• Home
  • »
  • News
  • »
  • lifestyle
  • »
  • Skin Care: ಮದುವೆಯ ಸೀಸನ್ ನಲ್ಲಿ ತ್ವಚೆಗೆ ನೈಸರ್ಗಿಕ ಹೊಳಪು ತರಲು ಈ ಫೇಸ್ ಪ್ಯಾಕ್ ಹಾಕಿ!

Skin Care: ಮದುವೆಯ ಸೀಸನ್ ನಲ್ಲಿ ತ್ವಚೆಗೆ ನೈಸರ್ಗಿಕ ಹೊಳಪು ತರಲು ಈ ಫೇಸ್ ಪ್ಯಾಕ್ ಹಾಕಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಮದುವೆಯ ಋತುವಿನಲ್ಲಿ ಮನೆಯಲ್ಲಿ ತಯಾರಿಸಿದ ಕೆಲವು ಅತ್ಯುತ್ತಮ ಫೇಸ್ ಪ್ಯಾಕ್‌ ಗಳು ಹೊಳಪು ತಂದು ಕೊಡುತ್ತವೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪೋಷಕಾಂಶಗಳಿಂದ ತುಂಬಿರುವ ಈ ನೈಸರ್ಗಿಕ ಫೇಸ್ ಮಾಸ್ಕ್‌ಗಳು ನಿಮ್ಮ ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡಲ್ಲ.

ಮುಂದೆ ಓದಿ ...
  • Share this:

    ಚಳಿಗಾಲದ (Winter) ಈ ದಿನಗಳಲ್ಲಿ ಈಗಾಗಲೇ ಮದುವೆ ಸೀಸನ್ (Marriage Season) ಕೂಡ ಶುರುವಾಗಿದೆ. ಈ ಸಮಯದಲ್ಲಿ ಮದುಮಗಳಿಂದ ಹಿಡಿದು ಮದುಮಗನವರೆಗೆ ಎಲ್ಲರೂ ತಮ್ಮ ತ್ವಚೆಯ (Skin) ಬಗ್ಗೆ ಹೆಚ್ಚು ಕಾಳಜಿ (Care) ವಹಿಸುತ್ತಾರೆ. ಮತ್ತು ಹೊಳೆಯುವ ತ್ವಚೆಗಾಗಿ ಪಾರ್ಲರ್‌ ನಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ವಿವಿಧ ರಾಸಾಯನಿಕ ಉತ್ಪನ್ನಗಳನ್ನು ತ್ವಚೆಗೆ ಅನ್ವಯಿಸುತ್ತಾರೆ. ಆದರೆ ಅವುಗಳ ಬಳಕೆಯು ನಿಮ್ಮ ಚರ್ಮಕ್ಕೆ ಸೀಮಿತ ಅವಧಿಗೆ ಮಾತ್ರ ಹೊಳಪು ನೀಡಲು ಸಾಧ್ಯ. ಅಲ್ಲದೆ ಕೆಲವೊಮ್ಮೆ ಇದರ ಅಡ್ಡ ಪರಿಣಾಮಗಳೂ ಇವೆ. ಇದ ಮಹಿಳೆಯರ ಆತಂಕಕ್ಕೆ ಕಾರಣವಾಗುತ್ತದೆ. ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಲು ಮನೆಯಲ್ಲೇ ಆರೈಕೆ ಮಾಡಬಹುದು.


    ಮದುವೆಯ ಸೀಸನ್ ನಲ್ಲಿ ತ್ವಚೆಯ ಆರೈಕೆ ಹೀಗೆ ಮಾಡಿ


    ಈ ಮದುವೆಯ ಋತುವಿನಲ್ಲಿ ಮನೆಯಲ್ಲಿ ತಯಾರಿಸಿದ ಕೆಲವು ಅತ್ಯುತ್ತಮ ಫೇಸ್ ಪ್ಯಾಕ್‌ ಗಳು ಹೊಳಪು ತಂದು ಕೊಡುತ್ತವೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪೋಷಕಾಂಶಗಳಿಂದ ತುಂಬಿರುವ ಈ ನೈಸರ್ಗಿಕ ಫೇಸ್ ಮಾಸ್ಕ್‌ಗಳು ನಿಮ್ಮ ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡಲ್ಲ.


    ಆವಕಾಡೊ ಬಾದಾಮಿ ಫೇಸ್ ಮಾಸ್ಕ್ ಹಾಕಿರಿ


    ಆವಕಾಡೊ ಬಾದಾಮಿ ಫೇಸ್ ಮಾಸ್ಕ್ ಗೆ  ಆವಕಾಡೊದ ತಿರುಳನ್ನು ಸಣ್ಣ ಬಟ್ಟಲಿಗೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಅರ್ಧ ಚಮಚ ಬಾದಾಮಿ ಎಣ್ಣೆ ಸೇರಿಸಿ ಮತ್ತು ಎರಡನ್ನೂ ಪರಸ್ಪರ ಮಿಶ್ರಣ ಮಾಡಿ. ಮೊದಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಈಗ ಸಿದ್ಧಪಡಿಸಿದ ಮಾಸ್ಕ್ ಅನ್ನು ಮುಖ ಮತ್ತು ಕುತ್ತಿಗೆಯ ಎಲ್ಲಾ ಭಾಗಗಳಿಗೆ ಅನ್ವಯಿಸಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.




    ಪ್ರಯೋಜನಗಳು


    ಆವಕಾಡೊ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪ್ರಮುಖ ಪೋಷಕಾಂಶ ಹೊಂದಿದೆ. ಆವಕಾಡೊದಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಇದೆ. ಒಣ ಚರ್ಮ, ಕಪ್ಪು ಕಲೆಗಳು, ಸುಕ್ಕುಗಳು, ಸೂಕ್ಷ್ಮ ರೇಖೆ ಮುಂತಾದ ಸಮಸ್ಯೆ ಕಡಿಮೆ ಮಾಡುತ್ತದೆ.


    ಚಾಕೊಲೇಟ್ ಹನಿ ಫೇಸ್ ಮಾಸ್ಕ್


    ಡಾರ್ಕ್ ಚಾಕೊಲೇಟ್ ಅನ್ನು ಒಂದು ಬಟ್ಟಲಿನಲ್ಲಿ ಕರಗಿಸಿ, ತಣ್ಣಗಾಗಲು ಬಿಡಿ. ಮತ್ತು ಅದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ. ಈಗ ಅದರಲ್ಲಿ ಅರ್ಧ ನಿಂಬೆ ಹಿಂಡಿ ಮತ್ತು ಎಲ್ಲವನ್ನೂ ಮಿಶ್ರಣ ಮಾಡಿ. ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ನಂತರ ಎಣ್ಣೆ ಮುಕ್ತ ಮಾಯಿಶ್ಚರೈಸರ್ ಅನ್ವಯಿಸಿ.


    ಪ್ರಯೋಜನಗಳು


    ಚಾಕೊಲೇಟ್ ಮತ್ತು ಜೇನುತುಪ್ಪವು ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಬ್ಯಾಕ್ಟೀರಿಯಾದ ಪರಿಣಾಮ ಕಡಿಮೆ ಮಾಡುತ್ತದೆ. ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ.


    ಶ್ರೀಗಂಧ ಮತ್ತು ಅರಿಶಿನ ಫೇಸ್ ಮಾಸ್ಕ್


    ಅರ್ಧ ಟೀಚಮಚ ಶ್ರೀಗಂಧದ ಪುಡಿ, ಎರಡು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಿಟಿಕೆ ಅರಿಶಿನ ಒಟ್ಟಿಗೆ ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ. ಈಗ ಅದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ. ಇದನ್ನು ಎಲ್ಲಾ ಚರ್ಮ ಮತ್ತು ಕುತ್ತಿಗೆಗೆ ಅನ್ವಯಿಸಿ. ಅರ್ಧ ಘಂಟೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ಸ್ವಚ್ಛಗೊಳಿಸಿ ಮತ್ತು ಮಾಯಿಶ್ಚರೈಸರ್ ಅನ್ವಯಿಸಿ.


    ಇದನ್ನೂ ಓದಿ: ಭುಜ ಹಾಗೂ ಕುತ್ತಿಗೆ ನೋವನ್ನು ನಿರ್ಲಕ್ಷಿಸಬೇಡಿ, ಈ ಅಪಾಯಗಳಿಗೆ ಕಾರಣವಾಗಬಹುದು


    ಪ್ರಯೋಜನಗಳು


    ಶ್ರೀಗಂಧ ವಿವಿಧ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಪ್ರಯೋಜನಕಾರಿ. ಇದರ ಬಳಕೆಯು ಮಾಲಿನ್ಯದ ಪರಿಣಾಮಗಳಿಂದ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ಹಾನಿ ತಡೆಯುತ್ತದೆ. ಅರಿಶಿನ ತ್ವಚೆಯ ಸೋಂಕನ್ನು ತಡೆದು ನೈಸರ್ಗಿಕ ಹೊಳಪನ್ನು ನೀಡುತ್ತದೆ.

    Published by:renukadariyannavar
    First published: