• Home
  • »
  • News
  • »
  • lifestyle
  • »
  • Pregnancy Care: ಗರ್ಭಾವಸ್ಥೆಯಲ್ಲಿ ಕಡಿಮೆ ರಕ್ತ ಕಣಗಳ ಸಮಸ್ಯೆ ಇದ್ದರೆ ಅಪಾಯ, ಹೀಗಿರಲಿ ಎಚ್ಚರಿಕೆ

Pregnancy Care: ಗರ್ಭಾವಸ್ಥೆಯಲ್ಲಿ ಕಡಿಮೆ ರಕ್ತ ಕಣಗಳ ಸಮಸ್ಯೆ ಇದ್ದರೆ ಅಪಾಯ, ಹೀಗಿರಲಿ ಎಚ್ಚರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಎಣಿಕೆ ಸಮಸ್ಯೆ ಎದುರಿಸುತ್ತಾರೆ. ಅನೇಕ ಮಹಿಳೆಯರಿಗೆ ಹೆರಿಗೆಯ ಸಮಯ ಸಮೀಪಿಸಿದ ತಕ್ಷಣ ಕಡಿಮೆ ಪ್ಲೇಟ್ಲೆಟ್ ಸಮಸ್ಯೆ ಇರುವುದು ಕಂಡು ಬರುತ್ತದೆ. ಸರಿಯಾದ ಸಮಯದಲ್ಲಿ ಇದರ ಬಗ್ಗೆ ಕಾಳಜಿ ವಹಿಸದೇ ಹೋದರೆ ಇದು ಸಾಕಷ್ಟು ಹಾನಿ ಉಂಟು ಮಾಡುತ್ತದೆ.

ಮುಂದೆ ಓದಿ ...
  • Share this:

    ಗರ್ಭಾವಸ್ಥೆ (Pregnancy) ಎಂಬುದು ಪ್ರತೀ ಮಹಿಳೆಗೆ ಒಂದು ವಿಶೇಷ ಅನುಭವ (Special Feeling). ಇದರ ಜೊತೆಗೆ ಗರ್ಭಾವಸ್ಥೆಯಲ್ಲಿ ಪ್ರತಿ ಮಹಿಳೆಯ ದೇಹದಲ್ಲಿ (Woman Body) ಅನೇಕ ಬದಲಾವಣೆಗಳು (Changes) ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಸರಳ ಬದಲಾವಣೆಗಳು ಆಗಿವೆ. ಆದರೆ ಕೆಲವು ಬದಲಾವಣೆಗಳು ದೇಹದಲ್ಲಿ ನಡೆಯುತ್ತಿರುವ ಸಮಸ್ಯೆ ಬಗ್ಗೆ ಸೂಚನೆ ನೀಡುತ್ತವೆ. ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಎಣಿಕೆ ಸಮಸ್ಯೆ ಎದುರಿಸುತ್ತಾರೆ. ಸರಿಯಾದ ಸಮಯದಲ್ಲಿ ಇದರ ಬಗ್ಗೆ ಕಾಳಜಿ ವಹಿಸದೇ ಹೋದರೆ ಇದು ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಕಡಿಮೆ ಪ್ಲೇಟ್ಲೆಟ್ ಸಮಸ್ಯೆಯ ಬಗ್ಗೆ ಆಳವಾಗಿ ಬಿಜ್ನೋರ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ನೀರಜ್ ಶರ್ಮಾ ಅವರು ಹೇಳಿದ್ದಾರೆ.


    ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಸಮಸ್ಯೆ


    ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಸಮಸ್ಯೆಯ ಪರಿಸ್ಥಿತಿ ಮತ್ತು ಅದರ ಪರಿಹಾರದ ಇಲ್ಲಿ ತಿಳಿಯೋಣ. ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಸಮಸ್ಯೆ ಮತ್ತು ಅದರ ಹಿಂದಿನ ಮುಖ್ಯ ಕಾರಣವೇನು? ಎಂಬ ಪ್ರಶ್ನೆ ಮನಸ್ಸಲ್ಲಿ ಮೂಡುತ್ತದೆ.


    ಅನೇಕ ಮಹಿಳೆಯರಿಗೆ ಹೆರಿಗೆಯ ಸಮಯ ಸಮೀಪಿಸಿದ ತಕ್ಷಣ ಕಡಿಮೆ ಪ್ಲೇಟ್ಲೆಟ್ ಸಮಸ್ಯೆ ಇರುವುದು ಕಂಡು ಬರುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ಸಮಸ್ಯೆ 6 ಮತ್ತು 7 ನೇ ತಿಂಗಳಲ್ಲಿ ಪ್ರಾರಂಭ ಆಗುತ್ತದೆ.


    ಇದನ್ನೂ ಓದಿ: ರಕ್ತದ ಕೊರತೆ ನಿವಾರಿಸುತ್ತೆ ಪಾಲಕ್ ಸೂಪ್, ಕಣ್ಣುಗಳ ಆರೋಗ್ಯಕ್ಕೂ ಇದರಿಂದ ಲಾಭ!


    ಸ್ತ್ರೀರೋಗತಜ್ಞ ಡಾ ನೀರಜ್ ಶರ್ಮಾ ಹೇಳುವ ಪ್ರಕಾರ, ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಸಮಸ್ಯೆಗೆ ಎಲ್ಲಾ ಮಹಿಳೆಯರಿಗೆ ಸಮಸ್ಯೆಯ ಕಾರಣ ವಿಭಿನ್ನವಾಗಿರಬಹುದು. ಉದಾಹರಣೆಗೆ ಮಹಿಳೆಯು ಯಾವುದೇ ಯಕೃತ್ತಿನ ಸಂಬಂಧಿ ಸಮಸ್ಯೆ ಹೊಂದಿದ್ದರೆ ಅಥವಾ ಅವಳು ರಕ್ತಹೀನತೆಯಿಂದ ಬಳಲುತ್ತಿದ್ದರೆ.


    ಗರ್ಭಿಣಿಯು ಸೋಂಕಿನಿಂದ ಅಥವಾ ಡೆಂಗ್ಯೂ ಅಥವಾ ಮಲೇರಿಯಾದಂತಹ ನಿರ್ದಿಷ್ಟ ಸೋಂಕಿನಿಂದ ಬಳಲುತ್ತಿದ್ದರೆ ಮಹಿಳೆಯರಲ್ಲಿ ಕಡಿಮೆ ಪ್ಲೇಟ್‌ಲೆಟ್‌ಗಳ ಸಮಸ್ಯೆ ಇರಬಹುದು ಎಂದು ಹೇಳಿದ್ದಾರೆ.


    ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ತೊಂದರೆಗಳು ಯಾವವು?


    ನೀರಜ್ ಶರ್ಮಾ ಪ್ರಕಾರ, ಗರ್ಭಾವಸ್ಥೆಯಲ್ಲಿ ದಿನನಿತ್ಯದ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸದಿದ್ದರೆ ಅದು ಮಗು ಮತ್ತು ತಾಯಿ ಇಬ್ಬರಿಗೂ ಹಾನಿ ಉಂಟು ಮಾಡುತ್ತದೆ. ಹೀಗಾಗಿ ಹೆರಿಗೆ ವೇಳೆ ಮಹಿಳೆಯರು ಅಕಾಲಿಕ ಹೆರಿಗೆ ಅಥವಾ ಅಧಿಕ ರಕ್ತಸ್ರಾವ ಸಮಸ್ಯೆಗೆ ಗುರಿಯಾಗುತ್ತಾರೆ.


    ತಜ್ಞರಿಂದ ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ತಿಳಿಯಿರಿ


    ಕೆಲವು ಸಂದರ್ಭಗಳಲ್ಲಿ, ಗರ್ಭಧಾರಣೆಯ ಆರು ಮತ್ತು ಏಳನೇ ತಿಂಗಳಲ್ಲಿ ಮಾತ್ರ ಈ ಸಮಸ್ಯೆ ಪತ್ತೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆಹಾರದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಪ್ಲೇಟ್‌ಲೆಟ್‌ಗಳನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು, ಆದರೆ ಅನೇಕ ಮಹಿಳೆಯರಲ್ಲಿ ಇದು ಹೆರಿಗೆಯ ಸಮಯ ಬಂದ ತಕ್ಷಣ ಪತ್ತೆಯಾಗುತ್ತದೆ, ಇದರಲ್ಲಿ ಪ್ಲೇಟ್‌ಲೆಟ್‌ಗಳನ್ನು ವರ್ಗಾವಣೆ ಮಾಡಬೇಕಾಗಬಹುದು.


    ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಸಮಸ್ಯೆ ತಡೆಯಲು ಕ್ರಮಗಳೇನು?


    ಗರ್ಭಾವಸ್ಥೆಯಲ್ಲಿ ಕಡಿಮೆ ಪ್ಲೇಟ್ಲೆಟ್ ಸಮಸ್ಯೆಯ ಇದ್ದಾಗ ಸಮತೋಲನ ಆಹಾರ ಸೇವನೆ ಮಾಡಿ. ಎಲ್ಲಾ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಪಡೆಯಲು ಸಾಧ್ಯ. ಈ ಸಮಯದಲ್ಲಿ ಹಸಿರು ತರಕಾರಿಗಳ ಸೇವನೆ ಪರಿಣಾಮಕಾರಿ ಆಗಿದೆ. ವಿಟಮಿನ್ ಸಿ, ವಿಟಮಿನ್ ಬಿ, ಬಿ9, ಬಿ6, ಫೋಲಿಕ್ ಆಮ್ಲ ಹೊಂದಿರುವ ಆಹಾರ ಪದಾರ್ಥ ಸೇವನೆ ಮಾಡಿ.


    ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸುವಲ್ಲಿ ಕಿವಿ ಹಣ್ಣು ಉತ್ತಮ ಆಯ್ಕೆಯಾಗಿದೆ. ಕಡಲೆಕಾಳು, ಬಟಾಣಿ, ಮೊಳಕೆ ಕಾಳು, ಅಥವಾ ಡಾರ್ಕ್ ಚಾಕೊಲೇಟ್, ಪನೀರ್ ಅಥವಾ ಇತರ ಡೈರಿ ಉತ್ಪನ್ನಗಳು ಸಹ ಅತ್ಯಗತ್ಯ. ಮಾಂಸಾಹಾರಿ ಆಯ್ಕೆಯಲ್ಲಿ ಮೊಟ್ಟೆ ಮತ್ತು ಮಾಂಸ ಸೇವನೆ ಪ್ರಯೋಜನಕಾರಿ ಆಗಿದೆ. ರಕ್ತಹೀನತೆಯ ಸಮಸ್ಯೆಯಲ್ಲಿ ಇದನ್ನು ಸೇವಿಸಲಾಗುತ್ತದೆ.


    ಇದನ್ನೂ ಓದಿ: ಕಪ್ಪು ತುಟಿಗೆ ನೈಸರ್ಗಿಕವಾಗಿ ಪಿಂಕ್ ಬಣ್ಣ ಬರಬೇಕಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ!


    ಪ್ಲೇಟ್‌ಲೆಟ್‌ಗಳನ್ನು ಯಾವಾಗ ವರ್ಗಾವಣೆ ಮಾಡಬೇಕಾಗುತ್ತದೆ?


    ತಜ್ಞರ ಪ್ರಕಾರ, ಮಹಿಳೆಯ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದ ಸಮಯ ಮತ್ತು ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದ ಸಮಯ ಕಡಿಮೆಯಿದ್ದರೆ ಪರಿಣಾಮ ಬೀರಲ್ಲ. ಆದರೆ ಗರ್ಭಿಣಿಗೆ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದ ಸಮಯ ತುಂಬಾ ಬಂದಿದ್ದರೆ ಹೆರಿಗೆಯ ವೇಳೆ ಸಮಸ್ಯೆಯಾಗುತ್ತದೆ. ಇಂತಹ ವೇಳೆ ಪ್ಲೇಟ್ಲೆಟ್ ವರ್ಗಾವಣೆ ಏಕೈಕ ಪರಿಹಾರವಾಗಿದೆ.

    Published by:renukadariyannavar
    First published: