ಇನ್ನೇನು 2022 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಸಾಕಷ್ಟು ಜನರು (People) ಟ್ರಾವೆಲ್ (Travel) ಮಾಡ್ತಿದ್ದಾರೆ. ತಮ್ಮಿಷ್ಟದ ಸ್ಥಳಗಳಿಗೆ ಪ್ರವಾಸ (Tour) ಹೋಗುತ್ತಿದ್ದಾರೆ. ಕೆಲವರು ಟ್ರೆಕ್ಕಿಂಗ್ (Trekking) ಜಾಗಗಳನ್ನ ಹುಡುಕಿ ಹೋಗುತ್ತಿದ್ದಾರೆ. ಈಗಾಗಲೇ ಜನರು ತಮ್ಮಿಷ್ಟದ ಸ್ಥಳದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ (Celebration) ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಈಗಾಗಲೇ ಸ್ಥಳಗಳನ್ನು ಗುರುತಿಸಿದ್ದಾರೆ. ಹಾಗಾದ್ರೆ ನೀವು ಪ್ರವಾಸ, ಟ್ರೆಕ್ಕಿಂಗ್ ಹೋಗುವ ಮೊದಲು ಕೆಲವು ವಿಷಯಗಳ ಬಗ್ಗೆ ಸೂಕ್ತ ಗಮನ ಹರಿಸಬೇಕು. ಪ್ರವಾಸಕ್ಕೆ ಹೋಗುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಎಲ್ಲೆಂದರಲ್ಲಿ ಸಿಗುವ ಆಹಾರ, ಪಾನೀಯ ಸೇವನೆ ಆರೋಗ್ಯವನ್ನು ಬೇಗ ಹಾಳು ಮಾಡುತ್ತದೆ.
ಪ್ರವಾಸದ ವೇಳೆ ಯಾವೆಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಬೇಕು?
ಹಾಗಾಗಿ ಪ್ರವಾಸದ ವೇಳೆ ಯಾವೆಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂಬುದನ್ನು ಇಲ್ಲಿ ನೋಡೋಣ.
ಹೆಚ್ಚಿನ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರ ಜೊತೆ ಸುಂದರ ಪ್ರದೇಶಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಿದ್ದಾರೆ. ಹಿಮದ ಪ್ರದೇಶ, ನೇಚರ್ ಕ್ಯಾಂಪ್ ಗಳು, ಕಾಡು, ಬೆಟ್ಟ, ಸಮುದ್ರ ತೀರ ಪ್ರದೇಶ ಹೀಗೆ ಹಲವು ಸ್ಥಳಗಳಿಗೆ ಹೋಗಲು ಯೋಜನೆ ಹಾಕಿದ್ದಾರೆ.
ಪ್ರವಾಸದ ವೇಳೆ ಆರೋಗ್ಯದ ಬಗ್ಗೆಯೋ ಗಮನಹರಿಸಿ. ಅಂದಾಗ ಮಾತ್ರ ಪ್ರವಾಸವನ್ನು ಚೆನ್ನಾಗಿ ಆನಂದಿಸಿ, ಅನುಭವಿಸಬಹುದು. ಊಟ, ತಿಂಡಿ, ಮೋಜು, ಮಸ್ತಿ, ಕುಡಿತ, ನಿದ್ದೆ, ಪಾನೀಯ, ಹೀಗೆ ತಿನ್ನುವ ಮತ್ತು ನಿಮ್ಮ ಪ್ರತೀ ಚಟುವಟಿಕೆಯೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಜನರು ಪ್ರಯಾಣದ ವೇಳೆ ಹಲವು ತಪ್ಪು ಮಾಡ್ತಾರೆ. ಹಾಗಾದ್ರೆ ಪ್ರವಾಸದ ವೇಳೆ ಆರೋಗ್ಯ ಕೆಡದಂತೆ ಮತ್ತು ಫುಲ್ ಎಂಜಾಯ್ ಮಾಡೋಕೆ ಯಾವೆಲ್ಲಾ ವಿಷಯಗಳ ಬಗ್ಗೆ ಗಮನಹರಿಸಬೇಕು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.
ಪ್ರಯಾಣದ ವೇಳೆ ಆರೋಗ್ಯ ಕಾಪಾಡಲು ಕೆಲವು ಸಿಂಪಲ್ ಟಿಪ್ಸ್
ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಅವರು ಪ್ರಯಾಣದ ವೇಳೆ ಆರೋಗ್ಯ ಕಾಪಾಡಲು ಕೆಲವು ಸುಲಭ ಮತ್ತು ಪರಿಣಾಮಕಾರಿ ಸಲಹೆ ನೀಡಿದ್ದಾರೆ. ಕುಟುಂಬ ಅಥವಾ ಸ್ನೇಹಿತರ ಜೊತೆ ಪ್ರವಾಸ ಯೋಜನೆ ಮಾಡಿದ್ದರೆ ಕೆಲವು ವಿಷಯಗಳ ಬಗ್ಗೆ ಗಮನಹರಿಸಿ.
ಪ್ರಯಾಣದ ವೇಳೆ ಟೀ ಮತ್ತು ಕಾಫಿ ಸೇವಿಸಬೇಡಿ
ವಿಮಾನ ಪ್ರಯಾಣ ಒಂದು ಗಂಟೆ ಮೊದಲು ಮತ್ತು ವಿಮಾನ ಪ್ರಯಾಣದ ಅರ್ಧ ಗಂಟೆ ನಂತರ ಅಂದ್ರೆ ಲ್ಯಾಂಡಿಂಗ್ ನಂತರ ಚಹಾ ಅಥವಾ ಕಾಫಿ ಸೇವನೆ ಮಾಡಬೇಡಿ ಅಂತಾರೆ ತಜ್ಞರು. ರಸ್ತೆ ಪ್ರವಾಸದಲ್ಲಿದ್ದರೆ ಚಲಿಸುವ ವಾಹನದಲ್ಲಿ ಚಹಾ, ಕಾಫಿ ಕುಡಿಯದಂತೆ ಸೂಚಿಸಿದ್ದಾರೆ.
ಟೀ ಮತ್ತು ಕಾಫಿಯಲ್ಲಿ ಪಾನೀಯದಲ್ಲಿ ಕೆಫೀನ್ ಇದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಜೊತೆಗೆ ಇದು ನಿರ್ಜಲೀಕರಣ, ಆಮ್ಲೀಯತೆ, ವಾಕರಿಕೆ ಮತ್ತು ತಲೆನೋವು ಉಂಟು ಮಾಡುತ್ತದೆ. ಇದು ಪ್ರಯಾಣದ ವೇಳೆ ಸ್ಥಿತಿಯನ್ನು ಕೆಟ್ಟದಾಗಿಸುತ್ತದೆ.
ದೇಹವನ್ನು ಹೈಡ್ರೀಕರಿಸಿ
ಪ್ರಯಾಣದ ವೇಳೆ ನೀರು ಕಡಿಮೆ ಕುಡಿಯುವುದು ಅಥವಾ ನೀರು ಕುಡಿಯುವುದನ್ನು ತಪ್ಪಿಸುವುದು ಮಾಡಬೇಡಿ. ಸಾಕಷ್ಟು ನೀರು ಕುಡಿದು, ದೇಹವನ್ನು ಹೈಡ್ರೀಕರಿಸಿ. ಇಲ್ಲದಿದ್ದರೆ ಬೇಗ ದಣಿವಾಗುತ್ತದೆ. ಹೈಡ್ರೀಕರಿಸಿದ್ರೆ ದೇಹವು ಶಕ್ತಿಯುತವಾಗಿರುತ್ತದೆ.
ವ್ಯಾಯಾಮ ಮಾಡಿ
ತುಂಬಾ ಜನರು ಪ್ರಯಾಣದ ವೇಳೆ ವ್ಯಾಯಾಮ ತಪ್ಪಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಪ್ರವಾಸದ ವೇಳೆ ವ್ಯಾಯಾಮ ಮಾಡುವಂತೆ ಸೂಚಿಸಿದ್ದಾರೆ. ಜಿಮ್ ಸೌಲಭ್ಯವಿರುವ ಹೋಟೆಲ್ ಆಯ್ಕೆ ಮಾಡುವಂತೆ ಹೇಳಿದ್ದಾರೆ. ಅಲ್ಲದೇ ಯೋಗ ಮ್ಯಾಟ್ ಕೊಂಡೊಯ್ದು ಯೋಗ ಮಾಡಿ. ತಪ್ಪದೇ ಸೂರ್ಯ ನಮಸ್ಕಾರ ಮಾಡಿ ಎಂದಿದ್ದಾರೆ.
ಮಲಗುವ ಮೊದಲು ಸುಪ್ತ ಬದ್ಧಕೋನಾಸನ ಮಾಡಿ
ಮಲಗುವ ಮೊದಲು ಸುಪ್ತ ಬದ್ಧಕೋನಾಸನದಲ್ಲಿ 5 ನಿಮಿಷ ಹಾಸಿಗೆಯ ಮೇಲೆ ಮಲಗಿ. ಈ ಯೋಗಾಸನದಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಇದು ದೇಹದ ಎಲ್ಲಾ ಭಾಗಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿ.
ಊಟದ ಸಮಯದ ಬಗ್ಗೆ ಎಚ್ಚರವಿರಲಿ
ಪ್ರಯಾಣದಲ್ಲಿ ತಡರಾತ್ರಿ ಊಟ ಸೇವನೆ ಮಾಡಬೇಡಿ. ರಾತ್ರಿ 9 ಗಂಟೆಯೊಳಗೆ ಊಟ ಮಾಡಿ. ರಾತ್ರಿ ಮಲಗುವ 3 ಗಂಟೆಗಳ ಮೊದಲು ಆಹಾರ ಸೇವಿಸಿ. ಕಿಚಡಿ, ಉದ್ದು ಮತ್ತು ಅಕ್ಕಿಯಂತಹ ಲಘು ಆಹಾರ ಸೇವಿಸಿ.
ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಕಡ್ಡಾಯವಾಗಿ ಇವುಗಳನ್ನ ಸೇವಿಸಲೇ ಬೇಕು
ತಿಂಡಿ ಸಮಯದಲ್ಲಿ ಬೀಜಗಳ ಸೇವನೆ ಮಾಡಿ
ಪ್ರವಾಸದಲ್ಲಿ ಚಿಪ್ಸ್, ಕರಿದ ಆಹಾರ ಸೇವನೆ ಬಿಡಿ. ಇದು ದೇಹದಲ್ಲಿ ವಿಷ ಹೆಚ್ಚಿಸುತ್ತದೆ. ಪ್ಯಾಕ್ ಮಾಡಿದ ಆಹಾರ ಸೇವನೆಯಿಂದ ಮಲಬದ್ಧತೆ, ಅಜೀರ್ಣ ಸಮಸ್ಯೆ ಕಾಡುತ್ತದೆ. ಹಾಗಾಗಿ ಪ್ರವಾಸದಲ್ಲಿ ಗೋಡಂಬಿ, ಪಿಸ್ತಾ, ಬಾದಾಮಿ ಸೇರಿ ಬೀಜ ಸೇವಿಸಿ ಎಂದಿದ್ದಾರೆ ತಜ್ಞರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ