• Home
  • »
  • News
  • »
  • lifestyle
  • »
  • Pregnancy Problem: ಗರ್ಭಿಣಿಯರಿಗೆ ಸಂಜೆ ವಾಕರಿಗೆ ಉಂಟಾಗುವುದು ಏಕೆ? ಇದಕ್ಕೆ ಪರಿಹಾರವೇನು?

Pregnancy Problem: ಗರ್ಭಿಣಿಯರಿಗೆ ಸಂಜೆ ವಾಕರಿಗೆ ಉಂಟಾಗುವುದು ಏಕೆ? ಇದಕ್ಕೆ ಪರಿಹಾರವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ಅಸ್ವಸ್ಥತೆ, ಬೆಳಗ್ಗಿನ ನಿರಾಸಕ್ತಿ ಗರ್ಭಧಾರಣೆಯ ಮೊದಲ ಸಂಕೇತವೆಂದು ಹೇಳಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಕಾಡುವ ಮೊದಲ ಸಂಗತಿ ಅಂದ್ರೆ ಬೆಳಗ್ಗೆ ಆರೋಗ್ಯ ಸರಿ ಇಲ್ಲದೇ ಹೋಗುವುದು. ಇದನ್ನು ಗರ್ಭಧಾರಣೆಯ ಆರಂಭಿಕ ಲಕ್ಷಣ ಎಂದು ಕರೆಯುತ್ತಾರೆ. ಹಾಗಾದರೆ ಸಂಜೆ ವಾಕರಿಕೆ ಆಗುವುದು ಏಕೆ?

ಮುಂದೆ ಓದಿ ...
  • Share this:

    ಗರ್ಭಾವಸ್ಥೆಯಲ್ಲಿ (Pregnancy) ದೇಹದಲ್ಲಿ (Body) ಹಲವು ಬದಲಾವಣೆಗಳು (Many Changes) ಉಂಟಾಗುತ್ತವೆ. ಕೆಲವು ಬದಲಾವಣೆಗಳು ಬಾಹ್ಯವಾಗಿ ಗೋಚರಿಸಿದ್ರೆ, ಇನ್ನು ಕೆಲವು ಆಂತರಿಕವಾಗಿ ಉಂಟಾಗುತ್ತವೆ. ಅಲ್ಲದೇ ಗರ್ಭಾವಸ್ಥೆಯಲ್ಲಿ ಹಲವು ಆರೋಗ್ಯ ಸಮಸ್ಯೆಗಳು (Health Issues) ಕಾಡುತ್ತವೆ. ಅವುಗಳಲ್ಲಿ ಬೆಳಗ್ಗೆ ಅಸ್ವಸ್ಥತೆ (Morning Sickness) ಉಂಟಾಗುವುದು ಕೂಡ ಒಂದಾಗಿದೆ. ಹೀಗೆ ಬೆಳಗಿನ ಅಸ್ವಸ್ಥತೆ, ಬೆಳಗ್ಗೆ ಆಕ್ಟಿವ್ ಇಲ್ಲದೇ ಹೋಗುವುದು ಗರ್ಭಧಾರಣೆಯ ಮೊದಲ ಸಂಕೇತವೆಂದು ಹೇಳಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಕಾಡುವ ಮೊದಲ ಸಂಗತಿ ಅಂದ್ರೆ ಬೆಳಗ್ಗೆ ಆರೋಗ್ಯ ಸರಿ ಇಲ್ಲದೇ ಹೋಗುವುದು. ಇದನ್ನು ಗರ್ಭಧಾರಣೆಯ ಆರಂಭಿಕ ಲಕ್ಷಣ ಎಂದು ಕರೆಯುತ್ತಾರೆ. ಇದು ಒಂದೇ ಲಕ್ಷಣ ಗರ್ಭಧಾರಣೆ ವೇಳೆ ಅಥವಾ ಗರ್ಭಾವಸ್ಥೆಯಲ್ಲಿ ಕಾಣಿಸಲ್ಲ. ಹಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ.


    ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು


    ಗರ್ಭಧಾರಣೆ ಪೂರ್ವದ ಸಂಕೇತವಾಗಿ ತಲೆ ತಿರುಗುವುದು, ವಾಂತಿಯಾಗುವುದು, ಬೆಳಗ್ಗೆ ಅನಾರೋಗ್ಯ ಉಂಟಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಗರ್ಭಾವಸ್ಥೆಯಲ್ಲಿ ಇವಿಷ್ಟೇ ಅಲ್ಲದೇ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಗೋಚರಿಸುತ್ತವೆ.


    ಆದರೆ ಇದಿಷ್ಟಕ್ಕೆ ಗರ್ಭಿಣಿಯರು ಹೆಚ್ಚು ಚಿಂತಿಸಬೇಕಿಲ್ಲ. ಯಾಕಂದ್ರೆ ಗರ್ಭಧಾರಣೆ ವೇಳೆ ಇದು ಉಂಟಾಗುವುದು ಸಹಜ. ಇನ್ನು ಬೆಳಗಿನ ಅನಾರೋಗ್ಯಕ್ಕಿಂತ ಸಂಜೆ ವೇಳೆ ವಾಂತಿ, ವಾಕರಿಕೆ ಉಂಟಾಗುತ್ತದೆ. ಇದು ಹೆಚ್ಚು ತ್ರಾಸದಾಯಕವಾಗಿರುತ್ತದೆ.




    ಸಂಜೆ ವೇಳೆ ಉಂಟಾಗುವ ವಾಂತಿ, ವಾಕರಿಕೆ ಸಾಕಷ್ಟು ನೋವು ಉಂಟು ಮಾಡುತ್ತದೆ. ವಾಂತಿ ಮತ್ತು ವಾಕರಿಕೆ ನಿದ್ರೆಯ ಮೊದಲು ಅಥವಾ ನಿದ್ದೆ ಮಾಡುವಾಗ ಉಂಟಾಗುತ್ತದೆ. ರಾತ್ರಿ ವಾಂತಿ ಮತ್ತು ವಾಕರಿಕೆಯು ಮಲಗಲು ತೊಂದರೆ ಉಂಟು ಮಾಡುತ್ತದೆ. ಇದು ರಾತ್ರೀ ಪೂರ್ಣ ನಿದ್ರೆ ಇಲ್ಲದಂತೆ ಮಾಡುತ್ತದೆ.


    ಗರ್ಭಾವಸ್ಥೆಯಲ್ಲಿ ಸಂಜೆ ವಾಕರಿಕೆ ಸಮಸ್ಯೆ ಯಾಕೆ ಉಂಟಾಗುತ್ತದೆ?


    ಗರ್ಭಾವಸ್ಥೆಯಲ್ಲಿ, ದೇಹವು ಸ್ತನಗಳ ಹಿಗ್ಗುವಿಕೆ, ಹೊಟ್ಟೆ ಉಬ್ಬುವುದು, ಕಾಲುಗಳ ಊತ ಮತ್ತು ತೂಕ ಹೆಚ್ಚಳ ಸೇರಿದಂತೆ ಹಲವು ದೈಹಿಕ ಬದಲಾವಣೆ ಉಂಟಾಗುತ್ತದೆ. ಈ ಎಲ್ಲ ಬದಲಾವಣೆಗೆ ದೇಹ ಹೊಂದಿಕೊಳ್ಳಬೇಕಾಗುತತದೆ. ಹಾಗಾಗಿ ಬೆಳಿಗ್ಗೆ ಮತ್ತು ಸಂಜೆಯ ಅಸ್ವಸ್ಥತೆ ಉಂಟಾಗಲು ಇದು ಕಾರಣವಾಗಿದೆ.


     ಹಾರ್ಮೋನುಗಳಲ್ಲಿ ಬದಲಾವಣೆ ಆಗುವುದು


    ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯು ಅಸ್ವಸ್ಥತೆಗೆ ಕಾರಣವಾಗುತ್ತದೆ. ಕೆಲವು ವಸ್ತುಗಳ ವಾಸನೆ ತೆಗೆದುಕೊಂಡಾಗಲೂ ವಾಕರಿಕೆ ಮತ್ತು ವಾಂತಿ ಸಮಸ್ಯೆ ಉಂಟಾಗುತ್ತದೆ.


    ಹಾರ್ಮೋನುಗಳ ಬದಲಾವಣೆಯಿಂದಾಗಿ ಜೀರ್ಣಾಂಗ ವ್ಯವಸ್ಥೆ ಬದಲಾಗುತ್ತದೆ.  ಇದು ಆಮ್ಲೀಯತೆ ಮತ್ತು ಅಜೀರ್ಣ ಹಾಗೂ ಸಂಜೆಯ ಅನಾರೋಗ್ಯ ಉಂಟು ಮಾಡುತ್ತದೆ.


    ಗರ್ಭಾವಸ್ಥೆಯ ಒಂಬತ್ತನೇ ವಾರದಲ್ಲಿ ಮೊದಲು ವಾಕರಿಕೆ ಕಾಣಿಸುತ್ತದೆ. ಗರ್ಭಧಾರಣೆ 20 ನೇ ವಾರದ ನಂತರವೂ ಕೆಲವು ಮಹಿಳೆಯರಲ್ಲಿ ಪ್ರಾರಂಭವಾಗಬಹುದು.


    ಸಾಂದರ್ಭಿಕ ಚಿತ್ರ


    ಥೈರಾಯ್ಡ್ ಹಾಗೂ ಯಕೃತ್ತಿನ ಸಮಸ್ಯೆಗಳು


    ಬಹಳ ಅಪರೂಪ ಪ್ರಕರಣಗಳಲ್ಲಿ ಈ ಎರಡು ಕಾರಣಗಳು ಸಂಜೆ ವಾಕರಿಕೆ ಉಂಟು ಮಾಡಿವೆ. ಅಪರೂಪ ಸಮಯದಲ್ಲಿ ಥೈರಾಯ್ಡ್ ಮತ್ತು ಯಕೃತ್ತಿನ ಸಮಸ್ಯೆ ಮಹಿಳೆಯರಲ್ಲಿ ಸಂಜೆ ವಾಕರಿಕೆ ಉಂಟು ಮಾಡುತ್ತದೆ. ಗರ್ಭಾವಸ್ಥೆಯ ಮೊದಲು ಪಿತ್ತಜನಕಾಂಗದ ಕಾಯಿಲೆ ಅಥವಾ ಥೈರಾಯ್ಡ್ ಸಮಸ್ಯೆ ಇದ್ದರೆ ಸಂಜೆ ವಾಕರಿಕೆ ಉಂಟಾಗಬಹುದು.


    ಸಂಜೆ ವಾಕರಿಕೆ ಸಮಸ್ಯೆ ತಡೆಯಲು ಏನ್ ಮಾಡ್ಬೇಕು?


    ರಾತ್ರಿ ಮಲಗುವ ಮುನ್ನ ಬಲವಾದ ವಾಸನೆ ಬರುವ ವಸ್ತುಗಳಿಂದ ದೂರವಿರಿ. ವಾಕರಿಕೆ ಪ್ರಚೋದಿಸುವ ವಾಸನೆಯ ವಸ್ತುಗಳನ್ನು ಹತ್ತಿರವಿರಿಸಬೇಡಿ. ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಬೇಡಿ. ಇದು ಆಮ್ಲೀಯತೆಗೆ ಕಾರಣವಾಗುತ್ತದೆ. ಸಂಜೆಯ ವಾಕರಿಕೆಗೆ ಆಸಿಡ್ ರಿಫ್ಲಕ್ಸ್ ಕಾರಣವಾಗುತ್ತದೆ.


    ತಲೆಯನ್ನು ಎತ್ತರಕ್ಕೆ ಇರಿಸುವ ಭಂಗಿಯಲ್ಲಿ ಮಲಗಿ. ಎಣ್ಣೆಯುಕ್ತ ವಸ್ತುಗಳಾದ ಕರಿದ ಮತ್ತು ಜಂಕ್ ಫುಟ ಸೇವಿಸಬೇಡಿ.


    ಇದನ್ನೂ ಓದಿ: ನಿಮ್ಮ ಮನೆಯಲ್ಲಿರುವ ಫ್ರಿಜ್​ಗಳನ್ನು ಹೀಗೆ ಕ್ಲೀನ್​ ಮಾಡಿ, ಇದರಿಂದ ಬ್ಲಾಸ್ಟ್​ ಆಗೋದು ತಪ್ಪಿಸಬಹುದು


    ಕೊಬ್ಬಿನ ಮತ್ತು ಸಿಹಿ ಆಹಾರ ಸೇವನೆ ಕಡಿಮೆ ಮಾಡಿ. ಅಜೀರ್ಣ ಮತ್ತು ಆಮ್ಲೀಯತೆಯು ಎಣ್ಣೆಯುಕ್ತ ಮತ್ತು ಕೊಬ್ಬಿನ ಆಹಾರಗಳ ಸಾಮಾನ್ಯ ಅಡ್ಡ ಪರಿಣಾಮಗಳಾಗಿವೆ.

    Published by:renukadariyannavar
    First published: