Lockdown: ಹಣ್ಣುಗಳನ್ನು ಖರೀದಿಸುವ ಮುನ್ನ ಈ 3 ವಿಷಯಗಳ ಬಗ್ಗೆ ಎಚ್ಚರವಿರಲಿ

Lockdown: ಹಣ್ಣುಗಳನ್ನು ತೊಳೆಯಲು ಲಘು ಬಿಸಿ ನೀರನ್ನು ಬಳಸುವುದು ಉತ್ತಮ. ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನುವುದರಿಂದ ಅವುಗಳಲ್ಲಿನ ಸೂಕ್ಷ್ಮಜೀವಿಗಳು ಸುಲಭವಾಗಿ ಸಾಯುತ್ತವೆ.

news18-kannada
Updated:May 21, 2020, 11:03 AM IST
Lockdown: ಹಣ್ಣುಗಳನ್ನು ಖರೀದಿಸುವ ಮುನ್ನ ಈ 3 ವಿಷಯಗಳ ಬಗ್ಗೆ ಎಚ್ಚರವಿರಲಿ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವೈರಸ್ ಸಾಂಕ್ರಾಮಿಕವನ್ನು ತಡೆಗಟ್ಟುವ ಸಲುವಾಗಿ ಲಾಕ್​ಡೌನ್ ಮುಂದುವರೆಸಲಾಗಿದೆ. ಇನ್ನು ಲಾಕ್​ಡೌನ್ ಇದ್ದರೂ ಅನೇಕ ಕಡೆ ಜನರಿಗೆ ಅನುಕೂಲವಾಗುವಂತೆ ಸಡಿಲಿಕೆ ನಿಯಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದರಲ್ಲಿ ಪ್ರಮುಖವಾಗಿ ಪಾಲಿಸಬೇಕಿರುವುದು ಸಾಮಾಜಿಕ ಅಂತರ. ಹಾಗೆಯೇ ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಲು ಸಹ ಹೇಳಲಾಗಿದೆ.

ಇನ್ನು ಹ್ಯಾಂಡ್​ವಾಶ್ ಅಥವಾ ಸ್ಯಾನಿಟೈಸರ್ ಬಳಸಿ ಪದೇ ಪದೇ ಕೈಗಳನ್ನು ಸ್ವಚ್ಛಗೊಳಿಸುತ್ತಿರಲು ಆರಂಭದಿಂದಲೂ ವೈದ್ಯರು ಸೂಚಿಸುತ್ತಿದ್ದಾರೆ. ಹಾಗೆಯೇ ಕೊರೋನಾ ವಿರುದ್ಧ ಹೋರಾಡಲು ದೇಹಶಕ್ತಿ ಬಗ್ಗೆ ವೈದ್ಯಲೋಕ ಎಚ್ಚರಿಸಿದೆ. ಹೀಗಾಗಿ ಅನೇಕರು ಆರೋಗ್ಯಕರ ಆಹಾರದತ್ತ ಮುಖ ಮಾಡಿದ್ದಾರೆ. ಅದರಲ್ಲೂ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಹಾರಗಳೊಂದಿಗೆ ಹಣ್ಣುಗಳನ್ನು ಸೇವನೆಯ ಮೊರೆ ಹೋಗುತ್ತಿದ್ದಾರೆ.

ಆದರೆ ಈ ಹಣ್ಣುಗಳ ಖರೀದಿ ವೇಳೆ ಸಾಮಾನ್ಯವಾಗಿ ಪಾಲಿಸಬೇಕಾದ ಕೆಲ ನಿಯಮಗಳಿವೆ. ಏಕೆಂದರೆ ನೀವು ಹಣ್ಣುಗಳನ್ನು ಖರೀದಿಸಲು ಹೊರಗೆ ಹೋದರೆ ಈ ಕೆಲವು ಪ್ರಮುಖ ವಿಷಯಗಳ ಎಚ್ಚರವಿರಿ. ಇಲ್ಲದಿದ್ದರೆ ಕೊರೋನಾ ವೈರಸ್​ನೊಂದಿಗೆ ನೀವು ಮನೆಗೆ ಹಿಂತಿರುಗುವ ಸಾಧ್ಯತೆಯಿದೆ. ಈಗಾಗಲೇ ತಿಳಿಸಿರುವಂತೆ ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧರಿಸಿ ಹಾಗೆಯೇ ಸಾಧ್ಯವಾದರ ಕೈಗವಸುಗಳನ್ನು ಧರಿಸಿ.

ಹಣ್ಣನ್ನು ಖರೀದಿ ಮಾಡುವಾಗ ಈ ಮೂರು ವಿಷಯಗಳನ್ನು ನೆನಪಿನಲ್ಲಿರಲಿ:
1 - ಹಣ್ಣಿನ ಅಂಗಡಿ ಅಥವಾ ಗಾಡಿ ಮತ್ತು ನಿಮ್ಮ ನಡುವೆ 6 ಅಡಿ ಅಂತರವಿರಬೇಕು. ಇದಲ್ಲದೆ, ಇತರೆ ಗ್ರಾಹಕರಿಂದಲೂ ದೂರವಿರಬೇಕು.

2- ನೀವು ಖರೀದಿಗೆ ತೆಗೆದುಕೊಂಡ ಚೀಲವನ್ನು ಸದಾ ಸ್ವಚ್ಛಗೊಳಿಸಬೇಕಾಗುತ್ತದೆ. ಏನೇ ಖರೀದಿ ಮಾಡಿದ ಬಳಿಕ ಚೀಲವನ್ನು ತೊಳೆಯಿರಿ.

3- ನೀವು ಹೆಚ್ಚಾಗಿ ತಳ್ಳುವ ಗಾಡಿಗಳಿಂದ ಹಣ್ಣುಗಳನ್ನು ಖರೀದಿಸುತ್ತೀರಿ. ಆದರೆ ಈ ಗಾಡಿಗಳು ಎಲ್ಲಿಂದ ಬರುತ್ತವೆ ಎಂಬ ಬಗ್ಗೆ ನಮಗೆ ಯಾವುದೇ ಕಲ್ಪನೆ ಇರುವುದಿಲ್ಲ. ಹಾಗಾಗಿ ಯಾವುದೇ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ಖರೀದಿಸಿದ ಬಳಿಕ ಅದನ್ನು ಉಪ್ಪು ಹಾಕಿದ ಲಘು ಬಿಸಿ ನೀರಿನಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ನೆನೆಸಿಡಬೇಕು. ಆ ಬಳಿಕ ಬಳಸುವುದು ಉತ್ತಮ.ಇದನ್ನೂ ಓದಿ: Yuvraj Singh: ಅನುಭವಕ್ಕಲ್ಲ, ನೆಚ್ಚಿನ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ..!

ಹಣ್ಣನ್ನು ತೊಳೆದು ತಿನ್ನಿರಿ:
ಹಣ್ಣುಗಳನ್ನು ತೊಳೆಯಲು ಲಘು ಬಿಸಿ ನೀರನ್ನು ಬಳಸುವುದು ಉತ್ತಮ. ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನುವುದರಿಂದ ಅವುಗಳಲ್ಲಿನ ಸೂಕ್ಷ್ಮಜೀವಿಗಳು ಸುಲಭವಾಗಿ ಸಾಯುತ್ತವೆ. ಹೀಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
First published: May 21, 2020, 11:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading