• Home
  • »
  • News
  • »
  • lifestyle
  • »
  • Famous Food: ಮಳೆಗಾಲದಲ್ಲಿ ಕರ್ನಾಟಕದ ಕರಾವಳಿ ಭಾಗಗಳಿಗೆ ಹೋದ್ರೆ ಈ ಆಹಾರವನ್ನು ಮಾತ್ರ ಮಿಸ್ ಮಾಡ್ಲೇಬೇಡಿ!

Famous Food: ಮಳೆಗಾಲದಲ್ಲಿ ಕರ್ನಾಟಕದ ಕರಾವಳಿ ಭಾಗಗಳಿಗೆ ಹೋದ್ರೆ ಈ ಆಹಾರವನ್ನು ಮಾತ್ರ ಮಿಸ್ ಮಾಡ್ಲೇಬೇಡಿ!

ಪತ್ರೊಡೆ

ಪತ್ರೊಡೆ

ಈ ಮಳೆಗಾಲದಲ್ಲಿ ನೀವು ಈ ಕರಾವಳಿ ಭಾಗಕ್ಕೆ ಬಂದರೆ ಬರೀ ಮಳೆಯನ್ನು ಆನಂದಿಸಲು ಕೆಲವು ಕರಿದ ತಿಂಡಿಗಳೊಂದಿಗೆ ಬಿಸಿ ಚಹಾ ಅಥವಾ ಕಾಫಿಯನ್ನು ಕುಡಿದು ಹೋಗುವ ಯೋಜನೆಯಿದ್ದರೆ, ಅದನ್ನು ನೀವು ಬದಲಾಯಿಸಿಕೊಳ್ಳಬಹುದು. ಏಕೆಂದರೆ ಈ ಮಾನ್ಸೂನ್ ಸಮಯದಲ್ಲಿ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಸಂಪೂರ್ಣ ವಿಶಿಷ್ಟವಾದ ತಿಂಡಿಗಳನ್ನು ನೀವು ಸವಿಯಬಹುದು. ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಬ್ಬರ ಬಾಯಿಗೂ ರುಚಿ ನೀಡುವಂತಹ ಭಕ್ಷ್ಯಗಳು ಇಲ್ಲಿವೆ!

ಮುಂದೆ ಓದಿ ...
  • Share this:

ಕರ್ನಾಟಕದಲ್ಲಿ (Karnataka) ನಾವು ಬೇರೆ ಬೇರೆ ಭಾಗಗಳಲ್ಲಿ ವಿಭಿನ್ನವಾದ ತಿಂಡಿ ತಿನಿಸುಗಳನ್ನು ನೋಡಬಹುದು ಮತ್ತು ಆಯಾ ಪ್ರದೇಶಕ್ಕನುಗುಣವಾಗಿ ಆಹಾರದ (Food) ರುಚಿ ಸಹ ತುಂಬಾನೇ ಬದಲಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೀವು ಉತ್ತರ ಕರ್ನಾಟಕಕ್ಕೆ (North Karnataka) ಬಂದರೆ ಅಲ್ಲಿ ಕಡಲೆಪುರಿಯಿಂದ ಮಾಡಿದ ಗಿರ್ಮಿಟ್ ಮತ್ತು ಮೆಣಸಿನಕಾಯಿ ಭಜ್ಜಿ ಹೆಚ್ಚು ಜನಪ್ರಿಯ ತಿಂಡಿಯಾದರೆ, ಅದೇ ಬೆಂಗಳೂರಿನ (Bengaluru) ಕಡೆಗೆ ಹೋದರೆ ವಿವಿಧ ಗರಿಗರಿಯಾದ ದೋಸೆ ಮತ್ತು ಇತರೆ ಚಾಟ್ ಗಳು ತುಂಬಾನೇ ಜನಪ್ರಿಯವಾಗಿವೆ ಎಂದು ಹೇಳಬಹುದು. ಅದೇ ರೀತಿಯಲ್ಲಿ ಕರಾವಳಿ ಭಾಗಕ್ಕೆ (Coastal part) ಬಂದರೆ ಅಲ್ಲಿ ಅವರದೇ ಆದಂತಹ ವಿಶಿಷ್ಟವಾದ ತಿಂಡಿಗಳನ್ನು ನಾವು ನೋಡಬಹುದು.


ಅದರಲ್ಲೂ ಈ ಮಳೆಗಾಲದಲ್ಲಿ ನೀವು ಈ ಕರಾವಳಿ ಭಾಗಕ್ಕೆ ಬಂದರೆ ಬರೀ ಮಳೆಯನ್ನು ಆನಂದಿಸಲು ಕೆಲವು ಕರಿದ ತಿಂಡಿಗಳೊಂದಿಗೆ ಬಿಸಿ ಚಹಾ ಅಥವಾ ಕಾಫಿಯನ್ನು ಕುಡಿದು ಹೋಗುವ ಯೋಜನೆಯಿದ್ದರೆ, ಅದನ್ನು ನೀವು ಬದಲಾಯಿಸಿಕೊಳ್ಳಬಹುದು. ಏಕೆಂದರೆ ಈ ಮಾನ್ಸೂನ್ ಸಮಯದಲ್ಲಿ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಸಂಪೂರ್ಣ ವಿಶಿಷ್ಟವಾದ ತಿಂಡಿಗಳನ್ನು ನೀವು ನೋಡಬಹುದು. ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಬ್ಬರಿಗೂ ಬಾಯಿಗೆ ರುಚಿ ನೀಡುವಂತಹ ಭಕ್ಷ್ಯಗಳು ಇಲ್ಲಿವೆ ಎಂದು ಹೇಳಬಹುದು.


ಕಾಡು ಅಣಬೆಗಳು 
ಇಲ್ಲಿನ ಸಾಂಪ್ರದಾಯಿಕ ಪಾಕಪದ್ಧತಿಗಳು ಪ್ರತಿ ಮಾನ್ಸೂನ್ ನಲ್ಲಿ ಮರಳಿ ಬರುತ್ತವೆ. ಮಾನ್ಸೂನ್ ಬಿದಿರಿನ ಚಿಗುರುಗಳು, ಕಾಡು ಅಣಬೆಗಳು ಮತ್ತು ಮನೆಯ ಸುತ್ತಲೂ ಸಿಗುವ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಇತರ ಕಾಡು ಉತ್ಪನ್ನಗಳನ್ನು ತಂದು ಮನೆಯಲ್ಲಿ ತಿಂಡಿ ಮಾಡಲಾಗುವುದು. ಮತ್ತೊಂದು ಮಾನ್ಸೂನ್ ಭಕ್ಷ್ಯವೆಂದರೆ ಅದು ಸ್ನೇಲ್ ಮತ್ತು ಅದನ್ನು ಸ್ಥಳೀಯವಾಗಿ ಕೊಂಕಣಿಯಲ್ಲಿ 'ಕೊಂಗೆ' ಎಂದು ಕರೆಯಲಾಗುತ್ತದೆ.


ಹಲಸಿನ ಹಣ್ಣಿನಿಂದ ಮಾಡಲಾಗುವ ಭಕ್ಷ್ಯಗಳು 
ಅರ್ಪಿತಾ ಅಮಿನ್ ಎಂಬುವವರು ಒಬ್ಬ ಫುಡ್ ಬ್ಲಾಗರ್ ಆಗಿದ್ದು, ಅವರು ತುಂಬಾ ಮುಖ್ಯವಾದ ಭಕ್ಷ್ಯಗಳನ್ನು ಹಲಸಿನ ಹಣ್ಣಿನಿಂದ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ತುಳು ಭಾಷೆಯಲ್ಲಿ ಉಪ್ಪಡ್ ಪಚ್ಚಿರ್ ಎಂದು ಕರೆಯುವ ಭಕ್ಷ್ಯ ತುಂಬಾನೇ ಜನಪ್ರಿಯ ಮತ್ತು ಹಲಸಿನ ಹಣ್ಣಿನ ಗಟ್ಟೆ ಇದನ್ನು ತೇಗದ ಎಲೆಯಲ್ಲಿ ಹಾಕಿ ಬೇಯಿಸಲಾಗುತ್ತದೆ. ಹೀಗೆ ಹಲಸಿನ ಹಣ್ಣಿನ ಬೀಜಗಳನ್ನು ಸಹ ಉಪಯೋಗಿಸಿ ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತಾರೆ ಎಂದು ಹೇಳಬಹುದು.


ಇದನ್ನೂ ಓದಿ: Crab Sambar: ಮೈ ನಡುಗಿಸೋ ಮಳೆಯಲ್ಲಿ ಬಿಸಿ ಬಿಸಿ ಏಡಿ ಸಾರು ತಿನ್ನೋ ಮಜಾನೇ ಬೇರೆ! ರೆಸಿಪಿ ಇಲ್ಲಿದೆ ಓದಿ, ಇಂದೇ ಟ್ರೈ ಮಾಡಿ


ಪತ್ರೊಡೆ
ಇನ್ನೊಂದು ಮುಖ್ಯವಾದ ಭಕ್ಷ್ಯವೆಂದರೆ ಅದು ಪತ್ರೊಡೆ ಅಂತ ಹೇಳಬಹುದು. ಇದನ್ನು ಒಂದು ರೀತಿಯ ಎಲೆಗಳಲ್ಲಿ ಹಾಕಿ ಮತ್ತು ಅಕ್ಕಿಯನ್ನು ಬಳಸಿಕೊಂಡು ಬೇಯಿಸಿ ತಯಾರಿಸಲಾಗುತ್ತದೆ.


ಪತೋಲಿ
ಇನ್ನೂ ಕ್ಯಾಥೊಲಿಕ್ ಕೊಂಕಣಿಯರ ಅಡುಗೆ ಮನೆಯಲ್ಲಿ ಮಾಡುವ ಪತೋಲಿ ಸಹ ತುಂಬಾನೇ ಜನಪ್ರಿಯವಾದ ಸಿಹಿ ತಿಂಡಿ ಎಂದು ಹೇಳಬಹುದು. ಇದನ್ನು ಬೇಯಿಸಿದ ಅಕ್ಕಿಯಲ್ಲಿ ಬೆಲ್ಲವನ್ನು ಹಾಕಿ ಮಾಡಲಾಗುತ್ತದೆ. ಇದನ್ನು ಅರಿಶಿನ ಎಲೆಗಳನ್ನು ಬಳಸಿಕೊಂಡು ಸಹ ಮಾಡುತ್ತಾರೆ ಎಂದು ಡಯಾನ ಎಂಬುವವರು ಹೇಳುತ್ತಾರೆ.


ಕಲ್ಲ ಲಂಬು 
ಇನ್ನೂ ಲಕ್ಷ್ಮಿ ಶೇನಾಯ್ ಎಂಬುವವರು ತಮ್ಮ ಸಮುದಾಯದಲ್ಲಿ ‘ಕಲ್ಲ ಲಂಬು’ ಎಂಬ ಭಕ್ಷ್ಯವು ತುಂಬಾನೇ ಜನಪ್ರಿಯವಾಗಿದೆ ಮತ್ತು ಇದನ್ನು ಕೊಂಕಣಿ ಭಾಷೆಯಲ್ಲಿ ‘ಗುಡ್ ಗುಡ್ ಅಳಂಬೆ’ ಅಂತ ಕರೆಯುತ್ತಾರೆ ಎಂದು ಹೇಳುತ್ತಾರೆ. ಇಷ್ಟೇ ಅಲ್ಲದೆ ಇನ್ನೂ ಬೇರೆ ರೀತಿಯ ಭಕ್ಷ್ಯಗಳು ಎಂದರೆ ಅವುಗಳು ಟೈಕಿಲೆ ಅಂಬಡೋ, ಮಾರ್ವಳ ಪನ್ನಾ ಪೋಡಿ ಮತ್ತು ಕೀರ್ಲಾ ಪೋಡಿ ಎಂದು ಹೇಳುತ್ತಾರೆ.


ಇದನ್ನೂ ಓದಿ:  Patrode Special: ನಿಮಗಿದು ಗೊತ್ತೇ? ಮಂಗಳೂರು ಸ್ಪೆಷಲ್ ಪತ್ರೊಡೆ ಹಿಮೋಗ್ಲೋಬಿನ್ ಮಟ್ಟ ಸುಧಾರಣೆಗೆ ಉತ್ತಮ ಆಹಾರ!


“ಹಿಂದಿನ ಸಮಯದಲ್ಲಿ ನಮ್ಮ ಹಿರಿಯರು ಬೇಸಿಗೆ ಕಾಲದಲ್ಲಿ ಕೆಲವು ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಅದನ್ನು ಮಳೆಗಾಲದಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ಮಾಡಲು ಉಪಯೋಗಿಸುತ್ತಿದ್ದರು. ಅದರಲ್ಲಿ ಹಲಸಿನ ಹಣ್ಣನ್ನು ಬಡವರ ಬಿರಿಯಾನಿ ಎಂದು ಹೇಳಲಾಗುತ್ತದೆ” ಎಂದು ಕಾಲೇಜೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವಂತಹ ಅರುಣ್ ಉಲ್ಲಾಳ್ ಅವರು ಹೇಳುತ್ತಾರೆ.

Published by:Ashwini Prabhu
First published: