೀರ್, ತೋಫು ಮತ್ತು ಮೊಸರು ತಿನ್ನಿರಿ. ಹೆಚ್ಚು ನೀರು ಕುಡಿಯಿರಿ. ತಾಲೀಮುಗೆ ಸ್ವಲ್ಪ ಮೊದಲು ಅಥವಾ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ನಿತ್ಯವೂ ತಪ್ಪದೇ ವ್ಯಾಯಾಮ ಮಾಡಿ.

    Published by:renukadariyannavar
    First published: