• Home
  • »
  • News
  • »
  • lifestyle
  • »
  • Pregnancy Health: ಗರ್ಭಾವಸ್ಥೆಯಲ್ಲಿ ಮಗುವಿನ ಆರೋಗ್ಯ ಕಾಪಾಡಲು ಇಷ್ಟು ಟಿಪ್ಸ್ ಫಾಲೋ ಮಾಡಿ ಸಾಕು

Pregnancy Health: ಗರ್ಭಾವಸ್ಥೆಯಲ್ಲಿ ಮಗುವಿನ ಆರೋಗ್ಯ ಕಾಪಾಡಲು ಇಷ್ಟು ಟಿಪ್ಸ್ ಫಾಲೋ ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗರ್ಭಾವಸ್ಥೆಯಲ್ಲಿ ತಮ್ಮನ್ನು ಮತ್ತು ಹುಟ್ಟಲಿರುವ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮ ಗರ್ಭಾವಸ್ಥೆಯಲ್ಲಿ ಅನೇಕ ಆರೋಗ್ಯ ಸಮಸ್ಯೆ ಮತ್ತು ಅಸ್ವಸ್ಥ ಮಗು ಹುಟ್ಟಲು ಕಾರಣವಾಗುತ್ತದೆ. ಆರೋಗ್ಯಯುತ ಮಗು ಜನಿಸಲು ಕೆಲವು ವಿಶೇಷ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ.

ಮುಂದೆ ಓದಿ ...
  • Share this:

    ಪ್ರತಿ ಮಹಿಳೆಗೆ (Women) ತಾಯ್ತನ (Motherhood) ಒಂದು ವಿಶೇಷ ಅನುಭವ (Special Feel) ನೀಡುತ್ತದೆ. ತಾಯಿಯಾಗುವ (Pregnancy) ಪ್ರತೀ ಮಹಿಳೆ ತನ್ನ ಆರೋಗ್ಯ ಮತ್ತು ಆಹಾರ ದಿನಚರಿಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ. ತಾಯಿಯಾಗುವುದು ಸಂತೋಷ ಹಾಗೂ ಮಗುವಿನ ಮುಖ ನೋಡಲು ಕಾತರಿಸುವ ಭಾವನೆ. ಜೊತೆಗೆ ಇದೂ ಒಂದು ಮಹತ್ವದ ಜವಾಬ್ದಾರಿ ಕೂಡ ಆಗಿದೆ. ಗರ್ಭಧರಿಸಿದಾಗ ತಾಯಿ ಮತ್ತು ಮಗುವಿನ ಆರೋಗ್ಯ ಗಮನದಲ್ಲಿಟ್ಟುಕೊಂಡು ಎಲ್ಲಾ ಕೆಲಸ ಕಾರ್ಯ ಮಾಡಬೇಕಾಗುತ್ತದೆ. ತಾಯಿ ಮತ್ತು ಮಗುವನ್ನು ಆರೋಗ್ಯವಾಗಿಡಲು ಹಲವು ಸಂಗತಿಗಳ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ. ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮನ್ನು ಮತ್ತು ಹುಟ್ಟಲಿರುವ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ.


    ಪರಿಣಾಮ ಗರ್ಭಾವಸ್ಥೆಯಲ್ಲಿ ಅನೇಕ ಆರೋಗ್ಯ ಸಮಸ್ಯೆ ಮತ್ತು ಅಸ್ವಸ್ಥ ಮಗು ಹುಟ್ಟಲು ಕಾರಣವಾಗುತ್ತದೆ. ಆರೋಗ್ಯಯುತ ಮಗು ಜನಿಸಲು ಕೆಲವು ವಿಶೇಷ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಇದಕ್ಕಾಗಿ ಹಿರಿಯ ಸ್ತ್ರೀರೋಗ ತಜ್ಞೆ ಡಾ.ವಿನಿತಾ ಪರ್ಮಾರ್ ಅವರು ಕೆಲವು ಸಂಗತಿಗಳ ಬಗ್ಗೆ ಗಮನಹರಿಸುವಂತೆ ತಿಳಿಸಿದ್ದಾರೆ.


    ಗರ್ಭಿಣಿ ತನ್ನ ಹಾಗೂ ಗರ್ಭದಲ್ಲಿರುವ ಮಗು ಎರಡನ್ನೂ ನೋಡಿಕೊಳ್ಳಬೇಕಾಗುತ್ತದೆ. ಹಾಗಾದ್ರೆ ಗರ್ಭದಲ್ಲಿರುವ ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಡಾ.ವಿನಿತಾ ಕೆಲವು ಸಲಹೆ ನೀಡಿದ್ದಾರೆ.


    ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


    ಗರ್ಭದಲ್ಲಿರುವ ಮಗುವಿನ ಆರೋಗ್ಯ ಕಾಳಜಿಗೆ ಕೆಲವು ಸಲಹೆಗಳು


    ಗರ್ಭಿಣಿ ಫೈಬರ್ ಯುಕ್ತ ಆಹಾರ ಸೇವಿಸಬೇಕು


    ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಉಂಟಾಗುವುದು ಸಾಮಾನ್ಯ ಸಂಗತಿ ಆಗಿದೆ. ಹಾಗಾಗಿ ಫೈಬರ್ ಯುಕ್ತ ಆಹಾರ ಸೇವನೆ ಮಾಡುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ. ಸಾಕಷ್ಟು ತರಕಾರಿ ಸೇವಿಸಿ. ಒಂದೇ ಬಾರಿಗೆ ಹೆಚ್ಚು ಆಹಾರ ಸೇವನೆ ಮಾಡಬಾರದು.


    ಆಹಾರ ದಿನಚರಿ ಪಾಲಿಸಿ


    ಗರ್ಭಿಣಿ ತನ್ನ ಆಹಾರ ದಿನಚರಿ ಪಾಲಿಸುವದು ತುಂಬಾ ಮುಖ್ಯ. ದಿನವಿಡೀ ಏನು ತಿಂದಿದ್ದೀರಿ ಎಂಬುದನ್ನು ಟಿಪ್ಪಣಿ ಮಾಡಿ. ದಿನಕ್ಕೆ ಐದು ಅಥವಾ ಆರು ಬಾರಿ ಸಣ್ಣ ಭಾಗಗಳಲ್ಲಿ ಆಹಾರ ಸೇವಿಸಿ. ಸಮತೋಲಿತ ಆಹಾರ ಕ್ರಮ ಪಾಲಿಸಿ. ದಿನಕ್ಕೆ 300 ರಿಂದ 500 ಹೆಚ್ಚುವರಿ ಕ್ಯಾಲೋರಿ ಮಾತ್ರ ಸೇವಿಸಿ.


    ನಿಯಮಿತ ವ್ಯಾಯಾಮ ಮಾಡಿ


    ಸಕ್ರಿಯ ಚಟುವಟಿಕೆ, ನಿಯಮಿತ ವ್ಯಾಯಾಮ ಮಾಡಿ. ಇದು ಗರ್ಭಧಾರಣೆಯೊಂದಿಗೆ ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆ ತಡೆಯುತ್ತದೆ. ಮಗುವಿನ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ. ಹಾಗಾಗಿ ವ್ಯಾಯಾಮ ಮಾಡಿ. ಹೆಚ್ಚು ದೇಹದ ತೂಕ ಅಥವಾ ಸ್ಟ್ರೆಚಿಂಗ್ ವ್ಯಾಯಾಮ ಮಾಡಬಾರದು ಎನ್ನುತ್ತಾರೆ ಡಾ.ವಿನಿತಾ. ಲಘು ವ್ಯಾಯಾಮ ಮಾಡಿ.


    ಫೋಲೇಟ್ ಭರಿತ ಆಹಾರ ಸೇವಿಸಿ


    ಕೋಸುಗಡ್ಡೆ, ಮೊಳಕೆ ಕಾಳುಗಳು, ಬಟಾಣಿ, ಎಲೆಕೋಸು, ಹಸಿರು ಎಲೆಗಳ ತರಕಾರಿ ಪಾಲಕ್ ಸೇವಿಸಿ. ಇದು ಫೋಲೇಟ್ ಹೊಂದಿದೆ. ವಿವಿಧ ರೀತಿಯ ಬೇಳೆಕಾಳು, ಇಂಗು, ಕಿತ್ತಳೆ ಇತ್ಯಾದಿ ಆಹಾರ ಸೇವಿಸಿ.


    ಕ್ಯಾಲ್ಸಿಯಂ ಭರಿತ ಆಹಾರ ಸೇವಿಸಿ


    ಗರ್ಭಾವಸ್ಥೆಯಲ್ಲಿ ಆಹಾರದಲ್ಲಿ ಹಾಲಿನ ಉತ್ಪನ್ನಗಳನ್ನು ಸೇರಿಸಿ. ಕ್ಯಾಲ್ಸಿಯಂ, ಕಬ್ಬಿಣದ ಪೂರಕ ಸೇವಿಸಿ. ಹೆಚ್ಚು ಮೃದುವಾದ ಚೀಸ್ ಬಳಸಬೇಡಿ. ಪಾಶ್ಚರೀಕರಿಸದ ಚೀಸ್ ಬ್ಯಾಕ್ಟೀರಿಯಾ ಹೊಂದಿದ್ದು, ಜ್ವರ, ಗರ್ಭಪಾತ ಅಥವಾ ಗರ್ಭಧಾರಣೆಯ ತೊಡಕಿಗೆ ಕಾರಣವಾಗುತ್ತದೆ.


    ವಿಟಮಿನ್ ಡೋಸ್


    ಆಹಾರದಲ್ಲಿ ಸಾಕಷ್ಟು ಜೀವಸತ್ವ ಹೊಂದಿಲ್ಲದಿದ್ದರೆ, ಗರ್ಭಧಾರಣೆ ಮೊದಲು ವಿಟಮಿನ್ ಪೂರಕ ಸೇವಿಸಿ. ವೈದ್ಯರ ಸೂಚನೆ ಮೇರೆಗೆ ಪೂರಕ ಸೇವಿಸಿ. ಫೋಲಿಕ್ ಆಮ್ಲ, ಕೊಬ್ಬಿನಾಮ್ಲ, ಕಬ್ಬಿಣ ಮತ್ತು ಕ್ಯಾಲ್ಸಿಯಂ ತೆಗೆದುಕೊಳ್ಳಿ. ಫೋಲಿಕ್ ಆಮ್ಲವು ವಿಟಮಿನ್ B9 ನ ಸಂಶ್ಲೇಷಿತ ರೂಪವಾಗಿದೆ. ಇದು ನರ ಕೊಳವೆ ಅಸ್ವಸ್ಥತೆಯಿಂದ ಮಗುವನ್ನು ರಕ್ಷಿಸುತ್ತದೆ. ಕಬ್ಬಿಣವು ರಕ್ತದ ಬೆಳವಣಿಗೆಗೆ ಸಹಕಾರಿ.


    ಇದನ್ನೂ ಓದಿ: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


    ಟೀ ಕಾಫಿ ಸೇವನೆ ಮಿತಿಯಲ್ಲಿರಲಿ


    ಚಹಾ ಮತ್ತು ಕಾಫಿ ಕಡಿಮೆ ಸೇವಿಸಿ. ಇದರಲ್ಲಿರುವ ಕೆಫೀನ್ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ದಿನವಿಡೀ 1 ರಿಂದ 2 ಕಪ್ ಚಹಾ ಅಥವಾ ಕಾಫಿ ಮಾತ್ರ ಕುಡಿಯಿರಿ. ಹೆಚ್ಚು ನೀರು ಸೇವಿಸಿ.

    Published by:renukadariyannavar
    First published: