ಯಾರೇ ಆಗಲಿ, ತಾವು ಖುಷಿಯಾದಾಗ (Happy), ದುಃಖಿತರಾದಾಗ, ಟ್ರಾವೆಲ್ (Travel) ಮಾಡುವಾಗ, ಮನೆಯಲ್ಲಿ ಏಕಾಂಗಿಯಾಗಿ ಕುಳಿತಾಗ, ಪಾರ್ಟಿ, ಫಂಕ್ಷನ್ (Function), ಮದುವೆ, ಸಮಾರಂಭಗಳಲ್ಲಿ ಮ್ಯೂಸಿಕ್ (Music) ಇದ್ದೇ ಇರುತ್ತದೆ. ಜನರು (People) ತಮ್ಮ ಜೊತೆಗೆ ಯಾವಾಗಲೂ ಹೆಡ್ ಫೋನ್ ಇಟ್ಟುಕೊಂಡಿರ್ತಾರೆ. ಸುಮ್ಮನೆ ಕುಳಿತಾಗ ಹಾಡು ಕೇಳುತ್ತಾ, ನೆಮ್ಮದಿಯಾಗಿ ಮೈ ಮರೆಯುತ್ತಾರೆ. ದೇಹದ ಎಲ್ಲಾ ದಣಿವು ಮತ್ತು ಮಾನಸಿಕ ಕಿರಿಕಿರಿ ಶಮನಗೊಳಿಸುವ ಶಕ್ತಿ ಸಂಗೀತಕ್ಕಿದೆ ಅಂತಾ ಹೇಳಲಾಗುತ್ತೆ. ಹೀಗೆ ಏನು ಮಾಡಲಾಗದೇ ಸುಮ್ಮನೆ ಕುಳಿತಾಗ ಹಾಡು ಕೇಳುತ್ತಾ ಸಮಯ ಸ್ಪೆಂಡ್ ಮಾಡೋದೇ ಖುಷಿ ಕೊಡುತ್ತದೆ. ಕೆಟ್ಟ ಮನಸ್ಥಿತಿಯನ್ನೂ ಸಂಗೀತ ಸುಧಾರಿಸುತ್ತದೆ. ಇದು ನಿಮ್ಮ ಮನಸ್ಸು ಮತ್ತು ಮೆದುಳಿಗೆ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಹಾಡು ಕೇಳುವುದು ಮಗುವಿನ ಆರೋಗ್ಯಕ್ಕೂ ಸಹಕಾರಿ
ಈಗ ಅಧ್ಯಯನವೊಂದು ಗರ್ಭಾವಸ್ಥೆಯಲ್ಲಿ ಹಾಡು ಕೇಳುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿದೆ. ತಾಯಿಯಾಗುವರು ಹಾಡು ಕೇಳಿದ್ರೆ ಅದು ಅವರಿಗೆ ಮಾತ್ರವಲ್ಲದೇ ಮಗುವಿಗೆ ಪ್ರಯೋಜನಕಾರಿ ಎಂದು ಅಧ್ಯಯನವೊಂದು ಹೇಳಿದೆ. ಹೊಟ್ಟೆಯಲ್ಲಿ ಮಗುವಿದ್ದಾಗ ಸಂಗೀತವನ್ನು ಕೇಳುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
ಹೀಗೆ ಮಗುವಿನ ಮೆದುಳಿನ ಮೇಲೆ ಸಂಗೀತದ ಪರಿಣಾಮ ಹೇಗಿರುತ್ತದೆ ಎಂದು ತಿಳಿಸುವ ಅನೇಕ ಸಂಶೋಧನೆಗಳು ಇವೆ. ಹಾಗಾದ್ರೆ ಸಂಗೀತ ಕೇಳುವುದು ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಹೇಗೆ ಮತ್ತು ಯಾವೆಲ್ಲಾ ಪರಿಣಾಮ ಬೀರುತ್ತದೆ ಎಂದು ಇಲ್ಲಿ ನಾವು ತಿಳಿಯೋಣ.
ಸಂಗೀತ ಮತ್ತು ಮಗುವಿನ ಮಿದುಳಿನ ಕಾರ್ಯದ ಬಗ್ಗೆ ಅಧ್ಯಯನ ಹೇಳೋದೇನು?
ವಾಷಿಂಗ್ಟನ್ ವಿಶ್ವವಿದ್ಯಾಲಯದ ಕಲಿಕೆ ಮತ್ತು ಮಿದುಳಿನ ವಿಜ್ಞಾನಗಳ ಸಂಸ್ಥೆಯ ವಿಜ್ಞಾನಿಗಳು ನಡೆಸಿರುವ ಹೊಸ ಅಧ್ಯಯನದ ಪ್ರಕಾರ, ಗರ್ಭಾವಸ್ಥೆಯಲ್ಲಿ ಸಂಗೀತ ಆಲಿಸುವುದು ಮಗುವಿನ ಮೆದುಳಿನ ಕಾರ್ಯ ಚಟುವಟಿಕೆ ಸುಧಾರಿಸಲು ಸಹಕಾರಿ ಎಂದು ಹೇಳಿದೆ.
ಜೊತೆಗೆ ಒಂದು ವರ್ಷದೊಳಗಿನ ಮಕ್ಕಳು ಸಂಗೀತ ಕೇಳುವುದು ಅದು ಅವರ ಉಚ್ಛಾರಣೆ ಮತ್ತು ಅವರ ಭಾಷಣ, ಸ್ವರ ಸೇರಿದಂತೆ ಹಲವು ರೀತಿಯಲ್ಲಿ ಆರೋಗ್ಯ ಸುಧಾರಣೆ ತರುತ್ತದೆ ಎಂದು ಅಧ್ಯಯನ ಹೇಳಿದೆ. ಇದು ಮಾತನಾಡುವ ಮತ್ತು ಹಾಡುವ ಮಾದರಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಗರ್ಭದಲ್ಲಿರುವ ಶಿಶುಗಳ ಮೇಲೆ ಸಂಗೀತವು ಯಾವ ಪರಿಣಾಮ ಬೀರುತ್ತದೆ?
ಜನನದ ಮೊದಲು ಅಂದ್ರೆ ಗರ್ಭದಲ್ಲಿರುವ ಮಗುವಿನ, ಮೆದುಳಿನ ಬೆಳವಣಿಗೆಯಲ್ಲಿ ಸಂಗೀತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಯೂನಿಸೆಫ್ ಪ್ರಕಾರ, ಗರ್ಭಾವಸ್ಥೆಯಲ್ಲಿ ಸಂಗೀತ ಕೇಳುವುದು ಗರ್ಭಿಣಿಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಹಾಗೂ ಹುಟ್ಟುವ ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಗರ್ಭಧಾರಣೆಯ ಸುಮಾರು ಹದಿನೆಂಟು ವಾರಗಳಲ್ಲಿ, ಮಗು ತನ್ನ ಮೊದಲ ಶಬ್ದ ಕೇಳುತ್ತದೆ. 24 ವಾರಗಳ ಹೊತ್ತಿಗೆ ಸಣ್ಣ ಕಿವಿಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ.
ಮತ್ತು ಗರ್ಭಾವಸ್ಥೆಯ ಕೊನೆಯ ಕೆಲವು ತಿಂಗಳುಗಳಲ್ಲಿ ಮಗು ಶಬ್ದ ಮತ್ತು ಶಬ್ದಕ್ಕೆ ಪ್ರತಿಕ್ರಿಯೆಯಾಗಿ ತಲೆ ತಿರುಗಿಸುತ್ತದೆ. ಹುಟ್ಟಲಿರುವ ಮಗು ತನ್ನ ತಾಯಿಯ ಧ್ವನಿ, ಸ್ಥಳೀಯ ಭಾಷೆ ಮತ್ತು ಮಾತಿನ ಮಾದರಿಯನ್ನು ಗರ್ಭದಲ್ಲಿರುವಾಗಲೇ ಗುರುತಿಸುತ್ತದೆ ಎಂದು ಅಧ್ಯಯನ ಹೇಳುತ್ತದೆ.
ಸಂಗೀತದಿಂದ ಮಕ್ಕಳ ತೊದಲುವಿಕೆ ಸರಿಯಾಗುತ್ತದೆ
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಸಂಗೀತದಂತೆಯೇ ಭಾಷೆಯು ಅನೇಕ ಲಯಬದ್ಧ ಮಾದರಿ ಹೊಂದಿದೆ. ಮಕ್ಕಳ ಉಚ್ಛಾರ ತೊಂದರೆ ಮತ್ತು ತೊದಲುವಿಕೆಯನ್ನು ಸಂಗೀತ ದೂರ ಮಾಡುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಈ 5 ಆಹಾರಗಳನ್ನು ಸೇವಿಸಿ, ಆಯಾಸ ದೂರವಾಗಿ ಶಕ್ತಿ ಹೆಚ್ಚಿಸುತ್ತದೆಯಂತೆ..!
ಗರ್ಭಾವಸ್ಥೆಯಲ್ಲಿ ತಾಯಿ ಯಾವ ಸಂಗೀತ ಕೇಳಬೇಕು?
ಮೂರನೇ ತ್ರೈಮಾಸಿಕದಲ್ಲಿ ಗರ್ಭಿಣಿಯು, ಶಾಸ್ತ್ರೀಯ ಸಂಗೀತ, ಲಾಲಿಪದ ಹಾಗೂ ಮೃದು ಸ್ವರ, ಧ್ವನಿಗಳು, ಸಂತೋಷದಾಯಕ ಮತ್ತು ಧನಾತ್ಮಕ ಸಂಗೀತ ಕೇಳಬೇಕು. ಇದು ಮಗುವಿಗೆ ಹಿತ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ