• Home
  • »
  • News
  • »
  • lifestyle
  • »
  • Health Care: ಮಕರ ಸಂಕ್ರಾಂತಿ ಹಬ್ಬದಂದು ಉದ್ದಿನ ಬೇಳೆ ಖಿಚಡಿ ಏಕೆ ಸೇವಿಸಬೇಕು?

Health Care: ಮಕರ ಸಂಕ್ರಾಂತಿ ಹಬ್ಬದಂದು ಉದ್ದಿನ ಬೇಳೆ ಖಿಚಡಿ ಏಕೆ ಸೇವಿಸಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಕ್ರಾಂತಿ ಹಬ್ಬದ ಬಗ್ಗೆ ಹಲವು ಕಡೆಗಳಲ್ಲಿ ಹಲವು ರೀತಿಯ ನಂಬಿಕೆಗಳಿವೆ. ಹಬ್ಬದಲ್ಲಿ ಉದ್ದಿನ ಬೇಳೆ ಖಿಚಡಿ ಸೇವನೆಯಿಂದ ರಾಶಿಗಳು ಉತ್ತಮವಾಗಿ ಉಳಿಯುತ್ತವೆ ಎಂಬ ನಂಬಿಕೆ ಇದೆ. ಅನೇಕ ಅಧ್ಯಯನಗಳು ಮಕರ ಸಂಕ್ರಾಂತಿ ಸಮಯದಲ್ಲಿ ಉದ್ದಿನಬೇಳೆ ಖಾದ್ಯ ಸೇವನೆಯು ಆರೋಗ್ಯ ಪ್ರಯೋಜನ ನೀಡುತ್ತದೆ ಎಂದು ಹೇಳಿವೆ.

ಮುಂದೆ ಓದಿ ...
  • Share this:

    ಈ ವರ್ಷದ ಜನವರಿ 14 ಮಕರ ಸಂಕ್ರಾಂತಿ ಹಬ್ಬ (Makar Sankranti Festival) ಶನಿವಾರ ಬಂದಿದೆ. ದೇಶದ (Country) ವಿವಿಧ ಭಾಗಗಳಲ್ಲಿ ಮಕರ ಸಂಕ್ರಾಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಎಲ್ಲಾ ಹಬ್ಬಗಳಿಗೂ ಕೆಲವು ಪದ್ಧತಿಗಳು ಮತ್ತು ಆಚರಣೆಗಳನ್ನು ಫಾಲೋ ಮಾಡಲಾಗುತ್ತದೆ. ಇದು ಕೇವಲ ಆಚರನೆಯಲ್ಲ, ಹಿರಿಯರು ಮಾಡಿದ ಈ ಪದ್ಧತಿಗಳು ದೈಹಿಕ ಆರೋಗ್ಯಕ್ಕೂ (Health) ಸಹಕಾರಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಚಳಿಗಾಲ (Winter) ಉತ್ತುಂಗದಲ್ಲಿರುವಾಗ ಅಂದ್ರೆ ಚಳಿ ಹೆಚ್ಚು ಬಾಧಿಸುವ ಸಮಯದಲ್ಲಿ ಮಕರ ಸಂಕ್ರಾಂತಿ ಹಬ್ಬ ಬರುತ್ತದೆ. ಸಂಕ್ರಾಂತಿ ಹಬ್ಬದಲ್ಲಿ ಎಳ್ಳು, ಬೆಲ್ಲ ಮತ್ತು ಕಬ್ಬನ್ನು ತಿನ್ನುವ ರೂಢಿ ಇದೆ. ಜೊತೆಗೆ ಮನೆಯಲ್ಲಿ ಎತ್ತು, ಆಕಳು, ಕರು ಸೇರಿದಂತೆ ಜಾನುವಾರುಗಳನ್ನು ಬೆಂಕಿಯ ಮೇಲೆ ಓಡಿಸಲಾಗುತ್ತದೆ.


    ಇದೆಲ್ಲಾ ಆಚರಣೆಗಳು ಜಾನುವಾರುಗಳನ್ನು ಬೆಚ್ಚಗೆ ಇರಿಸುತ್ತದೆ. ಚಳಿಯ ಸಮಯದಲ್ಲಿ ಎಳ್ಳು ಬೆಲ್ಲ ಮತ್ತು ಕಬ್ಬು ಸೇವನೆ ದೇಹಕ್ಕೆ ಒಳ್ಳೆಯದು. ಇದಿಷ್ಟೇ ಅಲ್ಲದೇ, ವಿವಿಧ ಭಾಗಗಳಲ್ಲಿ ಜನರು ಈ ಹಬ್ಬದಂದು ವಿವಿಧ ಖಾದ್ಯಗಳನ್ನು ಮಾಡಿ ಸೇವನೆ ಮಾಡ್ತಾರೆ.


    ಅದರಲ್ಲಿ ಸಜ್ಜಿ ರೊಟ್ಟಿ, ಅವರೆಕಾಳು ಪಲ್ಯ, ನೀರು ದೋಸೆ, ಮೊಸರು, ಉದ್ದಿನಬೇಳೆ ಖಿಚಡಿ ಹೀಗೆ ಅನೇಕ ಪದಾರ್ಥಗಳನ್ನು ಮಾಡಿ ಸೇವಿಸುವುದು ರೂಢಿಯಲ್ಲಿದೆ. ಗಾಳಿಪಟ ಹಾರಿಸುತ್ತಾ ಹಬ್ಬದ ಆಚರಣೆ ಮಾಡುವುದು ವಿಶಿಷ್ಟವಾಗಿದೆ.




    ಮಕರ ಸಂಕ್ರಾಂತಿ ಸಮಯದಲ್ಲಿ ಉದ್ದಿನಬೇಳೆ ಖಾದ್ಯ ಸೇವನೆ


    ಸಂಕ್ರಾಂತಿ ಹಬ್ಬದ ಬಗ್ಗೆ ಹಲವು ಕಡೆಗಳಲ್ಲಿ ಹಲವು ರೀತಿಯ ನಂಬಿಕೆಗಳಿವೆ. ಹಬ್ಬದಲ್ಲಿ ಉದ್ದಿನ ಬೇಳೆ ಖಿಚಡಿ ಸೇವನೆಯಿಂದ ಗ್ರಹಗಳ ರಾಶಿಗಳು ಉತ್ತಮವಾಗಿ ಉಳಿಯುತ್ತವೆ ಎಂಬ ನಂಬಿಕೆ ಇದೆ. ಅನೇಕ ಅಧ್ಯಯನಗಳು ಮಕರ ಸಂಕ್ರಾಂತಿ ಸಮಯದಲ್ಲಿ ಉದ್ದಿನಬೇಳೆ ಖಾದ್ಯ ಸೇವನೆಯು ಆರೋಗ್ಯ ಪ್ರಯೋಜನ ನೀಡುತ್ತದೆ ಎಂದು ಹೇಳಿವೆ.


    ಉದ್ದಿನ ಬೇಳೆ ಸಮತೋಲಿತ ಆಹಾರದ ಅತ್ಯಗತ್ಯ ಭಾಗ. ಕಾಳುಗಳು ಪ್ರೋಟೀನ್ ಮತ್ತು ಫೈಬರ್‌ ನ ಉತ್ತಮ ಮೂಲ. ಅಲ್ಲದೆ ಕಬ್ಬಿಣ, ಸತು ಮತ್ತು ಮೆಗ್ನೀಸಿಯಮ್‌ ಅನೇಕ ರೀತಿಯ ಜೀವಸತ್ವ ಮತ್ತು ಖನಿಜ ಇದರಲ್ಲಿದೆ. ಹಲವು ವಿಧದ ಬೇಳೆಕಾಳುಗಳಿವೆ. ಅವುಗಳಲ್ಲಿ ಉದ್ದಿನ ಬೇಳೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.


    ಉದ್ದಿನ ಬೇಳೆಯಲ್ಲಿರುವ ಔಷಧೀಯ ಗುಣ ಮತ್ತು ಪೋಷಕಾಂಶಗಳ ಆಧಾರದ ಮೇಲೆ ಇದು ದೇಹಕ್ಕೆ ಆರೋಗ್ಯ ಪ್ರಯೋಜನ ನೀಡುತ್ತದೆ ಎಂದು ಹೇಳಲಾಗಿದೆ.


    ಹೃದಯದ ಆರೋಗ್ಯ ಸುಧಾರಿಸುತ್ತದೆ


    ಉದ್ದಿನಬೇಳೆ ಸೇವನೆಯು ಹೃದಯ ಬಲಪಡಿಸುವ ಮತ್ತು ರೋಗ ತಡೆಗಟ್ಟುವ ಕಾರ್ಯ ಹೊಂದಿದೆ. ಇದಕ್ಕೆ ಕಾರಣ ಅಂದ್ರೆ ಉದ್ದಿನ ಬೇಳೆ ಪ್ರೋಟೀನ್‌, ಪಾಲಿಸ್ಯಾಕರೈಡ್‌ ಮತ್ತು ಫೈಬರ್‌ ಹೊಂದಿದೆ.


    ಸಾಂದರ್ಭಿಕ ಚಿತ್ರ


    ಮಧುಮೇಹ ನಿಯಂತ್ರಣಕ್ಕೆ ಉದ್ದಿನಬೇಳೆ ಸೇವನೆ ಮಾಡಿ


    ಡಯಾಬಿಟಿಸ್ ರೋಗಿಗಳಿಗೆ ಉದ್ದಿನಬೇಳೆ ಸೇವನೆ ಆರೋಗ್ಯಕರ. ಇದರಲ್ಲಿರುವ ಫೈಬರ್ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಅಲ್ಲದೆ ಇನ್ಸುಲಿನ್ ಮಟ್ಟ ಹೆಚ್ಚಿಸುತ್ತದೆ.


    ಮೂಳೆಗಳು ಬಲಿಷ್ಠಗೊಳ್ಳಲು ಸಹಕಾರಿ


    ಉದ್ದಿನ ಬೇಳೆ ಮೂಳೆ ರಚನೆಗೆ ಪರಿಣಾಮಕಾರಿ. ಇದು ಕ್ಯಾಲ್ಸಿಯಂ ಮತ್ತು ರಂಜಕದ ಉತ್ತಮ ಸಮತೋಲನ ಹೊಂದಿದೆ. ಕೀಲುಗಳ ಊತ ಮತ್ತು ನೋವು ನಿವಾರಣೆಗೆ ಉದ್ದಿನ ಬೇಳೆ ಎಣ್ಣೆ ಅನ್ವಯಿಸಲು ಆಯುರ್ವೇದ ಶಿಫಾರಸು ಮಾಡುತ್ತದೆ.


    ಯಕೃತ್ತು ಮತ್ತು ಮೂತ್ರಪಿಂಡದ ಆರೋಗ್ಯಕ್ಕೆ ಪ್ರಯೋಜನಕಾರಿ


    ಯಕೃತ್ತು ಮತ್ತು ಮೂತ್ರಪಿಂಡದ ಆರೋಗ್ಯ ಸುಧಾರಿಸಲು ಉದ್ದಿನ ಬೇಳೆ ಸಹಕಾರಿ. ಇದರಲ್ಲಿರುವ ಫೀನಾಲಿಕ್ಸ್, ಟ್ಯಾನಿನ್‌, ಫ್ಲೇವನಾಯ್ಡ್‌ ಮತ್ತು ಫೈಟಿಕ್ ಆಮ್ಲ ಉತ್ಕರ್ಷಣ ನಿರೋಧಕಗಳ ಕಾರಣದಿಂದ ಆಗಿರಬಹುದು.


    ಉದ್ದಿನಬೇಳೆ ಸೇವಿಸುವ ವಿಧಾನ ಹೀಗಿದೆ


    ಹಲವು ವಿಧದ ಆಹಾರ ಮತ್ತು ಖಾದ್ಯಗಳಲ್ಲಿ ಉದ್ದಿನ ಬೇಳೆ ಸೇರಿಸಿ ಸೇವಿಸಬಹುದು. ಉದ್ದಿನಬೇಳೆಯನ್ನು ಖಿಚಡಿ, ಇಡ್ಲಿ, ದಾಲ್, ಪಾಪಡ್ ಮುಂತಾದ ಪಾಕವಿಧಾನಗಳಲ್ಲಿ ಬಳಸುತ್ತಾರೆ.


    ಇದನ್ನೂ ಓದಿ: ಕಿತ್ತಳೆ ಹಣ್ಣಂತೆ ಕಾಣುತ್ತೆ, ಆದರೆ ಕಿತ್ತಳೆ ಹಣ್ಣು ಅಲ್ಲ! ಕಿನ್ನೋ ಫ್ರೂಟ್ಸ್‌ನ ಆರೋಗ್ಯ ಪ್ರಯೋಜನ ಹೀಗಿವೆ


    ಕಿಡ್ನಿ ರೋಗಿಗಳಿಗೆ ಉದ್ದಿನಬೇಳೆ ಉತ್ತಮವೇ?


    ಉದ್ದಿನ ಬೇಳೆ ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ. ಇದು ಕಿಡ್ನಿಯಲ್ಲಿ ತುಂಬಿರುವ ಕೊಳೆ, ಅಧಿಕ ಪ್ರಮಾಣದ ಯೂರಿಕ್ ಆಮ್ಲದಂತಹ ಹಾನಿಕಾರಕ ವಸ್ತುಗಳು ದೇಹದಿಂದ ಹೊರಗೆ ಹೋಗಲು ಸಹಕಾರಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು