• Home
 • »
 • News
 • »
 • lifestyle
 • »
 • Pregnancy Care: ಗರ್ಭಾವಸ್ಥೆಯಲ್ಲಿ ಈ ತಪ್ಪು ಮಾಡಿದ್ರೆ ಗರ್ಭಪಾತಕ್ಕೆ ಕಾರಣವಾಗಬಹುದು ಎಚ್ಚರ!

Pregnancy Care: ಗರ್ಭಾವಸ್ಥೆಯಲ್ಲಿ ಈ ತಪ್ಪು ಮಾಡಿದ್ರೆ ಗರ್ಭಪಾತಕ್ಕೆ ಕಾರಣವಾಗಬಹುದು ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗರ್ಭಿಣಿಯರು ಸಣ್ಣ ಬದಲಾವಣೆಗಳೊಂದಿಗೆ ದೈನಂದಿನ ಚಟುವಟಿಕೆ ನಿರ್ವಹಿಸಬೇಕಾಗುತ್ತದೆ. ಅವರು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳು ತಾಯಿ ಮತ್ತು ಮಗುವಿಗೆ ಹಾನಿ ಮಾಡುತ್ತವೆ.

 • Share this:

  ತಾಯಿಯಾಗೋದು (Motherhood) ಅಂದ್ರೆ ಅದೊಂದು ಆಹ್ಲಾದಕರ ಹಾಗೂ ಆತ್ಮತೃಪ್ತ ಭಾವನೆ. ಒಂಬತ್ತು ತಿಂಗಳ (Nine Months) ಕಾಲ ಮಗುವನ್ನು (Baby) ಹೊತ್ತು, ಅದನ್ನು ಕಣ್ತುಂಬಿಕೊಳ್ಳಲು ಎಲ್ಲಾ ಪೋಷಕರು (Parents) ತವಕಿಸುತ್ತಾರೆ. ಮಗು ಹೊಟ್ಟೆಯಲ್ಲಿ ಮೂಡಿದ ತಕ್ಷಣ ಸಂತಸಕ್ಕೆ ಪಾರವೇ ಇರಲ್ಲ. ಆದರೆ ತಾಯಿಯಾಗುತ್ತಿದ್ದಂತೆ ತಾನು ಯಾವೆಲ್ಲಾ ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಹುಡುಕಾಡುತ್ತಾರೆ. ಗರ್ಭಿಣಿಯರು ಸಣ್ಣ ಬದಲಾವಣೆಗಳೊಂದಿಗೆ ದೈನಂದಿನ ಚಟುವಟಿಕೆ ನಿರ್ವಹಿಸಬೇಕಾಗುತ್ತದೆ. ಅವರು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳು ತಾಯಿ ಮತ್ತು ಮಗುವಿಗೆ ಹಾನಿ ಮಾಡುತ್ತವೆ. ಹುಟ್ಟಲಿರುವ ಮಗು ಆರೋಗ್ಯವಾಗಿರಲು ಕಾಳಜಿ ವಹಿಸಬೇಕಾಗುತ್ತದೆ.


  ಕೆಲವು ಚಟುವಟಿಕೆಗಳು ಅಭಿವೃದ್ಧಿ ಹೊಂದುತ್ತಿರುವ ಭ್ರೂಣಕ್ಕೆ ಸಂಭಾವ್ಯವಾಗಿ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು. ನೋಯ್ಡಾ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಸ್ತ್ರೀರೋಗ ತಜ್ಞ ಡಾ. ಪೂಜಾ ದಿವಾನ್ ಅವರು ಗರ್ಭಾವಸ್ಥೆಯಲ್ಲಿ ಏನು ಮಾಡಬಾರದು ಎಂದು ಹೇಳಿದ್ದಾರೆ.


  ಗರ್ಭಾವಸ್ಥೆಯಲ್ಲಿ ಮಾಡಬಾರದ ಕೆಲಸಗಳು ಯಾವವು?


  ಲಿಸ್ಟೇರಿಯಾ ಬ್ಯಾಕ್ಟೀರಿಯಾ ಹೊಂದಿರುವ ಆಹಾರ ಸೇವನೆ ತಪ್ಪಿಸಿ


  ಡಾ.ಪೂಜಾ ಪ್ರಕಾರ, ಗರ್ಭಾವಸ್ಥೆಯಲ್ಲಿ ಕೆಲವು ಆಹಾರ ಸೇವನೆ ಹಾನಿ ಮಾಡುತ್ತವೆ. ಗರ್ಭಿಣಿ ಮಹಿಳೆ ತಪ್ಪಿಸಬೇಕಾದ ಕೆಲವು ಆಹಾರಗಳಿವೆ. ಕಡಿಮೆ ಸಂಸ್ಕರಿಸಿದ ಮಾಂಸ, ಕಚ್ಚಾ ಮಾಂಸ, ಚಿಕನ್ ಸಲಾಡ್‌, ತೊಳೆಯದ ಹಣ್ಣುಗಳು ಅಥವಾ ತರಕಾರಿಗಳು, ಪಾಶ್ಚರೀಕರಿಸದ ರಸಗಳು, ಡೈರಿ ಉತ್ಪನ್ನಗಳು ಇತ್ಯಾದಿ  ಲಿಸ್ಟೇರಿಯಾ ಬ್ಯಾಕ್ಟೀರಿಯಾ ಹೊಂದಿರುತ್ತವೆ. ಇದು ಜರಾಯುವನ್ನು ದಾಟಿ ಭ್ರೂಣಕ್ಕೆ ಹಾನಿ ಮಾಡುತ್ತದೆ.


  ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


  ಪಾದರಸ ಹೊಂದಿರುವ ಮೀನು ಸೇವನೆ ಭ್ರೂಣದ ಮೆದುಳಿಗೆ ಹಾನಿ ಮಾಡುತ್ತವೆ. ನಿರ್ಜಲೀಕರಣ, ಜ್ವರ ಮತ್ತು ಗರ್ಭಾಶಯದ ಸೆಪ್ಸಿಸ್ ಸಹ ಸಂಭವಿಸಬಹುದು. ಇದು ಭ್ರೂಣಕ್ಕೆ ಮಾರಕವಾಗುತ್ತದೆ. ಹಸಿ ಮೊಟ್ಟೆಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಹೊಂದಿರಬಹುದು.


  ಗರ್ಭಿಣಿಯರು ಹಸಿ ಮೊಟ್ಟೆ ಹೊಂದಿರುವ ಯಾವುದೇ ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಹೆಚ್ಚು ಕೆಫೀನ್ ಜರಾಯು ದಾಟಿ ಮತ್ತು ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ.


  ತಾಪನ ಉಪಕರಣ ಬಳಕೆ ತಪ್ಪಿಸಿ


  ಬಿಸಿ ನೀರಿನಲ್ಲಿ ವಿಶ್ರಾಂತಿ ಪಡೆಯುವುದು ಗರ್ಭಾವಸ್ಥೆಯ ಅಸ್ವಸ್ಥತೆ ಕಡಿಮೆ ಮಾಡಲು ಪರಿಣಾಮಕಾರಿ.  ಆದರೆ ತುಂಬಾ ಬಿಸಿನೀರನ್ನು ಬಳಸುವುದು, ತೀವ್ರವಾದ ಶಾಖಕ್ಕೆ ಒಡ್ಡಿಕೊಳ್ಳುವುದು ಸಹ ಹಾನಿಕಾರಕ. ಇದು ಹೆಚ್ಚಿನ ದೇಹದ ಉಷ್ಣತೆ ಉಂಟು ಮಾಡುತ್ತದೆ. ಇದು ಜನ್ಮಜಾತ ಅಸಹಜತೆಗೆ ಕಾರಣವಾಗುತ್ತದೆ. ಬಿಸಿನೀರಿನ ತೊಟ್ಟಿಗಳು ಮತ್ತು ಸೌನಾ ಸ್ನಾನವನ್ನು ಕಡಿಮೆ ಮಾಡಿ.


  ಫುಟ್ಬಾಲ್, ಬಾಕ್ಸಿಂಗ್ ಕ್ರೀಡೆ ಆಟ ತಪ್ಪಿಸಿ


  ಸಂಪರ್ಕ ಕ್ರೀಡೆಗಳು ಜರಾಯು ಕಿಬ್ಬೊಟ್ಟೆ ಸಮಸ್ಯೆ ಅಪಾಯ ಹೆಚ್ಚಿಸುತ್ತದೆ. ಇದರಿಂದ ಜರಾಯು ಗರ್ಭಾಶಯದ ಗೋಡೆಯಿಂದ ಅಕಾಲಿಕವಾಗಿ ಬೇರ್ಪಡುತ್ತದೆ. ಇದು ಗರ್ಭಪಾತಕ್ಕೂ ಕಾರಣವಾಗುತ್ತದೆ.
  ಇದು ಅಕಾಲಿಕ ಜನನ, ಗರ್ಭಾವಸ್ಥೆಯ ನಷ್ಟ ಅಥವಾ ಹೆರಿಗೆಗೆ ಕಾರಣವಾಗಬಹುದು. ಗರ್ಭಿಣಿಯರಿಗೆ ಗಾಯದ ಅಪಾಯ ಹೆಚ್ಚು. ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ, ಅಸ್ಥಿರಜ್ಜುಗಳು ಸಡಿಲಗೊಳ್ಳುತ್ತವೆ. ಗರ್ಭಾವಸ್ಥೆಯಲ್ಲಿ, ಹೊಟ್ಟೆಯು ಮುಂದಕ್ಕೆ ಚಲಿಸುವಾಗ ಗುರುತ್ವಾಕರ್ಷಣೆಯ ಕೇಂದ್ರವು ಬದಲಾಗುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಬೀಳುವುದನ್ನು ತಪ್ಪಿಸಿ.  ಸ್ಕೀಯಿಂಗ್, ಐಸ್-ಸ್ಕೇಟಿಂಗ್ ಮತ್ತು ರಾಕ್ ಕ್ಲೈಂಬಿಂಗ್‌ನಿಂದ ದೂರವಿರಿ.


  ಕೆಲವು ಮನೆಯ ಚಟುವಟಿಕೆ ಮಾಡಬೇಡಿ


  ಧೂಳು, ಮಣ್ಣು, ಕಸ ಸ್ವಚ್ಛಗೊಳಿಸುವುದು, ಒರೆಸುವುದು, ಭಾರವಾದ ವಸ್ತುಗಳನ್ನು ಎತ್ತುವುದು ಮಾಡಬೇಡಿ. ಇದು ಸೋಂಕಿನ ಅಪಾಯ ಹೆಚ್ಚಿಸುತ್ತದೆ. ಹೆಚ್ಚಿನ ತೂಕ ಎತ್ತುವುದು ಸಹ ಗರ್ಭಪಾತಕ್ಕೆ ಕಾರಣವಾಗುತ್ತದೆ.


  ಭಾರೀ ವ್ಯಾಯಾಮ ಮಾಡಬೇಡಿ


  ಗರ್ಭಾವಸ್ಥೆಯಲ್ಲಿ ಹೆಚ್ಚು ವ್ಯಾಯಾಮ ಮಾಡಬೇಡಿ. ಯಾವುದೇ ರೀತಿಯ ವ್ಯಾಯಾಮವನ್ನು ವೈದ್ಯರ ಸಲಹೆಯ ನಂತರವೇ ಮಾಡಿ. ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದಲ್ಲಿ ವ್ಯಾಯಾಮ ಕಡಿಮೆ ಮಾಡಿ.


  ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


  ಧೂಮಪಾನ, ಮದ್ಯಪಾನ ಅಥವಾ ಅಂತಹ ಔಷಧಿಗಳ ಬಳಕೆ ತಪ್ಪಿಸಿ. ಇದು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಗರ್ಭಪಾತದ ಅಪಾಯ ಹೆಚ್ಚಿಸುತ್ತದೆ.

  Published by:renukadariyannavar
  First published: