Sexuall Wellness: ಪಿರಿಯಡ್ಸ್​​ ದಿನಗಳಲ್ಲಿ ಸೆಕ್ಸ್​​ ಮಾಡುವುದು ಸುರಕ್ಷಿತವೇ? ಏನಂತಾರೆ ವೈದ್ಯರು?

ಸುರಕ್ಷತೆ ಇಲ್ಲದೇ ಮುಟ್ಟಿನ ದಿನಗಳಲ್ಲಿ ಸೆಕ್ಸ್​​ ಮಾಡುವುದು ಸುರಕ್ಷಿತಲ್ಲ. ಸುಮ್ಮನೆ ಮುಟ್ಟಿನ ದಿನಗಳಲ್ಲಿ ಒಂದಾದರೆ ಮಕ್ಕಳಾಗುವುದೇ ಇಲ್ಲ ಎಂಬ ಭ್ರಮೆ ಬೇಡ. ವಲ್ಲದ ಗರ್ಭದಿಂದ ತಪ್ಪಿಸಿಕೊಳ್ಳಲು ಸದಾ ಸುರಕ್ಷತೆ ಬಳಸುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    sexuall contact during periods: ಋತುಚಕ್ರ ಹಾಗೂ ಲೈಂಗಿಕತೆ ಒಂದಕ್ಕೊಂದು ಕೊಂಡಿಯಂತಿರುವ ವಿಷಯಗಳು. ಆದರೆ ಈ ಬಗ್ಗೆ ಮಾತನಾಡಲು ಮುಜುಗರಪಡುವವರೇ ಹೆಚ್ಚು. ಪಿರಿಯಡ್ಸ್​​​, ಸೆಕ್ಸ್​​​, ಪ್ರೆಗ್ನೆಂಟ್​​​​​​ ಎಲ್ಲವೂ ಒಂದಕ್ಕೊಂದು ಸಂಬಂಧಿತ ಸಂಗತಿಗಳು. ಮುಟ್ಟಿನ ಬಗ್ಗೆ, ಸೆಕ್ಸ್​​​ ಬಗ್ಗೆ ಸತ್ಯಗಳಿಗಿಂತ ಮಿತ್ಯಗಳೇ ಹೆಚ್ಚು. ಸರಿಯಾದ ಮಾಹಿತಿಗಿಂತ ತಪ್ಪು ಮಾಹಿತಿ ಹೆಚ್ಚಾಗಿ ಜನರನ್ನು ತಲುಪಿರುತ್ತದೆ. ಹೀಗಾಗಿ ಈ ಬಗ್ಗೆ ಸರಿಯಾದ , ವೈಜ್ಞಾನಿಕ ಮಾಹಿತಿ ಪಡೆಯುವುದು ಬಹು ಮುಖ್ಯ.

    ಮುಟ್ಟಿನ ದಿನಗಳಲ್ಲಿ ಸೆಕ್ಸ್​ ನಿಷಿದ್ಧವೇ?

    ಮುಟ್ಟಿನ ದಿನಗಳಲ್ಲಿ ಸೆಕ್ಸ್​ ನಿಷಿದ್ಧ ಎಂದೇ ಬಹುತೇಕರು ಭಾವಿಸಿದ್ದಾರೆ. ಆದರೆ ಸಂಗಾತಿಯೊಂದಿಗೆ ದೈಹಿಕವಾಗಿ ಸೇರಬೇಕಾ ಸೇರಬಾರದಾ ಎಂಬುದು ಎಂದಿಗೂ ಯುವತಿಯ ಆಯ್ಕೆ ಆಗಿರಬೇಕು. ಮುಟ್ಟಿನ ದಿನಗಳಲ್ಲಿ ನೋವು, ಸುಸ್ತು ಕಾಣಿಸಿಕೊಂಡರೆ ವಿಶ್ರಾಂತಿ ಪಡೆಯುವುದೇ ಲೇಸು. ಇನ್ನು ಅತಿಯಾದ ರಕ್ತಸ್ರಾವವಿರುವವರು ಸುರಕ್ಷಿತವಾಗಿರಲು ಸೆಕ್ಸ್​​ನಿಂದ ದೂರವಿರಿ. ಆದರೆ ಯಾವುದೇ ಸಮಸ್ಯೆ ಇಲ್ಲದೇ ಸಂಗಾತಿಯೊಂದಿಗೆ ಸೇರುವುದು ಯುವತಿ/ಮಹಿಳೆಯ ಆಯ್ಕೆ ಆಗಿದ್ದರೆ ಅಡ್ಡಿ ಇಲ್ಲ. ಮುಟ್ಟಿನ ದಿನಗಳಲ್ಲಿ ಸೆಕ್ಸ್​​​​ ಮಾಡುವುದು ತಪ್ಪೇನಿಲ್ಲ. ಆದರೆ ಕಾಂಡೋಮ್​​ ಬಳಸುವುದು ಉತ್ತಮ.

    ಮುಟ್ಟಿನ ದಿನಗಳಲ್ಲಿ ಸೆಕ್ಸ್​ ಮಾಡಿದರೆ ಪ್ರೆಗ್ನೆಂಟ್​ ಆಗ್ತಾರಾ?

    ಋತುಚಕ್ರದ ಅವಧಿ ಸಾಮಾನ್ಯವಾಗಿ 28-30 ದಿನಗಳು. 28 ದಿನಗಳಲ್ಲಿ ಗರ್ಭ ಮೊಟ್ಟೆಯನ್ನು ಉತ್ಪಾದಿಸಿ ಫೆಲೊಪೈನ್​ ಟ್ಯೂಬ್​ ಮೂಲಕ ಸಂಚರಿಸಿ ವೀರ್ಯಕ್ಕಾಗಿ ಕಾಯುತ್ತದೆ. ಈ ದಿನಗಳಲ್ಲಿ ಗಂಡಿನ ವೀರ್ಯ ಸಿಗದಿದ್ದಾಗ, ತನ್ನಿಂದ ತಾನೇ ಮೊಟ್ಟೆ ನಾಶವಾಗಿ ಮುಟ್ಟಿನ ರೂಪದಲ್ಲಿ ಹೊರ ಬರುತ್ತದೆ. ಮುಟ್ಟಿನ ಸಮಯದಲ್ಲಿ ಸೆಕ್ಸ್​ ಮಾಡುವುದರಿಂದ ಪ್ರೆಗ್ನೆಂಟ್​ ಆಗುವ ಸಾಧ್ಯತೆಗಳು ಅತ್ಯಂತ ಕಡಿಮೆ. ವೀರ್ಯ ಗರ್ಭಕೋಶ ಪ್ರವೇಶಿಸಿದರು ಗರ್ಭ ಕಟ್ಟಲು ಮೊಟ್ಟೆ ಇರುವುದಿಲ್ಲ. ಹೀಗಾಗಿ ಪಿರಿಯೆಡ್ಸ್​ ವೇಳೆ ಸಂಭೋಗವಾದಲ್ಲಿ ಪ್ರೆಗ್ನೆಂಟ್​ ಆಗುವ ಸಾಧ್ಯತೆಗಳು 0.33%ರಷ್ಟು ಎನ್ನಲಾಗುತ್ತದೆ. ಆದರೆ ಶೇ.100ರಷ್ಟು ಗರ್ಭವತಿ ಆಗುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.

    ಮುಟ್ಟಿನ ದಿನ ಸೆಕ್ಸ್​ನಿಂದ ಯಾರು ಪ್ರೆಗ್ನೆಂಟ್​​ ಆಗಬಹುದು?

    ಋತುಚಕ್ರದಲ್ಲಿ ತೀವ್ರ ಏರುಪೇರು ಇರುವವರು, ಅತ್ಯಂತ ಕಡಿಮೆ ಅವಧಿಯಲ್ಲಿ ಪೆರಿಯಡ್ಸ್​ ಆಗುವವರು ಗರ್ಭವತಿ ಆಗುವ ಸಾಧ್ಯತೆಗಳು ಇರುತ್ತೆ. 28 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಅಂದರೆ ತಿಂಗಳಿಗೆ 2 ಬಾರಿ ಮುಟ್ಟಾಗುವವರು ಪ್ರೆಗ್ನೆಂಟ್​ ಆಗಬಹುದು. ಪುರುಷರ ವೀರ್ಯದ ಫಲವತತ್ತೆಯೂ ಕಾರಣವಾಗಬಹುದು. ಯೋನಿ ಮೂಲಕ ಪ್ರವೇಶಿಸುವ ಸ್ಪರ್ಮ್​​​​ ಸಾಮಾನ್ಯವಾಗಿ 3-4 ದಿನಗಳ ಕಾಲ ಜೀವಂತವಾಗಿರುತ್ತವೆ. ಆದರೆ ಕೆಲವೊಂದು ಗುಣಮುಟ್ಟದ ವೀರ್ಯ 7 ದಿನಗಳ ಕಾಲ ಜೀವಂತವಿರುವ ಸಾಧ್ಯತೆಗಳಿವೆ. ಇಂಥ ಸಮಯದಲ್ಲಿ ಮೊಟ್ಟೆ ಉತ್ಪಾದನೆ ಆಗಿ ಕಾಯುತ್ತಿರುವ ವೀರ್ಯವನ್ನು ಸೇರಿದರೆ ಗರ್ಭ ಕಟ್ಟುತ್ತದೆ.

    ಇದನ್ನೂ ಓದಿ: ಸೆಕ್ಸ್​​​ಗೂ ಮುನ್ನ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ಸೇವಿಸಬೇಡಿ.. ಮೂಡ್ ಹಾಳಾಗುತ್ತೆ!

    ಹೀಗಾಗಿ ಸುರಕ್ಷತೆ ಇಲ್ಲದೇ ಮುಟ್ಟಿನ ದಿನಗಳಲ್ಲಿ ಸೆಕ್ಸ್​​ ಮಾಡುವುದು ಸುರಕ್ಷಿತಲ್ಲ. ಸುಮ್ಮನೆ ಮುಟ್ಟಿನ ದಿನಗಳಲ್ಲಿ ಒಂದಾದರೆ ಮಕ್ಕಳಾಗುವುದೇ ಇಲ್ಲ ಎಂಬ ಭ್ರಮೆ ಬೇಡ. ವಲ್ಲದ ಗರ್ಭದಿಂದ ತಪ್ಪಿಸಿಕೊಳ್ಳಲು ಸದಾ ಸುರಕ್ಷತೆ ಬಳಸುವುದು ಉತ್ತಮ.

    ಯೋಗದಿಂದ ಸಮೃದ್ಧ ಲೈಂಗಿಕ ಆರೋಗ್ಯ

    ನೀವು ಯಾವುದೇ ಆಯರ್ವೇದ ತಜ್ಞರನ್ನು ಕೇಳಿ ನೋಡಿ. ನಿಮ್ಮ ಸುಖಮಯ ದಾಂಪತ್ಯಕ್ಕೆ ಯೋಗವನ್ನು ಅಳವಡಿಸಿಕೊಳ್ಳಲು ತಿಳಿಸುತ್ತಾರೆ. ಕುಂಭಕಾಸನ (ಪ್ಲ್ಯಾಂಕ್ ಪೋಸ್), ಧನುರಾಸನ (ಬಿಲ್ಲು ಭಂಗಿ), ಉತ್ತಾನಪಾದಾಸನ (ಕಾಲಿನ ದೀರ್ಘ ಭಂಗಿ), ಪಶ್ಚಿಮೊತ್ತಾಸನ (ಮುಂದಾಕ್ಕೆ ಬೆಂಡಾಗುವಿಕೆ), ನೌಕಾಸನ (ದೋಣಿ ಭಂಗಿ) ಈ ರೀತಿ ಕೆಲವು ಯೋಗಾಸನಗಳು ತೃಪ್ತಿಕರ ಲೈಂಗಿಕ ಕ್ರಿಯೆಗೆ ನೆರವಾಗುತ್ತವೆ. ನಿಮ್ಮ ತಜ್ಞರ ಮಾರ್ಗದರ್ಶನಕ್ಕೆ ಅನುಗುಣವಾಗಿ ನೀವು ಇದನ್ನು ಅಳವಡಿಸಿಕೊಳ್ಳಬಹುದು. ಉತ್ತಮ ಲೈಂಗಿಕ ಆರೋಗ್ಯದ ಗುಟ್ಟು, ಆರೋಗ್ಯಪೂರ್ಣ ಅಭ್ಯಾಸಗಳಲ್ಲಿದೆ.
    Published by:Kavya V
    First published: