Pregnancy Weight: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

ಗರ್ಭಾವಸ್ಥೆಯಲ್ಲಿ ಹೆಚ್ಚುವ ತೂಕವು ಹೆರಿಗೆಯ ನಂತರವೂ ಹೆಚ್ಚುತ್ತಾ ಹೋಗುವ ಸಂಭವ ಹೆಚ್ಚು. ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಎಷ್ಟು ಸರಿ ಮತ್ತು ಎಷ್ಟು ತಪ್ಪು ಎಂಬ ಬಗ್ಗೆ ಗರ್ಭಿಣಿಯರಿಗೆ ತಿಳಿದಿರುವುದಿಲ್ಲ. ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಳ ಉತ್ತಮ ಎಂಬ ಬಗ್ಗೆ ಸ್ತ್ರೀರೋಗ ತಜ್ಞ ಡಾ ನೀರಜ್ ಶರ್ಮಾ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗರ್ಭಾವಸ್ಥೆ (Pregnancy) ಒಂದು ವಿಶೇಷ (Special) ಸಂಗತಿ. ಈ ವೇಳೆ ಗರ್ಭಿಣಿಯರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು (Questions) ಕಾಡುತ್ತವೆ. ಅನೇಕ ಗರ್ಭಿಣಿಯರು ಮಗುವಿಗೆ (Baby) ಯಾವುದು ಸರಿ ಮತ್ತು ಯಾವುದು ಉಚಿತವಲ್ಲ ಎಂದು ತಿಳಿಯಲು ಬಯಸುತ್ತಾರೆ. ಅಂತಹ ಸ್ಥಿತಿಯಲ್ಲಿ ಕೆಲವು ಗರ್ಭಿಣಿಯರು ತಮ್ಮ ತೂಕದ (Weight) ಬಗ್ಗೆ ಹೆಚ್ಚು ಜಾಗ್ರತೆ ವಹಿಸುತ್ತಾರೆ. ಹಾಗಾಗಿ ಅವರು ವ್ಯಾಯಾಮ ಮಾಡಲು ಪ್ರಾರಂಭಿಸುತ್ತಾರೆ. ಇತರ ಮಹಿಳೆಯರು ಮಗುವಿಗೆ ಸರಿಯಾದ ಪೋಷಣೆ ಸಿಗಬೇಕು ಎಂದು ಯೋಚಿಸಿ ಎಲ್ಲ ರೀತಿಯ ಆಹಾರ ಸೇವನೆ ಮಾಡಲು ಶುರು ಮಾಡುತ್ತಾರೆ. ಈ ಮಧ್ಯೆ ಗರ್ಭಿಣಿಯರಲ್ಲಿ ಹೆಚ್ಚುವ ತೂಕವು ಹೆರಿಗೆಯ ನಂತರವೂ ಹೆಚ್ಚುತ್ತಾ ಹೋಗುವ ಸಂಭವ ಹೆಚ್ಚು.

    ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಎಷ್ಟು ಸರಿ ಮತ್ತು ಎಷ್ಟು ತಪ್ಪು ಎಂಬ ಬಗ್ಗೆ ಗರ್ಭಿಣಿಯರಿಗೆ ತಿಳಿದಿರುವುದಿಲ್ಲ. ಹಾಗಾಗಿ ಇಲ್ಲಿ ಇಂದು ನಾವು ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಎಷ್ಟು ಆರೋಗ್ಯಕರ ಮತ್ತು ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ ಎಂಬುದನ್ನು ತಿಳಿಯೋಣ.

    ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಳವಾಗುವುದು ಉತ್ತಮ ಮತ್ತು ಆರೋಗ್ಯಕರ ಎಂಬ ಬಗ್ಗೆ ಸ್ತ್ರೀರೋಗ ತಜ್ಞ ಡಾ. ನೀರಜ್ ಶರ್ಮಾ ಹೇಳಿದ್ದಾರೆ.

    ಇದನ್ನೂ ಓದಿ: ಪೋಷಕಾಂಶಗಳಿಂದ ತುಂಬಿರುವ ವಿವಿಧ ಬಗೆಯ ಸ್ಮೂಥಿ ಮಾಡಿ ಸವಿಯಿರಿ

    ಗರ್ಭಾವಸ್ಥೆಯಲ್ಲಿ ಎಷ್ಟು ತೂಕ ಹೆಚ್ಚಳ ಸಾಮಾನ್ಯ?

    ಸಾಮಾನ್ಯವಾಗಿ ಗರ್ಭಧಾರಣೆಯು ಮೊದಲ ತ್ರೈಮಾಸಿಕದಲ್ಲಿ ತೂಕ ಹೆಚ್ಚಳ ಆಗುವುದಿಲ್ಲ. ಇದು ನಿಮ್ಮ ಕೊನೆಯ ಅವಧಿಯ ಮೊದಲ ದಿನದಂದು ಪ್ರಾರಂಭವಾಗುವ 14 ವಾರಗಳ ಅವಧಿ ಆಗಿರುತ್ತದೆ ಎನ್ನುತ್ತಾರೆ ತಜ್ಞರು. ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ ಅಮೇರಿಕನ್ ಕಾಂಗ್ರೆಸ್ ಈಗಾಗಲೇ ಆರೋಗ್ಯಕವಂತ ಗರ್ಭಿಣಿಯರು

    ಗರ್ಭಾವಸ್ಥೆಯಲ್ಲಿ 25 ಮತ್ತು 35 ಕೆಜಿ ನಡುವೆ ತೂಕವಿರುತ್ತದೆ ಎಂದು ಹೇಳುತ್ತಾರೆ. ಅದಾಗ್ಯೂ ಈಗಾಗಲೇ ಅಧಿಕ ತೂಕ ಹೊಂದಿರುವ ಗರ್ಭಿಣಿಯರ ತೂಕವು 15 ರಿಂದ 25 ಕೆಜಿ ಹೆಚ್ಚಾದಾಗ, ಅವರು ಅನೇಕ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಾರೆ. ಇನ್ನು ಗರ್ಭಾವಸ್ಥೆಯಲ್ಲಿ ತೂಕವು 10 ರಿಂದ 12 ಕೆಜಿಗಿಂತ ಹೆಚ್ಚು ಆಗಬಾರದು ಎಂದು ಡಾ. ನೀರಜ್ ಹೇಳುತ್ತಾರೆ.

    ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳವಾಗಲು ಕಾರಣವೇನು?

    ಸಾಮಾನ್ಯವಾಗಿ ಗರ್ಭಧಾರಣೆಯ ಮೊದಲ 3 ತಿಂಗಳುಗಳಲ್ಲಿ ಗರ್ಭಿಣಿಯರು ಸುಮಾರು 2 ರಿಂದ 4 ಕೆಜಿ ಮತ್ತು ಉಳಿದ ಗರ್ಭಾವಸ್ಥೆ ದಿನಗಳಲ್ಲಿ ವಾರಕ್ಕೆ 1 ಕೆಜಿ ತೂಕ ಹೆಚ್ಚಿಸಬೇಕು. ನೀವು ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದರೆ, ನಿಮ್ಮ ತೂಕವು 35 ರಿಂದ 45 ಕೆಜಿ ಹೆಚ್ಚಾಗಬೇಕು. ಇದು ಮೊದಲ 3 ತಿಂಗಳಲ್ಲಿ ಸಾಮಾನ್ಯ ತೂಕ ಹೆಚ್ಚಳದ ನಂತರ ವಾರಕ್ಕೆ ಸರಾಸರಿ 1  ರಿಂದ ½ ಕೆಜಿ ಹೆಚ್ಚಾಗಬೇಕು ಎಂದಿದ್ದಾರೆ.

    ಗರ್ಭಾವಸ್ಥೆಯಲ್ಲಿ ತೂಕ ಅತಿಯಾಗಿ ಹೆಚ್ಚಿದರೆ ಏನಾಗುತ್ತದೆ?

    ಕೇವಲ 32 ಪ್ರತಿಶತ ಮಹಿಳೆಯರು ಗರ್ಭಾವಸ್ಥೆಯ ಶಿಫಾರಸು ವ್ಯಾಪ್ತಿಯಲ್ಲಿ ತೂಕ ಹೆಚ್ಚಿಸುತ್ತಾರೆ. ಮತ್ತು 48 ಪ್ರತಿಶತ ಅಧಿಕ ತೂಕ ಹೊಂದಿರುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಹೆಚ್ಚಿನ ತೂಕ ಪಡೆಯುವುದು ನಿಮಗೆ ಅನೇಕ ಆರೋಗ್ಯ ಸಮಸ್ಯೆ, ಮತ್ತು ಹೆಚ್ಚಿನ ಅಪಾಯ ಉಂಟು ಮಾಡುತ್ತದೆ.

    ತೀವ್ರ ರಕ್ತದೊತ್ತಡ

    ಗರ್ಭಾವಸ್ಥೆಯ ಮಧುಮೇಹ

    ಅಕಾಲಿಕ ಮಗುವಿನ ಜನನ

    ಸಿಸೇರಿಯನ್ ಮಗು ಜನನ

    ಬೊಜ್ಜು ಹೊಂದಿರುವ ಮಗು

    ಹೆರಿಗೆ ನಂತರ ತೂಕ ನಷ್ಟ ಕಷ್ಟಕರ

    ಹೆರಿಗೆಯ ನಂತರ ಗರ್ಭಾವಸ್ಥೆಯಲ್ಲಿ ಪಡೆದ ತೂಕ ಇಳಿಸುವುದು ತುಂಬಾ ಕಷ್ಟಕರ. ನೀವು ದಣಿವು ಅಥವಾ ಒತ್ತಡ ಅನುಭವಿಸುತ್ತೀರಿ. ಇದೆಲ್ಲವೂ ತೂಕ ನಷ್ಟವನ್ನು ಹೆಚ್ಚು ಕಠಿಣಗೊಳಿಸುತ್ತದೆ. ಆದಾಗ್ಯೂ, ಅತಿಯಾಗಿ ತಿನ್ನುವುದು ಸ್ಥೂಲಕಾಯ ಹೆಚ್ಚಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ.

    ಇದನ್ನೂ ಓದಿ: ಸಕ್ಕರೆಯಿಂದ ಮಾಡಿದ ಪದಾರ್ಥ ಸೇವನೆ ಬಿಡಿ ಪರ್ಯಾಯ ಪದಾರ್ಥ ಸೇವಿಸಿ, ತೂಕ ಇಳಿಸಿ!

    ತೀವ್ರ ರಕ್ತದೊತ್ತಡ, ಅಸ್ಥಿಸಂಧಿವಾತ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಹಾಗಾಗಿ ಗರ್ಭಾವಸ್ಥೆಯಲ್ಲಿ ಆದಷ್ಟು ನಿಗದಿತ ಪ್ರಮಾಣಕ್ಕಿಂತ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ನಿಮ್ಮನ್ನು ಸಕ್ರಿಯವಾಗಿರಿಸಿಕೊಳ್ಳಿ. ಕಡುಬಯಕೆಗಳನ್ನು ಮಿತವಾಗಿ ಪೂರೈಸಿ. ಸಮತೋಲಿತ ಪೌಷ್ಟಿಕ ಆಹಾರ ಸೇವನೆ, ಚೆನ್ನಾಗಿ ನಿದ್ದೆ ಮಾಡಿ.
    Published by:renukadariyannavar
    First published: